‘ಸಾಹಿತ್ಯ ಬದುಕಿನೊಂದಿಗೆ ಬೆಸೆಯುವ ರಂಗ’

Team Udayavani, Jan 18, 2019, 5:56 AM IST

18j-anuary-7.jpg

ವೇಣೂರು (ಪಾಂಡ್ಯಪ್ಪ ಅರಸರಾದ ಕೃಷ್ಣರಾಜ ಅಜಿಲ ವೇದಿಕೆ, ಅಳದಂಗಡಿ): ಸಾಹಿತ್ಯ ನಮ್ಮನ್ನು ಬದುಕಿನೊಂದಿಗೆ ಬೆಸೆಯುವ ರಂಗ. ಅದರಲ್ಲಿ ಅಂತರಂಗದ ಭಾವನಾತ್ಮಕ ಜಗತ್ತು ಇದೆ. ಸಾಹಿತ್ಯ, ಯಕ್ಷಗಾನ, ಸಂಗೀತ ಮುಂತಾದ ಕಲೆಗಳು ನಮ್ಮ ಭಾವನಾತ್ಮಕ ಮನಸ್ಸನ್ನು ಉದ್ದೀಪನ ಗೊಳಿಸುತ್ತವೆ ಎಂದು ಮಂಗಳೂರಿನ ಹಿರಿಯ ಸಾಹಿತಿ ಭುವನೇಶ್ವರಿ ಹೆಗಡೆ ಅವರು ಹೇಳಿದರು.

ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಬೆಳ್ತಂಗಡಿ ತಾ| ಘಟಕದ ವತಿಯಿಂದ ಅಳದಂಗಡಿಯ ಪಾಂಡ್ಯಪ್ಪ ಅರಸರಾದ ಕೃಷ್ಣರಾಜ ಅಜಿಲ ವೇದಿಕೆಯಲ್ಲಿ ಜರಗಿದ 16ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಕಾರ್ಯಕ್ರಮದಲ್ಲಿ ಸಮಾ ರೋಪ ಭಾಷಣ ಮಾಡಿ, ಗುರುಹಿರಿಯರ ಒಳ್ಳೆಯ ದನ್ನು ಮುಂದಿನ ಪೀಳಿಗೆಗೆ ದಾಟಿಸುವವರು ನಾವಾಗ ಬೇಕು. ಒಳ್ಳೆ ಯತನವನ್ನು ಕಾಣುವ ಕಣ್ಣುಗಳು ನಮ್ಮದಾಗಬೇಕು ಎಂದು ತಿಳಿಸಿದರು. ಸಮ್ಮೇಳನದ ಸರ್ವಾ ಧ್ಯಕ್ಷ ಪ. ರಾಮಕೃಷ್ಣ ಶಾಸ್ತ್ರಿ ಮಚ್ಚಿನ ಅವರು ಮಾತನಾಡಿದರು.

ಏಕರೂಪದ ಶಿಕ್ಷಣ
ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ದ.ಕ. ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಎಸ್‌. ಪ್ರದೀಪ್‌ ಕುಮಾರ ಕಲ್ಕೂರ ಅವರು ಮಾತನಾಡಿ, ನಾವು ಪ್ರಭುತ್ವದಿಂದ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿದ್ದೇವೆ. ಆದರೆ ದೇಶದಲ್ಲಿ ನಡೆಯಬಾರದ ಘಟನೆಗಳು ನಡೆಯುತ್ತಿವೆ. ಶಾಲೆ ಗಳಲ್ಲಿ ಏಕರೂಪದ ಶಿಕ್ಷಣ ವ್ಯವಸ್ಥೆ ಜಾರಿ ಯಾಗಬೇಕು. ನಮ್ಮ ಸಂಸ್ಕೃತಿಯಂತೆ ಬದುಕಲು ಸಾಹಿತ್ಯಗಳು ಪ್ರೇರಣೆ ಆಗಿವೆ ಎಂದು ತಿಳಿಸಿದರು.

ಸಮ್ಮೇಳನ ಸಂಯೋಜನ ಸಮಿತಿ ಗೌರವಾಧ್ಯಕ್ಷ ಡಾ| ಪದ್ಮಪ್ರಸಾದ ಅಜಿಲರು, ಬೆಳ್ತಂಗಡಿ ಕ.ಸಾ.ಪ. ಅಧ್ಯಕ್ಷ ಡಾ| ಬಿ. ಯಶೋವರ್ಮ, ಅಳದಂಗಡಿ ಜಿ.ಪಂ. ಸದಸ್ಯ ಶೇಖರ ಕುಕ್ಕೇಡಿ, ತಾ.ಪಂ. ಸದಸ್ಯೆ ವಿನುಷಾ ಪ್ರಕಾಶ್‌, ಸ.ಸಂ.ಸ. ಕೋಶಾ ಧ್ಯಕ್ಷ ಪ್ರಕಾಶ್‌ ಶೆಟ್ಟಿ ನೊಚ್ಚ, ಕಾರ್ಯ ದರ್ಶಿಗಳಾದ ರಾಮಕೃಷ್ಣ ಭಟ್ ಬೆಳಾಲು, ಅಶ್ರಫ್‌ ಆಲಿ ಕುಂಞಿ, ಜಿಲ್ಲಾ ಕಸಾಪ ಗೌರವ ಕಾರ್ಯ ದರ್ಶಿ ಡಾ| ಎಂ.ಪಿ. ಶ್ರೀನಾಥ್‌ ಮತ್ತಿತರರು ಉಪಸ್ಥಿತರಿದ್ದರು. ಸಂದೀಪ್‌ ಎಸ್‌.ಎನ್‌. ಸುಶೀಲಾ, ಮಂಗಳಾ, ಮೋಹನ ದಾಸ ಸಮ್ಮಾನಪತ್ರ ವಾಚಿಸಿದರು.

ಸಮ್ಮೇಳನ ಸಂಯೋಜನ ಸಮಿತಿ ಅಧ್ಯಕ್ಷ ಶಿವಪ್ರಸಾದ್‌ ಅಜಿಲ ಸ್ವಾಗತಿಸಿ, ಪ್ರ. ಕಾರ್ಯ ದರ್ಶಿ ಯಶೋಧರ ಸುವರ್ಣ ವಂದಿಸಿದರು. ಶಿಕ್ಷಕ ಅಜಿತ್‌ ಕುಮಾರ್‌ ಕೊಕ್ರಾಡಿ ನಿರೂಪಿಸಿ ದರು. ತಾ| ಕನ್ನಡ ಸಾಹಿತ್ಯ ಪರಿಷತ್‌ ಹಾಗೂ ಸಮ್ಮೇಳನ ಸಂಯೋಜನ ಸಮಿತಿ ಪದಾಧಿಕಾರಿಗಳು ಹಾಗೂ ಸದಸ್ಯರು ಸಹಕರಿಸಿದರು.

ಸಮ್ಮಾನ  
ಸಮ್ಮೇಳನಾಧ್ಯಕ್ಷ ಪ. ರಾಮಕೃಷ್ಣ ಶಾಸ್ತ್ರಿ ಮಚ್ಚಿನ ದಂಪತಿಯನ್ನು ಸಮ್ಮಾನಿಸಲಾಯಿತು. ಸಮಿತಿ ಗೌರವಾಧ್ಯಕ್ಷ ನೀಡಿದ ಅಳದಂಗಡಿ ಅರಮನೆಯ ತಿಮ್ಮಣ್ಣರಸ ಡಾ| ಪದ್ಮಪ್ರಸಾದ ಅಜಿಲ ಅವರನ್ನು ಗೌರ ವಿಸಲಾಯಿತು. ವಿವಿಧ ಕ್ಷೇತ್ರ ಗಳ ಸಾಧಕರಾದ ಶಶಿಧರ ಶೆಟ್ಟಿ (ಉದ್ಯಮ), ಸುಂದರ ದೇವಾಡಿಗ (ಸ್ಯಾಕ್ಸೋಫೋನ್‌ ಕಲಾವಿದ), ಡೊಂಬ ನಲ್ಕೆ (ಜಾನಪದ), ವಿ. ಮಹಮ್ಮದ್‌ (ಜೀವರಕ್ಷಕ), ರಘುನಾಥ ರೈ (ಶಿಕ್ಷಣ, ಸಮಾಜಸೇವೆ), ಡಾ| ವೇಣುಗೋಪಾಲ ಶರ್ಮ (ವೈದ್ಯಕೀಯ), ರವಿಚಂದ್ರ ಕನ್ನಡಿಕಟ್ಟೆ (ಯಕ್ಷಗಾನ), ವಿಜಯ ಕುಮಾರ್‌ ನಾವರ (ಕಲಾ ಸಂಘಟನೆ), ವಿಶ್ವನಾಥ ಗೌಡ ಕೆ. (ಮಿಶ್ರಕೃಷಿ), ಪ್ರಶಾಂತ್‌ (ಕ್ರೀಡಾ ಶಿಕ್ಷಣ), ಅಶ್ವಲ್‌ ರೈ (ಕ್ರೀಡಾಸಾಧಕ) ಅವರ ಪರವಾಗಿ ಅವರ ತಂದೆಯನ್ನು ಸಮ್ಮಾನಿಸಲಾಯಿತು.

ಸಾರ್ಥಕ
ಸಾಹಿತ್ಯ ಸಮ್ಮೇಳನಗಳಿಂದ ಕನ್ನಡ ಭಾಷೆ, ಓದಿನ ಬಗ್ಗೆ ಉತ್ತಮ ಭಾವನೆ ಬರಬೇಕು. ಆಗ ಸಮ್ಮೇಳನಗಳು ಸಾರ್ಥಕವಾಗುತ್ತವೆ. ಸಾಹಿತಿ ಮತ್ತು ಸಾಹಿತ್ಯಗಳನ್ನು ಗುರುತಿಸುವ ಕಾರ್ಯ ಈ ಸಮ್ಮೇಳನಗಳಿಂದ ಆಗುತ್ತಿದ್ದು, ಸಾಹಿತ್ಯಪ್ರಜ್ಞೆ ಮೂಡಿಸುವ ಇಂತಹ ಕೆಲಸ ನಿರಂತರ ನಡೆಯಲಿ. 
– ಪ. ರಾಮಕೃಷ್ಣ ಶಾಸ್ತ್ರಿ ಮಚ್ಚಿನ
 ಸಮ್ಮೇಳನದ ಸರ್ವಾಧ್ಯಕ್ಷರು

ಟಾಪ್ ನ್ಯೂಸ್

Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್‌ ವಿರುದ್ಧ ಕಾಂಗ್ರೆಸ್‌ ವಾಗ್ಧಾಳಿ

Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್‌ ವಿರುದ್ಧ ಕಾಂಗ್ರೆಸ್‌ ವಾಗ್ಧಾಳಿ

Election  ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌Election  ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌

Election ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ

ನಮ್ಮ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ

ನಮ್ಮ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ

1-qewqeqw

Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್‌ ವಿರುದ್ಧ ಕಾಂಗ್ರೆಸ್‌ ವಾಗ್ಧಾಳಿ

Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್‌ ವಿರುದ್ಧ ಕಾಂಗ್ರೆಸ್‌ ವಾಗ್ಧಾಳಿ

accident

Kunigal; ಬೈಕ್‌ಗೆ ಕಾರು ಡಿಕ್ಕಿ: ಯುವಕರಿಬ್ಬರು ಸ್ಥಳದಲ್ಲೇ ದುರ್ಮರಣ

Election  ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌Election  ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌

Election ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ

ನಮ್ಮ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ

ನಮ್ಮ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.