2000 ಕೋಟಿ ರೂ ಬಿಟ್ ಕಾಯಿನ್ ಹಗರಣ:EDಯಿಂದ ರಾಜ್ ಕುಂದ್ರಾ ವಿಚಾರಣೆ
Team Udayavani, Jun 5, 2018, 3:09 PM IST
ಮುಂಬಯಿ: 2,000 ಕೋಟಿ ರೂಪಾಯಿಯ ಬಿಟ್ ಕಾಯಿನ್ ಹಗರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ಮಂಗಳವಾರ ಉದ್ಯಮಿ ರಾಜ್ ಕುಂದ್ರಾಗೆ ಸಮನ್ಸ್ ಜಾರಿ ಮಾಡಿ ವಿಚಾರಣೆ ನಡೆಸಿದೆ.
ಬಿಟ್ ಕಾಯಿನ್ ಹಗರಣದ ಪ್ರಮುಖ ಆರೋಪಿಗಳಲ್ಲೊಬ್ಬನಾದ ಅಮಿತ್ ಭಾರದ್ವಾಜ್ ವಿಚಾರಣೆ ವೇಳೆ ರಾಜ್ ಕುಂದ್ರಾ ಹೆಸರು ಹೇಳಿದ್ದ.
ಐಟಿ ಕೂಡ ಹಗರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿದ್ದು , ಕೆಲ ದಿನಗಳ ಹಿಂದೆ ದಿನಂಪ್ರತಿ 1 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಬಿಟ್ ಕಾಯಿನ್ ಬಳಕೆ ದಾರರಿಗೆ ನೊಟೀಸ್ ಜಾರಿ ಮಾಡಿತ್ತು.
ರಾಜ್ ಕುಂದ್ರಾ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಅವರ ಪತಿ.ಹಗರಣಕ್ಕೆ ಸಂಬಂಧಿಸಿ ಹಲವು ಬಾಲಿವುಡ್ ಮಂದಿಯನ್ನು ವಿಚಾರಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.