ಗುಜರಾತ್ EVM tampering : ಸುಪ್ರೀಂನಿಂದ ಕಾಂಗ್ರೆಸ್ ಮನವಿ ವಜಾ
Team Udayavani, Dec 15, 2017, 3:39 PM IST
ಹೊಸದಿಲ್ಲಿ : ವಿವಿಪ್ಯಾಟ್ ದಾಖಲೆಯನ್ನು ಇವಿಎಂ ಓಟ್ಗಳೊಂದಿಗೆ ಪರಾಂಬರಿಸಬೇಕು ಎಂಬ ಕಾಂಗ್ರೆಸ್ ಪಕ್ಷ ದ ಕೋರಿಕೆಯನ್ನು ಸುಪ್ರೀಂ ಕೋರ್ಟ್ ಇಂದು ಶುಕ್ರವಾರ ವಜಾ ಮಾಡಿದ್ದು ಪಕ್ಷಕ್ಕೆ ಇದೊಂದು ದೊಡ್ಡ ಹಿನ್ನಡೆ ಮತ್ತು ಮುಖಭಂಗವಾಗಿದೆ.
ಶೇ.25ರಷ್ಟು ವಿವಿಪ್ಯಾಟ್ ಕಾಗದ ದಾಖಲೆಯನ್ನು ಎವಿಎಂ ಓಟ್ಗಳ ಜತೆಗೆ ಪರಾಂಬರಿಸಿ ಮತ ಎಣಿಕೆ ಮಾಡುವಂತೆ ಚನಾವಣಾ ಆಯೋಗಕ್ಕೆ ನಿರ್ದೇಶ ನೀಡಬೇಕು ಎಂದು ಕೋರಿ ಕಾಂಗ್ರೆಸ್ ಪಕ್ಷ ಸುಪ್ರೀಂ ಕೋರ್ಟ್ ಮೆಟ್ಟಲೇರಿತ್ತು.
ಕಾಂಗ್ರೆಸ್ ಪಕ್ಷ ಸಲ್ಲಿಸಿರುವ ಈ ಮನವಿಯಲ್ಲಿ ಯಾವುದೇ ಹುರುಳಿಲ್ಲ ಮತ್ತು ಇದು ವಿಚಾರಣೆಗೆ ಯೋಗ್ಯವಾಗಿಲ್ಲ ಎಂದು ಹೇಳಿ ಮನವಿಯನ್ನು ವಜಾ ಮಾಡಿದ ಸುಪ್ರೀಂ ಕೋರ್ಟ್, “ಗುಜರಾತ್ ಕಾಂಗ್ರೆಸ್ ಈ ಬಗ್ಗೆ ಚುನಾವಣಾ ಸುಧಾರಣೆಗಳನ್ನು ಕೋರಿ ರಿಟ್ ಅರ್ಜಿ ಸಲ್ಲಿಸಿ ಸರ್ವೋಚ್ಚ ನ್ಯಾಯಾಲಯಕ್ಕೆ ಬರಬೇಕು’ ಎಂದು ಹೇಳಿತು.
ಇವಿಎಂಗಳನ್ನು ತಿರುಚಲಾಗುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಪಕ್ಷದ ಗುಜರಾತ್ ಘಟಕ ತನ್ನ ಕಳವಳವನ್ನು ವ್ಯಕ್ತಪಡಿಸಿತ್ತು. ಇವಿಎಂ ಗೆ ಬ್ಲೂ ಟೂತ್ ಉಪಕರಣವನ್ನು ಜೋಡಿಸಲಾಗಿದೆ ಎಂದೂ ಅದು ದೂರಿತ್ತು.
ಇವಿಎಂ ತಿರುಚುವಿಕೆ ಕುರಿತಾದ ಕಾಂಗ್ರೆಸ್ ಪಕ್ಷದ ಆರೋಪವನ್ನು ಸಾರಾಸಗಟು ತಿರಸ್ಕರಿಸಿದ ಬಿಜೆಪಿ, “ಚುನಾವಣೆಯಲ್ಲಿ ಸೋತು ಮಣ್ಣುಪಾಲಾಗುವ ಭೀತಿಯಲ್ಲಿ ಕಾಂಗ್ರೆಸ್ ಕಂಡುಕೊಂಡಿರುವ ನೆಪ ಇದಾಗಿದೆ’ ಎಂದು ಹೇಳಿ ಜರೆದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
W.Bengal; ಮುಸ್ಲಿಂ ಮುನಿಸಿಗೆ ಮಂದಿರಕ್ಕೆ ಬಾರದ ಮಮತಾ: ಅಮಿತ್ ಶಾ
1500 for women: ಆಂಧ್ರದಲ್ಲಿ ಕರ್ನಾಟಕ ಮಾದರಿ ಎನ್ಡಿಎ ಗ್ಯಾರಂಟಿ
Election; ಮೊಹಬ್ಬತ್ ಕೀ ದುಕಾನ್ನಲ್ಲಿ ಫೇಕ್ ವೀಡಿಯೋಗಳು ಮಾರಾಟ: ಮೋದಿ
Supreme Court; ಪತಂಜಲಿ ಆಯ್ತು, ಈಗ ಐಎಂಎ ವಿರುದ್ಧ ಸುಪ್ರೀಂ ಕೋರ್ಟ್ ಗರಂ
Kolkatta; ಸಂಪತ್ತು ಹಂಚಿಕೆ ಮಾಡುತ್ತೇವೆ: ಉ.ಪ್ರ.ಸಿಎಂ ಯೋಗಿ ಘೋಷಣೆ