ಸೈನಿಕರಿಗೆ ನಮನ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯ:ಪೂರ್ಣಾತ್ಮರಾಂ

Team Udayavani, Jul 28, 2018, 3:29 PM IST

28-july-20.jpg

ಈಶ್ವರಮಂಗಲ: ಇಲ್ಲಿನ ಮೇ| ಸಂದೀಪ್‌ ಉಣ್ಣಿಕೃಷ್ಣ ವೃತ್ತದಲ್ಲಿ ಈಶ್ವರಮಂಗಲ ಹಿಂದೂ ಜಾಗರಣ ವೇದಿಕೆ ವತಿಯಿಂದ ಕಾರ್ಗಿಲ್‌ ವಿಜಯೋತ್ಸವ ಮತ್ತು ವೀರಯೋಧರಿಗೆ ನಮನ ಕಾರ್ಯಕ್ರಮ ಗುರುವಾರ ನಡೆಯಿತು. ಮಾಜಿ ಸೈನಿಕ ರವಿರಾಜ್‌ ಗೌಡ, ತಿಮ್ಮಯ್ಯ ಗೌಡ ಮತ್ತು ಈಶ್ವರಮಂಗಲ ಹೊಠಠಾಣೆಯ ಎಎಸ್‌ಐ ರಾಮಚಂದ್ರ ಇವರು ದೀಪ ಬೆಳಗಿಸಿ ವೀರಯೋಧರಿಗೆ ನಮನ ಸಲ್ಲಿಸಿದರು. ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಲಾಯಿತು.

ಸಾಮಾಜಿಕ ಕಾರ್ಯಕರ್ತ ಪೂರ್ಣಾತ್ಮರಾಂ ಈಶ್ವರಮಂಗಲ ಮಾತನಾಡಿ, ದೇಶದ ಪ್ರತಿಯೊಬ್ಬರಲ್ಲಿ ದೇಶಭಕ್ತಿ ಮೂಡಬೇಕು. ಸೈನಿಕರು ತಮ್ಮ ಎಲ್ಲ ಆಸೆಯನ್ನು ಬಿಟ್ಟು ದೇಶದ ರಕ್ಷಣೆಯಲ್ಲಿ ತೊಡಗಿಸಿಕೊಂಡು ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಯುದ್ಧ ಭೂಮಿಯಲ್ಲಿ ತಮ್ಮ ಪ್ರಾಣದ ಹಂಗು ತೊರೆದು ವಿರೋಧಿಗಳೊಂದಿಗೆ ಹೋರಾಟ ಮಾಡಿ ಬಲಿದಾನಗೈದ ಸೈನಿಕರಿಗೆ ನಮನ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಸೈನಿಕರ ದೇಶಪ್ರೇಮಕ್ಕೆ, ದೇಶಭಕ್ತಿಗೆ, ನಿಸ್ವಾರ್ಥ ಸೇವೆಗೆ ಪ್ರತಿಯೊಬ್ಬರು ನಮನ ಸಲ್ಲಿಸಬೇಕು ಎಂದು ಹೇಳಿದರು.

ಡಾ| ಶ್ರೀ ಕುಮಾರ್‌, ನೆಟ್ಟಣಿಗೆ ಮುಟ್ನೂರು ಗ್ರಾಮ ಪಂಚಾಯತ್‌ ಸದಸ್ಯ ಅಬ್ದುಲ್‌ ಖಾದರ್‌ ಕಾರ್ಗಿಲ್‌ ಕದನವನ್ನು ನೆನಪಿಸಿದರು. ಮೌನ ಪ್ರಾರ್ಥನೆ ಮತ್ತು ವೃತ್ತದ ಸುತ್ತ ಹಣತೆಯನ್ನು ಉರಿಸಿ, ಹುತಾತ್ಮ ಸೈನಿಕರಿಗೆ ನಮನ ಸಲ್ಲಿಸಲಾಯಿತು. ಸಿಹಿ ತಿಂಡಿ ವಿತರಿಸಲಾಯಿತು. ಪಟಾಕಿ ಸಿಡಿಸಲಾಯಿತು.

ತಾ| ಹಿಜಾವೇಯ ಪ್ರಧಾನ ಕಾರ್ಯದರ್ಶಿ ಚಿನ್ಮಯ್‌ ರೈ ನಡುಬೈಲು, ಈಶ್ವರಮಂಗಲ ಹಿಜಾವೇಯ ಅಧ್ಯಕ್ಷ ಚರಣ್‌ರಾಜ್‌, ಮಾಜಿ ಅಧ್ಯಕ್ಷ ದೀಪಕ್‌ ಕುಮಾರ್‌ ಮುಂಡ್ಯ, ಸಂಚಾಲಕ ಅವಿನಾಶ್‌ ಪಳನೀರು, ಸಂಘಟನ ಕಾರ್ಯದರ್ಶಿ ಯೋಗೀಶ್‌ ಬಸಿರಡ್ಕ, ಸದಾಶಿವ ರೈ ನಡುಬೈಲು, ಪ್ರವೀಣ್‌ ರೈ ಮೇನಾಲ, ನಿತ್ಯಾನಂದ ಭಟ್‌, ನಾರಾಯಣ ರೈ ಅಂಕೊತ್ತಿ ಮಾರು, ಮಂಜುನಾಥ ರೈ ಸಾಂತ್ಯ, ಭರತ್‌ ರೈ ಮೂಡಾಯೂರು, ರಾಜೇಂದ್ರಪ್ರಸಾದ್‌ ಮೇನಾಲ, ಆನಂದ ರೈ ಸಾಂತ್ಯ, ರಮೇಶ್‌ ಪೂಜಾರಿ ಮುಂಡ್ಯ, ಪರಮೇಶ್ವರ, ಪ್ರದೀಪ್‌ ಮೇನಾಲ, ಬಿಎಂಎಸ್‌ ರಿಕ್ಷಾ ಚಾಲಕ-ಮಾಲಕರ ಸಂಘದ ಅಧ್ಯಕ್ಷ ಮಂಜುನಾಥ ರೈ, ಹಿಜಾವೇಯ ಕಾರ್ಯಕರ್ತರಾದ ರಾಜೇಶ್‌ ಪಂಚೋಡಿ, ಸುರೇಶ್‌ ನಡುಬೈಲು, ಅಶ್ವಿ‌ತ್‌ ಮಡ್ಯಲಮಜಲು, ಅಶೋಕ ಸುರುಳಿಮೂಲೆ, ಪ್ರಶಾಂತ್‌ ಕನ್ನಟಿಮಾರು, ಗುರುರಾಜ್‌ ಪಳನೀರು, ಅನಿಲ್‌ ಬೆಳ್ಳಿಚಾಡವು, ಜೀವನ ಕರ್ಪುಡಿಕಾನ, ದಿನೇಶ್‌ ಮೇನಾಲ, ಸತೀಶ್‌ ಸುರುಳಿಮೂಲೆ, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಅರ್ಚನಾ, ಅಕ್ಷಣಾ ಪ್ರಾರ್ಥಿಸಿದರು. ಹಿಜಾವೇಯ ಚಂದ್ರಹಾಸ ಮುಂಡ್ಯ ಸ್ವಾಗತಿಸಿದರು. ಹರೀಶ್‌ ಬಾಬು ವಂದಿಸಿದರು. ಪ್ರಶಾಂತ್‌ ನಾಯರ್‌ ಕುಂಟಾಪು ನಿರ್ವಹಿಸಿದರು.

ಟಾಪ್ ನ್ಯೂಸ್

1-weeeqwe

ಅಮೃತಶಿಲೆಯಲ್ಲಿ ಕೆತ್ತಿದ 18 ಅಡಿ ಕಾಳಿ ಮಾತೆ ಪ್ರತಿಮೆ ಇಂದು ಕೇರಳಕ್ಕೆ

ಇಂದಿನಿಂದ ದ್ವಿತೀಯ ಪಿಯು-2 ಪರೀಕ್ಷೆ: 1.5 ಲಕ್ಷ ವಿದ್ಯಾರ್ಥಿಗಳ ನೋಂದಣಿ

ಇಂದಿನಿಂದ ದ್ವಿತೀಯ ಪಿಯು-2 ಪರೀಕ್ಷೆ: 1.5 ಲಕ್ಷ ವಿದ್ಯಾರ್ಥಿಗಳ ನೋಂದಣಿ

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

1-weqweeqwe

10 ವರ್ಷಗಳಲ್ಲಿ ವಿಶ್ವದ ದೊಡ್ಡ ವಿಮಾನ ನಿಲ್ದಾಣ ನಿರ್ಮಾಣ

1-aasasa

IPL; ಈಡನ್‌ನಲ್ಲಿ ಕೆಕೆಆರ್‌-ಡೆಲ್ಲಿ ಮೇಲಾಟ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Amit Shah

UP; ಗುಂಡಿಟ್ಟವರು,ದೇಗುಲ ಕಟ್ಟಿದವರ ನಡುವಿನ ಚುನಾವಣೆ: ಅಮಿತ್‌ ಶಾ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weeeqwe

ಅಮೃತಶಿಲೆಯಲ್ಲಿ ಕೆತ್ತಿದ 18 ಅಡಿ ಕಾಳಿ ಮಾತೆ ಪ್ರತಿಮೆ ಇಂದು ಕೇರಳಕ್ಕೆ

ಇಂದಿನಿಂದ ದ್ವಿತೀಯ ಪಿಯು-2 ಪರೀಕ್ಷೆ: 1.5 ಲಕ್ಷ ವಿದ್ಯಾರ್ಥಿಗಳ ನೋಂದಣಿ

ಇಂದಿನಿಂದ ದ್ವಿತೀಯ ಪಿಯು-2 ಪರೀಕ್ಷೆ: 1.5 ಲಕ್ಷ ವಿದ್ಯಾರ್ಥಿಗಳ ನೋಂದಣಿ

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

Puttur ಕೆಲಸದ ಆಮಿಷವೊಡ್ಡಿ ಅತ್ಯಾಚಾರ ಯತ್ನ ಪ್ರಕರಣ: ಪ್ರಮುಖ ಆರೋಪಿಗೆ ಜಾಮೀನು

1-weqweeqwe

10 ವರ್ಷಗಳಲ್ಲಿ ವಿಶ್ವದ ದೊಡ್ಡ ವಿಮಾನ ನಿಲ್ದಾಣ ನಿರ್ಮಾಣ

1-aasasa

IPL; ಈಡನ್‌ನಲ್ಲಿ ಕೆಕೆಆರ್‌-ಡೆಲ್ಲಿ ಮೇಲಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.