ಮುಂಬಯಿ:ಬೀದಿ ವ್ಯಾಪಾರಿಗಳಿಂದ ನಿತ್ಯ 1.5 ಕೋಟಿ ರೂ ಹಫ್ತಾ!

Team Udayavani, Nov 23, 2017, 12:07 PM IST

255.jpg

ಮುಂಬಯಿ: ನಗರದಲ್ಲಿ  ಸುಮಾರು  3ಲ.ದಷ್ಟು  ಬೀದಿ ಬದಿ  ವ್ಯಾಪಾರಿಗಳಿದ್ದು  ಪ್ರತಿಯೋರ್ವರು  ಪ್ರತಿದಿನ 20-100ರೂ.ಗಳವರೆಗೆ ಹಫ್ತಾವನ್ನು ಪಾಲಿಕೆಯ ಅತಿಕ್ರಮಣ ನಿಯಂತ್ರಣ ದಳದ  ಅಧಿಕಾರಿಗಳಿಗೆ  ನೀಡುತ್ತಿದ್ದು  ಈ  ಮೂಲಕ ತಮ್ಮ ವ್ಯಾಪಾರವನ್ನು ರಕ್ಷಿಸಿಕೊಳ್ಳುತ್ತಿದ್ದಾರೆ. ಅಂದರೆ  ನಗರದ  ಬೀದಿ ಬದಿಗಳಲ್ಲಿ  ವ್ಯಾಪಾರ  ನಡೆಸಲು  ಈ  ವ್ಯಾಪಾರಿಗಳು  ಪ್ರತಿದಿನ 1.5 ಕೋ. ರೂ.ಗಳ ಹಫ್ತಾವನ್ನು ನೀಡುತ್ತಿದ್ದಾರೆ.

ಬೃಹನ್ಮುಂಬಯಿ ಮಹಾನಗರ ಪಾಲಿಕೆಯ  ಪ್ರತಿಯೊಂದೂ  ವಾರ್ಡ್‌ನಲ್ಲಿಯೂ  ಅತಿಕ್ರಮಣ ನಿಯಂತ್ರಣ ದಳವಿದ್ದು  ಮೂರ್‍ನಾಲ್ಕು ದಿನಗಳಿಗೊಮ್ಮೆಯೋ  ವಾರ ಕ್ಕೊಮ್ಮೆಯೋ  ನೆಪಮಾತ್ರಕ್ಕಾಗಿ  ಬೀದಿ ಬದಿ  ವ್ಯಾಪಾರಿಗಳ  ತೆರವು ಕಾರ್ಯಾಚರಣೆಯನ್ನು  ಕೈಗೊಳ್ಳುತ್ತದೆ.  ವಿಚಿತ್ರ ಎಂದರೆ  ಈ ದಳ  ಕಾರ್ಯಾಚರಣೆ  ಆರಂಭಿಸುವುದಕ್ಕೆ  ಸುಮಾರು ಅರ್ಧ ತಾಸು ಮುನ್ನ  ಬೀದಿ ಬದಿ ವ್ಯಾಪಾರಿಗಳಿಗೆ  ಸೂಚನೆ ಬರುತ್ತದೆ.  ತತ್‌ಕ್ಷಣವೇ ವ್ಯಾಪಾರಿಗಳು  ತಮ್ಮ  ಸಾಮಾನುಗಳನ್ನು   ಚೀಲಗಳಲ್ಲಿ  ತುಂಬಿ ಜಾಗವನ್ನು  ಖಾಲಿ  ಮಾಡುತ್ತಾರೆ. ಎಲ್ಲೋ  ಒಂದೊಂದು  ದಿನ  ಪಾಲಿಕೆ ಸಿಬಂದಿಗಳು  ತೆರವು ಕಾರ್ಯಾಚರಣೆ ಸಂಬಂಧ ವ್ಯಾಪಾರಿಗಳಿಗೆ   ಮಾಹಿತಿಯನ್ನು  ನೀಡದೇ ಹೋದಲ್ಲಿ  ಮಾತ್ರ  ಸಿಬಂದಿಗಳು  ಬೀದಿಬದಿ  ವ್ಯಾಪಾರಿಗಳ  ಸಾಮಾನು, ಸರಂಜಾಮುಗಳನ್ನು  ಪಾಲಿಕೆಯ  ಗಾಡಿಗೆ  ತುಂಬಿ  ಕೊಂಡೊಯ್ಯುತ್ತಾರೆ.  

ದಿನವಹಿ 120 ಕೋ.  ವ್ಯವಹಾರಪಾಲಿಕೆಯ  ಅಂಕಿಅಂಶಗಳ  ಪ್ರಕಾರ  ನಗರದಲ್ಲಿನ  ಬೀದಿಬದಿ  ವ್ಯಾಪಾರಿಗಳು  ಪ್ರತಿದಿನ 120 ಕೋ. ರೂ.ಗಳಷ್ಟು  ವ್ಯವಹಾರವನ್ನು  ನಡೆಸುತ್ತಿದ್ದಾರೆ. ಈ ವ್ಯಾಪಾರಿಗಳಿಂದ  ಹಫ್ತಾ ವಸೂಲಿಗಾಗಿ  ಕೆಲ ವ್ಯಕ್ತಿಗಳನ್ನು  ನೇಮಿಸಲಾಗಿದ್ದು  ಇವರು ದಿನವಹಿ ವ್ಯಾಪಾರಿಗಳಿಂದ  ಹಣವನ್ನು  ವಸೂಲು ಮಾಡಿ  ಅದನ್ನು  ಪಾಲಿಕೆ ಮತ್ತು ಪೊಲೀಸ್‌  ಅಧಿಕಾರಿಗಳಿಗೆ  ಹಸ್ತಾಂತರಿಸುತ್ತಾರೆ. ಇನ್ನು ಶೇs…ಗಳ  ನಿಯಂತ್ರಣದಲ್ಲಿರುವ  ಮಾರುಕಟ್ಟೆಗಳಲ್ಲಿನ  ವ್ಯಾಪಾರಿಗಳನ್ನು  ಬಿಎಂಸಿ  ಅಧಿಕಾರಿಗಳು  ನೇರವಾಗಿ  ನಿರ್ವಹಿಸುತ್ತಿದ್ದಾರೆ. ಕೆಲ ಮಾರುಕಟ್ಟೆಗಳಲ್ಲಿ  ವಾರಕ್ಕೊಮ್ಮೆ  ವ್ಯಾಪಾರಿಗಳಿಂದ ಹಫ್ತಾ  ಪಾವತಿಯಾಗುತ್ತಿದ್ದರೆ  ಇತರೆ ಮಾರುಕಟ್ಟೆಗಳಲ್ಲಿ  ವ್ಯಾಪಾರಿಗಳು  ಪ್ರತಿನಿತ್ಯ ಹಫ್ತಾವನ್ನು  ನೀಡುತ್ತಿದ್ದಾರೆ. ಅಷ್ಟೇ ಅಲ್ಲದೆ  ಹಫ್ತಾದ ಪ್ರಮಾಣವೂ  ಒಂದು  ಮಾರುಕಟ್ಟೆಯಿಂದ  ಒಂದು  ಮಾರುಕಟ್ಟೆಗೆ  ಬದಲಾಗುತ್ತದೆ. ಚರ್ಚ್‌ ಗೇಟ್‌  ನಿಲ್ದಾಣದಿಂದ ಸಿಎಸ್‌ಎಂಟಿವರೆಗಿನ  ರಸ್ತೆ ಬದಿಯಲ್ಲಿನ  ವ್ಯಾಪಾರಿಗಳು  ಪ್ರತಿದಿನ 50ರೂ.ಗಳನ್ನು ಪಾವತಿಸುತ್ತಿದ್ದಾರೆ.  ಪ್ರತಿನಿತ್ಯದ ಪಾವತಿಯ ಹೊರತಾಗಿಯೂ  ಪಾಲಿಕೆಯ  ವಾಹನ  ಕಂಡುಬಂದಲ್ಲಿ  ಈ ವ್ಯಾಪಾರಿಗಳೂ ತಮ್ಮ ಸಾಮಾನು ಸರಂಜಾಮುಗಳೊಂದಿಗೆ  ಜಾಗ ಖಾಲಿ ಮಾಡಲೇ ಬೇಕಿದೆ. ತಮ್ಮ ವ್ಯಾಪಾರದ ಬಗೆಗೆ ಖಾತರಿ ಇಲ್ಲವಾಗಿದ್ದರೂ ದಿನನಿತ್ಯ  ಹಫ್ತಾವನ್ನು ಪಾವತಿಸುವುದು ಅನಿವಾರ್ಯವಾಗಿದೆ ಎಂದು  ನಗರದ  ಫೋರ್ಟ್‌ ಪ್ರದೇಶದ  ಬೀದಿಬದಿ  ವ್ಯಾಪಾರಿಯೋರ್ವರು ಹೇಳಿದರು. 

ಎರಡೆರಡು ತಂಡಗಳಿಗೆ ಹಫ್ತಾ
 ಬಾಂದ್ರಾ ಲಿಂಕಿಂಗ್‌ ರೋಡ್‌ನ‌ಲ್ಲಿನ  ಬೀದಿಬದಿ ವ್ಯಾಪಾರಿಗಳು ಪ್ರತಿದಿನ 100ರೂ.ಗಳ  ಹಫ್ತಾವನ್ನು  ನೀಡುತ್ತಿದ್ದಾರೆ. ಇನ್ನು  ಕುರ್ಲಾ ರೈಲ್ವೇ ನಿಲ್ದಾಣದ ಬೀದಿಬದಿ ವ್ಯಾಪಾರಿಗಳು ಬಿಎಂಸಿ ಸಿಬಂದಿಗಳಿಗೆ  ಪ್ರತಿನಿತ್ಯ 20ರೂ.ಗಳನ್ನು  ಪಾವತಿಸುತ್ತಿದ್ದಾರೆ. ಕುರ್ಲಾದ  ಬೀದಿ ಬದಿ ವ್ಯಾಪಾರಿಗಳು ವಾರ್ಡ್‌ ಮಟ್ಟದ  ದಳ  ಮತ್ತು  ಬಿಎಂಸಿ  ಕೇಂದ್ರೀಯ ಅತಿಕ್ರಮಣ  ತೆರವು ದಳ ಹೀಗೆ ಎರಡು ತಂಡಗಳಿಗೆ  ಹಫ್ತಾವನ್ನು ಪಾವತಿಸುತ್ತಿದ್ದಾರೆ. ಬಿಎಂಸಿಯ  ಕೇಂದ್ರೀಯ  ಅತಿಕ್ರಮಣ ತೆರವು ದಳ ದಕ್ಷಿಣ ಮುಂಬಯಿನ ಫ್ಯಾಶನ್‌ ಸ್ಟ್ರೀಟ್‌ನಲ್ಲಿನ ಅಕ್ರಮ ಬೀದಿಬದಿ ವ್ಯಾಪಾರಿಗಳೊಂದಿಗೆ ಕೈಜೋಡಿಸಿರುವುದು ಪತ್ತೆಯಾದ  ಬಳಿಕ ನಾಲ್ಕು ತಿಂಗಳುಗಳ ಹಿಂದೆ ಈ ದಳವನ್ನು ವಿಸರ್ಜಿಸಲಾಗಿತ್ತು. 

ಪಾಲಿಕೆಯ  ತಂಡಗಳು ಬೀದಿಬದಿ ವ್ಯಾಪಾರಿಗಳ ಸಾಮಾನು ಸರಂಜಾಮುಗಳನ್ನು  ವಶಪಡಿಸಿ ಕೊಂಡ ಸಂದರ್ಭದಲ್ಲಿ  ಅದನ್ನು ಮರು ಸ್ವಾಧೀನಪಡಿಸಿಕೊಳ್ಳಲು ಹೆಚ್ಚುವರಿಯಾಗಿ  ಪ್ರತಿಯೊಂದೂ  ಸರಕಿಗೂ 20-100ರೂ.ಗಳನ್ನು  ವ್ಯಾಪಾರಿಗಳು ಪಾವತಿಸಬೇಕಿದೆ. 

ಟಾಪ್ ನ್ಯೂಸ್

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.