ಪೊರಕೆಗೆ, ತಕ್ಕ ಶಾಸ್ತಿಯಾಯ್ತು!

Team Udayavani, May 10, 2018, 6:00 AM IST

6.jpg

ಒಂದೂರಿನಲ್ಲಿ ಅಗರ್ಭ ಶ್ರೀಮಂತನಿದ್ದನು. ಆತನ ಹೆಸರು ದಯಾನಿಧಿ. ಹೆಸರಿಗೆ ತಕ್ಕ ಹಾಗೆ ಆತನು ತುಂಬಾ ದಯಾಳುವಾಗಿದ್ದನು. ಬಡವರಿಗೆ, ಅಸಹಾಯಕರಿಗೆ ಹಾಗೂ ನೊಂದವರಿಗೆ ತೆರೆದ ಮನಸ್ಸಿನಿಂದ ಸಹಾಯ ಮಾಡುತ್ತಿದ್ದನು. ಆತನ ಮನೆಯಲ್ಲಿ ನೂರಾರು ಜನ ಸೇವಕರಿದ್ದರು. ಅವರನ್ನು ತನ್ನ ಮಕ್ಕಳಂತೆ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದನು. ಆದರೆ ಕೆಲಸದಲ್ಲಿ ಏನಾದ್ರೂ ಒಂಚೂರು ಅವ್ಯವಸ್ಥೆ ಕಂಡು ಬಂದ್ರೂ ಆತನಿಗೆ ಎಲ್ಲಿಲ್ಲದ ಕೋಪ ಬರುತ್ತಿತ್ತು.

ದಯಾನಿಧಿ ಮನೆಯಲ್ಲಿ ರಂಗಜ್ಜನೆಂಬ ಸೇವಕನಿದ್ದನು. ಆತ ದಿನಕ್ಕೆ ಎರಡು ಹೊತ್ತು ಮನೆಯನ್ನೆಲ್ಲ ಪೊರಕೆಯಿಂದ ಗುಡಿಸಿ ಕನ್ನಡಿಯಂತೆ ಫ‌ಳಫ‌ಳಾಂತ ಹೊಳೆಯುವಂತೆ ಮಾಡುತ್ತಿದ್ದನು. ಅವನನ್ನು ಕಂಡರೆ ದಯಾನಿಧಿಗೆ ವಿಶೇಷ ಪ್ರೀತಿ ಇತ್ತು. ಇದನ್ನು ಕಂಡು ಪೊರಕೆಗೆ ಸಹಿಸಲಾಗುತ್ತಿರಲಿಲ್ಲ. ಮನೆಯನ್ನು ತಾನೇ ಗುಡಿಸಿದರೂ ಹೊಗಳಿಕೆಯೆಲ್ಲಾ ರಂಗಜ್ಜನಿಗೆ ಸಿಗುತ್ತಿದೆಯೆಂದು ಹಲ್ಲು ಕಡಿಯುತ್ತಿತ್ತು.

ಒಂದು ದಿನ ರಂಗಜ್ಜ ಬರುವುದಕ್ಕೆ ಮುನ್ನ ತಾನೇ ಮನೆಯಿಡೀ ಓಡಾಡಿ ಕಸವನ್ನು ಗುಡಿಸಿ ಹಾಕಿತು. ಅದನ್ನು ಕಂಡು ಯಜಮಾನನಿಗೆ ಎಲ್ಲಿಲ್ಲದ ಸಂತೋಷವಾಯಿತು. ಅವನು ಪರಕೆಯನ್ನು ಮನಸಾರೆ ಹೊಗಳಿದ. ಅಷ್ಟೇ ಅಲ್ಲ ರಂಗಜ್ಜನಿಗೆ ಬೇರೊಂದು ಕೆಲಸ ನೀಡಿದ. ತನ್ನಾಸೆ ಫ‌ಲಿಸಿತೆಂದು ಪೊರಕೆ ಮನಸ್ಸಿನಲ್ಲಿಯೇ ನಕ್ಕಿತು. ತಿಂಗಳುಗಳು ಉರುಳಿದವು. ಈಗ ಮೊದಲಿನಂತೆ ಯಜಮಾನ ಪೊರಕೆಯನ್ನು ಹೊಗಳುತ್ತಿರಲಿಲ್ಲ. ಇದರಿಂದಾಗಿ ಪೊರಕೆಗೆ ಮತ್ತೆ ಯಜಮಾನನ ಮೇಲೆ ಸಿಟ್ಟು ಬಂದಿತು. ಆತನಿಗೆ ಬುದ್ಧಿ ಕಲಿಸಬೇಕೆಂದು ಅದು ಸಮಯ ಕಾಯುತ್ತಿತ್ತು.

ಹೀಗಿರುವಾಗ ದಯಾನಿಧಿಯ ಮಗನ ಮೊದಲನೇ ಹುಟ್ಟುಹಬ್ಬ ಬಂದಿತು. ಮನೆಗೆ ನೆಂಟರು, ಅತಿಥಿಗಳು ಬಂದಿದ್ದರು. ಸಡಗರ ತುಂಬಿ ತುಳುಕಿತು. ಇದೇ ಸರಿಯಾದ ಸಮಯ ಎಂದು ಪೊರಕೆಯು ಹುಟ್ಟುಹಬ್ಬದ ದಿನ ಬೆಳಿಗ್ಗೆ ಕಸ ಗುಡಿಸಲೇ ಇಲ್ಲ. ಏನಾದರಾಗಲಿ ಎಂದು ಜ್ವರದ ನಾಟಕವಾಡಿ ಬೆಚ್ಚಗೆ ಮೂಲೆಯಲ್ಲಿ ಮಲಗಿಬಿಟ್ಟಿತು. ಇತ್ತ ಊರಿನ ಗಣ್ಯ ವ್ಯಕ್ತಿಗಳೆಲ್ಲಾ ಬರುತ್ತಿದ್ದಾರೆ ಆದರೆ ಮನೆಯ ಸುತ್ತಲೂ ಕಸ ಕಡ್ಡಿ ರಾಶಿ ಬಿದ್ದಿದೆ. ಹಾಗೆ ಇರೋದು ನೋಡಿ ದಯಾನಿಧಿಗೆ ಬೇಸರವಾಯಿತು. ಅನಾರೋಗ್ಯ ಪೀಡಿತನೆಂದು ನಾಟಕವಾಡಿದ ಪೊರಕೆಯ ಮೇಲೆ ಕನಿಕರವೂ ಮೂಡಿತು. ಹಾಗಾಗಿ ಮನೆಯ ಕಸ ಗುಡಿಸಲು ವ್ಯಾಕ್ಯೂಮ್‌ ಕ್ಲೀನರ್‌ಅನ್ನು ತರಿಸಿಕೊಂಡನು. ಕ್ಷಣಮಾತ್ರದಲ್ಲಿ ಅದು ಮನೆಯನ್ನು ಸ್ವಚ್ಚಗೊಳಿಸಿಬಿಟ್ಟಿತು. ಆವತ್ತಿನಿಂದ ಪೊರಕೆಯನ್ನು ಕೇಳುವವರೇ ಇಲ್ಲವಾದರು. ಅದರ ಕುತಂತ್ರ ಅದನ್ನೇ ಬಲಿ ತೆಗೆದುಕೊಂಡಿತ್ತು. 

ಚಂದ್ರಕಾಂತ  ಮ. ತಾಳಿಕೋಟಿ, ಬಾಗಲಕೋಟೆ

ಟಾಪ್ ನ್ಯೂಸ್

ಕಾರಡ್ಕ ಅಗ್ರಿಕಲ್ಚರಿಸ್ಟ್‌ ಸೊಸೈಟಿ ವಂಚನೆ ಪ್ರಕರಣ: ಬಂಧಿತರಿಗೆ ರಿಮಾಂಡ್‌

ಕಾರಡ್ಕ ಅಗ್ರಿಕಲ್ಚರಿಸ್ಟ್‌ ಸೊಸೈಟಿ ವಂಚನೆ ಪ್ರಕರಣ: ಬಂಧಿತರಿಗೆ ರಿಮಾಂಡ್‌

Road Mishap ಪರಸ್ಪರ ಢಿಕ್ಕಿ; ವಾಹನಗಳು ಜಖಂ

Road Mishap ಪರಸ್ಪರ ಢಿಕ್ಕಿ; ವಾಹನಗಳು ಜಖಂ

Siddaramaiah ಬರ ಪರಿಹಾರದ ಮೊತ್ತ ಸಾಲಕ್ಕೆ ಹೊಂದಾಣಿಕೆ ಬೇಡ

Siddaramaiah ಬರ ಪರಿಹಾರದ ಮೊತ್ತ ಸಾಲಕ್ಕೆ ಹೊಂದಾಣಿಕೆ ಬೇಡ

Farmers ಹಣ ಸಾಲಕ್ಕೆ ಜಮೆ ಮಾಡಿಕೊಳ್ಳದಂತೆ ಸೂಚಿಸಿ: ವಿಪಕ್ಷ ನಾಯಕ ಆರ್‌. ಅಶೋಕ್‌

Farmers ಹಣ ಸಾಲಕ್ಕೆ ಜಮೆ ಮಾಡಿಕೊಳ್ಳದಂತೆ ಸೂಚಿಸಿ: ವಿಪಕ್ಷ ನಾಯಕ ಆರ್‌. ಅಶೋಕ್‌

SSLC EXAM-2, ಪರಿಹಾರ ಬೋಧನ ತರಗತಿಗಳು ಮುಂದೂಡಿಕೆ

SSLC EXAM-2, ಪರಿಹಾರ ಬೋಧನ ತರಗತಿಗಳು ಮುಂದೂಡಿಕೆ

accident

Koppal; ಟ್ರ್ಯಾಕ್ಟರ್ ಗೆ ಖಾಸಗಿ ಬಸ್ ಢಿಕ್ಕಿ: ಸ್ಥಳದಲ್ಲೇ ನಾಲ್ವರ ಸಾವು

ಅಂಜಲಿ ಕೊಲೆಯಲ್ಲಿ ಪೊಲೀಸರ ಲೋಪ: ಡಾ| ಜಿ. ಪರಮೇಶ್ವರ್‌

ಅಂಜಲಿ ಕೊಲೆಯಲ್ಲಿ ಪೊಲೀಸರ ಲೋಪ: ಡಾ| ಜಿ. ಪರಮೇಶ್ವರ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

ಕಾರಡ್ಕ ಅಗ್ರಿಕಲ್ಚರಿಸ್ಟ್‌ ಸೊಸೈಟಿ ವಂಚನೆ ಪ್ರಕರಣ: ಬಂಧಿತರಿಗೆ ರಿಮಾಂಡ್‌

ಕಾರಡ್ಕ ಅಗ್ರಿಕಲ್ಚರಿಸ್ಟ್‌ ಸೊಸೈಟಿ ವಂಚನೆ ಪ್ರಕರಣ: ಬಂಧಿತರಿಗೆ ರಿಮಾಂಡ್‌

Sullia ಬೇಂಗಮಲೆ: ಚರಂಡಿಗೆ ಬಿದ್ದ ಕಾರು

Sullia ಬೇಂಗಮಲೆ: ಚರಂಡಿಗೆ ಬಿದ್ದ ಕಾರು

Road Mishap ಪರಸ್ಪರ ಢಿಕ್ಕಿ; ವಾಹನಗಳು ಜಖಂ

Road Mishap ಪರಸ್ಪರ ಢಿಕ್ಕಿ; ವಾಹನಗಳು ಜಖಂ

Siddaramaiah ಬರ ಪರಿಹಾರದ ಮೊತ್ತ ಸಾಲಕ್ಕೆ ಹೊಂದಾಣಿಕೆ ಬೇಡ

Siddaramaiah ಬರ ಪರಿಹಾರದ ಮೊತ್ತ ಸಾಲಕ್ಕೆ ಹೊಂದಾಣಿಕೆ ಬೇಡ

Farmers ಹಣ ಸಾಲಕ್ಕೆ ಜಮೆ ಮಾಡಿಕೊಳ್ಳದಂತೆ ಸೂಚಿಸಿ: ವಿಪಕ್ಷ ನಾಯಕ ಆರ್‌. ಅಶೋಕ್‌

Farmers ಹಣ ಸಾಲಕ್ಕೆ ಜಮೆ ಮಾಡಿಕೊಳ್ಳದಂತೆ ಸೂಚಿಸಿ: ವಿಪಕ್ಷ ನಾಯಕ ಆರ್‌. ಅಶೋಕ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.