ಪಂಚೇಂದ್ರಿಯಗಳ ಪ್ರಚೋದಕನೇ ಪರಿಪೂರ್ಣ ಪ್ರೇಮಿ


Team Udayavani, Aug 8, 2017, 7:28 AM IST

08-ANKANA-1.jpg

ಎಲ್ಲ ಹುಡುಗಿಯರೂ ತನ್ನ ಪ್ರೇಮಿ ತನ್ನ ಜತೆ ಸುಂದರವಾದ ಮಾತುಗಳನ್ನಾಡಲಿ ಎಂದು ಬಯಸುತ್ತಾರೆ. ಅದನ್ನು ಪ್ರಚೋದಿಸುವುದೇ ಅವಳ ಕಿವಿ. ಯಾವುದೇ ಸಂದರ್ಭದಲ್ಲಾದರೂ ಕರ್ಕಶ ಮಾತುಗಳನ್ನು, ಅಹಿತವಾದದ್ದನ್ನು, ಕೆಟ್ಟ ಪದಗಳನ್ನು ಕೇಳಿದ ತತ್‌ಕ್ಷಣ, ಕಿವಿ ಸಂಬಂಧಗಳನ್ನೇ ತಿರಸ್ಕರಿಸುತ್ತದೆ.

ಪ್ರೀತಿ… ವಿಶ್ವವನ್ನೇ ಆವರಿಸಿಕೊಂಡಿದೆ. ಪ್ರೀತಿ ಯೌವನಕ್ಕೆ ಮಾತ್ರ ಸೀಮಿತವಾಗಿಲ್ಲ. ಪ್ರೀತಿ ಅಂದರೆ ಸತ್ಯ, ಸುಂದರ, ಆತ್ಮೀಯ, ನಿಸ್ವಾರ್ಥ, ಅನಂತ, ನಿತ್ಯ, ಹಂಚಿಕೊಳ್ಳುವುದು, ಹುಟ್ಟು ಸಾವನ್ನು ಮೀರಿದ್ದು, ಬೇಕು ಬೇಡಗಳನ್ನು ಮೀರಿದ್ದು… ಇನ್ನೂ ಏನೇನೆಲ್ಲ. ಸಿಂಪಲ್‌ ಆಗಿ ಹೇಳಬೇಕು ಅಂದರೆ, ಜಗತ್ತಿನಲ್ಲಿ ಕಣ್ಣಿಗೆ ಕಾಣಿಸುತ್ತಿರುವುದು ಮತ್ತು ಕಾಣಿಸದೇ ಇರುವುದೆಲ್ಲ ಪ್ರೀತಿಯ ಪ್ರತಿರೂಪಗಳೇ. 

ಮನುಷ್ಯನಿಗೆ ಎಷ್ಟೇ ಜನ್ಮ ಬಂದು ಹೋದರೂ ಪ್ರೀತಿ ಶಾಶ್ವತವಾಗಿ ಜತೆಯಲ್ಲಿರುತ್ತದೆ. ಪ್ರತಿ ಜನ್ಮದಲ್ಲೂ  ಮನುಷ್ಯ ಯೌವನದ ಘಟ್ಟ ತಲುಪಿದಾಗ ಅವನಲ್ಲಿ ಪ್ರೇಮಾಂಕುರ ವಾಗುತ್ತದೆ. ಪ್ರೇಮ ಆಕರ್ಷಣೆಯ ಮೂಲಕ ಪ್ರಾರಂಭವಾಗಿ ಪಂಚೇಂದ್ರಿಯಗಳನ್ನು ಕೆಣಕುತ್ತದೆ. ಪಂಚೇಂದ್ರಿಯಗಳು ತಮ್ಮನ್ನು ಆಕರ್ಷಿಸುತ್ತಿರುವ ಕ್ರಿಯೆಗಳಿಗೆ ಪ್ರತಿಕ್ರಿಯಿಸುತ್ತಾ ಪ್ರೇಮದ ಅನುಭವಕ್ಕೆ ಒಳಗಾಗುತ್ತವೆ. ಇದೇ ಹುಟ್ಟು ಸಾವಿನ ನಡುವೆ ಒಬ್ಬ ಮನುಷ್ಯನಿಗೆ ಪರಿಚಯವಾಗುವ ಸುಖ. 

ಇಲ್ಲೊಂದು ಸಣ್ಣ ಹುಡುಕಾಟ ನಡೆಸೋಣ. 
ಇಷ್ಟೊಂದು ಬದಲಾವಣೆಗಳನ್ನು ತರುವ ಈ ಪಂಚೇಂದ್ರಿಯಗಳು ನಿಜವಾಗಿಯೂ ಏನು ಮಾಡುತ್ತವೆ? ಪರಿಪೂರ್ಣ ಪ್ರೇಮಕ್ಕೆ ಅವುಗಳಲ್ಲಿ ಒಂದೊಂದು ಎಷ್ಟು ಮುಖ್ಯ? ಅಥವಾ ಪ್ರೇಮ ಮನಸ್ಸಿಗೆ ಮಾತ್ರ ಸಂಬಂಧಿಸಿದ್ದಾ? ನಿಮಗೆ ಗೊತ್ತಾ, ಪ್ರೀತಿ ಕೇವಲ ಮುಖದಲ್ಲಿ ಹುಟ್ಟಿ ಸಮಾಗಮದಲ್ಲಿ ಮುಗಿಯುವಂಥದ್ದಲ್ಲ. ಅಷ್ಟಕ್ಕೇ  ನಿಲ್ಲುವವನು ಪ್ರೇಮಿಯೂ ಅಲ್ಲ. ಎಲ್ಲ ಐದು  ಇಂದ್ರಿಯಗಳ ಅಗತ್ಯವನ್ನೂ ಅರ್ಥ ಮಾಡಿಕೊಂಡು, ಪ್ರೇಮದಲ್ಲಿ ಅವುಗಳನ್ನು ತೃಪ್ತಿ ಪಡಿಸುವವನೇ ನಿಜವಾದ ಪ್ರೇಮಿ. ಹಾಗಾದರೆ ಯಾವ ಇಂದ್ರಿಯ ಏನು ಮಾಡುತ್ತದೆ ಮತ್ತು ನಾವು ಅದಕ್ಕೇನು ಮಾಡಬೇಕು ಎಂಬುದನ್ನು ನೋಡೋಣ. 

ಕಣ್ಣು: ಏನೇ ಸುಂದರವಾದದ್ದು ಕಂಡರೂ ಹೊಗಳಲು ಪ್ರಾರಂಭಿಸುತ್ತದೆ. ಬಾಹ್ಯ ಸೌಂದರ್ಯ ಮಾತ್ರ ಅಲ್ಲ, ಅಂತರಂಗದ ಸೌಂದರ್ಯವನ್ನೂ ಕೂಡ. ನಾನು ಯಾರನ್ನು ಇಷ್ಟಪಡಲಿ ಅಂತ ಮೊದಲು ಹುಡುಕುವುದೇ ಕಣ್ಣು. ಕಣ್ಣಿಗೆ ಮುದ ನೀಡುವ ಹಾಗೆ ಪ್ರೇಮಿ ಇರಲಿ ಅಂತ ಪ್ರತಿಯೊಬ್ಬರೂ ಆಸೆ ಪಡುತ್ತಾರೆ. ಸಂಬಂಧ ಶುರುವಾದಾಗ ಮೊದಲು ಒಪ್ಪಿಗೆ ಸೂಚಿಸುವುದೇ ಕಣ್ಣು. ಕಣ್ಣಿಗೆ ತೃಪ್ತಿಯಾಗುವುದು ಉತ್ತಮವಾಗಿ ಪ್ರತಿನಿಧಿಸಿಕೊಳ್ಳುವಂತಹ ಒಬ್ಬ ವ್ಯಕ್ತಿ ಕಾಣಸಿಕ್ಕಾಗ. ಒಬ್ಬಳು ಹುಡುಗಿ ಒಬ್ಬ ಹುಡುಗನ ಪ್ರೇಮದಲ್ಲಿ ಮನಸೋತಾಗ ಮೊದಲು ಅವಳು ಮುಚ್ಚಿಟ್ಟಿದ್ದ ಆಸೆಗಳನ್ನು ಹೊರಹೊಮ್ಮಿಸುವುದೇ ಅವಳ ಕಣ್ಣುಗಳು. ಪ್ರೇಮಿಗಳ ಕಣ್ಣು ಮಾತನಾಡುತ್ತವೆ, ಗೊತ್ತಲ್ಲ! 

ಚಿ|| ಉದಯಶಂಕರ್‌ ಹಾಡಿನ ಈ ಸಾಲು ನನ್ನನ್ನು ತುಂಬಾ ಕಾಡುತ್ತದೆ, “”ನೂರು ಮಾತು ಏಕೆ ಒಲವಿಗೆ… ನೋಟ ಒಂದೇ ಸಾಕಾಗಿದೆ…” ಸತ್ಯವಾದ ಮಾತು. ಪ್ರೇಮ ಮೊಳಕೆಯೊಡೆಯಲು ನೂರು ಮಾತುಗಳಿಗಿಂತ ಒಂದು ನೋಟ ಮುಖ್ಯ. ಲವ್‌ ಅಟ್‌ ಫ‌ಸ್ಟ್‌ ಸೈಟ್‌ ಇವತ್ತಿಗೂ ಚಾಲ್ತಿಯಲ್ಲಿರುವುದು ಅದಕ್ಕೇ ಇರಬೇಕು. 

ಕಣ್ಣು ಬಹುಮುಖ್ಯ ಇಂದ್ರಿಯ. ಅದರ ಗುಟ್ಟುಗಳನ್ನು ಅರಿತುಕೊಂಡು, ಅದರ ಆಸೆಗಳನ್ನು ಪೂರೈಸುವುದೇ ಒಬ್ಬ ವ್ಯಕ್ತಿ ತನ್ನ ಪ್ರೇಮಿಗಾಗಿ ಮಾಡಬೇಕಾದ ಕೆಲಸ. ಕಣ್‌ ಹೊಡೆದಷ್ಟು ಸುಲಭವಲ್ಲ ಇದು! ಕಣ್ಣಿನ ಸುಂದರ ಕನಸುಗಳನ್ನು ಅರಿತುಕೊಳ್ಳುವ ಸಾಮರ್ಥ್ಯ ಅವನಲ್ಲಿರಬೇಕು. ಆಗ ಅವನು ಒಂದು ರೂಪಾಯಿಯಲ್ಲಿ 20 ಪೈಸೆಯಷ್ಟು ಪ್ರೇಮಿಯಾಗಬಲ್ಲ. ಹಾಗಾದರೆ ಇನ್ನು 80 ಪೈಸೆ ಎಲ್ಲಿ? ಅವು ಇನ್ನಿತರ ನಾಲ್ಕು ಇಂದ್ರಿಯಗಳಲ್ಲಿವೆ. 

ಕಿವಿ: ಎಲ್ಲ ಸಂಬಂಧಗಳಲ್ಲೂ ಬಹಳ  ಮುಖ್ಯ ಪಾತ್ರವಹಿಸುತ್ತದೆ. ಕಿವಿಯಲ್ಲಿ ಕೇಳಿದ ಮಾತುಗಳಿಂದಲೇ ಸಂಬಂಧ ಶುರುವಾಗುವುದು ಅಥವಾ ಸಂಬಂಧ ಕಿತ್ತು ಹೋಗುವುದು. ಅದರ ಗುಣವೇ ಕೇಳಿದ ಮಾತುಗಳಿಗೆ ಪ್ರತಿಕ್ರಿಯಿಸುವಂತೆ ಮಾಡುವುದು. ಆದರೆ ಅದು ಪ್ರತಿಕ್ಷಣ ಹಿತ ನುಡಿಗಳಿಗೆ ಎದುರು ನೋಡುತ್ತಿರುತ್ತದೆ. ಒಬ್ಬ ವ್ಯಕ್ತಿಯನ್ನು ನಾನು ನನ್ನ ಪ್ರೇಮಿ ಅಂತ ಸ್ವೀಕರಿಸಬೇಕಾದರೆ ನನ್ನ ಕಿವಿಗಳು ಅದಕ್ಕೆ ಒಪ್ಪಿಗೆ ಸೂಚಿಸಬೇಕು. ಅವನು ನನ್ನೊಂದಿಗೆ ಆಡುವ ಮೊದಲ ಮಾತು. ಹೊಗಳಿಕೆ, ಭರವಸೆ, ನನಗೋಸ್ಕರ ಹಾಡುವ ಪ್ರಣಯ ಗೀತೆ, ಅವನ ಹಾಸ್ಯಪ್ರಜ್ಞೆ, ನಮ್ಮ ಮುಂದಿನ ದಿನಗಳ ಬಗ್ಗೆ ಅವನಿಗಿರುವ ಕಾತುರ, ನನ್ನ ಅಂತರಂಗದಲ್ಲಿರುವ ಆಸೆಗಳನ್ನು ತಿಳಿದುಕೊಳ್ಳುವ ಪ್ರಯತ್ನ ನನ್ನಲ್ಲಿ ಅವನ ಬಗ್ಗೆ ಬಯಕೆಗಳನ್ನು ಹುಟ್ಟಿಸುವಂತಹ ಮಾತು, ನಾನು ವಿಶೇಷ ಅನ್ನುವುದನ್ನು ಖಚಿತಪಡಿಸಲೆಂದೇ ನನಗಾಗಿ ನುಡಿದ ಸಾಲುಗಳು, ಮುಂದಿನ ನಮ್ಮ ಸಂಸಾರದ ಕನಸು, ಅವನು ನನ್ನ ಜತೆ ಇಲ್ಲದಿದ್ದಾಗಲೂ ನನ್ನನ್ನು ಕಾಡುವ ಅವನ ಧ್ವನಿ/ಮಾತುಗಳು ಇವೆಲ್ಲ ನನ್ನ ಅಂತರಂಗ ತಲುಪಿ, ನನ್ನಲ್ಲಿ ನಾನೇ ಹಿತವಾದ ಬದಲಾವಣೆಗಳನ್ನು ಅನುಭವಿಸುವುದು ನನ್ನ ಕಿವಿಗಳು ಅವನಾಡುವ ಮಾತುಗಳನ್ನು ಕೇಳಿದಾಗಲೇ. ಎಲ್ಲ ಹುಡುಗಿಯರೂ ತನ್ನ ಪ್ರೇಮಿ ತನ್ನ ಜತೆ ಸುಂದರವಾದ ಮಾತುಗಳನ್ನಾಡಲಿ ಎಂದು ಬಯಸುತ್ತಾರೆ. ಅದನ್ನು ಪ್ರಚೋದಿಸುವುದೇ ಅವಳ ಕಿವಿ. ಯಾವುದೇ ಸಂದರ್ಭದಲ್ಲಾದರೂ ಕರ್ಕಶ ಮಾತುಗಳನ್ನು, ಅಹಿತವಾದದ್ದನ್ನು, ಕೆಟ್ಟ ಪದಗಳನ್ನು ಕೇಳಿದ ತತ್‌ಕ್ಷಣ,  ಕಿವಿ ಸಂಬಂಧಗಳನ್ನೇ ತಿರಸ್ಕರಿಸುತ್ತದೆ. ಏಕೆಂದರೆ ಧ್ವನಿಯ ಮೂಲಕ ಪ್ರಸರಿಸುವ ತರಂಗಗಳು ಅವಳ ಮನಸ್ಸಿನ ಮೇಲೆ ಪ್ರಭಾವ ಬೀರುತ್ತವೆ.

ಎಷ್ಟೋ ಹುಡುಗಿಯರು ಹುಡುಗನ ಮಾತುಗಳನ್ನು ಕೇಳುತ್ತಾ ಕೇಳುತ್ತಾ ಅವನನ್ನು ಪ್ರೀತಿಸಲು ಶುರುಮಾಡಿರುತ್ತಾರೆ. ಕಿವಿಗೆ ಪ್ರೀತಿಯಲ್ಲಿ ಎಷ್ಟು ಮುಖ್ಯವಾದ ಸ್ಥಾನ ಅನ್ನುವುದನ್ನು ಇದರಿಂದಲೇ ನಾವು ತಿಳಿದುಕೊಳ್ಳಬಹುದು. ಅನೇಕ ಹುಡುಗಿಯರು ತನ್ನ ಪ್ರೇಮಿ ಸರಿಯಾಗಿ ಮಾತುಗಳಿಂದ ಪ್ರತಿಕ್ರಿಯಿಸುತ್ತಲ್ಲವೆಂದೇ ಅವನಿಂದ ದೂರವಾಗುತ್ತಾರೆ. ಒಂದು ಹುಡುಗಿಯನ್ನು ಹೆಣ್ಣಾಗಿ, ಪ್ರೇಮಿಯಾಗಿ ಪರಿವರ್ತಿಸಬೇಕಾದರೆ ಒಬ್ಬ ಹುಡುಗನ ಧ್ವನಿ ಮತ್ತು ಮಾತುಗಳು ಬಹಳ ಮುಖ್ಯ. ಇದು ಹುಡುಗರಿಗೆ ಅರಿವಾಗಬೇಕು. ವಿರುದ್ಧ ಕೋನದಲ್ಲೂ, ಅಂದರೆ ಹುಡುಗಿಯಿಂದ ಹುಡುಗನಿಗೂ ಇದು ಅನ್ವಯಿಸುತ್ತದೆ. ಪ್ರೀತಿ ಮೌನವಾಗಿ ಪ್ರವಹಿಸುತ್ತದೆ ಎಂಬುದು ಅದರ ನೆಲೆಗಟ್ಟಿನಲ್ಲಿ ನಿಜವಾದರೂ ಮಾತಿಲ್ಲದ ಪ್ರೀತಿಯಲ್ಲಿ, ಅರ್ಥಾತ್‌ ಕಿವಿಯೊಳಗೆ ಹೊಕ್ಕು ಮನದೊಳಗೆ ಮನೆ ಮಾಡದ ಪ್ರೀತಿಯಲ್ಲಿ ಈ ಚಕ್ರ ಪೂರ್ಣಗೊಳ್ಳುವುದಿಲ್ಲ. ಸಂಗಾತಿಯನ್ನು ಮಾತಿನಲ್ಲೇ ತೃಪ್ತಿಪಡಿಸುವ ಕಲೆ ತಿಳಿದಿರುವವರು ತಮ್ಮ ಪ್ರೀತಿಯ ಎರಕಕ್ಕೆ ಶೃಂಗಾರದ ಸಿಂಗಾರ ಮಾಡಿ ಅದನ್ನು ಎತ್ತರದ ಸ್ತರಕ್ಕೆ ಕೊಂಡೊಯ್ಯುತ್ತಾರೆ. ಪ್ರೀತಿಯ ಭಾಷೆಯಲ್ಲಿ ಕಿವಿ ಕಿವಿಯಷ್ಟೇ ಅಲ್ಲ. ಹಾಗಾದರೆ ಅದೇನು ಎಂಬುದನ್ನು ಕಂಡುಕೊಳ್ಳುವುದು ಕಷ್ಟವೂ ಅಲ್ಲ. ಪ್ರಿಯವಾಕ್ಯ ಪ್ರದಾನೇನ ಸರ್ವೇ ತುಷ್ಯಂತಿ ಜಂತವಃ… ಪ್ರೀತಿಯ ಮಾತುಗಳಿಂದ ಎಲ್ಲ ಜೀವಿಗಳೂ ಸಂತೋಷಪಡುತ್ತವೆ. ಸಂತೋಷಪಡುವ ಕ್ರಿಯೆಯಲ್ಲಿ ಅಡಗಿರುವುದು ಪ್ರೀತಿಯೇ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ.  ಪ್ರೀತಿಯಲ್ಲಿ ಇನ್ನು ಮೂರು ಇಂದ್ರಿಯಗಳ ಪಾತ್ರ ಏನು ಎನ್ನುವುದನ್ನು ಮುಂದಿನ ವಾರ ನೋಡೋಣ.

ರೂಪಾ ಅಯ್ಯರ್‌

ಟಾಪ್ ನ್ಯೂಸ್

Thekkatte: ಕಾರು ಮರಕ್ಕೆ ಢಿಕ್ಕಿ; ಯುವತಿ ಸ್ಥಳದಲ್ಲೇ ಸಾವು, ನಾಲ್ವರಿಗೆ ಗಂಭೀರ ಗಾಯ

1-aade

Archery ವಿಶ್ವಕಪ್‌: ಜ್ಯೋತಿಗೆ ಹ್ಯಾಟ್ರಿಕ್‌ ಚಿನ್ನ

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Kasaragod ರೈಲು ಗಾಡಿಗೆ ಕಲ್ಲೆಸೆತ: ಬಾಲಕಿಗೆ ಗಾಯ

Kasaragod ರೈಲು ಗಾಡಿಗೆ ಕಲ್ಲೆಸೆತ: ಬಾಲಕಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಾಡರ್ನ್ ಆಧ್ಯಾತ್ಮ: ನಮ್ಮ ಕೆಲಸವೇ “ನಮ್ಮ ವ್ಯಕ್ತಿತ್ವ’ವೆಂಬ ದುರಂತ!

ಮಾಡರ್ನ್ ಆಧ್ಯಾತ್ಮ: ನಮ್ಮ ಕೆಲಸವೇ “ನಮ್ಮ ವ್ಯಕ್ತಿತ್ವ’ವೆಂಬ ದುರಂತ!

ಅಂಥ ಸುಂದರ ವ್ಯಕ್ತಿಯನ್ನು ನನ್ನ ಜೀವನದಲ್ಲೇ ನೋಡಿರಲಿಲ್ಲ!

ಅಂಥ ಸುಂದರ ವ್ಯಕ್ತಿಯನ್ನು ನನ್ನ ಜೀವನದಲ್ಲೇ ನೋಡಿರಲಿಲ್ಲ!

ಮನೆಯಲ್ಲೇ ಕುಳಿತು ಪ್ರವಾಸ ಮಾಡುವಿರಾ?

ಮನೆಯಲ್ಲೇ ಕುಳಿತು ಪ್ರವಾಸ ಮಾಡುವಿರಾ?

modern-adyatma

ಎಲ್ಲರೂ ಹುಡುಕುತ್ತಿರುವುದು 3ನೇ ಕುರಿಯನ್ನೇ!

ram-46

ವೈದ್ಯ, ರೋಗಿ ಮತ್ತು ಭಕ್ತಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Thekkatte: ಕಾರು ಮರಕ್ಕೆ ಢಿಕ್ಕಿ; ಯುವತಿ ಸ್ಥಳದಲ್ಲೇ ಸಾವು, ನಾಲ್ವರಿಗೆ ಗಂಭೀರ ಗಾಯ

badminton

Uber Cup ಬ್ಯಾಡ್ಮಿಂಟನ್‌: ಕೆನಡಾವನ್ನು ಮಣಿಸಿದ ಭಾರತ

1-aade

Archery ವಿಶ್ವಕಪ್‌: ಜ್ಯೋತಿಗೆ ಹ್ಯಾಟ್ರಿಕ್‌ ಚಿನ್ನ

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.