ಮತ್ತೆ ಹುಟ್ಟಿ ಬಾ ವೀಣಕ್ಕ..


Team Udayavani, Nov 5, 2017, 1:09 PM IST

Veenadhari1.jpg

ವೀಣಕ್ಕ ಗತಿಸಿ ಹತ್ತು ವರ್ಷಗಳೇ ಕಳೆದುಹೋಗಿವೆ. ಆದರೆ, ಅವರ ನೆನಪುಗಳಲ್ಲ. ಅದು ಮರೆಯುವಂತಹ ಜೀವವೂ ಅಲ್ಲ. ಅಮ್ಮನಾಗಿ, ಅಕ್ಕನಾಗಿ, ಸ್ನೇಹಿತೆಯಾಗಿ, ಮಾರ್ಗದರ್ಶಿಯಾಗಿ ಸದಾ ಜತೆಗಿದ್ದ ಅವರದ್ದು ಸಾಯುವಂತಹ ವಯಸ್ಸೂ ಅಲ್ಲ. ಅದರೂ ಇಹಲೋಕದ ಭವಗಳನ್ನು ತೊರೆದರೂ ತನ್ನವರ ಮನದಲ್ಲಿ ಅಚ್ಚಳಿಯದೆ ಉಳಿದುಬಿಟ್ಟರು.

“ಸಾವಿಲ್ಲದ ಮನೆಯಿಂದ ಸಾಸಿವೆ’ ತರುವುದು ಹೇಗೆ ಸಾಧ್ಯವಿಲ್ಲವೋ ಹಾಗೆಯೇ ಸಾವೇ ಇಲ್ಲದ ಬದುಕು
ಅಸಾಧ್ಯ ಎಂದು ಗೊತ್ತಿದ್ದರೂ ಎಷ್ಟೋ ಬಾರಿ ಅದನ್ನು ಒಪ್ಪಿಕೊಳ್ಳುವುದು ಅತ್ಯಂತ ಭಯಾನಕವಾದುದು. ನಮ್ಮ ಆತ್ಮಕ್ಕೆ ಹತ್ತಿರವಾದವರು ನಮ್ಮನ್ನಗಲಿದಾಗ “ಈ ಸಾವು ನ್ಯಾಯವೇ’ ಎಂದು ಉತ್ತರವಿಲ್ಲದ ಪ್ರಶ್ನೆಯನ್ನು ಕೇಳಿದ್ದೂ ಇದೆ. ಎಚ್‌ಐವಿ ಪೀಡಿತರ ಪಾಲಿಗೆ ಅಮ್ಮನಾಗಿದ್ದ ವೀಣಕ್ಕ ತೀರಿಹೋದಾಗಲೂ ನಾಡಿಗೆ ನಾಡೇ ಇಂಥದ್ದೊಂದು ಪ್ರಶ್ನೆಯನ್ನು ಕೇಳಿಕೊಂಡಿದೆ.

ಸಂಪ್ರದಾಯಸ್ಥ ಕುಟುಂಬದ ವೆಂಕಟೇಶ್‌ ರಾವ್‌ ಹಾಗೂ ಲಲಿತಾ ದಂಪತಿಯ ಇಬ್ಬರು ಹೆಣ್ಮಕ್ಕಳು ಹಾಗೂ ನಾಲ್ವರು ಗಂಡುಮಕ್ಕಳಲ್ಲಿ ವೀಣಾಧರಿ ಎರಡನೆಯವರು. ಹೈಸ್ಕೂಲ್‌ ಶಿಕ್ಷಣದ ಬಳಿಕ ಸಂಗೀತ ಕಲಿಯುವ ಇಚ್ಛೆಯಿಂದ
ಕೇರಳದ ಸ್ವಾತಿ ತಿರುನಾಳ್‌ ವಿದ್ಯಾಲಯದಲ್ಲಿ ಸಂಗೀತ ಪದವಿ ಪಡೆದುಕೊಂಡರು. ಮತ್ತೆ ಮಂಗಳೂರಿಗೆ ಬಂದು
ಖಾಸಗಿ ಸಂಸ್ಥೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದರು. ಶಾಲೆಯಲ್ಲಿ ಉತ್ತಮ ಶಿಕ್ಷಕಿಯೆಂದು ಹೆಸರು ಪಡೆದರೆ,
ಗೃಹಕೃತ್ಯಗಳಲ್ಲೂ ಎಲ್ಲರಿಂದಲೂ ಶಹಬ್ಟಾಸ್‌ಗಿರಿ ಪಡೆದಿದ್ದರು. ಹದಿನೆಂಟು ತುಂಬುತ್ತಿದ್ದಂತೆ ಮದುವೆ, ಮಕ್ಕಳು ತನ್ನದೊಂದು ಪುಟ್ಟ ಸಂಸಾರದ ಕನಸು ಹೊತ್ತಿದ್ದ ವೀಣಾಧರಿ ಮನೆಯವರು ತೋರಿದ ಬ್ಯಾಂಕ್‌ ಉದ್ಯೋಗಿ ಗಂಡಿನೊಂದಿಗೆ ಸಪ್ತಪದಿ ತುಳಿದರು. ಸ್ವಲ್ಪ ದಿನಗಳ ಬಳಿಕ ಗಂಡನಿಗೆ ಮುಂಬಯಿಗೆ ವರ್ಗಾವಣೆಯಾದಾಗ ತಾನೂ ಆತನ ಜತೆಗೆ ಹೊರಟುನಿಂತರು. ನೋಡುವವರ ಕಣ್ಣಿಗೆ ಎಲ್ಲವೂ ಸರಿಯಿದೆ ಅಂತ ಕಂಡರೂ ಮದುವೆಯಾದ ಕೆಲವೇ ವರ್ಷಗಳಲ್ಲಿ ಪತಿ, ಪತ್ನಿ ದೂರವಾಗಿ ಸಂಸಾರ ನಡೆಸಿದರು. ಇದ್ದೊಬ್ಬ ಮಗನನ್ನು ಊರಿಗೆ ಕರೆದುಕೊಂಡು ಬಂದ ವೀಣಕ್ಕನಿಗೆ ತುತ್ತಿನ ಚೀಲ ತುಂಬಲು ದುಡಿಮೆ ಅನಿವಾರ್ಯವಾಯಿತು. ಮಗನನ್ನು ವಿದ್ಯಾವಂತನನ್ನಾಗಿ ಮಾಡಬೇಕೆಂದು ಪಣತೊಟ್ಟರು. ಮಗ ಸಮರ್ಥ ಮುಂದೆ ಜಾದೂಗಾರನಾಗಿ ಗುರುತಿಸಿಕೊಂಡ.

ಅದೊಂದು ಸಣ್ಣ ಜ್ವರದಿಂದ ನರಳಿದ ವೀಣಕ್ಕ ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋದಾಗ ತನ್ನ ಗೆಳತಿಯೇ ಆದ
ನರ್ಸ್‌ ನೀಡಿದ ತನ್ನ ರಕ್ತ ಪರೀಕ್ಷೆಯ ರಿಪೋರ್ಟ್‌ ಕಂಡು ಅಲ್ಲಿಯೇ ಕುಸಿದುಬಿದ್ದರು. ತನ್ನಂಥ ಹೆಣ್ಣಿನ ದೇಹದೊಳಗೆ
ಇಷ್ಟು ಭಯಾನಕ ವೈರಸ್‌ ಹೊಕ್ಕಿದ್ದಾದರೂ ಹೇಗೆ ಎಂದು ಅಳತೊಡಗಿದರು. ಆಸ್ಪತ್ರೆಯಿಂದ ಹೊರಬಂದು ರಿಕ್ಷಾ
ಹತ್ತಿದಾಗಲೂ ದುಃಖ ತಡೆಯಲಾಗಿಲ್ಲ. ನೇರವಾಗಿ ತಾನು ಕೆಲಸ ಮಾಡುತ್ತಿದ್ದ ಸ್ವಯಂ ಸೇವಾ ಸಂಸ್ಥೆ (ವೆಲೊರೆಡ್‌)
ಗೆ ಬಂದರು. ಅಲ್ಲಿಯ ನಿರ್ದೇಶಕರ ಕಚೇರಿಯೊಳಗೆ ಹೋಗಿ “ತನಗೆ ಎಚ್‌ಐವಿ ಸೋಂಕು ಇದೆ, ಕೆಲಸದಿಂದ
ಕಿತ್ತುಹಾಕುತ್ತೀರಾ?’ ಎಂದು ಕೇಳಿಯೇಬಿಟ್ಟರು. ಆದರೆ, ಆಗ ನಿರ್ದೇಶಕ ರೆನ್ನಿ ಡಿ’ಸೋಜ ನುಡಿದ ಸಾಂತ್ವನದ
ಮಾತುಗಳು ವೀಣಕ್ಕನಿಗೆ ಬರಡುಭೂಮಿಯಲ್ಲೂ ಗರಿಕೆ ಹುಲ್ಲಿನ ಆಸರೆಯಂತಿದ್ದವು. “ಇಲ್ಲ ವೀಣಾ. ನಾವ್ಯಾಕೆ
ನಿಮ್ಮನ್ನು ಕೆಲಸದಿಂದ ಕಿತ್ತು ಹಾಕಬೇಕು? ನಿಮ್ಮದಲ್ಲದ ತಪ್ಪಿಗೆ ನಿಮಗ್ಯಾಕೆ ಶಿಕ್ಷೆ ನೀಡಬೇಕು? ನೀವು ಇಲ್ಲಿ ಎಲ್ಲರ
ಪ್ರೀತಿಯ ಸಹದ್ಯೋಗಿ. ನಿಮ್ಮ ಸೇವೆ ನಮಗೆ ಬೇಕು’ ಎಂಬ ಮಾತಿನಿಂದ ಧೈರ್ಯ ತಂದುಕೊಂಡರೂ ಇಡೀ ಸಮಾಜವನ್ನು ಎದುರಿಸುವುದು ಅಷ್ಟು ಸುಲಭವಲ್ಲ ಎಂಬ ಸತ್ಯ ವೀಣಕ್ಕನಿಗೆ ಗೊತ್ತಿತ್ತು. ಮನೆಯಲ್ಲೂ ವೀಣಕ್ಕನ ಪರಿಸ್ಥಿತಿಯನ್ನು ಕಂಡು ದುಃಖಪಟ್ಟರೇ ವಿನಾ ಅವರನ್ನು ಬಿಡುವ ಯೋಚನೆ ಯಾರೂ ಮಾಡಲಿಲ್ಲ.

ಅಲ್ಲಿಯವರೆಗೆ ಎಚ್‌ಐವಿ ಪೊಸಿಟಿವ್‌ ಎಂದರೆ ಭಯಾನಕವಾದ ಕಾಯಿಲೆ ಎಂದುಕೊಂಡಿದ್ದ ವೀಣಕ್ಕ, ಈ ವೈರಸ್‌ ಹೇಗೆ ದೇಹದೊಳಗೆ ಪ್ರವೇಶಿಸುತ್ತದೆ, ಇದರಿಂದ ಗುಣಮುಖರಾಗಲು ಸಾಧ್ಯವಿಲ್ಲವೇ ಎಂಬ ಅನೇಕ ವೈದ್ಯಕೀಯ ಲೇಖನಗಳನ್ನು ಓದಲು ಆರಂಭಿಸಿದರು. ತಮಗೆ ಗೊತ್ತಿರುವ ವೈದ್ಯರನ್ನು ಸಂಪರ್ಕಿಸಿದರು. ಆದರೆ, ಎಚ್‌
ಐವಿ ಪೀಡಿತರ ಬಗ್ಗೆ ಸಮಾಜ ಇಂದಿಗೂ ಬಹಿರಂಗವಾಗಿ ಮಾತನಾಡುವುದಿಲ್ಲ. ಅವರನ್ನು ಅಸ್ಪೃಶ್ಯರಂತೆ ಕಾಣುತ್ತಾರೆ.

ಎಷ್ಟೋ ಕಡೆಗಳಲ್ಲಿ ಅವರನ್ನು ಕಾಡಿಗೆ ಬಿಟ್ಟುಬರಲಾಗಿದೆ ಎಂದು ಗೊತ್ತಾದಾಗ ತಾನು ಹೀಗೆ ಸುಮ್ಮನೆ ಕೂರುವುದರಲ್ಲಿ
ಅರ್ಥವಿಲ್ಲ ಎಂದು ಅಂದುಕೊಂಡಿದ್ದೇ ತಡ, ವೀಣಕ್ಕ ಗಟ್ಟಿಯಾದ ನಿರ್ಧಾರಕ್ಕೆ ಬಂದರು. ಅವರ ಆ ಸಂಕಲ್ಪ
ದೇಶದ ಅದೆಷ್ಟೋ ಎಚ್‌ಐವಿ ಪೀಡಿತರ ಬದುಕಿಗೆ ಆಶಾಕಿರಣವಾಯಿತು. ಎಚ್‌ಐವಿ ಸೋಂಕಿನ ಕುರಿತು
ವೀಣಕ್ಕ ಅಧ್ಯಯನಗಳನ್ನೇ ಕೈಗೊಂಡರು. ಯಾವ ಆಹಾರ ಶೈಲಿಯಿಂದ ಪೀಡಿತರ ದೇಹವನ್ನು ದೃಢಗೊಳಿಸಬಹುದು
ಎಂದು ತಿಳಿದುಕೊಳ್ಳಲು ಅಹಾರತಜ್ಞರ ಜತೆಗೆ ಗಂಟೆಗಟ್ಟಲೆ ಸಂದರ್ಶನ ಮಾಡಿದರು. ರಾಜ್ಯ, ರಾಷ್ಟ್ರ ಮಟ್ಟದ
ವಿಚಾರಸಂಕಿರಣಗಳಲ್ಲಿ ಭಾಗವಹಿಸಿದರು. ಜಾಗತಿಕವಾಗಿ ಎಚ್‌ಐವಿ ಪೀಡಿತರು ತಮ್ಮ ಹಕ್ಕುಗಳಿಗಾಗಿ ನಡೆಸುವ
ಹೋರಾಟವನ್ನು ಗಮನಿಸಿದರು. ಆಸ್ಪತ್ರೆಗಳಲ್ಲಿ ಎಚ್‌ ಐವಿ ಪೀಡಿತ ಗರ್ಭಿಣಿಯ ಚಿಕಿತ್ಸೆ, ಹೆರಿಗೆಗಾಗಿ ತೋರುವ
ನಿರ್ಲಕ್ಷ್ಯ ಹಾಗೂ ದುಬಾರಿ ವೆಚ್ಚವನ್ನು ಪ್ರತಿಭಟಿಸಿದರು. ಪೀಡಿತರ ಔಷಧಿಯ ನೆಪದಲ್ಲಿ ಅವರನ್ನು ಶೋಷಿಸುವವರ
ವಿರುದ್ಧ ಧ್ವನಿಯೆತ್ತಿದರು. ಶಾಲಾ ದಿನಗಳಿಂದಲೇ ಮಕ್ಕಳಲ್ಲಿ ನೈತಿಕ, ಉತ್ತಮ ಆರೋಗ್ಯ ಕಾಯ್ದುಕೊಳ್ಳುವ ಶಿಕ್ಷಣ
ನೀಡಬೇಕೆಂದು ಜಾಗೃತಿ ಮೂಡಿಸಿದರು. ಇವನ್ನೆಲ್ಲ ಗಮನಿಸಿದ ಮಾಧ್ಯಮಗಳು ವೀಣಕ್ಕನ ಹೋರಾಟವನ್ನು ಬೆಂಬಲಿಸಿದವು.

ಕೆಲವರಿಗೆ ವೀಣಕ್ಕನ ಹೋರಾಟ ನುಂಗಲಾರದ ಬಿಸಿತುಪ್ಪವಾಯಿತು. ಎಚ್‌ಐವಿ ಪೀಡಿತರು ವೀಣಕ್ಕನನ್ನು
ಹುಡುಕಿಕೊಂಡು ಬರಲಾರಂಭಿಸಿದರು. ವೀಣಾಧರಿಯೆಂಬ ಸಂಪ್ರದಾಯಬದ್ಧ ಕುಟುಂಬದ ಹೆಣ್ಮಗಳು ಶೋಷಿತರ
ಪಾಲಿಗೆ ಅಕ್ಕ, ಅಮ್ಮನಾಗಿ ಕಂಡರೆ, ಸಮಾಜ ವಿಶ್ಲೇಷಕರಿಗೆ ಈಕೆ ಒಬ್ಬ ದಿಟ್ಟ ಹೋರಾಟಗಾರ್ತಿಯಾಗಿ ಜಾಗತಿಕ
ಮಟ್ಟದಲ್ಲಿ ಗುರುತಿಸಲ್ಪಟ್ಟರು. ಇವರ ಮಾತುಗಳನ್ನು ಕೇಳುವುದಕ್ಕಾಗಿ ಜನ ಊರು, ಪರವೂರು, ರಾಜ್ಯಗಳ ಗಡಿ
ಮೀರಿ ಬಂದರು. ವಿದೇಶಗಳಲ್ಲೂ ಇವರ ಚಿಂತನೆಗಳನ್ನು ಹಂಚಿಕೊಳ್ಳಲು ಕರೆಗಳು ಬಂದವು. ಆರಂಭದಲ್ಲಿ “ನೀನು
ಎಚ್‌ಐವಿ ಎಂಬುದನ್ನು ಗೌಪ್ಯವಾಗಿಡು’ ಎಂದು ಹೇಳಿದ ಕುಟುಂಬಿಕರು, ಬಂಧು ಬಳಗ ಮುಂದೆ ವೀಣಕ್ಕನ
ಹೋರಾಟಕ್ಕೂ ಜತೆಯಾದರು. ಅದರಲ್ಲಿಯೂ ವೀಣಕ್ಕನ ಸಹೋದರ, ಶಿಕ್ಷಣಾಧಿಕಾರಿ ಶಿವಪ್ರಕಾಶ್‌ ಹಾಗೂ ಅವರ
ಮನೆಯವರ ಬೆಂಬಲ ಮರೆಯುವಂತಿಲ್ಲ. ವೀಣಕ್ಕನನ್ನು ಪ್ರೀತಿಸುವವರೆಲ್ಲರೂ ಆಕೆಯ ಹೋರಾಟಕ್ಕೆ ಸಾಥ್‌
ನೀಡಿದರು. ಪ್ರೊ| ವಿಲಿಯಂ ಡಿ’ಸಿಲ್ವ ಉತ್ತಮ ದೈಹಿಕ, ಮಾನಸಿಕ ಆರೋಗ್ಯ ಕಾಯ್ದುಕೊಳ್ಳುವ ಟಿಪ್ಸ್‌ಗಳ ಜತೆಗೆ
ವೀಣಕ್ಕನ ಅಧ್ಯಯನಶೀಲತೆಗೆ ಬೆಂಗಾವಲಾಗಿ ನಿಂತರು. ರಾಜಕಾರಣಿಗಳು, ನೀತಿ ನಿರೂಪಕರು, ಸ್ವಯಂ ಸೇವಾ
ಸಂಸ್ಥೆಗಳು, ಮಠಾಧಿಪತಿಗಳು ಎಚ್‌ಐವಿ ಪೀಡಿತರ ಪರವಾಗಿ ವೀಣಕ್ಕನ ಅಭಿಪ್ರಾಯ ಕೇಳಲಾರಂಭಿಸಿದರು.

ರಾಜ್ಯೋತ್ಸವ, ಬಸವಶ್ರೀ ಸೇರಿದಂತೆ ಅನೇಕ ಪ್ರಶಸ್ತಿಗಳು ವೀಣಕ್ಕನನ್ನು ಅರಸಿಕೊಂಡು ಬಂದವು. ಬದುಕಿಗಾಗಿ
ಮಾಡುವ ಹೋರಾಟಕ್ಕೆ ಪ್ರಶಸ್ತಿಗಳನ್ನು ಸ್ವೀಕರಿಸುವುದು ಸರಿಯೇ ಎಂಬ ಜಿಜ್ಞಾಸೆ ಅವರಲ್ಲಿ ಮೂಡಿದ್ದೂ ಇದೆ.
ಆದರೆ, ಇದರಿಂದ ಅದೆಷ್ಟೋ ಎಚ್‌ಐವಿ ಪೀಡಿತರ ಬಾಳು ಬೆಳಕಾದೀತೆಂಬ ಒಂದೇ ಒಂದು ಆಸೆಯಿಂದ ಸಮ್ಮಾನಗಳನ್ನು ಒಪ್ಪಿಕೊಂಡಿದ್ದರು. ಇತ್ತ ಪಶ್ಚಾತ್ತಾಪದಿಂದ ಬೇಯುತ್ತಿದ್ದ ವೀಣಕ್ಕನ ಗಂಡ ಮತ್ತೆ ಬಳಿ ಬಂದರು. ಕ್ಷಮೆಯಾಚಿಸಿದರು. ಆದರೆ, ಅದೆಲ್ಲವನ್ನೂ ಮರೆತು ವೀಣಕ್ಕ ಅವರ ಕೊನೆಯ ದಿನಗಳವರೆಗೂ ಶುಶ್ರೂಷೆ ಮಾಡಿದರು. ವೀಣಕ್ಕನ ಬದುಕು ಅತ್ಯಂತ ಸರಳ. ಒಡಲೊಳಗೆ ಕಟ್ಟೆ ಹಾಕಿರುವ ನೋವಿನ ಸರಮಾಲೆಯೇ ಇದ್ದರೂ ಎಂದಿಗೂ ಜಗ್ಗಿದವರಲ್ಲ. ಸದಾ ನಗುನಗುತ್ತಾ ಇದ್ದ ಅವರ ಸಾಂಗತ್ಯವೇ ಚೆಂದ. ನಾನು, ಪ್ರಮೀಳಾ ವಾಝ್, ಸುರೇಶ್‌ ಚಿತ್ರಾಪು, ರೆನ್ನಿ, ಅವರ ದತ್ತು ಪುತ್ರನಂತಿದ್ದ ರೆಹಮಾನ್‌, ತಮ್ಮ ಶಿವಪ್ರಕಾಶ್‌, ನಾದಿನಿ ಅಂಜನಾ ವೀಣಕ್ಕನ ಜತೆಗೆ ಹೆಚ್ಚು ಕಾಲಕಳೆಯುತ್ತಿದ್ದೆವು.

ಎಚ್‌ಐವಿ ಪೀಡಿತರ ಬದುಕು, ಅವರಿಗೆ ಆರೋಗ್ಯದ ಹಕ್ಕನ್ನು ಕೊಡಿಸುವುದು ಹೇಗೆ ಎಂಬ ಚರ್ಚೆಗಳೇ ನಮ್ಮೊಳಗೆ ಪ್ರಮುಖವಾಗಿದ್ದವು. ಇದಕ್ಕೆ ಸಂಬಂಧಪಟ್ಟಂತೆ ಕರಪತ್ರಗಳು, ಪುಸ್ತಿಕೆಗಳನ್ನು ಮುದ್ರಿಸುವುದು, ಸರಕಾರದ ಗಮನಕ್ಕೆ ತರುವುದು, ಅಲ್ಲಲ್ಲಿ ಆರೋಗ್ಯ ಶಿಬಿರಗಳನ್ನು ಸಂಘಟಿಸುವುದು ಇದೆಲ್ಲವೂ ನಿರಂತರವಾಗಿ ನಡೆಯುತ್ತಲೇ ಇತ್ತು. ವೀಣಕ್ಕನ ಸಂವಹನ ಸಾಮರ್ಥ್ಯವಂತೂ ಅದ್ಭುತ. ಭಾಷೆ ಬಾರದವನಿಗೂ ತಾನೇನು ಹೇಳುತ್ತಿದ್ದೇನೆ ಎಂಬುದನ್ನು
ಅರ್ಥಮಾಡಿಸುವ ಸಾಮರ್ಥ್ಯ ಅವರ ಮಾತುಗಾರಿಕೆಗಿತ್ತು.

ವೀಣಕ್ಕನನ್ನು ಸರಿಯಾಗಿ ಅರ್ಥಮಾಡಿಕೊಂಡವರು ಅವರನ್ನು ಪ್ರೀತಿಸದೆ ಇರುವುದಕ್ಕೆ ಸಾಧ್ಯವೇ ಇಲ್ಲ. ಸ್ವಾರ್ಥ,
ದ್ವೇಷಕ್ಕೆ ಅವರ ಮನದಲ್ಲಿ ಜಾಗವೇ ಇಲ್ಲ. ಬಂದದ್ದನ್ನು ಬಂದ ಹಾಗೆ ಸ್ವೀಕರಿಸುವ, ಶತ್ರುಗಳನ್ನೂ ಕರೆದು ಪ್ರೀತಿಯಿಂದ
ಮಾತನಾಡಿಸುವ ಮನೋಭೂಮಿಕೆ ಅವರದು. ಹೀಗಿರುವುದು ಸಾಧ್ಯವೇ ಎಂದು ಎಷ್ಟೋ ಬಾರಿ ದುಕೊಂಡಿದ್ದುಂಟು.
ಆದರೆ, ಅದೆಲ್ಲ ವೀಣಕ್ಕನಿಗೆ ಮಾತ್ರ ಸಾಧ್ಯ

ರೇಶ್ಮಾ ಆರ್‌.

ಟಾಪ್ ನ್ಯೂಸ್

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eweweqwe

Voting:ಹಿರಿಯ ನಾಗರಿಕರೇ ಮಾದರಿ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.