ಸೆಕ್ಯುರಿಟಿ


Team Udayavani, Mar 4, 2018, 6:30 AM IST

security.jpg

ಕಾವಲುಗಾರ ಎಂದಕೂಡಲೇ ಕಣ್ಣಮುಂದೆ ಬರುವುದು ಬಾಗಿಲ ಬಳಿಯಲ್ಲಿಯೋ ಅಥವಾ ಆಯಕಟ್ಟಿನ ಸ್ಥಳದಲ್ಲಿಯೋ ರಕ್ಷಕನಂತೆ ನಿಂತು ಕಾರ್ಯನಿರ್ವಹಿಸುವ ಒಂದು ಆಕಾರ. ಒಳಗಿನಿಂದ ಹೊರಕ್ಕೆ ಅಥವಾ ಹೊರಗಿನಿಂದ ರಕ್ಷಿತ ಪ್ರದೇಶದೊಳಕ್ಕೆ ಯಾರೂ ಪ್ರವೇಶಿಸದಂತೆ ಕಾಯುವವನು. ಇದು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದ ವೃತ್ತಿ. ಉದಾಹರಣೆಗೆ ಜಯ-ವಿಜಯರ ವೃತ್ತಾಂತವನ್ನೇ ಗಮನಿಸಬಹುದು. ಮಹಾವಿಷ್ಣು, ಲಕ್ಷ್ಮೀದೇವಿಯೊಡನೆ ಏಕಾಂತದಲ್ಲಿ ಇದ್ದಾಗ ಯಾರೂ ಒಳಗೆ ಪ್ರವೇಶ ಮಾಡದಂತೆ ಜಯ-ವಿಜಯರು ಕಾವಲಿದ್ದರು. ಆಗ ಬ್ರಹ್ಮಮಾನಸಪುತ್ರರೂ ಆತ್ಮಜ್ಞಾನಿಗಳೂ ಆದ ಸನಕ, ಸನಂದನ, ಸನತುRಮಾರ ಮತ್ತು ಸನತ್ಸುಜಾತ ವಿಷ್ಣುವಿನ ದರ್ಶನಕ್ಕೆ ಬಂದರು. ಅವರು  ವಟುಗಳಂತೆ ಇದ್ದುದರಿಂದ ಜಯ-ವಿಜಯರು ಅವರನ್ನು ತಡೆದರಂತೆ. ಹೀಗೆ ಮುಂದುವರಿಯುತ್ತದೆ ಕತೆ.

ಇನ್ನೊಂದು ಪ್ರಸಂಗದಲ್ಲಿ ಕೈಲಾಸದಿಂದ ಪರಶಿವನು ಹೊರಗೆಲ್ಲೋ ಹೋಗಿದ್ದ ಸಂದರ್ಭದಲ್ಲಿ ಪಾರ್ವತಿಯು ತಾನು ಸ್ನಾನಮಾಡುವಾಗ ಒಳಕ್ಕೆ ಯಾರೂ ಬಾರದಂತೆ ಕಾವಲಿರಲು ಸ್ವಯಂಸೃಷ್ಟಿಸಿ ಜೀವನೀಡಿದ್ದ ಗಣೇಶನಿಗೆ ಆಜ್ಞಾಪಿಸಿದಳಂತೆ. ಅವನಾದರೋ ನಿಷ್ಠಾವಂತ ಕಾವಲುಗಾರನಾಗಿ ಸ್ವತಃ ಈಶ್ವರನೇ ಬಂದಾಗಲೂ ಅವನನ್ನು ತಡೆದು ನಿಲ್ಲಿಸಿದನಂತೆ. ಮುಂದೆ ನಡೆದ ಕತೆ ಎಲ್ಲರಿಗೂ ತಿಳಿದಿದೆ.

ಇದು ಪುರಾಣಕಾಲದ ಕಥೆಯೆಂದರೆ ಈಗಿನ ಕಾಲದಲ್ಲೂ ಕಾವಲುಗಾರರ ವೃತ್ತಿ ಮುಂದುವರಿದಿರುವುದನ್ನು ಕಾಣಬಹುದು. ಆಂಗ್ಲ ಪದದ ಪ್ರಯೋಗ ಮಾಡಿ ಇವರನ್ನು “ವಾಚ್‌ಮನ್‌’ ಎಂದೂ ಕರೆಯುತ್ತಾರೆ. ಯಾವುದೇ ಕಟ್ಟಡ ಕಟ್ಟುವಲ್ಲಿ ನೋಡಿ ಒಂದು ವಾಚ್‌ಮನ್‌ ಶೆಡ್‌ ಇರುತ್ತದೆ. ಕಟ್ಟಡ ಸಾಮಗ್ರಿಯ ಸಂಗ್ರಹ, ಬೆಲೆಬಾಳುವ ಸಿಮೆಂಟ್‌, ಕಬ್ಬಿಣದ ಸರಳುಗಳು, ಮರಮಟ್ಟುಗಳು ಇವೆಲ್ಲ ಅವನು ಕಾಯಬೇಕಾದ ವಸ್ತುಗಳಾಗಿರುತ್ತವೆ. ಅಲ್ಲದೆ, ಅದಕ್ಕಾಗಿ ಅವನು ದಿನದ ಇಪ್ಪತ್ತನಾಲ್ಕು ಗಂಟೆಯೂ ಅಲ್ಲಿಯೇ ಇದ್ದು ಕೆಲಸ ನಿರ್ವಹಿಸುತ್ತಾನೆ. ಕಟ್ಟಡದ ಪ್ರಮಾಣ ಬೃಹತ್ತಾದುದಾದರೆ ಒಬ್ಬನಿಗಿಂತ ಹೆಚ್ಚು ಜನ ಕಾವಲುಗಾರರೂ ಇರುವುದುಂಟು. ಅವನು, ಅವನ ಸಂಸಾರ ವಾಸಮಾಡಲು ತಾತ್ಕಾಲಿಕವಾಗಿ ಕೊಠಡಿ ನಿರ್ಮಿಸಿ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗುತ್ತದೆ. ನನಗೆ ಇವರ ಬಗ್ಗೆ ಬಹಳ ಅನುಕಂಪ. ಏಕೆಂದರೆ, ತಿಂಗಳಾನುಗಟ್ಟಲೆ ಕಾವಲು ಕಾಯ್ದು ತಮ್ಮ ನಿಷ್ಠೆ ಮೆರೆದ ಇವರು ಕಟ್ಟಡ ಪೂರ್ತಿಯಾಗುತ್ತಿದ್ದಂತೆ ಖುಷಿಯಾದರೆ ಬೇರೊಂದು ಕಡೆಯಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡಕ್ಕೆ ಇವರನ್ನು ವರ್ಗಾಯಿಸಲಾಗುತ್ತದೆ ಅಥವಾ ತಮ್ಮ ವಾಸದ ಮನೆಯ ಕಾವಲು ಕೆಲಸಕ್ಕೆ ನೇಮಕವಾಗಬಹುದು.

ಒಂದು ಓದಿದ ಪ್ರಸಂಗ ನೆನಪಾಗುತ್ತದೆ. ಒಬ್ಬ ಮಾಲೀಕನ ಬಳಿ ರಾತ್ರಿಯ ಪಾಳಿಯ ನಂಬುಗೆಯ ಕಾವಲುಗಾರನಿದ್ದ. ಅವನಿಗೆ ತನ್ನ ಮಾಲೀಕನ ಬಗ್ಗೆ ಬಹಳ ನಿಷ್ಠೆ ಮತ್ತು ಗೌರವ. ಒಮ್ಮೆ ಮಾಲೀಕನು ವ್ಯವಹಾರದ ಸಂಬಂಧ ಬೆಳಿಗ್ಗೆಯೇ ಬೇರೆ ಊರಿಗೆ ರೈಲಿನಲ್ಲಿ ಪ್ರಯಾಣಿಸಬೇಕಾದ ಅಗತ್ಯವಿರುತ್ತದೆ. ಮನೆಯಿಂದ ಅವನು ಹೊರಬರುತ್ತಿದ್ದಂತೆ ಕಾವಲುಗಾರನು ಓಡುತ್ತ ಬಂದು ಎದುರು ನಿಂತು “”ಸ್ವಾಮಿ ದಯವಿಟ್ಟು ಈ ದಿನ ಏನೋ ಅಪಾಯ ಸಂಭವಿಸುವ ಸೂಚನೆ ನನಗೆ ರಾತ್ರಿ ಮಂದ ಕನಸಿನಿಂದ ತಿಳಿದಿದೆ. ತಾವು ದಯವಿಟ್ಟು ಇಂದಿನ ಪ್ರಯಾಣವನ್ನು ಮುಂದೂಡಿ” ಎಂದು ಪ್ರಾರ್ಥಿಸಿದ. ಬಹಳ ವರ್ಷಗಳಿಂದ ತನ್ನ ಬಳಿ ಕೆಲಸ ಮಾಡುತ್ತಿದ್ದ ಪ್ರಾಮಾಣಿಕ ಮನುಷ್ಯನಾದ ಅವನ ಮಾತನ್ನು ನಂಬಿ ಮಾಲೀಕನು ಆ ದಿನ ರೈಲು ಪ್ರಯಾಣವನ್ನು ರದ್ದು ಮಾಡಿದನು. ಮಾರನೆಯ ದಿನದ ಪತ್ರಿಕೆಯಲ್ಲಿನ ಸುದ್ದಿ ಆಶ್ಚರ್ಯಕರವಾಗಿತ್ತು. ಅವನು ಪ್ರಯಾಣಿಸಬೇಕಾಗಿದ್ದ ರೈಲು ಹಳಿತಪ್ಪಿ ದುರಂತ ಸಂಭವಿಸಿ ಅನೇಕರು ಸಾವಿಗೀಡಾಗಿದ್ದರು. ತಕ್ಷಣ ಮಾಲೀಕನು ಕಾವಲುಗಾರನನ್ನು ಕರೆಸಿ ತನ್ನ ಪ್ರಾಣ ಉಳಿಯುವಂತಹ ಸೂಚನೆ ಕೊಟ್ಟಿದ್ದಕ್ಕಾಗಿ ಅವನನ್ನು ಅಭಿನಂದಿಸಿ ದೊಡ್ಡ ಮೊತ್ತದ ಬಹುಮಾನವನ್ನು ನೀಡಿ ಗೌರವಿಸಿದ. “”ನಾಳೆಯಿಂದ ನೀನು ಕೆಲಸಕ್ಕೆ ಬರುವ ಆವಶ್ಯಕತೆಯಿಲ್ಲ” ಎಂದು ಅವನನ್ನು ಕೆಲಸದಿಂದ ತೆಗೆದುಹಾಕಿದ. ದಿಕ್ಕುಗೆಟ್ಟ ಕಾವಲುಗಾರನು ತಾನು ಮಾಡಿದ ತಪ್ಪೇನೆಂದು ಗೋಗರೆದ. ರಾತ್ರಿಪಾಳಿಯ ಕಾವಲು ಕೆಲಸಕ್ಕೆ ಅವನನ್ನು ನೇಮಿಸಲಾಗಿದ್ದು ಆತನು ನಿದ್ರೆಗೆಟ್ಟ ಕರ್ತವ್ಯ ನಿರ್ವಹಿಸಬೇಕಾಗಿತ್ತು. ಅದರ ಬದಲು ನಿದ್ರೆ ಮಾಡಿ ಕನಸು ಕಂಡಿದ್ದಾನೆಂದರೆ ಏನರ್ಥ? ಕೊಟ್ಟ ಜವಾಬ್ದಾರಿಯಲ್ಲಿ ನಿರ್ಲಕ್ಷ್ಯ ತೋರಿದ್ದಾನೆಂದೇ ಅಲ್ಲವೆ? ಎಂದು ಪ್ರಶ್ನಿಸಿದ. ಅದಕ್ಕಾಗಿ ಕೆಲಸದಿಂದ ಅವನನ್ನು ವಜಾಗೊಳಿಸಲಾಗಿದೆ ಎಂದಕೂಡಲೇ ಕಾವಲುಗಾರನು ಬಾಯು¾ಚ್ಚಿಕೊಂಡ.

ಕಾರ್ಖಾನೆಗಳು, ಬಹುಮಹಡಿಗಳ ವಸತಿ ಸಮುತ್ಛಯಗಳಲ್ಲಿ ಹಗಲು, ರಾತ್ರಿ ಎರಡೂ ಪಾಳಿಗಳಲ್ಲಿ ಕಾವಲುಗಾರರಿರುತ್ತಾರೆ. ಅವರ ಕೆಲಸ ತುಂಬ ಜವಾಬ್ದಾರಿಯದಾಗಿರುತ್ತದೆ. ಅವರಿಗೆ ಒಂದು ರಕ್ಷಣಾ ಕೊಠಡಿಯಿದ್ದು ಟೆಲಿಫೋನ್‌ ಸೌಲಭ್ಯ ರಕ್ಷಣೆಗೆ ಒಂದು ಆಯುಧ, ವಿಶೇಷ ಸಮವಸ್ತ್ರ ಮುಂತಾದವುಗಳನ್ನು ನೀಡುತ್ತಾರೆ. ಕಟ್ಟಡದ ಒಳಕ್ಕೆ ಬರುವ ಮತ್ತು ಹೊರಕ್ಕೆ ಹೋಗುವ ಪ್ರತಿಯೊಬ್ಬರ ಮಾಹಿತಿಯನ್ನು ದಾಖಲಿಸಿಕೊಳ್ಳುತ್ತಾರೆ.

ನನ್ನ ಬಾಲ್ಯದ ಕಾಲದಲ್ಲಿ ನಾನು ಕಂಡ ನಮ್ಮ ಗೆಳತಿಯೊಬ್ಬಳ ತೋಟದ ಕಾವಲುಗಾರನ ಬಗ್ಗೆ ಹೇಳಲೇಬೇಕು. ಗೆಳತಿಯ ಮನೆಯವರು ಹಣ್ಣು-ತರಕಾರಿಗಳ ತೋಟವೊಂದನ್ನು ತುಂಬ ಚೆನ್ನಾಗಿ ಬೆಳೆಸಿದ್ದರು. ಹೇಗೆ ಮುನ್ನೆಚ್ಚರಿಕೆ ವಹಿಸಿದರೂ ಬೇಲಿ ಹಾರಿ ಹಣ್ಣುಗಳು, ತರಕಾರಿಗಳು, ತೆಂಗಿನಕಾಯಿಗಳನ್ನು ಯಾರೋ ಕದ್ದುಬಿಡುತ್ತಿದ್ದರು. ಅದಕ್ಕಾಗಿ ಅವರು ಕಾವಲುಗಾರರನ್ನು ನೇಮಕ ಮಾಡಿದ್ದರು. ಆದರೂ ಕಳ್ಳತನ ಕಡಿಮೆಯಾಗಲಿಲ್ಲ. ಕೊನೆಗೆ ಎಲ್ಲಿಂದಲೋ ಒಬ್ಬ ಈ ಕೆಲಸಕ್ಕೆ ಹುಡುಕಿಕೊಂಡು ಬಂದ. ಅವನು ಎತ್ತರವಾದ ಮನುಷ್ಯ ಕಟ್ಟುಮಸ್ತಾದ ಆಕಾರದವನು. ತೀಕ್ಷ್ಣವಾದ ಕಣ್ಣುಗಳು, ಚೂಪಾದ ಮೂಗು, ಕಪ್ಪಾದ ಬಣ್ಣ , ದಾಳಿಂಬೆ ಬೀಜದಂತ ದಂತಪಂಕ್ತಿ, ತಲೆಯ ಮೇಲೆ ದಟ್ಟವಾದ ಕೂದಲು, ವಿಶಾಲವಾದ ಅವನ ಹಣೆಯ ಮೇಲೆ  ಮೂರೆಳೆ ವಿಭೂತಿ ಪಟ್ಟಿ , ಮಧ್ಯದಲ್ಲಿ ಅಗಲಾದ ಕುಂಕುಮ. ಕೊರಳಲ್ಲಿ ಸಣ್ಣ ರುದ್ರಾಕ್ಷಿ ಮಾಲೆ, ಖಾಕಿ ಬಣ್ಣದ ಪ್ಯಾಂಟು, ಅರ್ಧ ತೋಳಿನ ಶರ್ಟು, ಕಾಲಿನಲ್ಲಿ ಪೊಲೀಸರ ರೀತಿಯ ಬೂಟು. ನೋಡಲು ಇವನೇ ಸರಿಯಾದ ಆಳು ಎಂಬಂತಿದ್ದ. ಅವನು ಹದಿನೈದು ವರ್ಷ ಸೈನ್ಯದಲ್ಲಿ ಸೇವೆ ಮಾಡಿದ್ದನಂತೆ. ನಿವೃತ್ತನಾದ ನಂತರ ಸೆಕ್ಯೂರಿಟಿ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ಅಲ್ಲಿಂದಲೂ ನಿವೃತ್ತನಾಗಿದ್ದನಂತೆ. ಇನ್ನೂ ಶಾರೀರಿಕವಾಗಿ ಬಲವಾಗಿದ್ದ ಅವನನ್ನು ನನ್ನ ಗೆಳತಿಯ ತಂದೆಯವರು ತೋಟಕ್ಕೆ ಕಾವಲುಗಾರನಾಗಿ ನೇಮಕಮಾಡಿಕೊಂಡರು. ಅವನ ಜೊತೆಯಲ್ಲಿ ಒಂದು ಸಾಕುನಾಯಿಯೂ ಇತ್ತು. ಅವನು ತೋಟದಲ್ಲಿ ರಾತ್ರಿಯ ವೇಳೆಯಲ್ಲಿಯೂ ಗಸ್ತು ತಿರುಗುತ್ತಿದ್ದನಂತೆ. ಜೊತೆಗೆ ಕೆಲವು ಹೊಸ ಉಪಾಯಗಳನ್ನೂ ಮಾಡಿದ. ಸಣ್ಣಸಣ್ಣ ಕುಡಿಕೆಗಳಿಗೆ ಹೊರಮೈಗೆಲ್ಲ ಕಂಕುಮ-ಅರಸಿನ ಬಳಿದು ಅವುಗಳ ಕುತ್ತಿಗೆಗೆ ಬಣ್ಣದ ದಾರಗಳನ್ನು ಸುತ್ತಿ ತೋಟದ ನಾಲ್ಕೂ ಮೂಲೆಗಳಲ್ಲಿದ್ದ ಮರಗಳಿಗೆ ತೂಗುಹಾಕಿದ. “ನಾನು ಚೌಡಿಕೆಯನ್ನು ಪೂಜೆಮಾಡಿ ಈ ಮಡಿಕೆಗಳಲ್ಲಿ ಆವಾಹನೆ ಮಾಡಿಸಿದ್ದೇನೆ. ಯಾರಾದರೂ ಬೇಲಿದಾಟಿ ಒಳಕ್ಕೆ ಬಂದರೆ ಆ ದೇವಿಯ ಕ್ರೂರದೃಷ್ಟಿಗೆ ಬಲಿಯಾಗುತ್ತಾರೆ. ಅವರು ಯಾರೇ ಆದರೂ ರಕ್ತಕಾರಿಕೊಂಡು ಬೀಳುತ್ತಾರೆ’ ಎಂದು ಪ್ರಚಾರ ಮಾಡಿದ. ತೋಟದಲ್ಲಿ ಅಲ್ಲಲ್ಲಿ ಗಿಡಗಳ ಬಳಿ ಹಳೆಯ ತಗಡಿನಲ್ಲಿ ವಿಕಾರವಾದ ಮುಖವಾಡಗಳನ್ನು ಮಾಡಿ ಗಿಡಗಳಿಗೆ ತೂಗುಹಾಕಿದ. ಅವನಿಗೆ ಯಾವ ದುಶ್ಚಟಗಳೂ ಇರಲಿಲ್ಲ. ಅವನ ವೇಷ, ಈ ರೀತಿಯ ಹಲವಾರು ರೀತಿಯ ಬೆದರುಬೊಂಬೆಗಳು ಜನರಲ್ಲಿ ಭಯವನ್ನು ಹುಟ್ಟಿಸಿಬಿಟ್ಟವು.

ನಾನು ಗೆಳತಿಯ ಜೊತೆಗೆ ಹೋಗಿದ್ದಾಗ ಈ ಅಚ್ಚರಿಗಳನ್ನು ನೋಡಿ ಏಕೆಂದು ಕೇಳಿದಾಗ ತಿಳಿದಿದ್ದು ಹೀಗೆ. ತೋಟಕ್ಕೆ ದಿಗ½ಂಧನ ಮಾಡಿದ್ದಾನೆ. ದೊಡ್ಡ ಬ್ಯಾಟರಿ ಹಿಡಿದುಕೊಂಡು ರಾತ್ರಿಕಾಲದಲ್ಲಿ ಆ ಮನುಷ್ಯ ಭೂತದಂತೆ ತೋಟದಲ್ಲೆಲ್ಲ ತಿರುಗಾಡುತ್ತಾನೆ. ಹಾಗಾಗಿ ಈಗ ಯಾವುದೇ ಕಳ್ಳತನವಾಗಿಲ್ಲ ಎಂದು. ನನಗೆ ಮಾಲೀಕರ ಮಗಳ ಗೆಳತಿಯೆಂದು ಆತ ವಿಶೇಷ ಗೌರವ ನೀಡುತ್ತಿದ್ದ. ನಾನೊಮ್ಮೆ ಅವನನ್ನು “”ಈ ರೀತಿ ಮಂತ್ರಮಾಟ ಮಾಡುವುದಕ್ಕೆ ಅರ್ಥವೇನಿದೆ?” ಎಂದು. ಅದಕ್ಕವನು, “”ಅದು ನಂಬಿಕೆಯ ಪ್ರಶ್ನೆ. ಇಲ್ಲಿನ ಜನಕ್ಕೆ ಮೂಢನಂಬಿಕೆಗಳಲ್ಲಿ ತುಂಬ ನಂಬಿಕೆಯಿದೆ, ಅದಕ್ಕಾಗಿ ನಾನು ಈ ಉಪಾಯವನ್ನು ಮಾಡಿದ್ದೇನೆ” ಎಂದ. ತೋಟದ ಮಧ್ಯದಲ್ಲಿ ಅಲ್ಲಲ್ಲಿ ಗೂಟಗಳನ್ನು ಹೂಳಿ ಅದಕ್ಕೆ ಹಳೆಯ ಗೋಣಿಚೀಲಗಳನ್ನು ನೇತುಹಾಕಿದ್ದ. ಅವುಗಳಲ್ಲಿ ಎರಡು ಕಣ್ಣುಗಳಂತೆ ತೂತುಮಾಡಿ ಅಲ್ಲಿ ಒಳಗಿನಿಂದ ಸಿಗರೇಟು ಪಾಕೀಟಿನ ಸುನ್ನಾರಿಯನ್ನು ಅಂಟಿಸಿದ್ದ. ಬೆಳಕು ಬಿದ್ದಾಗ ಅವು ಹೊಳೆಯುತ್ತಿದ್ದವು. ಸಾಲದ್ದಕ್ಕೆ ಅಂಚಿನಲ್ಲಿದ್ದ ಗಿಡಗಳ ಕೆಲವು ಕೊಂಬೆಗಳಿಗೆ ಸಣ್ಣಗೆಜ್ಜೆಗಳನ್ನು ಕಟ್ಟಿದ್ದ. ಅವು ಬೀಸುವ ಗಾಳಿಗೆ  ಜಲ್‌ಜಲ್‌ ಎಂದು ಶಬ್ದಮಾಡುತ್ತಿದ್ದವು. ಕೆಲಸಕ್ಕೆ ಬರುತ್ತಿದ್ದ ಅಳುಮಕ್ಕಳಿಗೆ ರೋಚಕವಾದ ಭಯಮಿಶ್ರಿತ ಕಥೆಗಳನ್ನೂ ಹೇಳಿ ಅವರ ಮನಸ್ಸಿನಲ್ಲಿ ಅವ್ಯಕ್ತ ಭಯದ ವಾತಾವರಣ ಸೃಷ್ಟಿಮಾಡಿದ್ದ. ತೋಟದ ನಿರ್ವಹಣೆಯಲ್ಲಿ ಅವನ ಸೇವೆ ಬಹುಮುಖವಾಗಿರುತ್ತಿತ್ತು. ಕಸಕಡ್ಡಿಗಳನ್ನು ಶುಚಿಗೊಳಿಸಿ ಕಂಪೋಸ್ಟ್‌ ತಯಾರುಮಾಡುತ್ತಿದ್ದ. ಮಾಲೀಕರ ಮನೆಯ ದನಕರುಗಳನ್ನೂ ಬಹಳ ಜತನದಿಂದ ನೋಡಿಕೊಳ್ಳುತ್ತಿದ್ದ. ಕೊಟ್ಟಿಗೆಗಳು ಯಾವಾಗಲೂ ಶುಚಿಯಾಗಿರುವಂತೆ ನೋಡಿಕೊಳ್ಳುತ್ತಿದ್ದ. ಬಹಳ ವರ್ಷಗಳು ಆತನೇ ಕಾವಲುಗಾರನಾಗಿ ಕೆಲಸಕ್ಕಿದ್ದ. ನನ್ನ ಕಾಲೇಜು ವ್ಯಾಸಂಗ ಮುಗಿದು ವಿವಾಹವಾಗಿ ಬೇರೆ ಊರಿಗೆ ಹೋದರೂ ಊರಿಗೆ ಬಂದಾಗ ಅನೇಕ ಬಾರಿ ಗೆಳತಿಯನ್ನು ನೋಡಲು ಹೋಗುತ್ತಿದ್ದೆ. ಆಗೆಲ್ಲ ಅವನ ದರ್ಶನವಾಗುತ್ತಿತ್ತು. ಅವರ ತೋಟವಂತೂ ಮೊದಲಿಗಿಂತ ಇನ್ನೂ ಹೆಚ್ಚು ನಳನಳಿಸುವಂತಾಗಿತ್ತು. ಇದಾದ ನಂತರ ಕೆಲವು ದಶಕಗಳೇ ಕಳೆದುಹೋಗಿವೆ. ಆ ತೋಟದ ಜಮೀನು ಈಗ ರಸ್ತೆ ನಿರ್ಮಾಣಕ್ಕೋಸ್ಕರ ಸರ್ಕಾರದ ವಶವಾಗಿದೆ. ತೋಟವಿಲ್ಲದಿದ್ದರೂ ಅಲ್ಲಿ ಕಾಣುತ್ತಿದ್ದ ಮಾಯಾಲಮರಾಠಿಯಂತಹ ಆ ಕಾವಲುಗಾರನ ನೆನಪು ಮಾತ್ರ ಇನ್ನೂ ಊರಿಗೆ ಹೋದಾಗಲೆಲ್ಲ ಬರುವುದುಂಟು.

ಇನ್ನು ನಮ್ಮ ದೇಶದ ಗಡಿಗಳನ್ನು ಹಗಲು ರಾತ್ರಿಯೆನ್ನದೆ, ಚಳಿ, ಮಳೆಗಳನ್ನೂ ಲೆಕ್ಕಿಸದೆ ಪ್ರಕೃತಿಯ ವಿಕೋಪ ಕಾಲದಲ್ಲಿಯೂ ಶತ್ರು ಪಡೆಗಳ ಅಪ್ರಚೋದಕ ಧಾಳಿಗಳನ್ನೆದುರಿಸಿ ಕಾಯುತ್ತಿರುವ ದೇಶಭಕ್ತ ಗಡಿರಕ್ಷಣಾ ಪಡೆಯ ಕಾವಲುಗಾರರನ್ನು ಮರೆಯಲು ಸಾಧ್ಯವೇ ಇಲ್ಲ. ಅವರ ಬಗ್ಗೆ ಅಭಿಮಾನ ಮೂಡುತ್ತದೆ.

– ಬಿ.ಆರ್‌. ನಾಗರತ್ನ

ಟಾಪ್ ನ್ಯೂಸ್

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

10

ಕುತ್ತಿಗೆಗೇ ಬಂತು… ಕುತ್ತಿಗೆ ಸ್ಪ್ರಿಂಗ್‌ ಇದ್ದಂತೆ…

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

World earth day: ಇರುವುದೊಂದೇ ಭೂಮಿ

World earth day: ಇರುವುದೊಂದೇ ಭೂಮಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.