ಮೋದಿ ಕೇರ್‌ ಏಕೆ ಬರಬಾರದು?


Team Udayavani, Aug 21, 2017, 7:50 AM IST

21-an-2.jpg

ಸಾರ್ವಜನಿಕ ಸ್ವಾಸ್ಥ್ಯ ಜಾಲದಲ್ಲಿ ಜನರಿಗೆ ಅತ್ಯುತ್ತಮ ಮೆಡಿಕಲ್‌ ಕವರೇಜ್‌ ಕೊಡಬಲ್ಲ ಒಂದು ಹೊಸ “ವ್ಯಾಪಕ ಚಿಕಿತ್ಸಾ ವಿಮಾ ಯೋಜನೆ'(ಉಚಿತವಾಗಿ ಕೊಡಬೇಕು ಎಂದೇನೂ ಇಲ್ಲ) ಜಾರಿಗೆ ತರಬಹುದಲ್ಲವೇ? ಸಾವಿರಾರು ದೊಡ್ಡ ಆಸ್ಪತ್ರೆಗಳನ್ನು ನಡೆಸುವುದಕ್ಕಿಂತಲೂ ಇದು ಫ‌ಲಪ್ರದವಾಗಬಲ್ಲದು.

ಗೋರಖ್‌ಪುರದ ಬಿಆರ್‌ಡಿ ಮೆಡಿಕಲ್‌ ಕಾಲೇಜಿನ ಆಸ್ಪತ್ರೆಯಲ್ಲಿ ಕೆಲ ದಿನಗಳ ಹಿಂದೆ 70ಕ್ಕೂ ಹೆಚ್ಚು ಮಕ್ಕಳು ಮೃತಪಟ್ಟಿವೆ. ಉತ್ತರ ಪ್ರದೇಶದ ಈ ಆಸ್ಪತ್ರೆಯಲ್ಲಿ ದ್ರವ ಆಕ್ಸಿಜನ್‌ ಖಾಲಿಯಾಗಿದ್ದರಿಂದ ಇಷ್ಟೆಲ್ಲ ಸಾವು ಸಂಭವಿಸಿತು ಎನ್ನುವ ಆರೋಪವಿದೆ. ಈ ಆಸ್ಪತ್ರೆಯು ಹಿಂದಿನ ಬಿಲ್‌ ಪಾವತಿ ಮಾಡದ ಕಾರಣ ಪೂರೈಕೆದಾರರು ಆಕ್ಸಿಜನ್‌ ಸಪ್ಲೆ„ ನಿಲ್ಲಿಸಿಬಿಟ್ಟಿದ್ದಾರೆ. ಮಕ್ಕಳ ಸಾವಿಗೆ ಇನ್ನೂ ಅನೇಕ ಕಾರಣಗಳನ್ನು ಮುಂದಿಡಲಾಗುತ್ತಿದೆ. ಒಬ್ಬರು ಸರಕಾರವನ್ನು ಕಟಕಟೆಯಲ್ಲಿ ನಿಲ್ಲಿಸಿದರೆ, ಇನ್ನೊಬ್ಬರು ಆಸ್ಪತ್ರೆಯ ಅಧಿಕಾರಿಗಳನ್ನು ಮತ್ತೂಬ್ಬರು ಸಪ್ಲೆ„ಯರ್‌ಗಳನ್ನು ದೋಷಿಗಳ ಸ್ಥಾನದಲ್ಲಿ ನಿಲ್ಲಿಸುತ್ತಿದ್ದಾರೆ. ಕೆಲವರಂತೂ ಸಮಸ್ಯೆ ಆಕ್ಸಿಜನ್‌ ಸಿಲಿಂಡರ್‌ಗಳದ್ದು ಅಲ್ಲವೇ ಅಲ್ಲ ಎನ್ನುವ ವಾದವನ್ನೂ ಮುಂದಿಡುತ್ತಿದ್ದಾರೆ. ಒಟ್ಟಲ್ಲಿ ಈ ಸಾವುಗಳಿಗೆ ಕಾರಣವಾಗಿರುವವರೆಲ್ಲರೂ ಇನ್ನೊಬ್ಬರತ್ತ ಬೆರಳು ತೋರಿಸುತ್ತಿದ್ದಾರೆ. ಆದರೆ ಮಕ್ಕಳ ಪ್ರಾಣವಂತೂ ಹೋಗಿದೆ. ಮಕ್ಕಳನ್ನು ಕಳೆದುಕೊಂಡ ಪರಿವಾರಗಳಂತೂ ತಮ್ಮ ಇಡೀ ಬದುಕನ್ನು ದುಃಖದಲ್ಲಿ, ಅಸಹಾಯಕ ಸಿಟ್ಟಿನಲ್ಲಿ ಕಳೆಯುವಂತಾಗಿದೆ. ನಿಜಕ್ಕೂ ಮನಸ್ಸಿಗೆ ಹೆಚ್ಚು ತ್ರಾಸ ಕೊಡುವ ಸಂಗತಿಯೆಂದರೆ, ಈ ಅವಗಢವನ್ನು ಸುಲಭವಾಗಿ ತಡೆಯಬಹುದಿತ್ತು ಎನ್ನುವುದು. ಮಕ್ಕಳು ಮೃತಪಟ್ಟಿದ್ದಕ್ಕೆ ಏಕೈಕ ಕಾರಣ- ಕಳಪೆ ಆಡಳಿತ. ಸತ್ಯವೇನೆಂದರೆ ಈ ಅಂಶ ಭಾರತದ ಸರಕಾರಿ ಸೇವೆಗಳ ಹೆಗ್ಗುರುತಾಗಿಬಿಟ್ಟಿದೆ!

ಸೆಲ್‌ಫೋನ್‌ಗಳು ಬರುವುದಕ್ಕೂ ಮುನ್ನದ ಜಗತ್ತನ್ನು ನೆನಪಿಸಿಕೊಳ್ಳಿ. ಆಗ ಎಂಟಿಎನ್‌ಎಲ್‌ ಸೇವೆಯನ್ನು ಪಡೆಯುವುದು(ಫೋನ್‌ ಕನೆಕ್ಷನ್‌)ಎಂಥ ಭಯಾನಕ ಅನುಭವವಾಗಿತ್ತು ಎನ್ನುವುದು ನಿಮಗೆ ಗೊತ್ತಿರುತ್ತದೆ. ಸತ್ಯವೇನೆಂದರೆ ಸರಕಾರಿ ಹೋಟೆಲ್‌ಗ‌ಳಾಗಲಿ ಅಥವಾ ವಾಯುಸೇವೆಗಳಾಗಲಿ ಖಾಸಗಿಯವರಿಗೆ ಹೋಲಿಸಿದರೆ ಬಹಳ ಕೆಟ್ಟ ಸೇವೆಯನ್ನು ಕೊಡುತ್ತವೆ. ಸರಕಾರಕ್ಕೆ ಜಟಿಲ ಸೇವೆಗಳನ್ನು ಸರಿಯಾಗಿ ನಿಯಂತ್ರಿಸಲು-ನಿರ್ವಹಿಸಲು ಆಗುವುದಿಲ್ಲ ಎನ್ನುವುದಂತೂ ಸ್ಪಷ್ಟ. ಯಾವುದಾದರೂ ಕೆಲಸವೊಂದು ಗುಣಮಟ್ಟ ನಿಯಂತ್ರಣವನ್ನು ಬಯಸುತ್ತದೆ ಎಂದಾದರೆ, ಬಹಳಷ್ಟು ಗ್ರಾಹಕರೊಂದಿಗೆ ಏಕಕಾಲದಲ್ಲಿ ವ್ಯವಹರಿಸುತ್ತದೆ ಎಂದಾದರೆ ಅಥವಾ ವೇಗವಾಗಿ ನಿರ್ಣಯ ತೆಗೆದುಕೊಳ್ಳುವ ಜರೂರತ್ತನ್ನು ಬೇಡುತ್ತದೆ ಎಂದಾದರೆ ಅಂಥ ಕೆಲಸಗಳ ನಿರ್ವಹಣೆಯಲ್ಲಿ ಸರಕಾರಿ ಅಂಗಗಳು ಭಯಂಕರವಾಗಿ ವಿಫ‌ಲವಾಗಿಬಿಡುತ್ತವೆ! ಆದರೆ ಎಂಟಿಎನ್‌ಎಲ್‌ನಲ್ಲಿ ಕಳಪೆ ನಿರ್ವಹಣೆ ತೋರಿಸುವವರಿಂದಾಗಿ ಜನರಿಗೆ ತಡವಾಗಿ ಫೋನ್‌ ಕನೆಕ್ಷನ್‌ ಸಿಗುತ್ತಿತ್ತಷ್ಟೇ ಹೊರತು ಪ್ರಾಣಕ್ಕೆ ಕುತ್ತು ಬರಲಿಲ್ಲ, ಏರ್‌ ಇಂಡಿಯಾ ಕಳಪೆ ನಿರ್ವಹಣೆಯಿಂದಾಗಿ ವಿಮಾನ ಹಾರಾಟ ತಡವಾಗುತ್ತಿತ್ತೇ ಹೊರತು ಮಕ್ಕಳು ಅನ್ಯಾಯವಾಗಿ ಪ್ರಾಣ ಕಳೆದುಕೊಳ್ಳಲಿಲ್ಲ. ಆದರೆ ಅಂಥದ್ದೇ ಕಳಪೆ ನಿರ್ವಹಣಾ ಗುಣ ಈಗ ಗೋರಖ್‌ಪುರದ ಆಸ್ಪತ್ರೆಯಲ್ಲಿ ಮಕ್ಕಳ ಪ್ರಾಣ ಕಿತ್ತುಕೊಂಡಿದೆ.  

ಹಾಗೆಂದು ಈ ಲೇಖನದ ಉದ್ದೇಶ ಸರಕಾರವನ್ನು ಜಾಡಿಸುವುದಂತೂ ಅಲ್ಲ, ಆ ಕೆಲಸವನ್ನು ಬಹಳಷ್ಟು ಲೇಖನಗಳು ಅದಾಗಲೇ ಮಾಡಿವೆ ಬಿಡಿ. ಇದರ ಉದ್ದೇಶವೇನಿದ್ದರೂ ಸರಕಾರಕ್ಕೆ ತನ್ನ ಮಿತಿಯನ್ನು ಅರ್ಥಮಾಡಿಸುವುದು(ಅಂದರೆ ಜಟಿಲ ಸೇವೆಗಳನ್ನು ಉತ್ತಮವಾಗಿ ಅನುಷ್ಠಾನಕ್ಕೆ ತರಲು ಅದಕ್ಕೆ ಸಾಧ್ಯವೇ ಇಲ್ಲ ಎನ್ನುವುದನ್ನು ತಿಳಿಯುವಂತೆ ಮಾಡುವುದು). ಬಹಳಷ್ಟು ಸರಕಾರಿ ಉದ್ಯೋಗಿಗಳು ತಮ್ಮ ಕೆಲಸ ಉಳಿಸಿಕೊಳ್ಳುವುದರಲ್ಲೇ ಹೆಚ್ಚು ಸಮಯ ವಿನಿಯೋಗಿಸುತ್ತಾರೆ! ಸರಕಾರಿ ಕೆಲಸಗಾರನೊಬ್ಬ ಸಮಸ್ಯೆಯೊಂದಕ್ಕೆ ರಚನಾತ್ಮಕ ಪರಿಹಾರ ಹುಡುಕಿದ ಎಂದುಕೊಳ್ಳಿ. ಅದರಿಂದ ಅವನ ವೃತ್ತಿ ಜೀವನಕ್ಕೆ ಲಾಭವೇನೂ ಆಗದು. ಆದರೆ ಅವನು ಪ್ರಸ್ತಾಪಿಸಿದ ಐಡಿಯಾವೇನಾದರೂ ಮುಗ್ಗರಿಸಿದರೆ ನಿಸ್ಸಂಶಯವಾಗಿಯೂ ಅವನಿಗೆ ಲುಕ್ಸಾನಂತೂ ಆಗುತ್ತದೆ. ಈ ಕಾರಣಕ್ಕಾಗಿಯೇ ಸಾಮಾನ್ಯವಾಗಿ ಸರಕಾರಿ ನೌಕರರೆಲ್ಲರೂ “ಹೊಸದೇನೂ ಮಾಡಬಾರದು. ರಿಟಯರ್‌ ಆಗುವವರೆಗೂ ಒಂದೇ ಕೆಲಸವನ್ನು ಪುನರಾವರ್ತಿಸುತ್ತಲೇ ಇರಬೇಕು’ ಎಂಬ ಮನಸ್ಥಿತಿಯನ್ನು ತೋರಿಸುತ್ತಾರೆ. ಅದಕ್ಕೆ ತಕ್ಕಂತೆಯೇ ಕೆಲಸ ಮಾಡುತ್ತಾ ಹೋಗುತ್ತಾರೆ.

ಈ ಕಾರಣದಿಂದಲೇ ಗೋರಖಪುರದ ಆಸ್ಪತ್ರೆಯಲ್ಲಿ ಆಮ್ಲಜನಕ ಪೂರೈಕೆ ವ್ಯವಸ್ಥೆಯಂಥ ಮೂಲಭೂತ ಅಗತ್ಯದಲ್ಲಿ ಇರುವ ಕೊರತೆಯ ಬಗ್ಗೆ  ಯಾರೊಬ್ಬರೂ ಮೊದಲೇ ತಲೆಕೆಡಿಸಿಕೊಳ್ಳಲಿಲ್ಲ. ಮುಂದಾಲೋಚನೆಯೇನಾದರೂ ಇದ್ದಿದ್ದರೆ, ಆಕ್ಸಿಜನ್‌ ಸಪ್ಲೆ„ಯರ್‌ಗಳಿಗೆ ಆಟೊಮೆಟಿಕ್‌ ಪೇ ಅಥವಾ ತನ್ನಷ್ಟಕ್ಕೇ ತಾನೇ ಹಣ ಸಂದಾಯವಾಗುವ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿತ್ತು. ಆಸ್ಪತ್ರೆಯಲ್ಲಿಯೇ ಆಕ್ಸಿಜನ್‌ ಇನ್ವೆಂಟರಿ ಸಿಸ್ಟಮ್‌ಗಳು ಇರುತ್ತಿದ್ದವು. ಒಂದು ವೇಳೆ ಎಮರ್ಜೆನ್ಸಿ ಎದುರಾದರೆ ಆಟೋ ಪೇ ಅಷ್ಟೇ ಅಲ್ಲದೆ, ಆ ಕ್ಷಣಕ್ಕೆ ಬೇಕಾದ ಆಕ್ಸಿಜನ್‌ ಕೂಡ ದೊರಕುವಂತಾಗುತ್ತಿತ್ತು. ಆದರೆ ಮುಂದಾಲೋಚನೆ ಎಲ್ಲಿದೆ? ಯಾರಿಗಿದೆ? ಇಂದು ಪ್ರತಿ ಆಸ್ಪತ್ರೆಯಲ್ಲೂ ಮಾನ್ಯತೆ ಪಡೆದ ಆಪತ್ಕಾಲೀನ ವಸ್ತುಗಳಿಗೆ ಕ್ರೆಡಿಟ್‌ ಲೈನ್‌ ಇರಬೇಕು. ಆದರೆ ಇದನ್ನೆಲ್ಲ ಮಾಡಬೇಕಾದವರು ಯಾರು? ಸರಕಾರಿ ಅಧಿಕಾರಿಯೊಬ್ಬ ಇಂಥ ಪರಿಹಾರ ಸೂಚಿಸಿದನೆಂದಾಕ್ಷಣ ಆತನ ವೇತನ ವೃದ್ಧಿಯೇನೂ ಆಗದು. ಅಷ್ಟೇ ಅಲ್ಲ, ಆತನಿಗೆ ತುಸು ಪ್ರಶಂಸೆಯೂ ಸಿಗುವುದಿಲ್ಲ. ಆದರೆ ಒಂದು ವೇಳೆ ಪರಿಹಾರೋಪಾಯದ ಅನುಷ್ಠಾನದಲ್ಲಿ ಬಿಕ್ಕಟ್ಟುಗಳೇನಾದರೂ ಎದುರಾದರೆ ನಿಸ್ಸಂಶಯವಾಗಿಯೂ ಆತನಿಗೆ ಶಿಕ್ಷೆ ವಿಧಿಸಲಾಗುತ್ತದೆ(ಕೆಟ್ಟ ಸ್ಥಳಕ್ಕೆ ವರ್ಗಾವಣೆ ಮಾಡಲಾಗುತ್ತದೆ ಅಥವಾ ಪದೋನ್ನತಿ ನಿಲ್ಲಿಸಲಾಗುತ್ತಿದೆ). ಈ ಕಾರಣಕ್ಕಾಗಿಯೇ ಯಾವ ರಗಳೆಯೂ ಬೇಡ ಎಂದು ಆತ ಸುಮ್ಮನೇ ಕೂತು ಬಿಡುತ್ತಾನೆ. 

ಪ್ರತಿಯೊಂದು ಸರಕಾರಿ ಸಂಸ್ಥೆಯಲ್ಲಿಯೂ ಇಂಥ ಮನಸ್ಥಿತಿಗಳು ಢಾಳಾಗಿ ಕಾಣಿಸುತ್ತವೆ. ಹೀಗಾಗಿ, ಈ ರೀತಿಯ ನಿರ್ವಹಣಾ ಶೈಲಿಯನ್ನು ಬದಲಿಸುವ ಅಗತ್ಯವಿದೆ. ನಮ್ಮ ಸರಕಾರಿ ಅಧಿಕಾರಿಗಳು ಪರಿಸ್ಥಿತಿಯನ್ನು ಸುಧಾರಿಸಬೇಕೆಂದರೆ ಅವರನ್ನು ಪ್ರೋತ್ಸಾಹಿಸುವ(ಆರ್ಥಿಕವಾಗಿಯೂ) ಕೆಲಸವಾಗಬೇಕಿದೆ. ಇದರ ನಡುವೆ ಸರಕಾರ ತನ್ನ ಮಿತಿಗಳ ಮೇಲೆ ಗಮನ ಹರಿಸಬಹುದು. ಯಾವ ಜಟಿಲ ಸಮಸ್ಯೆಗಳನ್ನು ಬಗೆಹರಿಸಲು ಸರಕಾರಕ್ಕೆ ಕಷ್ಟವಾಗುತ್ತದೋ ಅಂಥ ಸಮಸ್ಯೆಗಳಲ್ಲಿ ವಿತ್ತೀಯ ಸಂಸ್ಥೆಗಳು ಮಹತ್ವದ ಪಾತ್ರ ನಿರ್ವಹಿಸಬಲ್ಲವು. ಇಂಥ ಸಂಸ್ಥೆಗಳಿಂದಾಗಿ ದಿನ ನಿತ್ಯದ ಹಲವು ಸಮಸ್ಯೆಗಳು ಬಗೆಹರಿಯಬಲ್ಲವು. ಉದಾಹರಣೆಗೆ, ದೇಶದ ಅತಿದೊಡ್ಡ ವಿಮಾ ಸಂಸ್ಥೆಯಾದ ಭಾರತೀಯ ಜೀವನ ವಿಮಾ ನಿಗಮವನ್ನೇ ತೆಗೆದುಕೊಳ್ಳಿ.   

ಸರಕಾರ ಇನ್ಮುಂದಾದರೂ ದೇಶದ ಮೆಡಿಕಲ್‌ ವಿಮೆಯಲ್ಲಿ ಸುಧಾರಣೆ ತಂದು, ಆಸ್ಪತ್ರೆಗಳ ನಿರ್ವಹಣೆಯಲ್ಲಿ ಹೆಚ್ಚು ತೊಡಗುವುದು ಒಳ್ಳೆಯದು. ನೆನಪಿರಲಿ, ಸರಕಾರಿ ಆಸ್ಪತ್ರೆಗಳಲ್ಲಿ ಭಾರತದಲ್ಲಿನ ಅತಿ ಶ್ರೇಷ್ಠ ಡಾಕ್ಟರ್‌ಗಳೂ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನೂ ಹೆಚೆØಚ್ಚು ಪ್ರತಿಭಾವಂತರನ್ನು ಸರಕಾರಿ ಸೇವೆಯತ್ತ ಆಕರ್ಷಿಸುವ ಕೆಲಸ ಮಾಡಬೇಕು ಸರಕಾರ. ಆಸ್ಪತ್ರೆ ನಡೆಸುವುದು, ಅಂದರೆ-ಸಫಾಯಿ, ಸರಬರಾಜು, ಜಾರಿ ಮತ್ತು ಪಾವತಿಯಂಥ ಕೆಲಸಗಳಲ್ಲೇ ಮುಳುಗಿಹೋಗಿರುತ್ತದೆ ಸರಕಾರ. ಅದಷ್ಟೇ ತನ್ನ ಕೆಲಸವೆಂದು ಅದು ಭಾವಿಸಿದೆ. ಇದರ ಜೊತೆಜೊತೆಗೇ ದೇಶದ ಬಹಳಷ್ಟು ಜನರಿಗೆ ವಿಮಾ ವಲಯದೊಳಗೆ ಬರುವಂತೆ ಮಾಡಬೇಕು. ರೋಗಿಗಳಿಗೆ ಒಳ್ಳೆಯ ಕವರೇಜ್‌ ಪ್ಲ್ರಾನ್‌ ಸಿಗುವಂತಾಗಬೇಕು. ಒಳ್ಳೆಯ ಡಾಕ್ಟರ್‌ಗಳನ್ನು ನೇಮಿಸಿಕೊಳ್ಳಬೇಕು ಮತ್ತು ಖಾಸಗಿ ಕ್ಷೇತ್ರದವರಿಗೂ ಆಸ್ಪತ್ರೆಗಳನ್ನು ನಡೆಸಲು ಬಿಡಬೇಕು. ಗ್ರಾಮೀಣ ಸ್ವಾಸ್ಥ್ಯ ವಿಮಾ ಯೋಜನೆಯಂಥ ಕೆಲವು ಪ್ಲ್ರಾನ್‌ಗಳು ಬಹುಮಟ್ಟಿಗೆ ಸಫ‌ಲವೇನೋ ಆಗಿವೆ, ಆದರೆ ಇವು ವೈದ್ಯಕೀಯ ವಲಯವನ್ನು ಬದಲಿಸಿಬಿಟ್ಟಿವೆ ಎಂದು ಹೇಳಲಾಗುವುದಿಲ್ಲ. ವಾಸ್ತವಿಕ ಸಾರ್ವಜನಿಕ ಸ್ವಾಸ್ಥ್ಯ ಜಾಲದಲ್ಲಿ ಜನರಿಗೆ ಅತ್ಯುತ್ತಮ ಮೆಡಿಕಲ್‌ ಕವರೇಜ್‌ ಕೊಡಬಲ್ಲ ಒಂದು ಹೊಸ “ವ್ಯಾಪಕ ಚಿಕಿತ್ಸಾ ವಿಮಾ ಯೋಜನೆ'(ಉಚಿತವಾಗಿ ಕೊಡಬೇಕು ಎಂದೇನೂ ಇಲ್ಲ) ಜಾರಿಗೆ ತರಬಹುದಲ್ಲವೇ? ಸಾವಿರಾರು ದೊಡ್ಡ ಆಸ್ಪತ್ರೆಗಳನ್ನು ನಡೆಸುವುದಕ್ಕಿಂತಲೂ ಇದು ಫ‌ಲಪ್ರದವಾಗಬಲ್ಲದು. ಒಬಾಮಾ ಕೇರ್‌ ಇದೆ ಎಂದಾದರೆ, ಮೋದಿ ಕೇರ್‌ ಏಕೆ ಬರಬಾರದು? 

ಚೇತನ್‌ ಭಗತ್‌

ಟಾಪ್ ನ್ಯೂಸ್

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

5-

ಸಮುದಾಯ ಪ್ರಜ್ಞೆ ಬಿತ್ತಲು ಮನೆಯೇ ಪ್ರಶಸ್ತ

1-sadsdsa

Children ಹದಿಹರೆಯ -ತಾಯಿಯ ಕರ್ತವ್ಯ

1-sadsdsad

Emotion-language-life; ಭಾವ-ಭಾಷೆ-ಬದುಕು

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.