ಟ್ಯಾಂಕರ್ ಪಲ್ಟಿ:ಅಮೋನಿಯಾ ಸೋರಿಕೆ;ವಾಸ್ಕೋದಲ್ಲಿ ಆತಂಕ !
Team Udayavani, Jan 19, 2018, 11:28 AM IST
ಪಣಜಿ: ವಾಸ್ಕೋ ನಗರದ ವಿಮಾನ ನಿಲ್ದಾಣಕ್ಕೆ ತೆರಳುವ ಚಿಕಾಲಿಮ್ ರಸ್ತೆಯಲ್ಲಿ ಟ್ಯಾಂಕರೊಂದು ಪಲ್ಟಿಯಾಗಿ ಅಮೋನಿಯಾ ಸೋರಿಕೆಯಾಗುತ್ತಿದ್ದು ಆತಂಕದ ವಾತಾವರಣ ನಿರ್ಮಾಣ ವಾಗಿದೆ. ಮುಂಜಾಗೃತಾ ಕ್ರಮವಾಗಿ ಸ್ಥಳದ ಸುತ್ತಮುತ್ತಲಿನ ನಿವಾಸಿಗಳನ್ನು ಸ್ಥಳಾಂತರಿಸಲಾಗಿದ್ದು, ಸ್ಥಳಕ್ಕೆ ಪ್ರವೇಶಿಸದಂತೆ ತಡೆ ಹಾಕಲಾಗಿದೆ.
ಶುಕ್ರವಾರ ನಸುಕಿನ 2 ಗಂಟೆಯ ವೇಳೆಗೆ ಟ್ಯಾಂಕರ್ ಪಲ್ಟಿಯಾಗಿದೆ. ಗ್ಯಾಸ್ನಿಂದಾಗಿ ಇಬ್ಬರು ಮಹಿಳೆಯರು ಉಸಿರಾಟದ ಸಮಸ್ಯೆಗೆ ಗುರಿಯಾಗಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸ್ಥಳಕ್ಕೆ ವಿಕೋಪ ನಿರ್ವಹಣಾ ತಂಡ, ಅಗ್ನಿಶಾಮಕದಳದ ಸಿಬಂದಿಗಳು ಮತ್ತು ಪೊಲೀಸರು ದೌಡಾಯಿಸಿ ತುರ್ತು ಕ್ರಮ ಕೈಗೊಂಡು ಟ್ಯಾಂಕರ್ ತೆರವು ಗೊಳಿಸಲು ಕಾರ್ಯಾಚರಣೆ ಆರಂಭಿಸಿದ್ದಾರೆ.