ಕ್ರಿಕೆಟಿಗ ಜಡೇಜ ಪತ್ನಿ ಮೇಲೆ ಪೊಲೀಸ್ ಹಲ್ಲೆ?
Team Udayavani, May 22, 2018, 7:30 AM IST
ನವದೆಹಲಿ: ಖ್ಯಾತ ಕ್ರಿಕೆಟಿಗ ರವೀಂದ್ರ ಜಡೇಜ ಅವರ ಪತ್ನಿ ರಿವಾ ಸೋಲಂಕಿ ಮೇಲೆ ಜಾಮ್ನಗರದಲ್ಲಿ ಪೊಲೀಸ್ ಪೇದೆಯೊಬ್ಬ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಆಂಗ್ಲ ಮಾಧ್ಯಮಗಳು ಈ ಕುರಿತಂತೆ ವರದಿ ಮಾಡಿವೆ.
ಮೂಲಗಳ ಪ್ರಕಾರ ರಿವಾ ತಮ್ಮ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಪೊಲೀಸ್ ಬೈಕ್ಗೆ ಗುದ್ದಿದ್ದಾರೆ. ಇಷ್ಟಕ್ಕೆ ಸಿಟ್ಟಾದ ಪೊಲೀಸ್ ನೇರವಾಗಿ ಬಂದವನೆ ರೀವಾ ಮೇಲೆ ಹಲ್ಲೆ ನಡೆಸಿದ್ದಾನೆ. ಘಟನೆ ಕುರಿತಂತೆ ರೀವಾ ಹತ್ತಿರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತಕ್ಷಣ ಪೊಲೀಸರು ಪೇದೆ ಸಂಜಯ್ನನ್ನು ಬಂಧಿಸಿದ್ದಾರೆ. ಸದ್ಯ ಜಡೇಜ ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.