ಮೂಡುಬಿದಿರೆ: ;ಕೋಟಿ-ಚೆನ್ನಯ’ ಜೋಡುಕರೆ ಕಂಬಳ 


Team Udayavani, Dec 2, 2018, 11:18 AM IST

2-december-5.gif

ಮೂಡುಬಿದಿರೆ: ಕಡಲಕೆರೆ ನಿಸರ್ಗಧಾಮದ ವೀರರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮದಲ್ಲಿ ಕೋಟಿ ಚೆನ್ನಯ ಕಂಬಳ ಕ್ರೀಡಾಂಗಣವನ್ನು ಚಟುವಟಿಕೆಯ ತಾಣವಾಗಿಸುತ್ತ ಬಂದಂತೆ 16ನೇ ವರ್ಷದ ಕಂಬಳ ಶನಿವಾರ ಮುಂಜಾನೆ ಪ್ರಾರಂಭವಾಯಿತು.

ಕಂಬಳ ಸಮಿತಿ ನೂತನ ಅಧ್ಯಕ್ಷ, ಶಾಸಕ ಉಮಾನಾಥ ಕೋಟ್ಯಾನ್‌ ನೇತೃತ್ವದಲ್ಲಿ ನಡೆದ ‘ಹೊನಲು ಬೆಳಕಿನ ಜೋಡುಕರೆ ಕಂಬಳ’ವನ್ನು ಆಲಂಗಾರು ಚರ್ಚ್‌ನ ವಂ| ವಾಲ್ಟರ್‌ ಡಿ’ಸೋಜಾ, ಆಲಂಗಾರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ವೇ|ಮೂ| ಈಶ್ವರ ಭಟ್‌ ಹಾಗೂ ಪುತ್ತಿಗೆ ನೂರಾನಿ ಮಸೀದಿಯ ಧರ್ಮಗುರು ಮೌಲಾನ ಝಿಯ್ನಾಲ್ಲಾ ವಿಶೇಷ ಪ್ರಾರ್ಥನೆಯೊಂದಿಗೆ ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿದ್ದ ಮೂಡುಬಿದಿರೆ ಚೌಟರ ಅರಮನೆಯ ಕುಲದೀಪ್‌ ಎಂ. ಕರೆಗೆ ಪುತ್ತಿಗೆ ಮತ್ತು ಸ್ಥಾನೀಯ ಆರಾಧನಾ ಕೇಂದ್ರಗಳ ಪ್ರಸಾದವನ್ನು ಸಮರ್ಪಿಸಲಾಯಿತು.

ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ, ಜಿ.ಪಂ. ಸದಸ್ಯರಾದ ಕೆ.ಪಿ. ಸುಚರಿತ ಶೆಟ್ಟಿ, ಸುಜಾತಾ ಕೆ.ಪಿ., ಪಕ್ಷಿಕೆರೆ ಚರ್ಚ್‌ನ ವಂ| ಮೆಲ್ವೀನ್‌ ನೋರೋನ್ಹಾ, ಜೈನ ಬಸದಿಗಳ ಮೊಕ್ತೇಸರ ದಿನೇಶ್‌ ಕುಮಾರ್‌ ಆನಡ್ಕ, ವೆಂಕಟರಮಣ ಹನುಮಂತ ದೇಗುಲಗಳ ಆಡಳಿತ ಮೊಕ್ತೇಸರ ಜಿ.ಉಮೇಶ್‌ ಪೈ, ವಿವಿಧ ರೋಟರಿ ಕ್ಲಬ್‌ಗಳ ಅಧ್ಯಕ್ಷರಾದ ಡಾ| ರಮೇಶ್‌, ಪ್ರವೀಣ್‌ ಜೈನ್‌, ವಿನ್ಸೆಂಟ್‌ ಡಿ’ಸೋಜಾ, ಲಯನ್ಸ್‌ ಅಧ್ಯಕ್ಷ ಡಾ| ನಿತ್ಯಾನಂದ ಶೆಟ್ಟಿ, ಅಲಂಗಾರು ಲಯನ್ಸ್‌ ಅಧ್ಯಕ್ಷ ಹೆರಾಲ್ಡ್‌ ತಾವ್ರೋ, ಜೇಸಿಸ್‌ ಅಧ್ಯಕ್ಷೆ ಸಂಗೀತಾ ಪ್ರಭು, ರೋಟರ್ಯಾಕ್ಟ್ಅಧ್ಯಕ್ಷ ಪವನ್‌ ಭಟ್‌, ಪಕ್ಷಿಕೆರೆ ಚರ್ಚ್‌ನ ವಂ| ಮೆಲ್ವೀನ್‌ ನೋರೊನ್ಹಾ, ಪುರಸಭಾ ಸದಸ್ಯರಾದ ಕೊರಗಪ್ಪ, ಹನೀಫ್‌ ಆಲಂಗಾರು, ಬಾಹುಬಲಿ ಪ್ರಸಾದ್‌, ಲಕ್ಷ್ಮಣ ಪೂಜಾರಿ, ನಾಗರಾಜ ಪೂಜಾರಿ, ದಿನೇಶ್‌ ಪೂಜಾರಿ, ಬೆಳುವಾಯಿ ಗ್ರಾ.ಪಂ. ಅಧ್ಯಕ್ಷ ಬೆಳುವಾಯಿ ಭಾಸ್ಕರ ಆಚಾರ್ಯ, ಪಡುಮಾರ್ನಾಡು ಗ್ರಾ.ಪಂ. ಅಧ್ಯಕ್ಷ ಶ್ರೀನಾಥ್‌ ಸುವರ್ಣ, ಜಿಲ್ಲಾ ಕಂಬಳ ಸಮಿತಿ ಕೋಶಾಧಿಕಾರಿ ಸುರೇಶ್‌ ಕೆ. ಪೂಜಾರಿ, ಉದ್ಯಮಿಗಳಾದ ತಿಮ್ಮಯ್ಯ ಶೆಟ್ಟಿ, ರಂಜಿತ್‌ ಪೂಜಾರಿ, ಬಿಜೆಪಿ ಪ್ರಮುಖರಾದ ಜಗದೀಶ ಅಧಿಕಾರಿ, ಸುದರ್ಶನ ಎಂ., ಈಶ್ವರ ಕಟೀಲು, ಸುಕೇಶ್‌ ಶೆಟ್ಟಿ, ದಯಾನಂದ ಪೈ, ಮನೋಜ್‌ ಶೆಣೈ, ಕೆ. ಆರ್‌. ಪಂಡಿತ್‌, ರಾಜೇಶ್‌ ಮಲ್ಯ, ಶಾಂತಿಪ್ರಸಾದ ಹೆಗ್ಡೆ, ಭುವನಾಭಿರಾಮ ಉಡುಪ ಮೊದಲಾದವರಿದ್ದರು.

ಸಮಿತಿಯ ಕೋಶಾಧಿಕಾರಿ ಭಾಸ್ಕರ್‌ ಎಸ್‌.ಕೋಟ್ಯಾನ್‌ ಹಾಗೂ ಪ್ರಧಾನ ಕಾರ್ಯದರ್ಶಿ ಕೆ.ಗುಣಪಾಲ ಕಡಂಬ, ಮೇಘನಾದ್‌ ಶೆಟ್ಟಿ ಕಂಬಳ ಕೋಣಗಳ ಯಜಮಾನರನ್ನು ಸ್ವಾಗತಿಸಿದರು. ನವೀನ್‌ ಅಂಬೂರಿ, ಯುವ ಉದ್ಘೋಷಕ ಪಿಯು ವಿದ್ಯಾರ್ಥಿ ಪ್ರಖ್ಯಾತ್‌ ಭಂಡಾರಿ, ನಿತಿನ್‌ ಎಕ್ಕಾರು ಸಹಿತ ಉದ್ಘೋಷಕ ತಂಡದವರು ನಿರೂಪಿಸಿದರು.

ಬಡಗಿನ ಬಾರಕೂರಿನಿಂದ ತೆಂಕಿನ ಚಂದ್ರಗಿರಿಯವರೆಗೆ
ಉಮಾನಾಥ ಕೋಟ್ಯಾನ್‌ ಅವರು ಮಾತನಾಡಿ, ಬಡಗಿನ ಬಾರಕೂರಿನಿಂದ ತೆಂಕಿನ ಚಂದ್ರಗಿರಿಯವರೆಗಿನ ತುಳುವರೆಲ್ಲ ಜಾತಿ ವರ್ಗ ಭೇದ ಮರೆತು ತುಳುವರೇ. ಅವರೊಂದಿಗೆ ಹಾಸುಹೊಕ್ಕಾದ ತುಳು ಸಂಸ್ಕೃತಿಯ ಪ್ರತೀಕವಾದ ಕಂಬಳ ಮೂಡುಬಿದಿರೆಯಲ್ಲಿ ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿದ್ದು ಅದನ್ನು ವೈಭವಯುತವಾಗಿ, ಕಾನೂನಿಗೆ ತಲೆಬಾಗಿ ನಡೆಸಿ, ನಿಗದಿತ 24 ತಾಸುಗಳ ಕಾಲದೊಳಗೆ ಮುಗಿಸುವ ಇರಾದೆ ಇದೆ ಎಂದರು.

ಟಾಪ್ ನ್ಯೂಸ್

Hasan: ಪೆನ್‌ಡ್ರೈವ್‌ ಹಂಚಿದವರ ಪತ್ತೆಗೆ ಸಿಸಿ ಕೆಮರಾ ಪರಿಶೀಲನೆ

Hasan: ಪೆನ್‌ಡ್ರೈವ್‌ ಹಂಚಿದವರ ಪತ್ತೆಗೆ ಸಿಸಿ ಕೆಮರಾ ಪರಿಶೀಲನೆ

HDK SPark

Pen drive ಕೊಡುವೆ, ತನಿಖೆ ನಡೆಸುತ್ತೀರಾ?: ಸಿಎಂಗೆ ಎಚ್‌ಡಿಕೆ ಸವಾಲು

MOdi (3)

Uttar Pradesh ಬಗ್ಗೆ ವಿಪಕ್ಷ ಕೂಟ ತುಚ್ಛ ಮಾತು: ಪ್ರಧಾನಿ ಮೋದಿ

Ramalinga reddy 2

Karnataka ;ಸಾರಿಗೆ ನೌಕರರ ವೇತನ ಶೇ. 12-15 ಹೆಚ್ಚಳ?

1-qwqeqwe

Medicine; 41 ಅಗತ್ಯ ಔಷಧಗಳ ಬೆಲೆ ಮತ್ತಷ್ಟು ಇಳಿಕೆ

1-wewqeqe

Ram Mandir ಆಯ್ತು ಈಗ ಬಿಜೆಪಿ ಸೀತಾ ದೇಗುಲ ಭರವಸೆ!

naksal (2)

Naxal ಶರಣಾದರೆ ಸರಕಾರದಿಂದ  ಪ್ರೋತ್ಸಾಹ: ಡಾ| ಬಂಜಗೆರೆ ಜಯಪ್ರಕಾಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

Hasan: ಪೆನ್‌ಡ್ರೈವ್‌ ಹಂಚಿದವರ ಪತ್ತೆಗೆ ಸಿಸಿ ಕೆಮರಾ ಪರಿಶೀಲನೆ

Hasan: ಪೆನ್‌ಡ್ರೈವ್‌ ಹಂಚಿದವರ ಪತ್ತೆಗೆ ಸಿಸಿ ಕೆಮರಾ ಪರಿಶೀಲನೆ

HDK SPark

Pen drive ಕೊಡುವೆ, ತನಿಖೆ ನಡೆಸುತ್ತೀರಾ?: ಸಿಎಂಗೆ ಎಚ್‌ಡಿಕೆ ಸವಾಲು

MOdi (3)

Uttar Pradesh ಬಗ್ಗೆ ವಿಪಕ್ಷ ಕೂಟ ತುಚ್ಛ ಮಾತು: ಪ್ರಧಾನಿ ಮೋದಿ

Ramalinga reddy 2

Karnataka ;ಸಾರಿಗೆ ನೌಕರರ ವೇತನ ಶೇ. 12-15 ಹೆಚ್ಚಳ?

1-qwqeqwe

Medicine; 41 ಅಗತ್ಯ ಔಷಧಗಳ ಬೆಲೆ ಮತ್ತಷ್ಟು ಇಳಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.