ಮೋದಿಗೆ ಮೂಡೆ, ನೀರುದೋಸೆ  ಉಣಬಡಿಸಿದ ಮಂಗಳೂರು

Team Udayavani, Dec 20, 2017, 6:45 AM IST

20-2.jpg

ಮಂಗಳೂರು: ತುಳು ನಾಡಿನ ಸಾಂಪ್ರದಾಯಿಕ ಖಾದ್ಯಗಳಾದ ಮೂಡೆ, ನೀರುದೋಸೆ,  ಸಜ್ಜಿಗೆ- ಬಜಿಲ್‌ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮೋಡಿ ಮಾಡಿವೆ. ಹೀಗಾಗಿಯೇ ಅವರು ಎರಡೆರಡು ಬಾರಿ ಇವುಗಳನ್ನು ಹಾಕಿಸಿಕೊಂಡರು, ಸವಿದರು ಮತ್ತು ಕರಾವಳಿಯ ಈ ವಿಶೇಷ ತಿನಿಸುಗಳ ಬಗ್ಗೆ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದರು!

ನಗರದ ಕದ್ರಿಹಿಲ್ಸ್‌ನ ಸಕೀìಟ್‌ ಹೌಸ್‌ನಲ್ಲಿ ವಾಸ್ತವ್ಯವಿದ್ದ ಪ್ರಧಾನಿ ಮೋದಿ ಮಂಗಳವಾರ ಮುಂಜಾನೆ ಉಪಾಹಾರ ಸೇವಿಸಿದರು. ಬಳಿಕ ತಿನಿಸು ಗಳ ಬಗ್ಗೆ ತನ್ನ ಸತ್ಕಾರಕ್ಕಾಗಿ ನೇಮಕಗೊಂಡಿದ್ದ ಸಿಬಂದಿ ಬಳಿ ಪ್ರಶಂಸೆ ವ್ಯಕ್ತ ಪಡಿಸಿದರು. ಪ್ರಧಾನಿಗಾಗಿ ಬೆಳಗ್ಗಿನ ಉಪಾಹಾರ ತಯಾರಿಸಿ, ಬಡಿಸಿದ ನಗರದ ಖಾಸಗಿ ಹೊಟೇಲ್‌ನ ಸಿಬಂದಿ ಹೇಳುವಂತೆ, ಮೋದಿಯವರ ಉಪಾಹಾರಕ್ಕೆ ಮೂಡೆ, ನೀರುದೋಸೆ, ಇಡ್ಲಿ, ಕೇಸರಿಬಾತ್‌, ಚಪಾತಿ, ವಡೆ, ಸಂಜೀರ, ಬಿಸ್ಕಾಟ್‌ ರೊಟ್ಟಿ; ವ್ಯಂಜನ ಗಳಾಗಿ  ಸಾಂಬಾರ್‌, ದಾಳಿತೋವೆ, ಚಟ್ನಿ; ತಾಜಾ ಹಣ್ಣಿನ ರಸ, ಚಹಾ ಸಿದ್ಧಪಡಿಸಲಾಗಿತ್ತು. ಬೆಳಗ್ಗೆ 7 ಗಂಟೆಗೆ ಮೋದಿ ಅವರು ಉಪಾಹಾರ ಸೇವಿಸಲು ಕುಳಿತಾಗ ಸ್ಥಳೀಯ ಖಾದ್ಯ ಬಡಿಸು ವಂತೆ ಕೋರಿದರು.

ಹೀಗಾಗಿ ನೀರುದೋಸೆ, ಮೂಡೆ, ದಾಳಿತೋವೆ, ಸಜ್ಜಿಗೆ ಬಜಿಲ್‌, ಸಂಜೀರ ಹಾಗೂ ಬಿಸ್ಕಾಟ್‌ ರೊಟ್ಟಿ, ರಾಗಿ ಮಣ್ಣಿಗಳನ್ನು ಒದಗಿಸಲಾಯಿತು.

ಕರಾವಳಿಯ ಸ್ಪೆಷಲ್‌ ಆಗಿರುವ ಮೂಡೆ, ನೀರುದೋಸೆ ಹಾಗೂ ಸಜ್ಜಿಗೆ – ಅವಲಕ್ಕಿಗೆ ಮಾರುಹೋದ ಪ್ರಧಾನಿ ಮೋದಿ ಇವನ್ನು ಹೆಚ್ಚು ಇಷ್ಟಪಟ್ಟು ಸವಿದರು. ಅಲ್ಲದೆ ಇನ್ನೊಂದು ಬಾರಿ ಹಾಕಿಸಿಕೊಂಡು ಚಪ್ಪರಿಸಿದರು. ಜತೆಗೆ ಬಿಸ್ಕಾಟ್‌ ರೊಟ್ಟಿ
ಹಾಗೂ ಸಂಜೀರಗಳನ್ನು ಕೂಡ ತಿಂದರು. ಬಳಿಕ ಕಲ್ಲಂಗಡಿ ಹಣ್ಣಿನ ಜ್ಯೂಸ್‌ ಸೇವಿಸಿದರು. ಇದಕ್ಕೆ ಮುನ್ನಬೆಳಗ್ಗೆ ಎದ್ದ ಕೂಡಲೇ ಯೋಗಾಭ್ಯಾಸ ನಡೆಸಿದ ಅವರು, ಅನಂತರ ಶುಂಠಿ ಚಹಾ ಹಾಗೂ ಬಿಸ್ಕತ್‌ ಸೇವಿಸಿದ್ದರು ಎಂದು ಬೆಳಗ್ಗಿನ ಉಪಾಹಾರದ ವ್ಯವಸ್ಥೆ ಗೊಳಿಸಿದ್ದ ಸಿಬಂದಿ “ಉದಯ ವಾಣಿ’ಗೆ ತಿಳಿಸಿದ್ದಾರೆ. 

ತೂಕ 2 ಕಿಲೋ ಜಾಸ್ತಿಯಾದರೆ?
ಪ್ರಧಾನಿ ನರೇಂದ್ರ ಮೋದಿ ಸಾಮಾನ್ಯವಾಗಿ ಬೆಳಗ್ಗಿನ ಉಪಾಹಾರವನ್ನು ಸ್ವಲ್ಪ ಹೆಚ್ಚೇ ಸೇವಿಸುತ್ತಾರಂತೆ. ನಗರದಲ್ಲಿ ತನಗೆ ಉಪಾಹಾರವಾಗಿ ತಯಾರಿಸಲಾಗಿದ್ದ ತಿನಿಸುಗಳಲ್ಲಿ ಸ್ಥಳೀಯ ರುಚಿಗಳನ್ನು ಸ್ವಲ್ಪ ಜಾಸ್ತಿಯಾಗಿಯೇ ಸೇವಿಸಿದ ಬಳಿಕ ಜತೆಗಿದ್ದವರ ಜತೆ ಖುಷಿ ಹಂಚಿಕೊಂಡ ಮೋದಿ, “ಇಂದು ಹೆಚ್ಚು ತಿಂಡಿ ತಿಂದಿದ್ದೇನೆ. ತೂಕ ಎರಡು ಕಿಲೋ ಜಾಸ್ತಿಯಾಗಬಹುದೇನೋ’ ಎಂದು ನಗೆ ಚಟಾಕಿ ಹಾರಿಸಿದರು.

ಉಪಾಹಾರವನ್ನು ಮಂಗಳೂರಿನ ಓಶಿಯನ್‌ ಪರ್ಲ್ ಹೊಟೇಲ್‌ನವರು ಸಿದ್ಧಪಡಿಸಿದ್ದರು. ಸಕೀìಟ್‌ ಹೌಸ್‌ನ ಹಳೆ ಕಟ್ಟಡದಲ್ಲಿರುವ ಭೋಜನಶಾಲೆಯಲ್ಲಿ ಉಪಾಹಾರ ತಯಾರಿಸಲಾಗಿತ್ತು. ಬಾಣಸಿಗರು ಸೋಮವಾರ ರಾತ್ರಿಯೇ ಸಕೀìಟ್‌ ಹೌಸ್‌ನಲ್ಲಿ ತಂಗಿದ್ದು, ಉಪಾಹಾರ ತಯಾರಿಗೆ ಅವಶ್ಯವಿರುವ ಸಿದ್ಧತೆಗಳನ್ನು ಮಾಡಿದ್ದರು. ಚಟ್ನಿ ಹಾಗೂ ಸಾಂಬಾರು ಹೊರತುಪಡಿಸಿ ಉಳಿದೆಲ್ಲ ತಿನಿಸುಗಳನ್ನು ಸ್ಥಳದಲ್ಲೇ ಮುಂಜಾನೆ ತಯಾರಿಸಲಾಗಿತ್ತು. ಆಹಾರ ತಯಾರಿ ಸ್ಥಳದಲ್ಲಿ ರಾಜ್ಯ ಆಹಾರ ಸುರಕ್ಷತೆ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಜಿಲ್ಲಾ ಅಧಿಕಾರಿಗಳು ಅಡುಗೆ ತಯಾರಕ ಸಿಬಂದಿ ಜತೆಗೆ ರಾತ್ರಿಯಿಂದಲೇ ಇದ್ದರು.

ಓಶಿಯನ್‌ ಪರ್ಲ್ ಹೊಟೇಲ್‌ನ ಎಕ್ಸಿಕ್ಯೂಟಿವ್‌ ಚೆಫ್ ದೇವಬ್ರತ ಮಂಡಲ್‌ ಅವರ ನೇತೃತ್ವದ ತಂಡ ಬೆಳಗ್ಗಿನ ಉಪಾಹಾರವನ್ನು ಸಿದ್ಧಪಡಿಸಿತ್ತು. ಬಿ. ಎನ್‌. ಗಿರೀಶ್‌, ಕೆ. ಪಿ. ಸಿಂಗ್‌, ಪ್ರೇಮ್‌ ಕುಮಾರ್‌ ಸೇರಿದಂತೆ ಎಂಟು ಮಂದಿಯ ತಂಡ ಪ್ರಧಾನಿಯವರ ಉಪಚಾರ ನೋಡಿಕೊಂಡಿತ್ತು.

ಮೂಲತಃ ಪ. ಬಂಗಾಲದವರಾದ ದೇವಬ್ರತ ಈ ಹಿಂದೆ ರಾಷ್ಟ್ರಪತಿಯಾಗಿದ್ದ ಪ್ರಣವ್‌ ಮುಖರ್ಜಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಮುಂತಾದ ಅತೀ ಗಣ್ಯರಿಗೆ ಭೋಜನ ಹಾಗೂ ಉಪಾಹಾರ ಸಿದ್ಧಪಡಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಅವರು ಓಶಿಯನ್‌ ಪರ್ಲ್ ಹೊಟೇಲ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಸೂಟ್‌ ನಂ.1ರಲ್ಲಿ  ಪ್ರಧಾನಿ
ಹೊಸ ಸಕೀìಟ್‌ ಹೌಸ್‌ನ 1ನೇ ನಂಬರ್‌ ಸೂಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ತಂಗಿದ್ದರು. ಪಕ್ಕದ 2ನೇ ನಂಬರ್‌ ಸೂಟ್‌ನಲ್ಲಿ ಅವರ ಆಪ್ತ ಸಹಾಯಕರಾದ ದೀಪಕ್‌ ಜೋಶಿ ಹಾಗೂ ಬದ್ರಿ ಮೀನಾ ವಾಸ್ತವ್ಯವಿದ್ದರು. ಇದರ ಪಕ್ಕದ ಕೊಠಡಿಯಲ್ಲಿ ಆಪ್ತ ಕಾರ್ಯದರ್ಶಿ ಸಂಜೀವ್‌ ಸಿಂಗ್‌ ಉಳಿದು ಕೊಂಡಿದ್ದರು. ಇನ್ನುಳಿದ ಕೊಠಡಿಗಳಲ್ಲಿ ಪ್ರಧಾನಿ ಕಾರ್ಯಾಲಯದ ಹೆಚ್ಚುವರಿ ಕಾರ್ಯದರ್ಶಿ ತರುಣ್‌ ಬಗ್ಗಲ್‌, ಪ್ರಧಾನಿಯವರ ಪಿಪಿ ನಮಿತ್‌ ವಿಗ್‌, ಎಂಟಿಎಸ್‌ಗಳಾದ ಯು. ಜಿ. ಜೋಶಿ, ಅನೀಸ್‌ ಕುಮಾರ್‌, ಎಸ್‌ಪಿಜಿ ನಿರ್ದೇಶಕ ಅರುಣ್‌ ಕುಮಾರ್‌ ಸಿನ್ಹಾ ಮೊದಲಾದವರು ವಾಸ್ತವ್ಯ ಹೂಡಿದ್ದರು. ಈ ಕಟ್ಟಡದಲ್ಲಿ ಒಟ್ಟು 3 ಸೂಟ್‌ಗಳು (ಐಷಾರಾಮಿ ಕೊಠಡಿ) ಹಾಗೂ ಇತರ 8 ಕೊಠಡಿಗಳಿವೆ.

ಉಪಾಹಾರ ತಯಾರಿಸಿದವರ ಜತೆ ಫೋಟೋ 
ಉಪಾಹಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಿ, ಬಳಿಕ ಅದನ್ನು ಸಿದ್ಧಪಡಿಸಿದ ಮತ್ತು ಬಡಿಸಿದ ಎಲ್ಲ ಸಿಬಂದಿ ಜತೆ ಫೋಟೋ ತೆಗೆಸಿಕೊಂಡು ಸರಳತೆಯನ್ನು ಮೆರೆದರು. ಪ್ರಧಾನಿಯವರ ಜತೆಗೆ ಫೋಟೋ ತೆಗೆಸಿಕೊಳ್ಳಲು ಒದಗಿದ ಅವಕಾಶ ಸಿಬಂದಿಯನ್ನು ಪುಳಕಿತಗೊಳಿಸಿತು. ಇದು ಬದುಕಿನ ಅತ್ಯಂತ ಮಹಣ್ತೀದ ದಿನ ಎಂದು ಅವರು ಸಂಭ್ರಮ ವ್ಯಕ್ತಪಡಿಸಿದರು.

ಟಾಪ್ ನ್ಯೂಸ್

Lok Sabha Election: ದಾಖಲೆಯ ಸಂಖ್ಯೆಯಲ್ಲಿ ಮತದಾನ ಮಾಡಿ… ಮತದಾರರಲ್ಲಿ ಪ್ರಧಾನಿ ಮೋದಿ

Lok Sabha Election: ದಾಖಲೆಯ ಸಂಖ್ಯೆಯಲ್ಲಿ ಮತದಾನ ಮಾಡಿ… ಮತದಾರರಲ್ಲಿ ಪ್ರಧಾನಿ ಮೋದಿ

ಪ್ರಜ್ವಲ್ ಪ್ರಕರಣ ಸಿಬಿಐಗೆ ನೀಡಬೇಕೆಂಬ ಕೆಲವರ ಒತ್ತಾಯಕ್ಕೆ ನನ್ನ ಸಹಮತ ಇದೆ: ಜೋಶಿ

ಪ್ರಜ್ವಲ್ ಪ್ರಕರಣ ಸಿಬಿಐಗೆ ನೀಡಬೇಕೆಂಬ ಕೆಲವರ ಒತ್ತಾಯಕ್ಕೆ ನನ್ನ ಸಹಮತ ಇದೆ: ಜೋಶಿ

LS polls: ರಾಜ್ಯದಲ್ಲಿ 25-26 ಕ್ಷೇತ್ರದಲ್ಲಿ ಬಿಜೆಪಿ ಗೆಲುವು; ಮಾಜಿ ಸಿಎಂ ಬಿ.ಎಸ್ ವೈ

LS polls: ರಾಜ್ಯದಲ್ಲಿ 25-26 ಕ್ಷೇತ್ರದಲ್ಲಿ ಬಿಜೆಪಿ ಗೆಲುವು; ಮಾಜಿ ಸಿಎಂ ಬಿ.ಎಸ್ ವೈ

LS Polls: ಮನೆ ಯಜಮಾನನ್ನು ಕಳೆದುಕೊಂಡ ದುಖ:ದ ನಡುವೆ ಮತ ಚಲಾಯಿಸಿದ ಕುಟುಂಬ ಸದಸ್ಯರು

LS Polls: ಮನೆ ಯಜಮಾನನ್ನು ಕಳೆದುಕೊಂಡ ದುಃಖದ ನಡುವೆ ನಡುವೆ ಮತ ಚಲಾಯಿಸಿದ ಕುಟುಂಬ ಸದಸ್ಯರು

Bantwala: ತುಂಬೆ ವಳವೂರಿನಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

Bantwala: ತುಂಬೆ ವಳವೂರಿನಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

Gangavati: ಮತದಾನ ಆರಂಭವಾಗಿ 2 ಗಂಟೆ ಕಳೆದರೂ ಮತಗಟ್ಟೆಯತ್ತ ಬಾರದ ಗ್ರಾಮಸ್ಥರು

Gangavati: ಮತದಾನ ಆರಂಭವಾಗಿ 2 ಗಂಟೆ ಕಳೆದರೂ ಮತಗಟ್ಟೆಯತ್ತ ಬಾರದ ಗ್ರಾಮಸ್ಥರು

ಕಲಬುರಗಿ: ಪೋಲಿಂಗ್ ಅಧಿಕಾರಿಗಳಿಂದಲೇ ಕಾಂಗ್ರೆಸ್ ಗೆ ಮತ ಚಲಾವಣೆ ಆರೋಪ

ಕಲಬುರಗಿ: ಪೋಲಿಂಗ್ ಅಧಿಕಾರಿಗಳಿಂದಲೇ ಕಾಂಗ್ರೆಸ್ ಗೆ ಮತ ಚಲಾವಣೆ ಆರೋಪ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru Airport; ನಾಲ್ಕು ತಿಂಗಳಲ್ಲಿ 4.45 ಕೋ.ರೂ. ಮೌಲ್ಯದ “ಚಿನ್ನ’ದ ಬೇಟೆ

Mangaluru Airport; ನಾಲ್ಕು ತಿಂಗಳಲ್ಲಿ 4.45 ಕೋ.ರೂ. ಮೌಲ್ಯದ “ಚಿನ್ನ’ದ ಬೇಟೆ

ಇಂದು ವಿಶ್ವ ಅಸ್ತಮಾ ದಿನ; ದೈಹಿಕ- ಮಾನಸಿಕವಾಗಿ ಕುಗ್ಗಿಸುವ “ಅಸ್ತಮಾ’

ಇಂದು ವಿಶ್ವ ಅಸ್ತಮಾ ದಿನ; ದೈಹಿಕ- ಮಾನಸಿಕವಾಗಿ ಕುಗ್ಗಿಸುವ “ಅಸ್ತಮಾ’

ತಾಪಮಾನದಲ್ಲಿ ಏರಿಕೆ; ಮುಂಜಾಗ್ರತಾ ಕ್ರಮವಾಗಿ ವೆನ್ಲಾಕ್‌ ನಲ್ಲಿ 6 ಬೆಡ್‌ ಮೀಸಲು

D.K ತಾಪಮಾನದಲ್ಲಿ ಏರಿಕೆ; ಮುಂಜಾಗ್ರತಾ ಕ್ರಮವಾಗಿ ವೆನ್ಲಾಕ್‌ ನಲ್ಲಿ 6 ಬೆಡ್‌ ಮೀಸಲು

May 9: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಮೊದಲ ತಂಡದಿಂದ ಹಜ್‌ ಯಾತ್ರೆ

May 9: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಮೊದಲ ತಂಡದಿಂದ ಹಜ್‌ ಯಾತ್ರೆ

ಸಂಚಾರ ಯೋಗ್ಯವಲ್ಲದ ಹಡಗುಗಳ ಬಗ್ಗೆ ನಿಗಾ: ಡಾ| ರಮಣ

Mangaluru ಸಂಚಾರ ಯೋಗ್ಯವಲ್ಲದ ಹಡಗುಗಳ ಬಗ್ಗೆ ನಿಗಾ: ಡಾ| ರಮಣ

MUST WATCH

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

ಹೊಸ ಸೇರ್ಪಡೆ

Lok Sabha Election: ದಾಖಲೆಯ ಸಂಖ್ಯೆಯಲ್ಲಿ ಮತದಾನ ಮಾಡಿ… ಮತದಾರರಲ್ಲಿ ಪ್ರಧಾನಿ ಮೋದಿ

Lok Sabha Election: ದಾಖಲೆಯ ಸಂಖ್ಯೆಯಲ್ಲಿ ಮತದಾನ ಮಾಡಿ… ಮತದಾರರಲ್ಲಿ ಪ್ರಧಾನಿ ಮೋದಿ

ಪ್ರಜ್ವಲ್ ಪ್ರಕರಣ ಸಿಬಿಐಗೆ ನೀಡಬೇಕೆಂಬ ಕೆಲವರ ಒತ್ತಾಯಕ್ಕೆ ನನ್ನ ಸಹಮತ ಇದೆ: ಜೋಶಿ

ಪ್ರಜ್ವಲ್ ಪ್ರಕರಣ ಸಿಬಿಐಗೆ ನೀಡಬೇಕೆಂಬ ಕೆಲವರ ಒತ್ತಾಯಕ್ಕೆ ನನ್ನ ಸಹಮತ ಇದೆ: ಜೋಶಿ

LS polls: ರಾಜ್ಯದಲ್ಲಿ 25-26 ಕ್ಷೇತ್ರದಲ್ಲಿ ಬಿಜೆಪಿ ಗೆಲುವು; ಮಾಜಿ ಸಿಎಂ ಬಿ.ಎಸ್ ವೈ

LS polls: ರಾಜ್ಯದಲ್ಲಿ 25-26 ಕ್ಷೇತ್ರದಲ್ಲಿ ಬಿಜೆಪಿ ಗೆಲುವು; ಮಾಜಿ ಸಿಎಂ ಬಿ.ಎಸ್ ವೈ

LS Polls: ಮನೆ ಯಜಮಾನನ್ನು ಕಳೆದುಕೊಂಡ ದುಖ:ದ ನಡುವೆ ಮತ ಚಲಾಯಿಸಿದ ಕುಟುಂಬ ಸದಸ್ಯರು

LS Polls: ಮನೆ ಯಜಮಾನನ್ನು ಕಳೆದುಕೊಂಡ ದುಃಖದ ನಡುವೆ ನಡುವೆ ಮತ ಚಲಾಯಿಸಿದ ಕುಟುಂಬ ಸದಸ್ಯರು

Bantwala: ತುಂಬೆ ವಳವೂರಿನಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

Bantwala: ತುಂಬೆ ವಳವೂರಿನಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.