ವಿಮಾನ ನಿಲ್ದಾಣಕ್ಕೆ 8 ಪಥ ರಸ್ತೆ ಯೋಜನೆ: ಫಾರೂಕ್‌


Team Udayavani, Jul 1, 2018, 11:38 AM IST

1-july-7.jpg

ಕೃಷ್ಣಾಪುರ : ಮಂಗಳೂರು ವಿಮಾನ ನಿಲ್ದಾಣ ರಸ್ತೆಯನ್ನು ಎಂಟು ಪಥವನ್ನಾಗಿ ಮಾರ್ಪಡಿಸುವ ಯೋಜನೆ ಹೊಂದಿದ್ದು, ಮನಪಾ ಹಾಗೂ ಜಿಲ್ಲಾಡಳಿತ ಪೂರಕ ಕ್ರಮಗಳನ್ನು ಕೈಗೊಂಡು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಬಿ.ಎಂ. ಫಾರೂಕ್‌ ಹೇಳಿದರು. ಕೃಷ್ಣಾಪುರ ಆಲ್‌ ಬದ್ರಿಯಾ ಕಾಂಪೊಸಿಟ್‌ ಪಿಯು ಕಾಲೇಜ್‌ ಹಾಗೂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ ಆಯೋಜಿಸಲಾದ ಸಮ್ಮಾನ ಕಾರ್ಯಕ್ರಮದಲ್ಲಿ ಹುಟ್ಟೂರ ಗೌರವ ಸ್ವೀಕರಿಸಿ ಮಾತನಾಡಿದರು. 

ಎಂಟು ಪಥ ರಸ್ತೆ ಕುರಿತಂತೆ ಸರಕಾರದ ಜತೆ ಮಾತುಕತೆ ನಡೆಸಿ ಅನುದಾನ ಬಿಡುಗಡೆಗೊಳಿಸಲು ಪ್ರಯತ್ನ ನಡೆಸಲಾಗುವುದು. ಈಗಿರುವ ರಸ್ತೆ ಅಗಲ ಕಿರಿದಾಗಿದ್ದು, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಕ್ಕಂತೆ ರಸ್ತೆ ಇರಬೇಕಾಗಿದೆ ಎಂದರು. ಮೇಯರ್‌ ಭಾಸ್ಕರ ಕೆ. ಅವರನ್ನು ಸಮ್ಮಾನಿಸಲಾಯಿತು. ಈ ವೇಳೆ ಮಾತನಾಡಿದ ಅವರು, ಆಲ್‌ ಬದ್ರಿಯಾ ಶಾಲೆ ಹೆತ್ತವರು, ಶಿಕ್ಷಕರು, ಆಡಳಿತ ಮಂಡಳಿ ಅಭಿವೃದ್ಧಿಗೆ ಜತೆಗೂಡಿದ್ದರಿಂದ ಪ್ರಸಿದ್ಧಿಯಾಗಿದೆ ಎಂದರು.

ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷ ಬಿ.ಎಂ. ಮಮ್ತಾಜ್‌ ಆಲಿ, ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಬಿ. ಎ. ನಝೀರ್‌, ಸಂಚಾಲಕ ಅಬ್ದುಲ್‌ ಹಮೀದ್‌, ಅಬ್ದುಲ್‌ ಹಕೀಮ್‌ ಫಾಲ್ಕಾನ್‌, ಗುಣಶೇಖರ ಶೆಟ್ಟಿ, ಅಬ್ದುಲ್‌ ಸತ್ತಾರ್‌, ಕೌನ್ಸೆಲರ್‌ ಮನಿಷಾ ಸುವರ್ಣ, ಉದ್ಯಮಿ ಮಹಮದ್‌ ಮುಬೀನ್‌, ಗುಲ್ಜಾರ್‌ ಬಾನು, ಪಿಟಿಎ ಅಧ್ಯಕ್ಷ ಅಬ್ದುಲ್‌ ಲತೀಫ್‌, ಫಿರೋಜ್‌, ಅಬ್ದುಲ್‌ ಹಮೀದ್‌, ಬಿ.ಎಂ. ಹುಸೈನ್‌, ಪ್ರಾಂಶುಪಾಲೆ ವಿಲ್ಮಾ, ಮುಖ್ಯೋಪಾಧ್ಯಾಯ ಸತೀಶ್‌ ಎನ್‌. ಮೊದಲಾದವರು ಉಪಸ್ಥಿತರಿದ್ದರು.

ಸೌಹಾರ್ದದ ಬೀಡು ಆಗಲು ಶ್ರಮಿಸುವೆ 
ವಿಧಾನ ಪರಿಷತ್‌ ಸದಸ್ಯನಾಗಿ ಜಿಲ್ಲೆಯನ್ನು ಸಮಗ್ರವಾಗಿ ಅಭಿವೃದ್ಧಿ, ಕೋಮು ಸಾಮರಸ್ಯದ ಕೇಂದ್ರವನ್ನಾಗಿ ಮಾಡಬೇಕೆಂಬ ನಿಟ್ಟಿನಲ್ಲಿ ಆಯ್ಕೆ ಮಾಡಿಕೊಂಡಿದ್ದೇನೆ. ನನ್ನ ಪ್ರಥಮ ವಿಧಾನ ಪರಿಷತ್‌ ಅನುದಾನವನ್ನು ಆಲ್‌ ಬದ್ರಿಯಾ ಶಾಲೆಗೆ ನೀಡಲು ನಿರ್ಧರಿಸಿದ್ದೇನೆ. ಆಡಳಿತ ಮಂಡಳಿ ಇದಕ್ಕೆ ಬೇಕಾದ ಮನವಿ ಸಲ್ಲಿಸುವಂತೆ ಸೂಚಿಸಿದರು. ಕೋಮು ಸೌಹಾರ್ದದ ಬೀಡು ಆಗಲು ಒಂದಾಗಬೇಕು ಎಂದು ಫಾರೂಕ್‌ ಅಭಿಪ್ರಾಯಪಟ್ಟರು.

ಟಾಪ್ ನ್ಯೂಸ್

1-qweqwew

IPL ಭಾರಿ ಮಳೆಯಿಂದ ಪಂದ್ಯ ರದ್ದು; ಹೈದರಾಬಾದ್ ಪ್ಲೇ ಆಫ್ ಗೆ ಪ್ರವೇಶ

H. D. Kumaraswamy: ಸಂಸದನಾಗಿದ್ದಾಗಲೇ ನನಗೆ ಸಿಗದ ಪ್ರಜ್ವಲ್‌ ಈಗ ಸಿಗುತ್ತಾರಾ?; ಎಚ್‌ಡಿಕೆ

H. D. Kumaraswamy: ಸಂಸದನಾಗಿದ್ದಾಗಲೇ ನನಗೆ ಸಿಗದ ಪ್ರಜ್ವಲ್‌ ಈಗ ಸಿಗುತ್ತಾರಾ?; ಎಚ್‌ಡಿಕೆ

22

Politics: ಗೃಹ ಸಚಿವರು ಕೂಡಲೇ ರಾಜೀನಾಮೆ ಕೊಡಲಿ: ಅಶ್ವತ್ಥನಾರಾಯಣ 

India alliance: ದಕ್ಷಿಣ ಭಾರತದಲ್ಲಿ ಇಂಡಿಯಾ ಮೈತ್ರಿಕೂಟ ಕ್ಲೀನ್‌ ಸ್ವೀಪ್‌; ಡಿಕೆಶಿ

India alliance: ದಕ್ಷಿಣ ಭಾರತದಲ್ಲಿ ಇಂಡಿಯಾ ಮೈತ್ರಿಕೂಟ ಕ್ಲೀನ್‌ ಸ್ವೀಪ್‌; ಡಿಕೆಶಿ

Politics: ರಘುಪತಿ ಭಟ್ಟರ ಜತೆ ಮುಖಂಡರು ಮಾತನಾಡುತ್ತಾರೆ; ಬಿ. ವೈ. ರಾಘವೇಂದ್ರ

Politics: ರಘುಪತಿ ಭಟ್ಟರ ಜತೆ ಮುಖಂಡರು ಮಾತನಾಡುತ್ತಾರೆ; ಬಿ. ವೈ. ರಾಘವೇಂದ್ರ

1-qwewqewqe

Kejriwal ನಿವಾಸದಲ್ಲಿ ಹಲ್ಲೆ; ಕೊನೆಗೂ ದೂರು ದಾಖಲಿಸಿದ ಸ್ವಾತಿ ಮಲಿವಾಲ್

train-track

Belagavi: ರೈಲಿನಲ್ಲಿ ಮುಸುಕುಧಾರಿಯಿಂದ ಚಾಕು ಇರಿತ: ವ್ಯಕ್ತಿ ಸಾವು,ಇಬ್ಬರಿಗೆ ಗಾಯ !


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

Thailand Open Super 500: ಸಾತ್ವಿಕ್‌ – ಚಿರಾಗ್‌ ಕ್ವಾರ್ಟರ್‌ಫೈನಲಿಗೆ

Thailand Open Super 500: ಸಾತ್ವಿಕ್‌ – ಚಿರಾಗ್‌ ಕ್ವಾರ್ಟರ್‌ಫೈನಲಿಗೆ

1-qweqwew

IPL ಭಾರಿ ಮಳೆಯಿಂದ ಪಂದ್ಯ ರದ್ದು; ಹೈದರಾಬಾದ್ ಪ್ಲೇ ಆಫ್ ಗೆ ಪ್ರವೇಶ

Sandeep Lamichhane: ಅತ್ಯಾಚಾರ ಆರೋಪ; ಲಮಿಚಾನೆ ಮುಕ್ತ

Sandeep Lamichhane: ಅತ್ಯಾಚಾರ ಆರೋಪ; ಲಮಿಚಾನೆ ಮುಕ್ತ

31

Italian Open 2024: ಬೋಪಣ್ಣ ಜೋಡಿಗೆ ಸೋಲು

Theft Case: ಮನೆಯಿಂದ ಚಿನ್ನಾಭರಣ ಕಳವು

Theft Case: ಮನೆಯಿಂದ ಚಿನ್ನಾಭರಣ ಕಳವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.