ವಿದ್ಯುನ್ಮಾ ನ ಮತಯಂತ್ರಗಳಿಗೆ ಮತಪತ್ರಗಳ ಜೋಡಣೆ ಕಾರ್ಯ
Team Udayavani, May 7, 2018, 12:34 PM IST
ಬಂಟ್ವಾಳ: ವಿಧಾನಸಭಾ ಚುನಾವಣೆ ಬಂಟ್ವಾಳ ಕ್ಷೇತ್ರ 205ರ ಮತಗಟ್ಟೆಗಳಿಗೆ ಕಳುಹಿಸುವ ವಿದ್ಯುನ್ಮಾನ ಮತಯಂತ್ರಗಳಿಗೆ ಮತಪತ್ರಗಳನ್ನು ಜೋಡಿಸುವ ಕಾರ್ಯ ಮೇ 5ರಂದು ಮೊಡಂಕಾಪು ಇನ್ಫೆಂಟ್ ಜೀಸಸ್ ಶಾಲೆಯಲ್ಲಿ ನಡೆ ಯಿತು.
ಆಯಾ ಕ್ಷೇತ್ರಗಳ ಅಭ್ಯರ್ಥಿ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಚುನಾವಣಾಧಿಕಾರಿ ರವಿ ಬಸರಿಹಳ್ಳಿ, ಜಿಲ್ಲಾಧಿಕಾರಿ ಶಶಿಕಾಂತ್ ಸೆಂತಿಲ್ ಜೋಡಣೆ ಕಾರ್ಯಗಳ ವಿಧಿ ವಿಧಾನ ಮಾಹಿತಿ ನೀಡಿದರು.