ಗೆಲುವಿನ ಸೂತ್ರವೇ ಮರೆತಿದೆ: ಕಪುಗೆಡರ

Team Udayavani, Aug 29, 2017, 12:39 PM IST

29-SPORTS-3.jpg

ಪಲ್ಲೆಕಿಲೆ: “ನಮಗೀಗ ಗೆಲುವಿನ ಸೂತ್ರವೇ ಮರೆತು ಹೋಗಿದೆ…!’ ಈ ಒಂದೇ ಸಾಲಿನಿಂದ ಲಂಕೆಯ ಏಕದಿನ ಸರಣಿ ಸೋಲಿಗೆ ಕಾರಣವಿತ್ತವರು ಉಸ್ತುವಾರಿ ನಾಯಕ ಚಾಮರ ಕಪುಗೆಡರ. ರವಿವಾರ ಪಲ್ಲೆಕಿಲೆಯಲ್ಲಿ ನಡೆದ 3ನೇ ಏಕದಿನ ಪಂದ್ಯದಲ್ಲಿ ಭಾರತಕ್ಕೆ 6 ವಿಕೆಟ್‌ಗಳಿಂದ ಶರಣಾದ ಬಳಿಕ ಕಪುಗೆಡರ ಇಂಥದೊಂದು ಹೇಳಿಕೆ ನೀಡಿದ್ದಾರೆ.

“ನಮಗೆ ಹೊರಗಿನ ಸಮಸ್ಯೆಗಳೇನೂ ಇಲ್ಲ. ನನ್ನ ಪ್ರಕಾರ ಗೆಲುವಿನ ಸೂತ್ರವೇ ನಮಗೆಲ್ಲ ಮರೆತು ಹೋಗಿದೆ. ಇಂಥ ಗಂಡಾಂತರ ಸ್ಥಿತಿ ಅನೇಕ ತಂಡಗಳಿಗೆ ಎದುರಾಗಿದ್ದನ್ನು ಕಂಡಿದ್ದೇನೆ. ಸತತವಾಗಿ ಸೋಲುತ್ತಿದ್ದ ತಂಡವೊಂದು ಇನ್ನೇನು ಗೆಲುವನ್ನು ಸಮೀಪಿಸಿದ ಹಂತದಲ್ಲೇ ಈ ಹರ್ಡಲ್ಸ್‌ ದಾಟುವಲ್ಲಿ ವಿಫ‌ಲವಾಗುತ್ತದೆ. ಇದು ಗೆಲುವಿನ ಸೂತ್ರವನ್ನು ಮರೆತಿರುವ ತಂಡವೊಂದರ ಸ್ಥಿತಿ. ಸದ್ಯ ನಾವೂ ಇದೇ ಸ್ಥಿತಿಯಲ್ಲಿದ್ದೇವೆ. ನಮಗೀಗ ತುರ್ತಾಗಿ ಬೇಕಿರುವುದು ಒಂದೇ ಒಂದು ಗೆಲುವು. ಇಲ್ಲಿಂದಾಚೆ ತಂಡ ಹೊಸ ಹುಟ್ಟು ಕಾಣಲು ಸಾಧ್ಯ ಎಂಬ ನಂಬಿಕೆ ಇದೆ…’ ಎಂಬುದಾಗಿ ಕಪುಗೆಡರ ಹೇಳಿದರು.

“ಮರಳಿ ಹಳಿ ಏರುವುದು ಹೇಗೆ ಎಂಬ ಕುರಿತು ನಾವು ಸಾಕಷ್ಟು ಚರ್ಚೆ ನಡೆಸಿದ್ದೇವೆ. ಕಳೆದೆರಡು ಪಂದ್ಯಗಳಲ್ಲಿ ನಮ್ಮ ಬೌಲಿಂಗ್‌ ಚೆನ್ನಾಗಿಯೇ ಇತ್ತು. ಆದರೆ ಬ್ಯಾಟ್ಸ್‌ಮನ್‌ಗಳಿಂದ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ಹೊರಹೊಮ್ಮುತ್ತಿಲ್ಲ. ಇವರಿಂದ ದೊಡ್ಡ ಮೊತ್ತ ಸಂಗ್ರಹಗೊಂಡಲ್ಲಿ ಜಯ ಒಲಿಯುವುದು ಅಸಾಧ್ಯವೇನಲ್ಲ…’ ಎಂದು ಕಪುಗೆಡರ ಅಭಿಪ್ರಾಯಪಟ್ಟರು.

ರೋಹಿತ್‌-ಧೋನಿ ಅಜೇಯ ಆಟ: ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಶ್ರೀಲಂಕಾ 9 ವಿಕೆಟಿಗೆ ಕೇವಲ 217 ರನ್‌ ಗಳಿಸಿದರೆ, ಭಾರತ 45.1 ಓವರ್‌ಗಳಲ್ಲಿ 4 ವಿಕೆಟಿಗೆ 218 ರನ್‌ ಬಾರಿಸಿ ಸರಣಿ ವಶಪಡಿಸಿಕೊಂಡಿತು.

ಆರಂಭಕಾರ ರೋಹಿತ್‌ ಶರ್ಮ ಅವರ ಅಜೇಯ ಶತಕ, ಅವರು ಧೋನಿ ಜತೆ ಮುರಿಯದ 5ನೇ ವಿಕೆಟಿಗೆ ಪೇರಿಸಿದ 157 ರನ್‌ ಸಾಹಸದಿಂದ ಭಾರತ ಸುಲಭ ಜಯ ಸಾಧಿಸಿತು. ಟೀಮ್‌ ಇಂಡಿಯಾದ ಜಯಭೇರಿ ವೇಳೆ ರೋಹಿತ್‌ ಶರ್ಮ 124 ರನ್‌ (145 ಎಸೆತ, 16 ಬೌಂಡರಿ, 2 ಸಿಕ್ಸರ್‌) ಹಾಗೂ ಧೋನಿ 67 ರನ್‌ ಮಾಡಿ (86 ಎಸೆತ, 4 ಬೌಂಡರಿ, 1 ಸಿಕ್ಸರ್‌) ಅಜೇಯರಾಗಿದ್ದರು. ಧವನ್‌ (5), ಕೊಹ್ಲಿ (3). ರಾಹುಲ್‌ (17) ಮತ್ತು ಜಾಧವ್‌ (0) ವಿಕೆಟ್‌ 61 ರನ್‌ ಆಗುವಷ್ಟರಲ್ಲಿ ಉದುರಿ ಹೋದಾಗ ಲಂಕೆಗೆ ಮೇಲುಗೈ ಸಾಧಿಸುವ ಅವಕಾಶ ಎದುರಾಗಿತ್ತು. ಆದರೆ ಇದನ್ನು ಬಳಸಿಕೊಳ್ಳುವಲ್ಲಿ ಲಂಕಾ ಬೌಲರ್‌ಗಳು ವಿಫ‌ಲರಾದರು.

27 ರನ್ನಿಗೆ 5 ವಿಕೆಟ್‌ ಹಾರಿಸಿದ ಜಸ್‌ಪ್ರೀತ್‌ ಬುಮ್ರಾ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿಯಿತು.

ಟಾಪ್ ನ್ಯೂಸ್

Maulana Fazlur Rahman praises India in Pakistan

Fazal ur Rehman; ಭಾರತ ಸೂಪರ್‌ಪವರ್‌, ನಾವು ಭಿಕ್ಷೆ ಬೇಡುತ್ತಿದ್ದೇವೆ: ಪಾಕಿಸ್ಥಾನ ಸಂಸದ

Home Minister ಅಮಿತ್‌ ಶಾಗೆ ವಕೀಲ ದೇವರಾಜೇಗೌಡ ಪತ್ರ: ವೈರಲ್‌

Home Minister ಅಮಿತ್‌ ಶಾಗೆ ವಕೀಲ ದೇವರಾಜೇಗೌಡ ಪತ್ರ: ವೈರಲ್‌

H. D. Kumaraswamy ನನ್ನ ಬಳಿ ಇರುವುದು ಡಿಕೆಶಿ ಭ್ರಷ್ಟಾಚಾರದ ಮಾಹಿತಿ

H. D. Kumaraswamy ನನ್ನ ಬಳಿ ಇರುವುದು ಡಿಕೆಶಿ ಭ್ರಷ್ಟಾಚಾರದ ಮಾಹಿತಿ

uber cup badminton; India lost against china

Uber Cup Badminton: ಚೀನಾ ವಿರುದ್ಧ ಭಾರತಕ್ಕೆ 5-0 ಸೋಲು

diego maradona

Diego Maradona ಹೃದಯಾಘಾತಕ್ಕೆ ಕೊಕೇನ್‌ ಸೇವನೆ ಕಾರಣ?

Karnataka Govt ಎಸ್‌ಐಟಿಗೆ ಮತ್ತೆ 3 ಎಸಿಪಿ ಸೇರಿ 19 ಸಿಬ್ಬಂದಿ ನೇಮಕ

Karnataka Govt ಎಸ್‌ಐಟಿಗೆ ಮತ್ತೆ 3 ಎಸಿಪಿ ಸೇರಿ 19 ಸಿಬ್ಬಂದಿ ನೇಮಕ

D. K. Shivakumar ಪೆನ್‌ಡ್ರೈವ್‌ನಂತಹ ಚಿಲ್ಲರೆ ಕೆಲಸ ನಾನು ಮಾಡಲ್ಲ

D. K. Shivakumar ಪೆನ್‌ಡ್ರೈವ್‌ನಂತಹ ಚಿಲ್ಲರೆ ಕೆಲಸ ನಾನು ಮಾಡಲ್ಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

uber cup badminton; India lost against china

Uber Cup Badminton: ಚೀನಾ ವಿರುದ್ಧ ಭಾರತಕ್ಕೆ 5-0 ಸೋಲು

diego maradona

Diego Maradona ಹೃದಯಾಘಾತಕ್ಕೆ ಕೊಕೇನ್‌ ಸೇವನೆ ಕಾರಣ?

INDWvsBANW: ಭಾರತಕ್ಕೆ 2-0 ಮುನ್ನಡೆ

INDWvsBANW: ಭಾರತಕ್ಕೆ 2-0 ಮುನ್ನಡೆ

IPL 2024; ಅತಿಯಾದ ಸಂಭ್ರಮಾಚರಣೆ ಮಾಡಿದ ಹರ್ಷಿತ್ ರಾಣಾಗೆ ಭಾರಿ ಶಿಕ್ಷೆ

IPL 2024; ಅತಿಯಾದ ಸಂಭ್ರಮಾಚರಣೆ ಮಾಡಿದ ಹರ್ಷಿತ್ ರಾಣಾಗೆ ಭಾರಿ ಶಿಕ್ಷೆ

T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್20

T20 World Cup; ಭಾರತ ತಂಡ ಪ್ರಕಟ; ಅವಕಾಶ ಪಡೆದ ಪಾಂಡ್ಯ, ಪಂತ್, ಸ್ಯಾಮ್ಸನ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Maulana Fazlur Rahman praises India in Pakistan

Fazal ur Rehman; ಭಾರತ ಸೂಪರ್‌ಪವರ್‌, ನಾವು ಭಿಕ್ಷೆ ಬೇಡುತ್ತಿದ್ದೇವೆ: ಪಾಕಿಸ್ಥಾನ ಸಂಸದ

Home Minister ಅಮಿತ್‌ ಶಾಗೆ ವಕೀಲ ದೇವರಾಜೇಗೌಡ ಪತ್ರ: ವೈರಲ್‌

Home Minister ಅಮಿತ್‌ ಶಾಗೆ ವಕೀಲ ದೇವರಾಜೇಗೌಡ ಪತ್ರ: ವೈರಲ್‌

H. D. Kumaraswamy ನನ್ನ ಬಳಿ ಇರುವುದು ಡಿಕೆಶಿ ಭ್ರಷ್ಟಾಚಾರದ ಮಾಹಿತಿ

H. D. Kumaraswamy ನನ್ನ ಬಳಿ ಇರುವುದು ಡಿಕೆಶಿ ಭ್ರಷ್ಟಾಚಾರದ ಮಾಹಿತಿ

uber cup badminton; India lost against china

Uber Cup Badminton: ಚೀನಾ ವಿರುದ್ಧ ಭಾರತಕ್ಕೆ 5-0 ಸೋಲು

diego maradona

Diego Maradona ಹೃದಯಾಘಾತಕ್ಕೆ ಕೊಕೇನ್‌ ಸೇವನೆ ಕಾರಣ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.