ರೊಹ್ಟಂಗ್: ಪ್ರಪಾತಕ್ಕೆ ಕಾರು ಬಿದ್ದು 11 ಮಂದಿ ಸ್ಥಳದಲ್ಲೇ ದುರ್ಮರಣ
Team Udayavani, Aug 23, 2018, 3:08 PM IST
ಕುಲ್ಲು (ಹಿಮಾಚಲ ಪ್ರದೇಶ): ರೊಹ್ಟಂಗ್ ಪಾಸ್ ಸಮೀಪದ ರಾನಿನಲ್ಹಾ ಎಂಬಲ್ಲಿ ಬುಧವಾರ ತಡರಾತ್ರಿ ಕಾರೊಂದು ಗುಡ್ಡದ ಮೇಲಿಂದ ಪ್ರಪಾತಕ್ಕೆ ಬಿದ್ದಿದ್ದು 11 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ.
ಮನಾಲಿಯಿಂದ ಚಾಂಬಾದ ಪಂಗಿ ಎಂಬಲ್ಲಿಗೆ ತೆರಳುತ್ತಿದ್ದ ಎಸ್ಯುವಿ ವಾಹನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿದೆ.
ಪೊಲೀಸರು ಮತ್ತು ರಕ್ಷಣಾ ತಂಡಗಳು ಸ್ಥಳಕ್ಕಾಗಮಿಸಿ ಶವಗಳನ್ನು ಮೇಲಕ್ಕೆತ್ತಿದ್ದಾರೆ. ಘಟನೆಯ ಸಂಬಂಧ ತನಿಖೆಗೆ ಆದೇಶಿಸಲಾಗಿದೆ.