ಕನಕನ ಕೆಣಕಬೇಡ, ಕೆಣಕಿ ತಿಣುಕ ಬೇಡ

Team Udayavani, Nov 26, 2018, 12:30 AM IST

kanakadasa-jayanthi.jpg

ಕನಕದಾಸರ ಹುಟ್ಟು ಹೆಸರು ತಿಮ್ಮಪ್ಪ ನಾಯಕ. ತಿರುಪತಿಯ ವೆಂಕಟರಮಣನ ದಯದಿಂದ ಹುಟ್ಟಿದ ಕಾರಣ ಈ ಹೆಸರು ಬಂತು. ಕನಕ ದೊರೆತುದರಿಂದ ಕನಕ ನಾಯಕನಾದರು. ಅನಂತರ ತಮ್ಮನ್ನು ಹರಿ ಸೇವೆಗೆ ಅರ್ಪಿಸಿಕೊಂಡು ಕನಕದಾಸರಾದರು. ಕನಕದಾಸರ ಬಗ್ಗೆ ಅಂದು ಹುಟ್ಟಿಕೊಂಡ ಮಾತು, “ಕನಕನ ಕೆಣಕಬೇಡ ಕೆಣಕಿ ತಿಣುಕಬೇಡ.

‘ ಈ ಮಾತು ಇಂದಿಗೂ ಸತ್ಯ. ಕನಕದಾಸರು ಅಪಾರ ಜ್ಞಾನಿಗಳು. ಜ್ಞಾನಿಗಳಿಗೆ ಅವರು ಸವಾಲಿನ ರೂಪದಲ್ಲಿ ನೀಡಿದುದೇ ಮುಂಡಿಗೆಗಳು. ಕುರುಬನಾದ ತಮ್ಮ ಜ್ಞಾನದ ಬಗ್ಗೆ ಕನಕದಾಸರು ಅಂದು ವಿದ್ವತ್‌ ಪ್ರಪಂಚಕ್ಕೆ ಹಾಕಿದ ಸವಾಲುಗಳೇ ಈ ಮುಂಡಿಗೆಗಳು. ಇದು ಕೇವಲ ಪಾಂಡಿತ್ಯ ಪ್ರದರ್ಶನಕ್ಕಷ್ಟೇ ಸೀಮಿತವಲ್ಲ. ಕಾವ್ಯದ ಕುರಿತು ಆಸಕ್ತಿಯುಳ್ಳವರಿಗೆ ಸ್ವಲ್ಪ ತಲೆ ಕೆಡಿಸುವ ಕೆಲಸವೂ ಹೌದು. ಆ ಮೂಲಕ ನಿಗೂಢವಾದ ವಿಚಾರಗಳನ್ನು ಬಿಡಿಸುವ ಹೊಣೆ. ಭಾರತೀಯ ಸಾಹಿತ್ಯದಲ್ಲಿ ಈ ವಿಧದ ನಿಗೂಢತೆಗೆ ಸಾಕಷ್ಟು ಇತಿಹಾಸವಿದೆ. 

ವೇದಗಳಲ್ಲಿ ಇಂಥವುಗಳನ್ನು ಪ್ರವಹ್ಲಿತ ಎಂದು ಕರೆದಿರುತ್ತಾರೆ. ಬೌದ್ಧ ಧರ್ಮದಲ್ಲಿ ಇದನ್ನೇ ಸಂಧಾಭಾಷಾ ಎಂದು ಕರೆದಿದ್ದಾರೆ. ವಚನ ಸಾಹಿತ್ಯದಲ್ಲೂ ಬೆಡಗಿನ ವಚನಗಳು ಇದನ್ನೇ ನೆನಪಿಸುತ್ತವೆ. ಅಲ್ಲಮನ ವಚನಗಳಲ್ಲಿ ಹೆಚ್ಚಿನವುಗಳು ಬೆಡಗಿನ ವಚನಗಳು. ದಾಸ ಸಾಹಿತ್ಯದಲ್ಲಿ ಮುಂಡಿಗೆಗಳೆಂಬ ಹೆಸರನ್ನು ಪಡೆದಿವೆ. ಮುಂಡಿಗೆ ಎಂದರೆ ಭಾರವಾದ ತೊಲೆ. ಅದನ್ನು ಎತ್ತುವುದು ಜಟ್ಟಿಯ ದೈಹಿಕ ಸಾಮರ್ಥ್ಯಕ್ಕೆ ಸವಾಲು. ಸಾಹಿತ್ಯಿಕ ಮೌಲ್ಯದ ಮುಂಡಿಗೆಗಳು ಬೌದ್ಧಿಕ ಸಾಮರ್ಥ್ಯಕ್ಕೆ ಸವಾಲು. ಕನಕದಾಸರ ಸಮಕಾಲೀನನಾದ ಕುಮಾರವ್ಯಾಸನ ಭಾರತದಲ್ಲಿ ಬರುವ “ವೇದ ಪುರುಷನ ಸುತನ’ ಇದೇ ವಿಧದ ಸವಾಲಿನ ಭಾಮಿನಿ. 

ಕನಕದಾಸರು ರಚಿಸಿದ ಮುಂಡಿಗೆಗಳ ಸಂಖ್ಯೆ ಕಡಿಮೆ ಇರಬಹುದು. ಆದರೆ ಅವುಗಳ ಭಾರ ಕಡಿಮೆಯಲ್ಲ. ಕನಕದಾಸರ ಮುಂಡಿಗೆಗಳು ಪೌರಾಣಿಕ ಅಥವಾ ಅಧ್ಯಾತ್ಮದ ವಿಚಾರಗಳಿಗಷ್ಟೇ ಸೀಮಿತವಲ್ಲ. ನಿತ್ಯ ನಮ್ಮ ಮುಂದೆ ಕಂಡುಬರುವ ಹಾಗೂ ಹಳ್ಳಿಯ ಮನೆ ಮನೆಗಳಲ್ಲಿ ಬಳಸುವ ವಸ್ತುವನ್ನೂ ಬಿಟ್ಟಿಲ್ಲ. ಈ ಸಂಬಂಧ ಒಂದು ಮುಂಡಿಗೆ ಗಮನಾರ್ಹ. ಈ ಮುಂಡಿಗೆಯು “ಮರ ನುಂಗುವ ಪಕ್ಷಿ ಮನೆಯೊಳಗೆ ಬಂದಿದೆ | ಇದರ ಕುರುಹ ಪೇಳಿ ಕುಳಿತಿದ್ದ ಜನರು ||’ ಎಂಬ ಸಾಲುಗಳಿಂದ ಆರಂಭವಾಗಿ ಮುಂದುವರಿಯುತ್ತದೆ. 

ಒಂಟಿಕೊಂಬಿನ ಪಕ್ಷಿ ಒಡಲೊಳಗೆ ಕರುಳಿಲ್ಲ
ಗಂಟಲು ಮೂರುಂಟು ಮೂಗಿಲ್ಲವು 
ಕುಂಟ ಮನುಜನಂತೆ ಕುಳಿತಿಹುದು ಮನೆಯೊಳಗೆ
ಎಂಟು ಹತ್ತರ ಅನ್ನವನು ಭಕ್ಷಿಸುವುದು || 
ಬಡತನವು ಬಂದರೆ ಬಹಳ ರಕ್ಷಿಪುದು, ಕಂಜವದನೆಯರ ಕರದಿ ನಲಿದಾಡುವುದು, ಅಡವಿಯಲಿ ಹುಟ್ಟುವುದು ಅಂಗ ಎರಡಾಗುವುದು ಇತ್ಯಾದಿ ಸಾಲುಗಳು ಈ ಮುಂಡಿಗೆಯ ರಹಸ್ಯವನ್ನು ಅರಿಯಲು ಬೆಳಕು ಚೆಲ್ಲುವಂತಿವೆ. ಈ ಮುಂಡಿಗೆಗೆ ಉತ್ತರ “ಬೀಸುವ ಕಲ್ಲು’. ಅದು ಮನೆಯ ಮೂಲೆಯಲ್ಲಿ ಕುಂಟನಂತಿರುವುದು. ಹೆಂಗಸರು ಇದನ್ನು ಬಳಸಿ ಧಾನ್ಯಗಳನ್ನು ಪುಡಿ ಮಾಡುತ್ತಾರೆ. ಅಡವಿಯಲ್ಲಿ ದೊರೆತ ಒಂದು ಕಲ್ಲು ಇಲ್ಲಿ ಎರಡಾಗಿದೆ.ಅದನ್ನು ಹಿಡಿಯಲು ಒಂದು ಸಣ್ಣ ಮರದ ಗೂಟ. ಅದಕ್ಕೆ ಮೂರು ರಂಧ್ರಗಳು. 
ಪುರಾಣಕ್ಕೆ ಸಂಬಂಧಿಸಿದಂತೆ ಕನಕದಾಸರ ಮುಂಡಿಗೆಗಳು ಹಲವು ಇವೆ. ಪುರಾಣ ಲೋಕದ ಜ್ಞಾನವುಳ್ಳವರಿಗೆ ಇದು ಅರ್ಥವಾದೀತು. ಮಂಗಳ ಪದವಾಗಿ ಬಳಸುವ ಒಂದು ಮುಂಡಿಗೆ ಇಂದಿಗೂ ಪ್ರಸಿದ್ಧವಾಗಿದೆ. 

ಅಂಧಕನನುಜನ ಕಂದನ ತಂದೆಯ 
ಕೊಂದನ ಶಿರದಲಿ ನಿಂದವನ
ಚಂದದಿವಡೆದನ ನಂದನೆಯಳ ನಲ
ವಿಂದಧರಿಸಿದ ಮುಕುಂದಗೆ ||
ಅಂಧಕ ಎಂದರೆ ಧೃತರಾಷ್ಟ್ರ. ಅವನ ತಮ್ಮ ಪಾಂಡು ರಾಜ. ಈತನ ಕಂದ ಧರ್ಮರಾಯ. ಧರ್ಮರಾಯನ ತಂದೆ ಯಮ ಧರ್ಮರಾಯ. ಅವನನ್ನು ಕೊಂದವ ಮೃತ್ಯುಂಜಯ ಅಂದರೆ ಈಶ್ವರ. ಈಶ್ವರನ ತಲೆಯನ್ನೇರಿದವನು ಚಂದ್ರ. ಅವನು ಹುಟ್ಟಿ ಬಂದುದು ಕ್ಷೀರ ಸಮುದ್ರ, ಸಮುದ್ರರಾಜನ ಮಗಳು ಲಕ್ಷ್ಮೀ, ಲಕ್ಷ್ಮೀಯನ್ನು ವರಿಸಿದವನು ವಿಷ್ಣು.ಅನುಭಾವದ ನಿಗೂಢತೆಯನ್ನು ಸಾರುವ ಕೆಲವು ಮುಂಡಿಗೆಗಳನ್ನು ಕನಕದಾಸರು ಬರೆದಿದ್ದಾರೆ. ಮನಸ್ಸಿನ ಸ್ವಭಾವ ಮತ್ತು ಸಾಧನಾ ಪಥದಲ್ಲಿ ಅದನ್ನು ನಿಯಂತ್ರಿಸುವ ಬಗ್ಗೆ ಬರೆದ ಮುಂಡಿಗೆ “ಕೆಂಪು ಮೂಗಿನ ಪಕ್ಷಿ ತಂಪಿನೊಳಿರುವುದು’. 

ಸಂಖ್ಯಾಶಾಸ್ತ್ರದ ಬಲದಲ್ಲಿ ವಿವರಣೆ ನೀಡುತ್ತಾ ಸಾಗುವ ಈ ಮುಂಡಿಗೆಯಲ್ಲಿ ಆರು ತಲೆಗಳ ಉಲ್ಲೇಖವಿದ್ದು ಅವುಗಳು ಆರು ಚಕ್ರವನ್ನು( ಮೂಲಾಧಾರ, ಸ್ವಾದಿಷ್ಠಾನ, ಮಣಿಪೂರ, ಅನಾಹತ, ವಿಶುದ್ಧ, ಆಜಾ,n ಸಹಸ್ರಾರ). ಪಂಚ ಜ್ಞಾನೇಂದ್ರಿಯ, ಪಂಚ ಕರ್ಮೇಂದ್ರಿಯ, ಪಂಚಪ್ರಾಣ ಹಾಗೂ ಮನಸ್ಸುಗಳನ್ನು 16 ಕಣ್ಣುಗಳೆಂದು ವರ್ಣಿಸಲಾಗಿದೆ. ಉಸಿರನ್ನು ನಿಯಂತ್ರಿಸುವ ಮೂಲಕ ಮನಸ್ಸನ್ನು ನಿಯಂತ್ರಿಸಲು ಸಲಹೆ ನೀಡುವ ದಾಸರು ಕೊನೆಗೆ ಪರಮಾತ್ಮ ಹಾಗೂ ಜೀವಾತ್ಮ ಬೇರೆ ಬೇರೆ ಎನ್ನುತ್ತಾ ಅಲ್ಲುಂಟು ಇಲ್ಲಿಲ್ಲವೇ? ಎನ್ನುತ್ತಾರೆ. ಬ್ರಹ್ಮಾಂಡದೊಳಗಿರುವುದು ಪಿಂಡಾಂಡದಲ್ಲಿಲ್ಲವೇ? ಎಂಬ ಪ್ರಶ್ನೆ ಎಸೆಯುತ್ತಾರೆ. ಈತನೀಗ ವಾಸುದೇವನು ಕನಕದಾಸರ ಇನ್ನೊಂದು ಪ್ರಸಿದ್ಧ ರಚನೆ. ಇಲ್ಲಿಯೂ ಅನೇಕ ಪೌರಾಣಿಕ ವಿಚಾರಗಳನ್ನು ಪ್ರಸ್ತಾಪಿಸುತ್ತಾ, ಬೇರೆ ಬೇರೆ ಸಂಗತಿಗಳ ಮೂಲಕ ಕೃಷ್ಣನ ಮಹಿಮೆಯನ್ನು ಕೊಂಡಾಡಿದ್ದಾರೆ.
 
ಸೃಷ್ಟಿಕರ್ತಗೆ ಮಗನಾದವನಿಗಿಷ್ಟ ಭೂಷಣ ಅಶನವಾದನಜ್ಯೇಷ್ಠ ಪುತ್ರಗೆ ವೈರಿ ತೊಡೆಯ ಭೇದಿಸೆಂದು ಬೋಧಿಸಿ  ಕಷ್ಟವನ್ನು ಕಳೆದು ಭಕ್ತರಿಷ್ಟವನ್ನು ಕಾದ ಉತ್ಕೃಷ್ಟ ಮಹಿಮನಾದ ದೇವ ಕಾಣಿರೋ || ಸೃಷ್ಟಿಕರ್ತ ಎಂದರೆ ಬ್ರಹ್ಮ. ಅವನ ಮಗ ಶಿವ. ಶಿವನ ಆಭರಣ ಸರ್ಪ. ಸರ್ಪದ ಆಹಾರ ವಾಯು. ವಾಯುವಿನ ಮಗ ಭೀಮ. ಭೀಮನ ವೈರಿ ಕೌರವ. ಕೌರವನ ತೊಡೆ ಮುರಿಯುವಂತೆ ಬೋಧಿಸಿದವನು ಕೃಷ್ಣ. 

ದೂರದರ್ಶನದಂಥ ಮಾಧ್ಯಮಗಳು ಬರುವ ಮೊದಲು ಗ್ರಾಮೀಣ ಜನರಲ್ಲಿ ಒಗಟುಗಳು ಜನರ ಬುದ್ಧಿಶಕ್ತಿಗೆ ಸವಾಲಾಗಿದ್ದವು. ಒಗಟು ಮತ್ತು ಅದಕ್ಕೆ ಉತ್ತರ ಒಂದು ವಿಧದಲ್ಲಿ ಜ್ಞಾನಕ್ಕೆ ಸಂಬಂಧಿಸಿದ ಕ್ರೀಡೆಯಾಗಿತ್ತು. ಕನಕದಾಸರ ಮುಂಡಿಗೆಗಳೂ ಈ ಹಿನ್ನೆಲೆಯಲ್ಲಿ ಮಹಣ್ತೀವಾದವು. ಆದರೆ ಈಗ ಈ ಬಗ್ಗೆ ತಲೆ ಕೆಡಿಸಿಕೊಳ್ಳುವ ತಾಳ್ಮೆ ಯಾರಲ್ಲಿದೆ? ಯಂತ್ರಗಳೇ ಎಲ್ಲಾ ವಿಚಾರಗಳಿಗೆ ಗುರುವಾಗಿರುವಾಗ ಇವುಗಳ ಕಷ್ಟ ಏಕೆ ಬೇಕು? ಕನಕದಾಸರಿಗೆ ಇಂದು ಸರಕಾರ ಹಾಗೂ ಸಮಾಜ ಬಹಳ ಗೌರವ ನೀಡುತ್ತಿದೆ. ಅಂದು ಮುಂಡಿಗೆಗಳ ಮೂಲಕ ಕನಕನ ಕೆಣಕಬೇಡ ಎಂಬ ಮಾತು ಹುಟ್ಟಿಕೊಂಡಿತು. ಇಂದು ಅಷ್ಟೇ ಎಚ್ಚರ ಹಾಗೂ ಭಕ್ತಿಯಿಂದ ಕನಕದಾಸರನ್ನು ಕೆಣಕದೇ ಗೌರವಿಸುವುದು ನಮ್ಮ ಕರ್ತವ್ಯ. 

– ಡಾ.ಶ್ರೀಕಾಂತ್‌ ಸಿದ್ದಾಪುರ 

ಟಾಪ್ ನ್ಯೂಸ್

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

1-twin

Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

1-wqeewqe

Mumbai Indians ವಿರುದ್ಧ ತವರಿನ ಅಂಗಳ: ರಾಹುಲ್‌ಗೆ ಮಹತ್ವದ ಪಂದ್ಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

1-twin

Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.