ಮೈಕ್ ವಿದೇಶಾಂಗ ಸಚಿವ
Team Udayavani, Apr 25, 2018, 9:25 AM IST
ವಾಷಿಂಗ್ಟನ್ : ಅಮೆರಿಕದ ವಿದೇಶಾಂಗ ಸಚಿವ ಸ್ಥಾನಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಂದ ನಾಮಾಂಕಿತಗೊಂಡಿದ್ದ ಮೈಕ್ ಪೊಂಪೆಯೊ ಅವರ ನೇಮಕಾತಿಗೆ ಬೇಕಾಗಿದ್ದ ಅಲ್ಲಿನ ಸಂಸದೀಯ ಸಮಿತಿಯೊಂದರ ಬಹುಮತ ಸಿಕ್ಕಿದ್ದು, ಅಮೆರಿಕದ ನೂತನ ಸಚಿವರಾಗಿ ಆಯ್ಕೆಯಾಗುವುದು ಬಹುತೇಕ ನಿಶ್ಚಿತವಾಗಿದೆ. ಮಂಗಳವಾರ ನಡೆದ ಸಮಿತಿಯ ಸದಸ್ಯರ ಮತದಾನ ಪ್ರಕ್ರಿಯೆಯಲ್ಲಿ ಮೈಕ್ ಅವರು 11-9 ಅಂತರದ ಮತಗಳಿಂದ ಜಯ ಗಳಿಸಿದ್ದಾರೆ.