Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ


Team Udayavani, Oct 3, 2023, 6:15 AM IST

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

ಒಂದು ರಾಷ್ಟ್ರ-ಒಂದು ಚುನಾವಣೆ ಎನ್ನುವ ಘೋಷಣೆಯ ಪರಿಧಿಯ ಚರ್ಚೆ ಯಲ್ಲಿ ನಮ್ಮ ಪ್ರಜಾತಂತ್ರ ವ್ಯವಸ್ಥೆ ರಂಗೇರುತ್ತಿದೆ. ಇದೊಂದು ಕೇವಲ ವಿವಾದಿತ ವಿಚಾರ ಎನ್ನುವುದಕ್ಕಿಂತ ಮಿಗಿಲಾಗಿ ಅಧ್ಯಯನ ಯೋಗ್ಯ ಎನಿಸುವಂತಹದು. ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದರ ಹಿರಿತನದ ಸಮಿತಿಯ ಕಕ್ಷೆಗೂ ಸೇರಿ ಇದೊಂದು ವಿಶ್ಲೇ ಷಣಾರ್ಹ ಹಾಗೂ ಮುಂದಿನ ದಿಕ್ಸೂಚಿ ಎಂಬು ದಾಗಿ ಬಿಂಬಿತಗೊಳ್ಳುತ್ತಿದೆ. ಇಲ್ಲೊಂದು ಹೊರ ದ್ವಾರದಲ್ಲೇ ತಿಳಿ- ಬರಹದ ಸಂಜ್ಞಾ ಫ‌ಲಕ ಕಾಣಿ ಸುತ್ತದೆ. ಚುನಾವಣೆ ಎಂಬುದು ಜನತಂತ್ರದ ಅಂತಿಮ ಗುರಿಯಲ್ಲ; ಬದಲಾಗಿ ಜನಮನ ಅರಿ ಯುವ ಒಂದು ಅನಿವಾರ್ಯ ಸಾಧನ, ಅಷ್ಟೇ.

ಈ ನೆಲೆಗಟ್ಟಿನಲ್ಲಿ ನಮ್ಮ ಸಂವಿಧಾನದ ಗೆರೆಯೊಳಗೆ ಮೂಡಿನಿಂತ ಸಮಗ್ರ ವಿಧಿ ವಿಧಾ ನಗಳ ವಿನ್ಯಾಸ, ಒಳ ಹೊರಗುಗಳನ್ನು ಎಳೆ ಎಳೆಯಾಗಿ ರೂಪಿಸಬಹುದು. ಮೊದಲಿಗೆ ಕೇಂದ್ರದ ಲೋಕಸಭೆ ಅಂತೆಯೇ 28 ರಾಜ್ಯಗಳ ಹಾಗೂ 8 ಕೇಂದ್ರಾಡಳಿತ ಪ್ರದೇಶಗಳ ಸರಕಾರಗಳ ಆಯ್ಕೆಯ ಲಂಬ ವ್ಯವಸ್ಥೆಯ ಚುನಾವಣ ಪದ್ಧತಿ ನಮ್ಮದು. ಇದರೊಂದಿಗೆ ನಗರ, ಜಿಲ್ಲೆ, ತಾಲೂಕು, ಪಂಚಾಯತ್‌ಗಳ ಅಪರಿಮಿತ ಚುನಾವಣ ಜಾಲ ಹೆಣೆದು ನಿಂತ ಭಾರತ ನಮ್ಮದು.

ಜನಸಂಖ್ಯಾತ್ಮಕವಾಗಿಯೂ ವಿಶ್ವದ ಅತ್ಯಂತ ಹಿರಿಯ ಪ್ರಜಾಪ್ರಭುತ್ವ ಪದ್ಧತಿಯನ್ನು ಹೊಂದಿದವರು ನಾವು ಎನ್ನುವ ಹೆಗ್ಗಳಿಕೆ ನಮ್ಮದು. ಇಲ್ಲಿ ಕೇವಲ ಕೇಂದ್ರ ಹಾಗೂ ರಾಜ್ಯ – ಈ ಎರಡೇ ಹಂತಕ್ಕೆ ಈ “ಒಂದು ದೇಶ- ಒಂದು ಚುನಾವಣೆ’ ಎಂಬ ತತ್ತ ಹಾಗೂ ಸತ್ವವನ್ನು ಸೀಮಿತಗೊಳಿಸಲಾಗಿದೆ ಎಂಬ ಸ್ಪಷ್ಟ ಕಲ್ಪನೆಯೂ ಅತ್ಯಗತ್ಯ. ಇನ್ನು ಈ ಪದ್ಧತಿಯನ್ನು ಜಾರಿಗೊಳಿಸುವ ಪ್ರತ್ಛನ್ನ ಉದ್ದೇಶ ಚುನಾವಣ ಖರ್ಚು-ವೆಚ್ಚವನ್ನು ಸೀಮಿತಗೊಳಿಸುವಿಕೆ ಎಂದೂ ಬಿಂಬಿಸಲಾಗಿದೆ. ಚುನಾವಣ ವೆಚ್ಚ ಎಂದಾಗ ಚುನಾವಣ ಆಯೋಗ, ಕೇಂದ್ರ ಹಾಗೂ ರಾಜ್ಯಗಳ ಚುನಾವಣೆಗಾಗಿ ಬೊಕ್ಕಸದಿಂದ ಒಟ್ಟು ವ್ಯಯಿಸುವ ವೆಚ್ಚವನ್ನು ಕಡಿತಗೊಳಿಸುವಿಕೆಯ ಒಂದು ಭಾಗ ಎನಿಸುತ್ತದೆ. ಅಷ್ಟೇ ಪ್ರಮಾಣದಲ್ಲಿ ಅಲ್ಲ, ಅದಕ್ಕಿಂತಲೂ ಗಣನೀಯವಾಗಿ ಚುನಾವಣ ಕಣದ ಪಕ್ಷಗಳು, ವ್ಯಕ್ತಿಗಳು ಸುರಿಯುವ ಧನ-ಶಕ್ತಿ ಇವೆಲ್ಲ ವನ್ನೂ ಇತಿ-ಮಿತಿ ಯೊಳಗಿರಿಸುವಿಕೆಯ ಕಾರಣ ಇಲ್ಲಿ ಮುಂದಿಡಲಾಗುತ್ತಿದೆ. ಉದಾಹರಣೆಗೆ 1998ರಲ್ಲಿ 19,000 ಕೋ.ರೂ. ಪರಿಮಿತಿಯಲ್ಲಿದ್ದ ರಾಜಕೀಯ ಪಕ್ಷಗಳ ಚುನಾವಣ ವೆಚ್ಚ 2019ರ ವೇಳೆಗೆ 55,000 ಕೋ. ರೂ.ಗಳ ಗಡಿಯನ್ನು ದಾಟಿದ ಬಗೆಗೆ ಸಮೀಕ್ಷೆಗಳು ಸಾರುತ್ತಿವೆ.

ಈ ಹಿನ್ನೆಲೆಯಲ್ಲಿ ಒಂದು ದೇಶ-ಒಂದು ಚುನಾವಣೆಯ ಸೂತ್ರ ನಿರೂಪಣೆಯ ಬಿಂದುವಿನಿಂದಲೇ, ಸಾಂವಿಧಾನಿಕ ಸಂಕೀರ್ಣತೆ, ವಾಸ್ತವಿಕ ರಾಜಕೀಯ ಜಟಿಲತೆ ಹಾಗೂ ಭವಿಷ್ಯದ ಓರೆ-ಕೋರೆಯ ಸಾಧ್ಯತೆಗಳು- ಇವೆಲ್ಲವೂ ಟಿಸಿಲೊಡೆಯುತ್ತಿವೆ. ಮಾತ್ರವಲ್ಲ ಸಮಗ್ರ ಚುನಾವಣ ಕಣ ಹೊಂದಿದ ಜನತಂತ್ರಕ್ಕೆ ಸವಾಲೆನಿಸಿ ಬಿಡುತ್ತದೆ. ಹೌದು; 1951 ರಿಂದ 1967ರ ಕಾಲಘಟ್ಟದ ವರೆಗೆ ನಮ್ಮ ರಾಜ್ಯಾಂಗ ಘಟನೆಯ ತಣ್ಣೆಳಲಲ್ಲಿ ಹಾಯಾಗಿ ಏಕಕಾಲದಲ್ಲಿ ಕೇಂದ್ರ ಸಂಸತ್ತಿನ ಲೋಕಸಭೆಗೆ ಹಾಗೂ ರಾಜ್ಯ ಗಳ ವಿಧಾನಸಭೆಗಳಿಗೆ ರಾಜಕೀಯ ಮತ ಚಲಾವಣೆಯ ಪ್ರಕ್ರಿಯೆ ನಡೆದು ಬಂದುದು ಒಂದು ಸತ್ಯ.

ಮುಂದಿನ ದಿನಗಳಲ್ಲಿ ಹರಿದು ಬಂದ ಚುನಾವಣೆಯ ಪ್ರಚಲಿತ ಇತಿಹಾಸ ಹತ್ತು ಹಲವು ತಿರುವು, ಪ್ರಪಾತಗಳ ಕೊರಕಲು ದಾರಿಯನ್ನೇ ಗಮನಿಸಿದುದು ಈಗ ಇತಿಹಾಸ. ಏಕೆಂದರೆ “ಕಳೆದ ನಿನ್ನೆಗಳ ರಾಜಕೀಯ ಪ್ರಚಲಿತ ಇತಿಹಾಸ’ ಎಂಬ ಒಕ್ಕ ಣೆಯೂ ಸರ್ವವಿದಿತ. ಒಂದೆಡೆ ಕೇಂದ್ರದಲ್ಲಿನ ಹೊಸದಿಲ್ಲಿಯ ಕುರ್ಚಿಯ ಸ್ಥಿರತೆಗೇ ಸಂಚಕಾರ ಒದಗಿ ಬಂತು; ಅಗಾಧವಾಗಿ ಇನ್ನೊಂದೆಡೆ ರಾಜ್ಯ ಸರಕಾರಗಳು ಕಂಪನ ಗೊಡವು. 1976ರ ಆರನೇ ಲೋಕಸಭೆ ಮೂರು ವರ್ಷಗಳನ್ನೂ ಪೂರೈಸಲಿಲ್ಲ! ಅದೇ ರೀತಿ 1991ರಲ್ಲಿ ಒಂಬತ್ತನೆಯ ಲೋಕಸಭೆ ಎರಡೇ ವರ್ಷದಲ್ಲಿ ಪತನದ ಪಥಕ್ಕೆ ಸರಿ ಯಿತು! ಅಷ್ಟೇಕೆ 1996-97ರ ಹನ್ನೊಂದನೇ ಲೋಕಸಭೆ ಹಾಗೂ 1997-1999ರ ಹನ್ನೆರಡನೇ ಲೋಕಸಭೆ ಕೂಡ 2 ವರ್ಷಗಳನ್ನೂ ಪೂರೈಸುವ ಮೊದಲೇ ಇತಿಹಾಸದ ಗರ್ಭ ಸೇರಿಕೊಂಡಿತು!

ಇವೆಲ್ಲ ಯಾವುದೋ “ಕಾಗೆ-ಗುಬ್ಬಚ್ಚಿ’ಯ ಕಥೆಯಲ್ಲ; ಬದಲಾಗಿ ವಿಶ್ವದ ಬೃಹತ್‌ ಖ್ಯಾತಿಯ ಚುನಾಯಿತ ಪ್ರತಿನಿಧಿತ್ವದ ಭಾರತದ ಕೆಳಮನೆ, ಲೋಕಸಭೆ (House of People) ತೆರೆದಿಟ್ಟ, ಅಳಿಸಲಾಗದ ರಾಜಕೀಯ ಚರಿತ್ರೆ.
ಲೋಕಸಭೆಯ ನಿಗದಿತ ಅವಧಿ 5 ವರ್ಷಗಳು. ಕೇವಲ ತುರ್ತು ಪರಿಸ್ಥಿತಿ (Emergency) ರಾಷ್ಟ್ರವ್ಯಾಪಿ ಜಾರಿಗೆ ಇರುವಲ್ಲಿ ಮಾತ್ರ ಒಮ್ಮೆಗೆ ಒಂದು ವರ್ಷ ಅವಧಿ ವಿಸ್ತರಣೆಗೆ ಅವಕಾಶ ಸಂವಿಧಾ ನದತ್ತವಾಗಿ 83(2)ನೇ ವಿಧಿಯ ಅನ್ವಯ ಪಡೆಯಲಾಗಿದೆ. ಕೇಂದ್ರದ ಈ ಲೋಕ ಸಭೆಯನ್ನೇ ಅಕ್ಷವಾಗಿ ಆಧರಿಸಿ, ಎಲ್ಲ 28 ರಾಜ್ಯಗಳ ಹಾಗೂ 8 ಕೇಂದ್ರಾಡಳಿತ ಪ್ರದೇ ಶಗಳ ಚುನಾವಣೆಗಳ “ಸೌರವ್ಯೂಹ’ ನಿರ್ಮಿ ಸುವಿಕೆಯು ಸಾಧ್ಯವೇ ಎಂಬುದು ಇಂದಿನ ಹಾಗೂ ಮುಂದಿನ ಪ್ರಶ್ನಾರ್ಥಕ ಚಿಹ್ನೆ. ಮಾತ್ರ ವಲ್ಲ, ಈ ಎಲ್ಲ ಕೇಂದ್ರ ಹಾಗೂ ರಾಜ್ಯಗಳ ಚುನಾವಣೆಗಳನ್ನು ಏಕದಾರದಲ್ಲಿ ಪೋಣಿ ಸುವ ಸಾಂವಿಧಾನಿಕ ಹಗ್ಗ (Constitutional Rope) ಹೇಗೆ ತಾನೆ ಹೊಸೆಯೋಣ?, ಇಲ್ಲಿ ಕೇಂದ್ರದ ಲೋಕಸಭೆಯ ಮುಂದಿನ ದಿನಗಳ ಅಲ್ಪಾಯುಷ್ಯದ ಸಾಧ್ಯತೆಗಳನ್ನು ನಿವಾರಿಸಲು ಸಂವಿಧಾನಕ್ಕೆ ಹೇಗೆ, ಎಲ್ಲಿಂದ ತಿದ್ದುಪಡಿಗೆ ಅಡಿ ಇಡೋಣ?, ಅದೇ ರೀತಿ ಒಂದೆಡೆ ನೆರೆ, ಇನ್ನೊಂದೆಡೆ ಬರ ಇರುವಂತೆ ಉತ್ತರಾ ಖಂಡದಿದ ತಮಿಳುನಾಡಿನ ವರೆಗಿನ, ಗುಜರಾತಿನಿಂದ ಮೇಘಾಲಯದವರೆಗಿನ ವಿಭಿನ್ನ ನೆಲ, ಜಲ, ಗಾಳಿಯ ಈ ವಿಶಾಲ ಭಾರತದ ರಾಜ್ಯ-ರಾಜಕೀಯ ಕಂಪನಕ್ಕೂ ಹೇಗೆ ಸಾಂವಿಧಾನಿಕ ತಿದ್ದುಪಡಿಯ ಧೃಢ ಸ್ತಂಭ ನೆಟ್ಟು ಬಿಡೋಣ?, 356ನೇ ವಿಧಿ ಯನ್ವಯ “ಯಾವುದೇ ರಾಜ್ಯದಲ್ಲಿನ ಸರಕಾರ ರಾಜ್ಯಾಂಗ ಘಟನೆಯ ಗೆರೆಯೊಳಗೆ ನಡೆಯುತ್ತಿಲ್ಲ’ ಎಂಬುದು ರಾಷ್ಟ್ರಪತಿಯವರಿಗೆ ಮನವರಿಕೆ ಆದರೆ ಅಲ್ಲಿ ಥಟ್ಟನೆ “ರಾಷ್ಟಪತಿಯವರ ಆಳ್ವಿಕೆ’ ಅಪ್ಪಳಿಸಲು ಅವಕಾಶವಿದೆ.

ಎಸ್‌.ಆರ್‌. ಬೊಮ್ಮಾಯಿ ತೀರ್ಪಿನ ಬಳಿಕ ಮಾತ್ರ ಒಂದಿಷ್ಟು ಈ ವಿಧಿಯ ಬಳಕೆಗೆ (ದುರ್ಬಳಕೆಗೆ) ಸರ್ವೋಚ್ಚ ನ್ಯಾಯಾಲಯ ಕಡಿವಾಣ ಹಾಕಿದೆ. ಆದರೂ ಬರಲಿರುವ ನಾಳೆಗಳ ಚಿತ್ರಣದಲ್ಲಿ, ರಾಷ್ಟ್ರಪತಿಯ ಆಳ್ವಿಕೆ (Presidents Rules) ಒಂದಿನಿತೂ ಗೋಚರಿಸದು ಎಂದುಸುರುವಂತಿಲ್ಲ. ಹೀಗಿರುವಾಗ ದಿಢೀರನೆ ರಾಜ್ಯ ಸರಕಾರ, ಸ್ವಯಂಕೃತ ಅಪರಾಧದಿಂದ, ಪ್ರತಿಸ್ಪರ್ಧಿಗಳ ಶಸ್ತ್ರಕ್ರಿಯೆಯಿಂದ ಅಥವಾ ಸಾಮೂಹಿಕ ರಾಜೀ ನಾಮೆಯಂತಹ ಸಾಧ್ಯತೆಯಿಂದ ಅಥವಾ ಕಾನೂನು ಭಂಗದ ಪರಮಾವಧಿಯಿಂದ ಅಧ್ಯಕ್ಷರ ಆಳ್ವಿಕೆಗೆ ಕೇವಲ ವರ್ಷವೊಂದರ ಒಳಗೇ ತುತ್ತಾದರೆ, ಆಗ ಪರಿಹಾ ರವಾದರೂ ಏನು?, “ರಾಜಕೀಯದಲ್ಲಿ ಯಾರು ಶಾಶ್ವತ ಶತ್ರುಗಳೂ ಇಲ್ಲ; ಶಾಶ್ವತ ಮಿತ್ರರೂ ಇಲ್ಲ’ ಎಂಬ ಕೌಟಿಲ್ಯ ನೀತಿ ಸಾರ್ವಕಾಲಿಕ ಸತ್ಯ; ಅದೇ ರೀತಿ, ಭವಿಷ್ಯದ ರಾಜಕೀಯ ಗರ್ಭದಲ್ಲಿ ಯಾವುದೇ ಅಸಾಧ್ಯತೆಗಳು ಎಂಬುದು ಹುಟ್ಟುವುದೇ ಇಲ್ಲ.

ಇನ್ನು ಒಂದು ಸೂಕ್ಷ್ಮ ಜನಮನ ಆಶಯದ ಬಿಂದು ಇಲ್ಲಿದೆ. ಸಮಗ್ರ ರಾಷ್ಟ್ರದ ಆಶಯ ರಾಜ್ಯಗಳ ಬಗೆಗಿನ ಬಯಕೆಗಳು ಹಾಗೂ ಸ್ಥಳೀಯ ಬೇಕು-ಬೇಡಗಳು- ಇವೆಲ್ಲ ಸಮಾನಾಂತರದಲ್ಲಿ ಚಲಿಸುವ ಚಿಂತನೆಗಳು; ಬದಲಾಗಿ ಏಕತೆಯ ಆಶಾ ರೇಖೆಗಳು ಎಂದೆನಿಸುವುದಿಲ್ಲ. ಒಂದೊಮ್ಮೆ “ಇಂದಿರಾ ಗಾಂಧಿಯವರಿಗೆ ಓಟು ಹಾಕಿ ಬಂದೆ’ ಎಂದು ವಿಧಾನಸಭಾ ಉಮೇದ್ವಾರರಿಗೆ ಮತಹಾಕಿ ಬಂದು ಸಂಭ್ರಮಿಸಿದ ಹಳ್ಳಿಗರನ್ನು ಕಂಡಿದ್ದೇವೆ. ಅದೇ ರೀತಿ ನರೇಂದ್ರ ಮೋದಿಯಂತಹ ನಾಯಕರನ್ನು ಆಧರಿಸಿ ಮತಗಳಿಕೆಯ ಮಹಾಪೂರ ಬರಲಾರದು ಎನ್ನುವಂತಿಲ್ಲ. ಇಲ್ಲಿ ಮತ ದಾರರಿಗೆ ಚಿಂತನೆ, ಕಾರ್ಯಶೀಲತೆ ಹಾಗೂ ಮತಾಧಿಕಾರ ಚಲಾವಣೆಗೆ ಸುಯೋಗ್ಯ ಭವಿಷ್ಯದ ಅವಕಾಶ (Space)ನೀಡುವಿಕೆಯೂ ಅತ್ಯಗತ್ಯ. ಮಹಾ ಚುನಾವಣೆ ಯಲ್ಲಿ ಕೇವಲ 30-40 ಪ್ರತಿಶತ ಒಟ್ಟು ಮತಗಳನ್ನೂ ಬಾಚಿಕೊಳ್ಳದೇ, 70-80 ಪ್ರತಿ ಶತ ಜಯಶೀಲ ಪ್ರತಿನಿಧಿಗಳನ್ನು ಹೊಂದಿ ಸರಕಾರ ರಚನೆಯ ಸಾಧ್ಯತೆಯ ರಾಜ ಕೀಯ ಮ್ಯಾಜಿಕ್‌ ಕೂಡ ಘಟಿಸಬಹುದು! ಹೀಗಿರುವಲ್ಲಿ, ರಾಷ್ಟ್ರೀಯ ರಾಜಕೀಯ ಧಾರೆಯ ಯಥಾವತ್ತಾದ ಪ್ರವಾಹಕ್ಕೆ ಅಡ್ಡಿಯೊಡ್ಡದೇ ತನ್ನ ಸ್ವಾಭಾವಿಕ ಹರಿವಿಗೆ ತಡೆ ಇರಿಸದೆ, ಕೇವಲ ಮಾಲಿನ್ಯವನ್ನಷ್ಟೇ ಪ್ರಮಾಣಬದ್ಧವಾಗಿ ತಗ್ಗಿಸಿ, ಮುಂದೆ ಸರಿಯಲು ಬಿಡುವಿಕೆ ಉತ್ತಮ ಎನಿಸೀತು. ಬದಲಾಗಿ ಒಂದು ದೇಶ-ಒಂದು ಚುನಾವಣೆಯ ಸಾಧ್ಯತೆಯನ್ನು ಬಲವಂತವಾಗಿ ಸಾಂವಿಧಾನಿಕ ಚೌಕಟ್ಟಿನೊಳಗೆ ತುರುಕಿಸಿದಾಗ, ಅದೇ ಭವಿಷ್ಯದ ಪ್ರಶ್ನಾರ್ಥಕ ಚಿಹ್ನೆಯಾಗಿ ಮತಯಂತ್ರದಲ್ಲಿ ಧ್ವನಿಸೀತು!.

ಚುನಾವಣೆ ಎಂಬುದು ಜನಮನಅರಿಯುವ ಸಾಧನ.ಸಮಗ್ರ ರಾಷ್ಟ್ರದ ಆಶಯ ರಾಜ್ಯಗಳ ಬಗೆಗಿನ ಬಯಕೆಗಳು, ಸ್ಥಳೀಯ ಬೇಕು-ಬೇಡಗಳು- ಇವೆಲ್ಲ ಸಮಾನಾಂತರದಲ್ಲಿ ಚಲಿಸುವ ಚಿಂತನೆಗಳು.

-ಡಾ| ಪಿ.ಅನಂತಕೃಷ್ಣ ಭಟ್‌, ಮಂಗಳೂರು

 

ಟಾಪ್ ನ್ಯೂಸ್

Suvendu Adhikari

W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ

10-muddebihala

Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ

ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್‌ ಘೋಷಣೆ ಬರೆದ ವಿದ್ಯಾರ್ಥಿ ಪಾಸ್:‌ ಪ್ರಾಧ್ಯಾಪಕ ಅಮಾನತು!

ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್‌ ಘೋಷಣೆ ಬರೆದ ವಿದ್ಯಾರ್ಥಿ ಪಾಸ್:‌ ಪ್ರಾಧ್ಯಾಪಕ ಅಮಾನತು!

9-uv-fusion

Importance: ಅನ್ನದ ಒಂದು ಅಗುಳಿನ ಮಹತ್ವ …

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

b y vijayendra

LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ‌ ವ್ಯಂಗ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

5-

ಸಮುದಾಯ ಪ್ರಜ್ಞೆ ಬಿತ್ತಲು ಮನೆಯೇ ಪ್ರಶಸ್ತ

1-sadsdsa

Children ಹದಿಹರೆಯ -ತಾಯಿಯ ಕರ್ತವ್ಯ

1-sadsdsad

Emotion-language-life; ಭಾವ-ಭಾಷೆ-ಬದುಕು

PM Modi: ಪ್ರಧಾನಮಂತ್ರಿ ಮೋದಿಯವರ ಭವ್ಯ ದೂರದೃಷ್ಟಿ…ಭಾರತದ ಸುವರ್ಣ ಯುಗ…

PM Modi: ಪ್ರಧಾನಮಂತ್ರಿ ಮೋದಿಯವರ ಭವ್ಯ ದೂರದೃಷ್ಟಿ…ಭಾರತದ ಸುವರ್ಣ ಯುಗ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Suvendu Adhikari

W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ

10-muddebihala

Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ

ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್‌ ಘೋಷಣೆ ಬರೆದ ವಿದ್ಯಾರ್ಥಿ ಪಾಸ್:‌ ಪ್ರಾಧ್ಯಾಪಕ ಅಮಾನತು!

ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್‌ ಘೋಷಣೆ ಬರೆದ ವಿದ್ಯಾರ್ಥಿ ಪಾಸ್:‌ ಪ್ರಾಧ್ಯಾಪಕ ಅಮಾನತು!

Raichur: ಹನುಮನ ಗುಡಿಯಲ್ಲಿ ಕಿಚ್ಚನಿಂದ ವಿಶೇಷ ಪೂಜೆ

Raichur: ಹನುಮನ ಗುಡಿಯಲ್ಲಿ ಕಿಚ್ಚನಿಂದ ವಿಶೇಷ ಪೂಜೆ

9-uv-fusion

Importance: ಅನ್ನದ ಒಂದು ಅಗುಳಿನ ಮಹತ್ವ …

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.