ಮುಲ್ಕಿಯಲ್ಲಿ ಪಾರ್ಕಿಂಗ್ ಚಿಂತೆ
Team Udayavani, Sep 9, 2018, 10:50 AM IST
ಮುಲ್ಕಿ: ಹೆದ್ದಾರಿ ಕಾಮಗಾರಿ ವಿಸ್ತರಣೆಯಿಂದ ಮೂಲ್ಕಿಯಲ್ಲಿ ಬಸ್ ನಿಲ್ದಾಣ ನಿರ್ಮಿಸಲು ನಗರ ಪಂಚಾಯತ್ ನಿವೇಶನದ ಕೊರತೆ ಅನುಭವಿಸುತಿದೆ. ಈಗ ಕಾರು ಪಾರ್ಕಿಂಗ್ ಮಾಡುತ್ತಿದ್ದ ಹೆದ್ದಾರಿಯ ಸರ್ವಿಸ್ ರಸ್ತೆ ಪಕ್ಕದ ಜಾಗದಲ್ಲಿ ಚರಂಡಿ ಕಾಮಗಾರಿ ನಡೆಯುತ್ತಿರುವುದರಿಂದ ಪಾರ್ಕಿಂಗ್ಗೂ ಸಮಸ್ಯೆಯಾಗಿದೆ.
ಕೆಲವು ದಿನಗಳ ಹಿಂದೆ ಹೆದ್ದಾರಿ ಗುತ್ತಿಗೆದಾರ ಸಂಸ್ಥೆ ಅಧಿಕಾರಿಗಳು ಚರಂಡಿ ಕಾಮಗಾರಿ ನಡೆಸಿದ ಅನಂತರ ಕಾರು ನಿಲ್ಲಿಸಲು ಸೂಕ್ತ ಜಾಗ ಮಾಡಿಕೊಡುವುದಾಗಿ ನ.ಪಂ. ಅಧ್ಯಕ್ಷರ ಸಮಕ್ಷಮದಲ್ಲಿ ತಿಳಿಸಿದ್ದರೂ ಪಾರ್ಕಿಂಗ್ಗೆ ಸರಿಯಾದ ವ್ಯವಸ್ಥೆ ಕಲ್ಪಿಸಿಲ್ಲ ಎಂದು ಕಾರು ಚಾಲಕರು ತಿಳಿಸಿದ್ದಾರೆ.
ರಸ್ತೆಯಲ್ಲೇ ಪಾರ್ಕಿಂಗ್
ಮೂಲ್ಕಿಯಿಂದ ಸರ್ವಿಸ್ ರೋಡ್ ಮೂಲಕ ಕಿನ್ನಿಗೋಳಿ ಮಾರ್ಗಕ್ಕೆ ಹೋಗುತ್ತಿದ ವಿಜಯ ಬ್ಯಾಂಕ್ ಎದುರಿನ ರಸ್ತೆ ಈಗ ಪಾರ್ಕಿಂಗ್ ಸ್ಥಳವಾಗಿ ಪರಿವರ್ತನೆಯಾಗಿದೆ.
ಜಮೀನು ಸಿಗದೆ ಸಮಸ್ಯೆ
ಬಸ್ ನಿಲ್ದಾಣಕ್ಕೆ ಸರಕಾರದಿಂದ ಹಣ ಬಿಡುಗಡೆಯಾಗಿದೆ. ಈಗಿರುವ ಬಸ್ ನಿಲ್ದಾಣದ ಸಮೀಪ ಮತ್ತೂಂದು ನಿಲ್ದಾಣ ನಿರ್ಮಾಣಕ್ಕೆ ಜಮೀನು ಸಿಗದೇ ತೊಂದರೆಯಾಗಿದೆ. ಬಸ್ ನಿಲ್ದಾಣ ಸ್ಥಳಾಂತರಿಸುವ ಬಗ್ಗೆ ತೀರ್ಮಾನ ನಡೆದಿಲ್ಲ.
– ಸುನಿಲ್ ಆಳ್ವ ಅಧ್ಯಕ್ಷರು, ನಗರ ಪಂಚಾಯತ್ ಮೂಲ್ಕಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!