ಸಂಶಯ ಫ‌ಲ ಮತ್ತು ಸುಂದರಾಂಗ ಜಾಣೆ


Team Udayavani, Jun 16, 2018, 5:34 PM IST

megha.jpg

ಇವರ್ ವೈಫ್ ಈಸ್‌ ವೆರಿ ಸೆಕ್ಸಿ … ಹಾಗಂತ ಒಂದು ಎಸ್‌.ಎಂ.ಎಸ್‌ ಅವನ ಫೋನ್‌ಗೆ ಬರುತ್ತದೆ. ಅದನ್ನು ನೋಡುತ್ತಿದ್ದಂತೆಯೇ ಒಮ್ಮೆ ಶೇಕ್‌ ಆಗುತ್ತಾನೆ ಅವನು. ಕ್ರಮೇಣ ಅಂತಹ ಮೆಸೇಜ್‌ಗಳು ಜಾಸ್ತಿ ಆಗುತ್ತದೆ. ಮೆಸೇಜ್‌ ಕಳಿಸುತ್ತಿರುವವರು ತನ್ನ ಹೆಂಡತಿಗೆ ಪರಿಚಯವಿರಬಹುದಾ, ಅವಳ ಹಳೆಯ ಬಾಯ್‌ಫ್ರೆಂಡ್‌ ಇರಬಹುದಾ, ತನ್ನ ಹೆಂಡತಿಗೆ ಬೇರೊಬ್ಬನ ಜೊತೆಗೆ ಅಫೇರ್‌ ಇರಬಹುದಾ … ಇಂಥಾ ನೂರೆಂಟು ಸಂಶಯಗಳು ಅವನನ್ನು ಎಡಬಿಡದೆ ಕಾಡುತ್ತದೆ.

ಆದರೆ, ಹೆಂಡತಿಗೆ ಇವನ್ನೆಲ್ಲಾ ಹೇಳಿಕೊಳ್ಳುವುದಕ್ಕಾಗುವುದಿಲ್ಲ. ಹಾಗಂತ ಇದನ್ನು ಬಿಟ್ಟಾಕುವ ಹಾಗೂ ಇಲ್ಲ. ಕೊನೆಗೆ ಅವನ ಸ್ನೇಹಿತ ಒಂದು ಉಪಾಯ ಹೇಳಿಕೊಡುತ್ತಾನೆ. ಇದೆಲ್ಲಾ ಆಗುವುದಕ್ಕಿಂತ ಮುನ್ನ, ಅವನಿಗೊಂದು ಪತ್ರ ಬಂದಿರುತ್ತದೆ. ಅದರಲ್ಲಿ ಯಾರೋ ಹನಿಮೂನ್‌ ಪ್ಯಾಕೇಜ್‌ ಗಿಫ್ಟ್ ಮಾಡಿರುತ್ತಾರೆ. ಬಹುಶಃ ಹನಿಮೂನ್‌ಗೆ ಕಳಿಸುತ್ತಿರುವವರೇ ಇವೆಲ್ಲಾ ಮಾಡುತ್ತಿರಬಹುದು ಎಂಬ ಗುಮಾನಿಯ ಮೇಲೆ ಹನಿಮೂನ್‌ಗೆ ಹೋಗುವುದಕ್ಕೆ ಹೇಳುತ್ತಾನೆ.

ಅಲ್ಲಿ ಅವನನ್ನು ಕಾಡುತ್ತಿರುವವರು ಸಿಕ್ಕರೂ ಸಿಗಬಹುದು ಎಂದು ಹನಿಮೂನ್‌ಗೆ ಕಳಿಸುತ್ತಾನೆ. ಹೀಗೆ ಆ ನವದಂಪತಿ ಬೈನೇಕಾಡು ಎಂಬ ರೆಸಾರ್ಟ್‌ಗೆ ಹನಿಮೂನ್‌ಗೆಂದು ಹೋಗುತ್ತಾರೆ … ಇದನ್ನು ಓದುವಾಗ ಕುತೂಹಲ ಜಾಸ್ತಿ ಆಗಬಹುದು. ಯಾರು ಈ ರೀತಿ ಮಾಡುತ್ತಿರಬಹುದು ಎಂದು ಆಶ್ಚರ್ಯವಾಗಬಹುದು. ಗಂಡನ ತರಹವೇ ಪ್ರೇಕ್ಷಕರಿಗೂ, ಇದು ಆಕೆಯ ಹಳೆಯ ಬಾಯ್‌ಫ್ರೆಂಡ್‌ ಇರಬಹುದಾ, ಬೇರೊಬ್ಬನ ಜೊತೆಗೆ ಅಫೇರ್‌ ಇರಬಹುದಾ … ಇಂಥಾ ನೂರೆಂಟು ಸಂಶಯಗಳು ಕಾಡಬಹುದು.

“ಮೇಘ ಅಲಿಯಾಸ್‌ ಮ್ಯಾಗಿ’ ಚಿತ್ರದ ಹೈಲೈಟ್‌ ಇದು ಎಂದರೆ ತಪ್ಪಿಲ್ಲ. ಚಿತ್ರದ ಹೆಸರಿಗೂ, ಮೊದಲಾರ್ಧದಲ್ಲಿ ನಡೆಯುವ ಕಥೆಗೂ ಸಂಬಂಧವೇ ಇಲ್ಲ. ಮೊದಲಾರ್ಧವೆಲ್ಲಾ ಇಂಥದ್ದೊಂದು ಸಸ್ಪೆನ್ಸ್‌ನೊಂದಿಗೆ ನೋಡಿಸಿಕೊಂಡು ಹೋಗುವ ಚಿತ್ರ, ಕ್ರಮೇಣ ಹಿಡಿತ ಕಳೆದುಕೊಳ್ಳುತ್ತದೆ. ಹಾಗೆ ನೋಡಿದರೆ, ವಿಶಾಲ್‌ ಪುಟ್ಟಣ್ಣ ತನ್ನ ಮೊದಲ ಚಿತ್ರವನ್ನು ವಿಪರೀತ ಎಳೆದಾಡಿಲ್ಲ ಅಥವಾ ಬೇಡದ್ದನ್ನು ತುರುಕುವುದಕ್ಕೆ ಹೋಗಿಲ್ಲ. ಚಿತ್ರಕ್ಕೆ ಎಷ್ಟು ಬೇಕೋ, ಏನು ಬೇಕೋ ಅದನ್ನೇ ಹೇಳುತ್ತಾ ಹೋಗಿದ್ದಾರೆ.

ಆದರೆ, ಇವನ್ನೆಲ್ಲಾ ಯಾರು ಮಾಡುತ್ತಿರಬಹುದು ಎಂಬ ರಹಸ್ಯ ಬಯಲಾದಾಗ, ಚಿತ್ರ ಕ್ರಮೇಣ ನಿಧಾನವಾಗುತ್ತದೆ. ಈ ಸಂದರ್ಭದಲ್ಲಿ ಒಂದಿಷ್ಟು ಥ್ರಿಲ್‌ನ ಅವಶ್ಯಕತೆ ಇತ್ತು. ಆದರೆ, ಮೇಲಿಂದ ಮೇಲೆ ಒಂದೇ ವಿಷಯ ರಿಪೀಟ್‌ ಆಗಿ ಚಿತ್ರ ಬಹಳ ನೀರಸವಾಗಿ ಮುಕ್ತಾಯವಾಗಿ ಹೋಗುತ್ತದೆ. ಬಹುಶಃ ಈ ಹಂತದಲ್ಲಿ ನಿರ್ದೇಶಕರು ಇನ್ನಷ್ಟು ಚುರುಕಾಗಿ ಚಿತ್ರವನ್ನು ನಿರೂಪಿಸಿದ್ದರೆ ಚಿತ್ರ ಕೆಲವರಿಗಾದರೂ ಇಷ್ಟವಾಗುತಿತ್ತೋ ಏನೋ? ಒಟ್ಟಾರೆ ಈ ಚಿತ್ರದ ಮೂಲಕ ಹುಡುಗರಿಗೂ ಇಷ್ಟ-ಕಷ್ಟಗಳಿರುತ್ತವೆ,

ಅವರಿಗೂ ತಮ್ಮ ಕನಸಿನ ಹುಡುಗಿ ಹೀಗ್ಹೀಗೆ ಇರಬೇಕೆಂಬ ಕಲ್ಪನೆಗಳು ಇರುತ್ತವೆ ಮತ್ತು ಅದಕ್ಕೆ ಹುಡುಗಿಯರು ಸ್ಪಂದಿಸದಿದ್ದರೆ ಏನೆಲ್ಲಾ ಆಗುತ್ತದೆ ಎಂಬುದನ್ನು ಸೂಕ್ಷ್ಮವಾಗಿ ಹೇಳುವ ಪ್ರಯತ್ನವನ್ನು ಅವರು ಮಾಡಿದ್ದಾರೆ. ಇದನ್ನು ಇನ್ನಷ್ಟು ಚೆನ್ನಾಗಿ ಕಟ್ಟಿಕೊಡುವ ಪ್ರಯತ್ನವನ್ನು ಮಾಡಿದ್ದರೆ, ವಿಶಾಲ್‌ ಮೊದಲ ಪ್ರಯತ್ನದಲ್ಲೇ ಸೈ ಎನಿಸಿಕೊಳ್ಳುತ್ತಿದ್ದರು. ಇಡೀ ಚಿತ್ರದ ಹೈಲೈಟ್‌ ಎಂದರೆ ಅದು ಸುಕೃತಾ ಮಾಡಿರುವ ಮ್ಯಾಗಿ ಪಾತ್ರ. ಸುಕೃತ ತಮ್ಮ ಶಕ್ತಿಮೀರಿ ಆ ಪಾತ್ರವನ್ನು ಚೆನ್ನಾಗಿ ಮಾಡುವ ಪ್ರಯತ್ನ ಪಾಡಿದ್ದಾರೆ.

ಆದರೆ, ಅದನ್ನು ಇನ್ನಷ್ಟು ಸಮರ್ಥವಾಗಿ ಕಟ್ಟಿಕೊಡುವ ಅವಶ್ಯಕತೆ ಇತ್ತು. ಏಕೆಂದರೆ, ಸುಕೃತ ಅಭಿನಯ ಬಹಳಷ್ಟು ಕಡೆ ಕೃತಕವಷ್ಟೇ ಅಲ್ಲ, ಪ್ರಯತ್ನಪೂರ್ವಕವಾಗಿ ಮಾಡುತ್ತಿದ್ದಾರೆ ಎಂದನಿಸುತ್ತದೆ. ಈ ನಿಟ್ಟಿನಲ್ಲಿ ಇನ್ನಷ್ಟು ಜಾಗ್ರತೆ ವಹಿಸಬೇಕಿತ್ತು. ಇನ್ನು ತೇಜ್‌ ಗೌಡ ಮತ್ತು ನೀತು ಬಾಲ ತಮ್ಮ ಪಾತ್ರಗಳನ್ನು ಚೆನ್ನಾಗಿ ನಿರ್ವಹಿಸಿದ್ದಾರೆ. ಅತೀಶಯ ಜೈನ್‌ ಅವರ ಸಂಗೀತದಲ್ಲಿ ಎರಡು ಹಾಡುಗಳು ಗುನುಗುವಂತಿವೆ. ಪೈಕಟ್ಟು ಮತ್ತು ಜಯಪ್ರಕಾಶ್‌ ಅವರ ಛಾಯಾಗ್ರಹಣದಲ್ಲಿ ಕತ್ತಲು-ಬೆಳಕಿನಾಟ ಚೆನ್ನಾಗಿದೆ.

ಚಿತ್ರ: ಮೇಘ ಅಲಿಯಾಸ್‌ ಮ್ಯಾಗಿ
ನಿರ್ಮಾಣ: ವಿನಯ್‌ ಕುಮಾರ್‌
ನಿರ್ದೇಶನ: ವಿಶಾಲ್‌ ಪುಟ್ಟಣ್ಣ
ತಾರಾಗಣ: ಸುಕೃತ ವಾಗ್ಲೆ, ತೇಜ್‌ ಗೌಡ, ನೀತು ಬಾಲ ಮುಂತಾದವರು

* ಚೇತನ್‌ ನಾಡಿಗೇರ್‌

ಟಾಪ್ ನ್ಯೂಸ್

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

1-wqe-qweq

Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

6-Fibromyalgia

Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nalkane Ayama Movie Review

Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.