ಕಾಮನ್‌ವೆಲ್ತ್‌ ಸಾಧನೆ ಕ್ರೀಡಾ ಕ್ಷಿತಿಜದಲ್ಲಿ ಹೊಸ ಬೆಳಕು

Team Udayavani, Apr 17, 2018, 9:36 AM IST

india1.jpg

ಆಸ್ಟ್ರೇಲಿಯಾದ ಗೋಲ್ಡ್‌ಕೋಸ್ಟ್‌ನಲ್ಲಿ ನಡೆದ ಕಾಮನ್‌ವೆಲ್ತ್‌ ಕ್ರೀಡಾ ಕೂಟದಲ್ಲಿ ಭಾರತ 66 ಪದಕಗಳಿಂದ ಸಿಂಗಾರಗೊಂಡಿದೆ. ಒಟ್ಟಾರೆಯಾಗಿ 71 ದೇಶಗಳ ಪೈಕಿ ಭಾರತ 3ನೇ ಸ್ಥಾನದಲ್ಲಿ ವಿರಾಜಮಾನವಾಗಿರುವುದು ಅದ್ಭುತ ಸಾಧನೆಯೇ. 26 ಚಿನ್ನ, 20 ಬೆಳ್ಳಿ ಮತ್ತು 20 ಕಂಚು ನಮ್ಮ ಕ್ರೀಡಾಪಟುಗಳ ಸಾಧನೆ. ಕಾಮನ್‌ವೆಲ್ತ್‌ ಇತಿಹಾಸದಲ್ಲೂ ಇದು ಭಾರತದ ಮೂರನೇ ಶ್ರೇಷ್ಠ ಸಾಧನೆ ಹಾಗೂ ವಿದೇಶಗಳಲ್ಲಿ ಇದುವೇ ಅತ್ಯುತ್ತಮ ಎನ್ನಲಡ್ಡಿಯಿಲ್ಲ. ಹಿಂದಿನ ಕಾಮನ್‌ವೆಲ್ತ್‌ನಲ್ಲಿ ಬರೀ 15 ಚಿನ್ನದ ಪದಕ ದೊಂದಿಗೆ ಕಳಪೆ ನಿರ್ವಹಣೆ ನೀಡಿದ್ದ ಭಾರತ ನಾಲ್ಕೇ ವರ್ಷದಲ್ಲಿ ಮೈಕೊಡವಿ ಎದ್ದುನಿಂತಿರುವುದು ಗಮನಾರ್ಹ. 

ಈ ಸಲ ಕಾಮನ್‌ವೆಲ್ತ್‌ ಗೇಮ್ಸ್‌ಗೆ ಹೋಗಿದ್ದ ತಂಡ ಹಿರಿಯರು ಮತ್ತು ಕಿರಿಯರನ್ನೊಳಗೊಂಡು ಸಂತುಲಿತವಾಗಿತ್ತು. ಅಂತೆಯೇ ಸಾಧನೆಯಲ್ಲೂ ಹಿರಿಯರು ಮತ್ತು ಕಿರಿಯರು ಸಾಕಷ್ಟು ಕೊಡುಗೆ ನೀಡಿದರು. ಹೊಸ ಪ್ರತಿಭೆಗಳು ಕ್ರೀಡಾ ಕ್ಷಿತಿಜದಲ್ಲಿ ಮೂಡಿಬಂದಿರುವುದು ಆಶಾದಾಯಕ ವಿಚಾರ. ಇನ್ನೂ ಶಾಲೆ ಕಲಿಯುತ್ತಿರುವ 15ರ ಹರೆಯದ ಶೂಟರ್‌ ಅನೀಶ್‌ ಭನ್ವಾಲ ಚಿನ್ನಕ್ಕೆ ಗುರಿಯಿಟ್ಟು ಭೇಷ್‌ ಎನಿಸಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ದೇಶದ ಅತ್ಯಂತ ಕಿರಿಯ ಕ್ರೀಡಾಪಟು ಇವರು. ಈ ಸಂದರ್ಭದಲ್ಲಿ 1998ರಲ್ಲಿ ಕ್ರೀಡಾಕೂಟವನ್ನು ನೆನಪಿಸಿಕೊಳ್ಳ ಬಹುದು. ಅಭಿನವ್‌ ಬಿಂದ್ರಾ ಅತಿ ಕಿರಿಯ ಕ್ರೀಡಾಪಟು ಎಂದು ಆಗ ಮಿಂಚಿದ್ದರು. ಬಿಂದ್ರಾರಿಗೂ ಆಗ 15ರ ಹರೆಯ. ಆದರೆ ಬಿಂದ್ರಾಗೆ ಪದಕ ಗೆಲ್ಲಲು ಸಾಧ್ಯವಾಗಿರಲಿಲ್ಲ. ಬಳಿಕ ಒಲಿಂಪಿಕ್ಸ್‌ನಲ್ಲಿ ಅವರು ಈ ಕೊರತೆ ಯನ್ನು ನೀಗಿಕೊಂಡರು. 

ಆದರೆ ಭನ್ವಾಲ ಮೊದಲ ಅಂತರಾಷ್ಟ್ರೀಯ ಕೂಟದಲ್ಲೇ ಚಿನ್ನ ಗೆಲ್ಲುವ ಮೂಲಕ ಶೂಟಿಂಗ್‌ ವಿಭಾಗದಲ್ಲಿ ತನಗೊಂದು ಸ್ಥಾನವನ್ನು ಸ್ಥಿರಪಡಿಸಿಕೊಂಡಿದ್ದಾರೆ. ಅಂತೆಯೇ ಮೂರು ಮಕ್ಕಳ ತಾಯಿ ಯಾಗಿರುವ ಮೇರಿ ಕೋಮ್‌ ಮತ್ತು 37ರ ಹರೆಯದ ತೇಜಸ್ವಿನಿ ಸಾವಂತ್‌ ಅವರ ಚಿನ್ನದ ಬೇಟೆಯೂ ಉಲ್ಲೇಖಾರ್ಹ.

ಶೂಟಿಂಗ್‌ ವಿಭಾಗದಲ್ಲಿ ಭಾರತೀಯರು ಪಾರಮ್ಯ ಸಾಧಿಸುತ್ತಿದ್ದಾರೆ. 7 ಚಿನ್ನದ ಪದಕಗಳನ್ನು ಶೂಟರ್‌ಗಳೇ ತಂದುಕೊಟ್ಟಿದ್ದಾರೆ. ದೇಶದ ಪಾರಂಪ ರಿಕ ಕ್ರೀಡೆಯಾಗಿರುವ ಕುಸ್ತಿಯಲ್ಲಿ 5 ಚಿನ್ನ ಸೇರಿ 12 ಪದಕಗಳು ಬಂದಿವೆ. ವೇಟ್‌ಲಿಫ್ಟಿಂಗ್‌, ಬಾಕ್ಸಿಂಗ್‌, ಬ್ಯಾಡ್ಮಿಂಟನ್‌ನಲ್ಲಿ ತೃಪ್ತಿಕರ ನಿರ್ವಹಣೆ ದಾಖಲಿ  ಸಿದ್ದೇವೆ. ಅದರಲ್ಲೂ ಬಾಕ್ಸಿಂಗ್‌ ವಿಭಾಗದಲ್ಲಿ ಕಡೇ ತನಕ ಗೊಂದಲದ ಸ್ಥಿತಿ ಇತ್ತು. ಇದನ್ನು ಮೆಟ್ಟಿ ನಿಂತು ಬಾಕ್ಸರ್‌ಗಳು 3 ಚಿನ್ನ ಸೇರಿ ಒಟ್ಟು 9 ಪದಕಗಳನ್ನು ಬಾಚಿದ್ದಾರೆ. ಆದರೆ ಅಥ್ಲೆಟಿಕ್ಸ್‌ ವಿಭಾಗದಲ್ಲಿ ಸಾಧಿಸಬೇಕಾದದ್ದು ಇನ್ನೂ ಇದೆ. ಈ ವಿಭಾಗದಲ್ಲಿ ಬಂದಿ ರು ವುದು ಬರೀ ಒಂದು ಚಿನ್ನ ಮಾತ್ರ. ಜಿಮ್ನಾಸ್ಟಿಕ್‌, ಸೈಕ್ಲಿಂಗ್‌, ಲಾನ್‌ಬೌಲ್‌ ಸೇರಿ ಕೆಲವು ವಿಭಾಗಗಳಲ್ಲಿ ಪದಕದ ಖಾತೆಯನ್ನೇ ತೆರೆಯಲು ಸಾಧ್ಯವಾಗಿಲ್ಲ. ಈ ವಿಭಾಗಗಳಿಗೆ ತುರ್ತಾಗಿ ಹೆಚ್ಚಿನ ಗಮನಹರಿಸುವ ಅಗತ್ಯವಿದೆ. ಅಂತೆಯೇ ಕ್ರೀಡಾ ಮಂಡಳಿಗಳು ಮತ್ತು ಕ್ರೀಡಾಪಟುಗಳ ನಡುವಿನ ಒಳಜಗಳ, ಭಿನ್ನಾಭಿಪ್ರಾಯದಂತಹ ಆಂತರಿಕ ಸಮಸ್ಯೆಗಳನ್ನು ತಕ್ಷಣವೇ ಬಗೆಹರಿಸಬೇಕು. ಒಳಜಗಳ ಅಲ್ಲದಿದ್ದರೆ ಬಾಕ್ಸಿಂಗ್‌ನಲ್ಲಿ ಇನ್ನೊಂದೆರಡು ಪದಕಗಳು ಹೆಚ್ಚುವರಿಯಾಗಿ ಸಿಗುವ ಸಾಧ್ಯತೆಗಳಿದ್ದವು. 

ಮೊದಲೆರಡು ಸ್ಥಾನಗಳಲ್ಲಿರುವ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ ಮತ್ತು ಭಾರತದ ಪದಕ ಗಳಿಕೆ ನಡುವೆ ಭಾರೀ ಅಂತರವಿದೆ ಎನ್ನುವುದು ನಿಜ. ಆದರೆ ಆ ದೇಶಗಳಲ್ಲಿರುವ ಕ್ರೀಡಾ ಸಂಸ್ಕೃತಿಗೂ ಭಾರತದ ಪರಿಸ್ಥಿತಿಗೂ ಅಜಗಜಾಂತರವಿದೆ. ಹಿಂದೆ ಭಾರತದಲ್ಲಿ ಕ್ರೀಡೆಗೆ ಮೂಲಸೌಕರ್ಯ ಒದಗಿಸಿಕೊಡುವುದೇ ಒಂದು ದೊಡ್ಡ ಸಾಹಸವಾಗಿತ್ತು. ಕ್ರಮೇಣ ಪರಿಸ್ಥಿತಿ ಬದಲಾಯಿಸುತ್ತಿದೆ. ಇದಕ್ಕೆ ತೇಜಸ್ವಿನಿ ಮಾತುಗಳೇ ಸಾಕ್ಷಿ. ಆಗ ಕ್ರೀಡಾಪಟುಗಳು ಮೈದಾನದಲ್ಲಿ ಸೆಣಸುವುದಕ್ಕಿಂತಲೂ ಮೊದಲು ವ್ಯವಸ್ಥೆಯ ಜತೆಗೆ ಸೆಣಸಬೇಕಿತ್ತು. ಪ್ರತಿಯೊಂದನ್ನೂ ಹೋರಾಡಿ ಪಡೆಯುವ ಸ್ಥಿತಿಯಿತ್ತು. ಆದರೆ ಈಗ ಕ್ರೀಡೆಗೆ ಸಾಕಷ್ಟು ಮೂಲಸೌಲಭ್ಯ ಮತ್ತು ಪ್ರೋತ್ಸಾಹ ಸಿಗುತ್ತಿದೆ ಎನ್ನುತ್ತಾರೆ ತೇಜಸ್ವಿನಿ.

ಕಾಮನ್‌ವೆಲ್ತ್‌, ಏಷ್ಯನ್‌ ಗೇಮ್ಸ್‌, ಒಲಿಂಪಿಕ್ಸ್‌ನಂತಹ ಪ್ರತಿಷ್ಠಿತ ಕೂಟಗಳಲ್ಲಿ ಲೆಕ್ಕ ಭರ್ತಿಗೆ ಭಾಗವಹಿಸುತ್ತಿದ್ದ ನಾವೀಗ ಪದಕ ಗೆಲ್ಲುವ ಛಲವನ್ನು ರೂಢಿಸಿಕೊಂಡಿದ್ದೇವೆ. ಹಿಂದೆ ಅರ್ಹತಾ ಸುತ್ತಿಗೇರಲು ಕಷ್ಟಪಡುತ್ತಿದ್ದ ಕ್ರೀಡೆಗಳಲ್ಲಿ ಈಗ ಪ್ರಬಲ ಸ್ಪರ್ಧೆಯೊಡ್ಡುವ ಮಟ್ಟಕ್ಕೇರಿದ್ದೇವೆ. ಕ್ರೀಡೆಗೊಂದು ಹೊಸ ದಿಶೆ ತೋರಿಸುವಲ್ಲಿ ಸಫ‌ಲರಾಗಿದ್ದೇವೆ. 

ಇನ್ನು ಈ ಸ್ಫೂರ್ತಿಯನ್ನು ಮುಂದುವರಿಸಿಕೊಂಡು ಹೋಗುವ ಅಗತ್ಯವಿದೆ. ಏನೇ ಆದರೂ ಒಲಿಂಪಿಕ್ಸ್‌ನ ನೀರಸ ನಿರ್ವಹಣೆಯ ಕಹಿಯನ್ನು ಗೋಲ್ಡ್‌ಕೋಸ್ಟ್‌ನ ಚಿನ್ನದ ಮಳೆ ಮರೆಸಿದೆ. ಕ್ರೀಡಾಕ್ಷೇತ್ರದಲ್ಲೊಂದು ಹೊಸ ಭರವಸೆಯ ಬೆಳಕು ಮೂಡಿದೆ.

ಟಾಪ್ ನ್ಯೂಸ್

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eweweqwe

Voting:ಹಿರಿಯ ನಾಗರಿಕರೇ ಮಾದರಿ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ನಾರಿಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.