ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿ ಸಂಪನ್ನ


Team Udayavani, Sep 14, 2017, 6:20 AM IST

astami.jpg

ಉಡುಪಿ: ಶ್ರೀಕೃಷ್ಣ ಮಠದಲ್ಲಿ ಬುಧವಾರ ಸಂಭ್ರಮದಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಸಂಪನ್ನಗೊಂಡಿತು. ಸುಮಾರು 5,000 ವರ್ಷಗಳ ಹಿಂದೆ ಶ್ರೀಕೃಷ್ಣ ಸಿಂಹ/ ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿ ದಿನ ರಾತ್ರಿ ಚಂದ್ರೋದಯದ ಹೊತ್ತಿಗೆ ರೋಹಿಣಿ ನಕ್ಷತ್ರ ಕೂಡಿಬಂದ ಬುಧವಾರ ಶ್ರೀಕೃಷ್ಣ ಭೂಮಿಯಲ್ಲಿ ಅವತರಿಸಿದ ಎಂದು ಶ್ರೀಮದ್ಭಾಗವತಾದಿ ಪುರಾಣಗಳು ಹೇಳಿವೆ. ಈ ಬಾರಿಯೂ ಬುಧ ವಾರವೇ ಬಂದದ್ದು ಕೃಷ್ಣಾಷ್ಟಮಿ ಆಚರಣೆಯ ವಿಶೇಷವಾಗಿದೆ.
ಶ್ರೀಕೃಷ್ಣ ಅವತರಿಸಿದ್ದ ಮಥುರಾ ಕ್ಷೇತ್ರದಲ್ಲಿ 3 ವರ್ಷದ ಹಿಂದೆ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಬುಧವಾರ ಪರ್ಯಾಯ ಮಠಾಧೀಶರಾಗಿ ಮಹಾಪೂಜೆ ನೆರವೇರಿಸಿದರು. ಉಡುಪಿಯ ಸಂಭ್ರಮವನ್ನು ಸವಿಯಲು ಬುಧವಾರ ದಿಂದಲೇ ನಾಡಿನೆಲ್ಲೆಡೆಯಿಂದ ಭಕ್ತ ಜನರು ಬರುತ್ತಿದ್ದಾರೆ.

ನಿರ್ಜಲ ಉಪವಾಸದಲ್ಲಿದ್ದ ಪರ್ಯಾಯ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು, ಕಿರಿಯ ಯತಿ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಬೆಳಗ್ಗೆ ಮತ್ತು ರಾತ್ರಿ ಮಹಾಪೂಜೆ ನಡೆಸಿ ಮಧ್ಯರಾತ್ರಿ ಕೃಷ್ಣಾಘÂì ಪ್ರದಾನ ಮಾಡಿದರು. ಭಕ್ತರು ದೇವರ ದರ್ಶನ ಪಡೆದರು.

ಕೃಪೆ ತೋರಿದ ವರುಣ
ಮಂಗಳವಾರ ರಾತ್ರಿ ಉಡುಪಿಯೆಲ್ಲೆಡೆ ಜೋರು ಮಳೆಯಾಗಿತ್ತು. ಆ ಕ್ಷಣವನ್ನು ನೋಡಿದರೆ ಬುಧ ವಾರ ಭಾರೀ ಮಳೆಯಾಗುವ ಸಂಭವವೇ ಹೆಚ್ಚೆಂದು ಭಕ್ತರು ಆಡಿಕೊಂಡಿದ್ದರು. ಆದರೆ ಬುಧವಾರ ಇಡೀ ದಿನ ವರುಣನ ಆಗಮನವಾಗದೆ ಭಕ್ತರು ಸಲೀಸಾಗಿ ಶ್ರೀಕೃಷ್ಣ ದೇವರ ದರ್ಶನ ಪಡೆದರು. ಏಕಾದಶಿಯಂತೆ ನಿರ್ಜಲ ಉಪವಾಸವಿರುವ ಕಾರಣ ಶ್ರೀಪಾದರು ರಾತ್ರಿಯೂ ಶ್ರೀಕೃಷ್ಣನಿಗೆ ತುಳಸೀ ಅರ್ಚನೆ ನಡೆಸಿ ಮಹಾಪೂಜೆ ಸಲ್ಲಿಸಿದರು. ಮಧ್ಯರಾತ್ರಿ ಶ್ರೀಪಾದರು ಕೃಷ್ಣಾಘÂì ಪ್ರದಾನ ಮಾಡಿದರು. ಅನಂತರ ಭಕ್ತ ಜನಸ್ತೋಮ ಕೃಷ್ಣಾಘÂì ಪ್ರದಾನ ಮಾಡಿದರು.

ಉಂಡೆ, ಚಕ್ಕುಲಿ ಸಮರ್ಪಣೆ
ಬೆಳಗ್ಗೆ ಮಹಾಪೂಜೆ ಬಳಿಕ ರಾತ್ರಿಯ ದೇವರ ನೈವೇದ್ಯಕ್ಕಾಗಿ ಉಂಡೆ ಕಟ್ಟಲು ಶ್ರೀಪಾದರು ಮುಹೂರ್ತ ಮಾಡಿದರು. ಬಾಣಸಿಗರು ತಯಾ ರಿಸಿದ ಚಕ್ಕುಲಿ, ಲಡ್ಡುಗಳನ್ನು ರಾತ್ರಿ ಪೂಜೆ ವೇಳೆ ದೇವರಿಗೆ ನಿವೇದಿಸಲಾಯಿತು. ಹಲವು ದೇವಸ್ಥಾನ, ಮನೆಗಳಲ್ಲಿಯೂ ರಾತ್ರಿ ಪೂಜೆ ನಡೆಸಿ ಅಘÂì ಪ್ರದಾನ ಮಾಡಲಾಯಿತು.

ಎಲ್ಲಿ ನೋಡಿದರಲ್ಲಿ ವೇಷಧಾರಿಗಳು
ವಿಟ್ಲಪಿಂಡಿಯ ಮುನ್ನಾ ದಿನವಾದ ಬುಧವಾರ ನಗರದೆಲ್ಲೆಡೆ ವೇಷಗಳ ಕಾರುಬಾರು ಕಂಡುಬಂದಿತು. ಹುಲಿವೇಷದಿಂದ ಹಿಡಿದು ಬಗೆಬಗೆಯ ವೇಷಗಳು ಇದ್ದವು. ಶ್ರೀಕೃಷ್ಣ ಮಠದಲ್ಲಿ ನಡೆದ ಮುದ್ದುಕೃಷ್ಣ ವೇಷ ಸ್ಪರ್ಧೆಯಲ್ಲಿ 400ಕ್ಕೂ ಅಧಿಕ ಮಕ್ಕಳು ಪಾಲ್ಗೊಂಡಿದ್ದರು.

ನಿರಂತರ ಭಜನೆ
ಉಡುಪಿ, ಕುಂದಾಪುರ, ಹಂಗಾರಕಟ್ಟೆ ಮೊದ ಲಾದೆಡೆಗಳ ಭಜನಾ ತಂಡಗಳಿಂದ ಮಠದ ಮಧ್ವ ಮಂಟಪದಲ್ಲಿ ದಿನವಿಡೀ ಭಜನ ಕಾರ್ಯಕ್ರಮ ನಡೆಯಿತು. ಭಜನ ಕಾರ್ಯಕ್ರಮಕ್ಕೆ ಪೇಜಾವರ ಶ್ರೀಗಳು ಚಾಲನೆ ನೀಡಿದರು. ಸ್ಯಾಕೊÕàಫೋನ್‌ ವಾದನವೂ ಇತ್ತು.

ಇಂದು ವಿಟ್ಲಪಿಂಡಿ ಉತ್ಸವ
ಶ್ರೀಕೃಷ್ಣ ಮಠದಲ್ಲಿ ಇಂದು (ಗುರುವಾರ) ವಿಟ್ಲಪಿಂಡಿ (ಮೊಸರು ಕುಡಿಕೆ) ಉತ್ಸವ ಅಪರಾಹ್ನ 3.30ಕ್ಕೆ ಜರಗಲಿದೆ. ವಿವಿಧ ವೇಷಗಳ ಪ್ರದರ್ಶನ, ಸ್ಪರ್ಧೆ ಇರಲಿದೆ. ಶ್ರೀಕೃಷ್ಣ ಮೃಣ್ಮಯ ಪ್ರತಿಮೆಯ ರಥೋತ್ಸವ ಸಹಿತ ಲೀಲೋತ್ಸವ (ವಿಟ್ಲಪಿಂಡಿ) ಜರಗಲಿದ್ದು, ಬೆಳಗ್ಗೆ ಮಹಾಪೂಜೆ, ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಶ್ರೀಕೃಷ್ಣ ಲೀಲೋತ್ಸವದ ಭವ್ಯ ಮೆರವಣಿಗೆ 3 ಗಂಟೆಗೆ ಹೊರಡಲಿದೆ. ಮಣ್ಣಿನಿಂದ ತಯಾರಿಸಿದ ಮೂರ್ತಿಯನ್ನು ಉತ್ಸವ ಮೆರವಣಿಗೆಯಲ್ಲಿ ತರುತ್ತಾರೆ. ಗೋವಳರಿಂದ ಮೊಸರು ಕುಡಿಕೆ ಒಡೆಯುವ ದೃಶ್ಯ ಕಣ್ತುಂಬಲಿದೆ. ಗುರುವಾರ ಬೆಳಗ್ಗೆಯಿಂದಲೇ ಭೋಜನ ಪ್ರಸಾದ ವಿತರಣೆ ಇರಲಿದೆ. ಉತ್ಸವದಲ್ಲಿ ಶ್ರೀಕೃಷ್ಣನ ಮಣ್ಣಿನ ಮೂರ್ತಿ, ಶ್ರೀ ಅನಂತೇಶ್ವರ, ಶ್ರೀ ಚಂದ್ರಮೌಳೀಶ್ವರ ದೇವಸ್ಥಾನದ ಉತ್ಸವಮೂರ್ತಿಗಳು ಪಾಲ್ಗೊಳ್ಳಲಿವೆ.

ಟಾಪ್ ನ್ಯೂಸ್

5-

Neuromodulation therapy : ಮಾನಸಿಕ ಕಾಯಿಲೆಗಳಿಗೆ ನ್ಯೂರೋಮಾಡ್ಯುಲೇಷನ್‌ ಚಿಕಿತ್ಸೆ

RCBvsCSK; ಧೋನಿಯ 110 ಮೀ ಸಿಕ್ಸ್ ಕಾರಣದಿಂದ ನಾವು ಗೆದ್ದೆವು..: ದಿ.ಕಾರ್ತಿಕ್ ಹೇಳಿದ್ದೇನು

RCBvsCSK; ಧೋನಿಯ 110 ಮೀ ಸಿಕ್ಸ್ ಕಾರಣದಿಂದ ನಾವು ಗೆದ್ದೆವು..: ಕಾರ್ತಿಕ್ ಹೇಳಿದ್ದೇನು

Man finds Rs 9,900 crore in his bank account

Bhadohi; ಯು.ಪಿ ವ್ಯಕ್ತಿಯ ಖಾತೆಗೆ ಬರೋಬ್ಬರಿ 9,900 ಕೋಟಿ ರೂ ಜಮೆ! ಆಗಿದ್ದೇನು?

Udupi Gitanjali Silk, Shantisagar Hotel founder Neere Bailur Govinda Naik passes away

Udupi ಗೀತಾಂಜಲಿ ಸಿಲ್ಕ್, ಶಾಂತಿಸಾಗರ್ ಹೊಟೇಲ್ ಸಂಸ್ಥಾಪಕ ನೀರೆ ಬೈಲೂರು ಗೋವಿಂದ ನಾಯಕ್ ನಿಧನ

Vijayapura ಎಪಿಎಂಸಿ ಮಾರುಕಟ್ಟೆಯಲ್ಲಿ ಯುವಕನ‌ ಹತ್ಯೆ; ಆಪ್ತರ ಮೇಲೆ ಶಂಕೆ

Vijayapura ಎಪಿಎಂಸಿ ಮಾರುಕಟ್ಟೆಯಲ್ಲಿ ಯುವಕನ‌ ಹತ್ಯೆ; ಆಪ್ತರ ಮೇಲೆ ಶಂಕೆ

twin terror attacks in Jammu and Kashmir

Jammu and Kashmir ಉಗ್ರ ದಾಳಿ; ಮಾಜಿ ಸರಪಂಚ್ ಸಾವು, ಇಬ್ಬರು ಪ್ರವಾಸಿಗರಿಗೆ ಗಾಯ

Man of the match ಪ್ರಶಸ್ತಿ ಸಿಗಬೇಕಾಗಿದ್ದು ನನಗಲ್ಲ…: ಫಾಫ್ ಡುಪ್ಲೆಸಿಸ್ ಹೀಗಂದಿದ್ಯಾಕೆ?

Man of the match ಪ್ರಶಸ್ತಿ ಸಿಗಬೇಕಾಗಿದ್ದು ನನಗಲ್ಲ…: ಫಾಫ್ ಡುಪ್ಲೆಸಿಸ್ ಹೀಗಂದಿದ್ಯಾಕೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೆರೆ ಅಭಿವೃದ್ಧಿಗೆ ಒಮ್ಮೆಯೂ ತಲೆ ಎತ್ತಿ ನೋಡದ ಇಲಾಖೆ; ಆಟದ ಮೈದಾನದಂತಾದ ಬಾವದಕೆರೆ

ಕೆರೆ ಅಭಿವೃದ್ಧಿಗೆ ಒಮ್ಮೆಯೂ ತಲೆ ಎತ್ತಿ ನೋಡದ ಇಲಾಖೆ; ಆಟದ ಮೈದಾನದಂತಾದ ಬಾವದಕೆರೆ

ಉಭಯ ಜಿಲ್ಲೆಯಲ್ಲೂ ಶಾಲಾರಂಭಕ್ಕೆ ಭರದ ಸಿದ್ಧತೆ

ಉಭಯ ಜಿಲ್ಲೆಯಲ್ಲೂ ಶಾಲಾರಂಭಕ್ಕೆ ಭರದ ಸಿದ್ಧತೆ

ದೋಣಿಗಳು ಢಿಕ್ಕಿಯಾಗಿ ಮುಳುಗಡೆ; ಐವರು ಮೀನುಗಾರರ‌ ರಕ್ಷಣೆ

Malpe ದೋಣಿಗಳು ಢಿಕ್ಕಿಯಾಗಿ ಮುಳುಗಡೆ; ಐವರು ಮೀನುಗಾರರ‌ ರಕ್ಷಣೆ

Udupi District ನಾನ್‌ ಸಿಆರ್‌ಝಡ್‌ ಮರಳು ಆಸರೆ; 2.45 ಲಕ್ಷ ಮೆ. ಟನ್‌ ಮರಳು ತೆರವು

Udupi District ನಾನ್‌ ಸಿಆರ್‌ಝಡ್‌ ಮರಳು ಆಸರೆ; 2.45 ಲಕ್ಷ ಮೆ. ಟನ್‌ ಮರಳು ತೆರವು

Kapu ಟಿಪ್ಪರ್‌ಗೆ ಪಿಕಪ್‌ ಢಿಕ್ಕಿ: ಚಾಲಕ ಗಂಭೀರ

Kapu ಟಿಪ್ಪರ್‌ಗೆ ಪಿಕಪ್‌ ಢಿಕ್ಕಿ: ಚಾಲಕ ಗಂಭೀರ

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

5-

Neuromodulation therapy : ಮಾನಸಿಕ ಕಾಯಿಲೆಗಳಿಗೆ ನ್ಯೂರೋಮಾಡ್ಯುಲೇಷನ್‌ ಚಿಕಿತ್ಸೆ

RCBvsCSK; ಧೋನಿಯ 110 ಮೀ ಸಿಕ್ಸ್ ಕಾರಣದಿಂದ ನಾವು ಗೆದ್ದೆವು..: ದಿ.ಕಾರ್ತಿಕ್ ಹೇಳಿದ್ದೇನು

RCBvsCSK; ಧೋನಿಯ 110 ಮೀ ಸಿಕ್ಸ್ ಕಾರಣದಿಂದ ನಾವು ಗೆದ್ದೆವು..: ಕಾರ್ತಿಕ್ ಹೇಳಿದ್ದೇನು

4-mother

Mother: ತಾಯಿಯ ವೃತ್ತಿಗಳು; ಆಕ್ಯುಪೇಷನಲ್‌ ಥೆರಪಿಯ ಒಳನೋಟಗಳು

3-sirsi

Sirsi: ಬಾರದ ಹೈನು ಪ್ರೋತ್ಸಾಹ; ಶೀಘ್ರ ಬಿಡುಗಡೆಗೆ ಒತ್ತಾಯ

2-hunsur

Hunsur: ಹೆದ್ದಾರಿ ಸರ್ವೆ ಕಾರ್ಯ ತಡೆದು ರೈತರ ಆಕ್ರೋಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.