ಠಾಣೆ ಮೆಟ್ಟಿಲೇರಿದ ಕುರ್ಚಿ ಕಿತ್ತಾಟ!

Team Udayavani, Jul 14, 2018, 5:27 PM IST

14-july-21.jpg

ಹಾವೇರಿ: ನಗರಸಭೆ ಅಧ್ಯಕ್ಷ ಸ್ಥಾನದ ಕುರ್ಚಿಗಾಗಿ ಬಿಜೆಪಿ-ಕಾಂಗ್ರೆಸ್‌ ನಡುವೆ ಸದಸ್ಯರ ನಡುವೆ ಕಚ್ಚಾಟ ಶುರುವಾಗಿದ್ದು ಶುಕ್ರವಾರ ಹಂಗಾಮಿ ಅಧ್ಯಕ್ಷ ತಾನು ಎಂದು ಬಿಜೆಪಿಯ ಇರ್ಫಾನ್‌ಖಾನ್‌ ಪಠಾಣ ಅಧ್ಯಕ್ಷರ ಕುರ್ಚಿಯಲ್ಲಿ ಆಸೀನರಾದರು.

ಬುಧವಾರ ಬಿಜೆಪಿ ಸದಸ್ಯರು ಅವಿಶ್ವಾಸಮಂಡನೆ ನಿರ್ಣಯ ಕೈಗೊಂಡಿದ್ದರು. ಬಳಿಕ ಗುರುವಾರ ನಗರಸಭೆ ಅಧ್ಯಕ್ಷೆ ಪಾರ್ವತಮ್ಮ ಹಲಗಣ್ಣನವರ ತಾವೇ ನಗರಸಭೆ ಅಧ್ಯಕ್ಷೆ; ಬಿಜೆಪಿಯವರು ಮಂಡಿಸಿರುವ ಅವಿಶ್ವಾಸ ಮಂಡನೆ ಸಭೆಯೇ ಅಸಿಂಧು ಎಂದು ಅಧ್ಯಕ್ಷ ಕುರ್ಚಿಯಲ್ಲಿ ಆಸೀನರಾಗಿದ್ದರು. ಶುಕ್ರವಾರ ಮಧ್ಯಾಹ್ನ ದಿಢೀರನೇ ಬಿಜೆಪಿಯವರು ನಿರ್ಣಯ ಕೈಗೊಂಡು ಆಯ್ಕೆಯಾಗಿದ್ದ ಹಂಗಾಮಿ ಅಧ್ಯಕ್ಷ ಇರ್ಫಾನ್‌ಖಾನ್‌ ಪಠಾಣ ನಗರಸಭೆ ಅಧ್ಯಕ್ಷರ ಕಚೇರಿಗೆ ಬಂದು ಅಧ್ಯಕ್ಷರ ಕುರ್ಚಿಯಲ್ಲಿ ಕುಳಿತಿದ್ದರು. ನಂತರ ಬಂದ ಪಾರ್ವತಮ್ಮ ಹಲಗಣ್ಣನವರ ಕುರ್ಚಿ ಬಿಟ್ಟು ಕೊಡುವಂತೆ ವಾಗ್ವಾದ ನಡೆಸಿದರು.

‘ಇಲ್ಲಿ ನಾನು ಅಧ್ಯಕ್ಷೆಯಾಗಿದ್ದೇನೆ. ಕೋರಂ ಇಲ್ಲದೇ ಮಾಡಿರುವ ಸಭೆ, ತೆಗೆದುಕೊಂಡಿರುವ ತೀರ್ಮಾನ ಯಾವುದೂ ಕಾನೂನಾತ್ಮಕವಾಗಿಲ್ಲ. ನಾನು ಕುಳಿತುಕೊಳ್ಳಬೇಕಾದ ಅಧ್ಯಕ್ಷರ ಕುರ್ಚಿ ಬಿಟ್ಟು ಮೇಲೇಳಿ’ ಎಂದು ಪಾರ್ವತಮ್ಮ ಹಲಗಣ್ಣನವರ ಹೇಳಿದರು. ಇದಕ್ಕೆ ಪಠಾಣ ಉತ್ತರಿಸಿ, ಅವರು ‘ನಾನೇ ಹಂಗಾಮಿ ಅಧ್ಯಕ್ಷ’ ಎಂದು ಕುರ್ಚಿ ಬಿಟ್ಟು ಮೇಲೇಳಲಿಲ್ಲ. ಕೊನೆಗೆ ಈ ವಿಷಯವನ್ನು ಜಿಲ್ಲಾಧಿ ಕಾರಿ ಗಮನಕ್ಕೆ ತರುವುದಾಗಿ ಪಾರ್ವತಮ್ಮ ಹಲಗಣ್ಣನವರ ಕಚೇರಿಯಿಂದ ಹೊರನಡೆದರು. ಇವರ ಈ ಕಿತ್ತಾಟದಿಂದಾಗಿ ಜನರಿಗೆ ನಗರಸಭೆಯ ಅಧಿಕೃತ ಅಧ್ಯಕ್ಷರು ಯಾರು ಎಂಬುದು ತಿಳಿಯದಂತಾಗಿದೆ. ನಗರಸಭೆ ಕಾನೂನಿನ ಪ್ರಕಾರ ನಗರಸಭೆಯಲ್ಲಿ ಕೈಗೊಂಡ ಮಹತ್ವದ ನಿರ್ಣಯಗಳಿಗೆ ಜಿಲ್ಲಾಧಿಕಾರಿಯವರ ಅಂಕಿತ ಬಿದ್ದ ನಂತರವೇ ಅದು ಅಧಿಕೃತಗೊಳ್ಳುತ್ತದೆ. ಜಿಲ್ಲಾಧಿಕಾರಿಯವರು ಈವರೆಗೂ ಅವಿಶ್ವಾಸ ನಿರ್ಣಯದ ಬಗ್ಗೆ ಅಂಕಿತ ಹಾಕದೆ ಇರುವುದರಿಂದ ಅಧ್ಯಕ್ಷರ ಕುರ್ಚಿಗಾಗಿ ಈಗ ಕಿತ್ತಾಟ ನಡೆದಿದೆ.

ತಾರಕಕ್ಕೇರಿದ ಕಿತ್ತಾಟ
ಅಧ್ಯಕ್ಷ ಕುರ್ಚಿ ಕಚ್ಚಾಟ ಶುಕ್ರವಾರ ಸಂಜೆ ಪೊಲೀಸ್‌ ಠಾಣೆ ಮೆಟ್ಟಿಲೇರಿದೆ. ಪಾರ್ವತಮ್ಮ ಹಲಗಣ್ಣನವರ ನಾನು ಕಚೇರಿಗೆ ಹೋದಾಗ ಇರ್ಫಾನ್‌ಖಾನ್‌ ಅಧ್ಯಕ್ಷರ ಕುರ್ಚಿಯಲ್ಲಿ ಕುಳಿತಿದ್ದರು. ಇದ್ದನ್ನು ಪ್ರಶ್ನಿಸಿದಾಗ ತಮ್ಮ ಸೊಂಟಕ್ಕೆ ಕೈ ಹಾಕಿ ದೂಡಿ ಅವಮಾನ ಮಾಡಿದ್ದಾರೆ. ಸದಸ್ಯ ನಿರಂಜನ ಹೇರೂರು ಹಾಗೂ ಲಲಿತಾ ಗುಂಡೇನಹಳ್ಳಿ ನಗರಸಭೆಯಲ್ಲಿ ಕೆಲಸ ಮಾಡಬಾರದು. ಇತ್ತ ಬಂದರೆ ಜೀವಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ ಎಂದು ಮೂವರ ವಿರುದ್ಧ ದೂರು ದಾಖಲಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಇರ್ಫಾನ್‌ಖಾನ್‌ ಪಾರ್ವತಮ್ಮನವರು ಹಾಗೂ ಕಾಂಗ್ರೆಸ್‌ನ ಕೆಲ ಸದಸ್ಯರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕಚೇರಿಯಿಂದ ಹೊರಹೋಗದಿದ್ದರೆ ಹೆಣ ಹಾಕುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಅಲ್ಲದೆ ಮಹಿಳಾ ಸದಸ್ಯೆಗೆ ಹೊಡೆದಿದ್ದಾರೆ ಎಂದು ದೂರು ನೀಡಿದ್ದು, ಅಧ್ಯಕ್ಷ ಕುರ್ಚಿ ಕಚ್ಚಾಟ ಅತಿರೇಕಕ್ಕೆ ತಿರುಗಿದೆ. 

ಟಾಪ್ ನ್ಯೂಸ್

Gundmi Toll Plaza ಸ್ಥಳೀಯರಿಗೆ ಟೋಲ್‌ ಬರೆ; ಟೋಲ್‌ಗೆ ಮುತ್ತಿಗೆ; ರಸ್ತೆ ತಡೆ ಪ್ರತಿಭಟನೆ

Gundmi Toll Plaza ಸ್ಥಳೀಯರಿಗೆ ಟೋಲ್‌ ಬರೆ; ಟೋಲ್‌ಗೆ ಮುತ್ತಿಗೆ; ರಸ್ತೆ ತಡೆ ಪ್ರತಿಭಟನೆ

D.K. ಜಿಲ್ಲೆಯಲ್ಲಿ ಗುಡುಗು ಸಹಿತ ಉತ್ತಮ ಮಳೆ;  ಇನ್ನೂ ನಾಲ್ಕು ದಿನ “ಎಲ್ಲೋ ಅಲರ್ಟ್‌’D.K. ಜಿಲ್ಲೆಯಲ್ಲಿ ಗುಡುಗು ಸಹಿತ ಉತ್ತಮ ಮಳೆ;  ಇನ್ನೂ ನಾಲ್ಕು ದಿನ “ಎಲ್ಲೋ ಅಲರ್ಟ್‌’

D.K. ಜಿಲ್ಲೆಯಲ್ಲಿ ಗುಡುಗು ಸಹಿತ ಉತ್ತಮ ಮಳೆ;  ಇನ್ನೂ ನಾಲ್ಕು ದಿನ “ಎಲ್ಲೋ ಅಲರ್ಟ್‌’

ದೋಣಿಗಳು ಢಿಕ್ಕಿಯಾಗಿ ಮುಳುಗಡೆ; ಐವರು ಮೀನುಗಾರರ‌ ರಕ್ಷಣೆ

Malpe ದೋಣಿಗಳು ಢಿಕ್ಕಿಯಾಗಿ ಮುಳುಗಡೆ; ಐವರು ಮೀನುಗಾರರ‌ ರಕ್ಷಣೆ

naksal (2)

Chhattisgarh; ನಿಲ್ಲದ ನಕ್ಸಲ್‌ ಬೇಟೆ: ಓರ್ವನ ಹತ್ಯೆ

prahlad-joshi

Congress ಪಕ್ಷದಿಂದ ಅಂಬೇಡ್ಕರ್‌ಗೆ ಅಗೌರವ: ಸಚಿವ ಜೋಶಿ ಆರೋಪ

Naturals Ice Cream; ಬಾಲ್ಯದ ಹಣ್ಣಿನ ಸಖ್ಯ ಬದುಕಿನ ಗುರಿಯ ಗಿರಿಯ ಮುಟ್ಟಿಸಿತು

Naturals Ice Cream; ಬಾಲ್ಯದ ಹಣ್ಣಿನ ಸಖ್ಯ ಬದುಕಿನ ಗುರಿಯ ಗಿರಿಯ ಮುಟ್ಟಿಸಿತು

Naturals Ice Cream; ರಘುನಂದನ ಕಾಮತ್‌ ಪಂಚಭೂತಗಳಲ್ಲಿ ಲೀನ

Naturals Ice Cream; ರಘುನಂದನ ಕಾಮತ್‌ ಪಂಚಭೂತಗಳಲ್ಲಿ ಲೀನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

police crime

Hubli; ನೇಹಾ & ಅಂಜಲಿ ಹತ್ಯೆ ಪ್ರಕರಣ: ಡಿಸಿಪಿ ತಲೆದಂಡ

Hubli; Government should have woken up after Neha case: Jayamrinthujaya Swamiji

Hubli; ನೇಹಾ ಪ್ರಕರಣದ ಬಳಿಕ ಸರ್ಕಾರ ಎಚ್ಚೆತ್ತುಕೊಳ್ಳಬೇಕಿತ್ತು: ಜಯಮೃಂತ್ಯುಜಯ ಸ್ವಾಮೀಜಿ

Hubli; ಅಂಜಲಿ ಹಂತಕ ಗಿರೀಶನ ಮೇಲೆ ಮತ್ತೊಂದು ಪ್ರಕರಣ ದಾಖಲು

Hubli; ಅಂಜಲಿ ಹಂತಕ ಗಿರೀಶನ ಮೇಲೆ ಮತ್ತೊಂದು ಪ್ರಕರಣ ದಾಖಲು

Hubli; ಅಂಜಲಿ ಅಂಬಿಗೇರ ಪ್ರಕರಣ ತನಿಖೆ ಸಿಐಡಿಗೆ ವಹಿಸಲಿ: ಸಂತೋಷ್ ಲಾಡ್

Hubli; ಅಂಜಲಿ ಅಂಬಿಗೇರ ಪ್ರಕರಣ ತನಿಖೆ ಸಿಐಡಿಗೆ ವಹಿಸಲಿ: ಸಂತೋಷ್ ಲಾಡ್

Hubli; ಕರ್ನಾಟಕವು ಗೂಂಡಾ ರಾಜ್ಯವಾಗುತ್ತಿದೆ: ಜಗದೀಶ ಶೆಟ್ಟರ್

Hubli; ಕರ್ನಾಟಕವು ಗೂಂಡಾ ರಾಜ್ಯವಾಗುತ್ತಿದೆ: ಜಗದೀಶ ಶೆಟ್ಟರ್

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

Gundmi Toll Plaza ಸ್ಥಳೀಯರಿಗೆ ಟೋಲ್‌ ಬರೆ; ಟೋಲ್‌ಗೆ ಮುತ್ತಿಗೆ; ರಸ್ತೆ ತಡೆ ಪ್ರತಿಭಟನೆ

Gundmi Toll Plaza ಸ್ಥಳೀಯರಿಗೆ ಟೋಲ್‌ ಬರೆ; ಟೋಲ್‌ಗೆ ಮುತ್ತಿಗೆ; ರಸ್ತೆ ತಡೆ ಪ್ರತಿಭಟನೆ

ec-aa

Election data ಏರಿಕೆ ಬಗ್ಗೆ ಪ್ರತಿಕ್ರಿಯಿಸಿ: ಇಸಿಗೆ ಸುಪ್ರೀಂ

D.K. ಜಿಲ್ಲೆಯಲ್ಲಿ ಗುಡುಗು ಸಹಿತ ಉತ್ತಮ ಮಳೆ;  ಇನ್ನೂ ನಾಲ್ಕು ದಿನ “ಎಲ್ಲೋ ಅಲರ್ಟ್‌’D.K. ಜಿಲ್ಲೆಯಲ್ಲಿ ಗುಡುಗು ಸಹಿತ ಉತ್ತಮ ಮಳೆ;  ಇನ್ನೂ ನಾಲ್ಕು ದಿನ “ಎಲ್ಲೋ ಅಲರ್ಟ್‌’

D.K. ಜಿಲ್ಲೆಯಲ್ಲಿ ಗುಡುಗು ಸಹಿತ ಉತ್ತಮ ಮಳೆ;  ಇನ್ನೂ ನಾಲ್ಕು ದಿನ “ಎಲ್ಲೋ ಅಲರ್ಟ್‌’

ದೋಣಿಗಳು ಢಿಕ್ಕಿಯಾಗಿ ಮುಳುಗಡೆ; ಐವರು ಮೀನುಗಾರರ‌ ರಕ್ಷಣೆ

Malpe ದೋಣಿಗಳು ಢಿಕ್ಕಿಯಾಗಿ ಮುಳುಗಡೆ; ಐವರು ಮೀನುಗಾರರ‌ ರಕ್ಷಣೆ

naksal (2)

Chhattisgarh; ನಿಲ್ಲದ ನಕ್ಸಲ್‌ ಬೇಟೆ: ಓರ್ವನ ಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.