ಈ ಮನೆಯ ಬಾಗಿಲು 16 ವರ್ಷಗಳಿಂದ ತೆರೆದೇ ಇಲ್ಲ!

Team Udayavani, Jan 23, 2019, 5:09 AM IST

23-january-3.jpg

ಬಡಗನ್ನೂರು: ಅರಿಯಡ್ಕ ಗ್ರಾಮದ ಎಂಡೆಸಾಗು ಜನತಾ ಕಾಲನಿಯಲ್ಲಿರುವ ಈ ಮನೆಯ ಮುಂಬಾಗಿಲು 16 ವರ್ಷಗಳಿಂದ ತೆರೆದೇ ಇಲ್ಲ! ಆ ಮನೆಯಲ್ಲಿ ತಾಯಿ ಮತ್ತು ಪುತ್ರ ಇದ್ದಾರೆ. ಮನೆಯೊಳಗೆ ಇರುವ ತಾಯಿಯನ್ನು ಯಾರೇ ಕರೆದರೂ ಮುಂಬಾಗಿಲನ್ನು ಮಾತ್ರ ತೆರೆಯೋದೇ ಇಲ್ಲ. ಹಿಂಬಾಗಿಲ ಮೂಲಕ ಹೊರಬಂದು ಮನೆಯ ಎದುರಿಗೆ ಬರುತ್ತಾರೆ. ಮುಂಭಾಗದ ಬಾಗಿಲು ತೆರೆದರೂ ಹೊರಗಿನಿಂದಲೇ ಚಿಲಕ ಹಾಕಿಕೊಳ್ಳಬೇಕಾಗುತ್ತದೆ. ಅಂತಹ ಪರಿಸ್ಥಿತಿ ಇದೆ ಈ ಮನೆಯಲ್ಲಿ!

ಮನೆಯಲ್ಲಿರುವ ಅನಾರೋಗ್ಯಪೀಡಿತ ಪುತ್ರನ ವರ್ತನೆಯಿಂದಾಗಿ ತಾಯಿಗೆ ಇದು ಅನಿವಾರ್ಯ. ಹುಟ್ಟಿನಿಂದಲೇ ಸಮಸ್ಯೆ ಹೊಂದಿರುವ ಆಸೀಫ‌ನಿಗೆ ಈಗ 21 ವರ್ಷ. ಆತನನ್ನು ತಾಯಿ ಮನೆಯೊಳಗೆ ಕಟ್ಟಿ ಹಾಕುತ್ತಾರೆ. ಪುತ್ರನ ಅವಸ್ಥೆ ನೋಡಿ ನಿತ್ಯವೂ ಕಣ್ಣೀರು ಹಾಕುತ್ತಾರೆ.

ಏನಿದು ಕಾಯಿಲೆ?
ಎಂಡೆ ಸಾಗು ನಿವಾಸಿ ಸಾರಮ್ಮ ಅವರ ಏಕೈಕ ಪುತ್ರ ಮಹಮ್ಮದ್‌ ಆಸಿಫ್. ಸಣ್ಣ ವಯಸ್ಸಿನಲ್ಲೇ ವಿಚಿತ್ರ ಗೀಳೊಂದು ಆತನಿಗೆ ಅಂಟಿಕೊಂಡಿದೆ. ವೈದ್ಯರ ಬಳಿ ಚಿಕಿತ್ಸೆ ಕೊಡಿಸಿದರೂ ಏನೂ ಪ್ರಯೋಜನವಾಗಿಲ್ಲ. ಮನೆಯಿಂದ ಹೊರಗಡೆ ಹೋದರೆ ಆತನನ್ನು ಹಿಡಿಯಲು ಸಾಧ್ಯವಾಗದು. ಪಕ್ಕದ ಮನೆಗಳಿಗೆ ತೆರಳಿ ಲೂಟಿ ಮಾಡುತ್ತಾನೆ. ಮಾತು ಬರುವುದಿಲ್ಲ. ದೇಹ ಬೆಳೆದಿದೆ. ಹೊರಳಾಡಿಕೊಂಡೇ ಆಚೀಚೆ ತೆರಳುತ್ತಾನೆ. ಕೈಗೆ ಸಿಕ್ಕ ವಸ್ತುಗಳನ್ನು ಪುಡಿ ಮಾಡುತ್ತಾನೆ. ಬೇರೆಯವರಿಗೆ ತೊಂದರೆ ಆಗಬಾರದೆಂದು ತಾಯಿ ಈತನ ಕಾಲುಗಳನ್ನು ಹಳೆಯ ಬಟ್ಟೆಯೊಂದರಿಂದ ಕಟ್ಟಿ ಹಾಕುತ್ತಾರೆ. ಆದರೆ, ಕಟ್ಟಿರುವ ಬಟ್ಟೆಯನ್ನು ಸುಲಭವಾಗಿ ಬಿಚ್ಚಬಹುದು ಅಥವಾ ತುಂಡು ಮಾಡಬಹುದು ಎಂಬ ಅರಿವೂ ಆಸಿಫ‌ನಿಗಿಲ್ಲ!

ಮನಕಲಕುವ ದೃಶ್ಯ
ಆಸೀಫ‌ ಮಲಗುವ ಜಾಗದ ಪಕ್ಕದಲ್ಲಿ ಶೌಚಾಲಯಕ್ಕೆ ಸಂಪರ್ಕ ಕೊಂಡಿಯಗಿ ಪೈಪ್‌ ಜೋಡಿಸಲಾಗಿದೆ. ಆತನನ್ನು ಕಟ್ಟಿ ಹಾಕಲು ಮನೆಯ ಗೋಡೆಯಲ್ಲಿ ರಾಡ್‌ ಅಳವಡಿಸಲಾಗಿದೆ. ಅನಾರೋಗ್ಯದಿಂದಾಗಿ ದಿನಕ್ಕೆ ಒಂದಷ್ಟು ಮಾತ್ರೆ ಸೇವಿಸುವ ಕಾರಣ ಆತನಿಗೆ ಸರಿಯಾಗಿ ನಿದ್ದೆಯೂ ಬರುತ್ತಿಲ್ಲ. ತನ್ನ ತಲೆಯನ್ನು ಗೋಡೆಗೆ ಚಚ್ಚಿಕೊಳ್ಳುತ್ತಾನೆ. ಕೈಯಿಂದ ತಲೆಗೆ ಹೊಡೆದುಕೊಳ್ಳುತ್ತಾನೆ. ಹೊಡೆತದಿಂದ ತಲೆಯ ಒಂದು ಭಾಗವೇ ಚಪ್ಪಟೆಯಾಗಿದೆ. ತನ್ನ ದೇಹಕ್ಕೆ ತಾನೇ ಹೊಡೆದುಕೊಳ್ಳುವ ಕಾರಣಕ್ಕೆ ತಲೆಯಲ್ಲಿ, ಮೂಗಿನಲ್ಲಿ ಆಗಾಗ ರಕ್ತ ಚಿಮ್ಮುತ್ತದೆ. ಆದರೆ ತಾಯಿ ಇದೆಲ್ಲವನ್ನೂ ನೋಡಿಕೊಂಡು ಮೌನವಾಗಿ ಕಣ್ಣೀರು ಹಾಕುತ್ತಿದ್ದಾರೆ. ಆತನ ಬೊಬ್ಬೆ, ಕಿರುಚಾಟವನ್ನು ಸಹಿಸಿಕೊಳ್ಳುವುದು ಅನಿವಾರ್ಯವಾಗಿದೆ. ಆತನ ಆರೈಕೆ ಮಾಡುವುದರಲ್ಲೇ ತಾಯಿಯ ದಿನ ಕಳೆದು ಹೋಗುತ್ತಿದೆ.

ಮಾಸಾಶನ, ಔಷಧಿಗೆ ಖರ್ಚು
ತಿಂಗಳ ವಿಶೇಷ ಮಾಸಾಶನವಾಗಿ 3 ಸಾವಿರ ರೂ. ಬರುತ್ತಿದೆ. ಇದು ಮಗನ ಔಷಧಿಗೆ ಖರ್ಚಾಗಿ ಹೋಗುತ್ತಲಿದೆ. ಮಗನನ್ನು ಮನೆಯಲ್ಲಿ ಬಿಟ್ಟು ಹೋಗುವಂತಿಲ್ಲ. ಯಾವ ಗಳಿಗೆಯಲ್ಲಿ ಏನಾಗಬಹುದು ಎನ್ನುವ ಭಯ ತಾಯಿಗೆ ಇರುವ ಕಾರಣ ಮನೆ ಬಿಡುವಂತಿಲ್ಲ. ಆದರೂ ಒಮ್ಮೊಮ್ಮೆ ಹೊಟ್ಟೆ ಪಾಡಿಗಾಗಿ ಸಣ್ಣ ಪುಟ್ಟ ಕೆಲಸಗಳಿಗೆ ಹೋಗುತ್ತಾರೆ. ಆಸೀಫ‌ನ ತಂದೆ ಎರಡು ವರ್ಷಗಳ ಹಿಂದೆಯೇ ನಿಧನರಾಗಿದ್ದಾರೆ. ವೃದ್ಧೆ ತಾಯಿಗೆ ಈಗ ಮಗನ ಆರೈಕೆ ಮಾಡಲು ಸಾಧ್ಯವಿಲ್ಲದಷ್ಟು ಆರೋಗ್ಯ ಕೆಟ್ಟಿದೆ. ಹೀಗಾಗಿ, ಅವರೀಗ ಸಹೃದಯರು ಹಾಗೂ ಸಂಘ- ಸಂಸ್ಥೆಗಳ ನೆರವಿನ ನಿರೀಕ್ಷೆಯಲ್ಲಿದ್ದಾರೆ.

ಮನೆಯೊಳಗೆ ಮನಕಲಕುವ ದೃಶ್ಯ
ಆಸೀಫ‌ ಮಲಗುವ ಜಾಗದ ಪಕ್ಕದಲ್ಲಿ ಶೌಚಾಲಯಕ್ಕೆ ಸಂಪರ್ಕ ಕೊಂಡಿಯಗಿ ಪೈಪ್‌ ಜೋಡಿಸಲಾಗಿದೆ. ಆತನನ್ನು ಕಟ್ಟಿ ಹಾಕಲು ಮನೆಯ ಗೋಡೆಯಲ್ಲಿ ರಾಡ್‌ ಅಳವಡಿಸಲಾಗಿದೆ. ಅನಾರೋಗ್ಯದಿಂದಾಗಿ ದಿನಕ್ಕೆ ಒಂದಷ್ಟು ಮಾತ್ರೆ ಸೇವಿಸುವ ಕಾರಣ ಆತನಿಗೆ ಸರಿಯಾಗಿ ನಿದ್ದೆಯೂ ಬರುತ್ತಿಲ್ಲ. ತನ್ನ ತಲೆಯನ್ನು ಗೋಡೆಗೆ ಚಚ್ಚಿಕೊಳ್ಳುತ್ತಾನೆ. ಕೈಯಿಂದ ತಲೆಗೆ ಹೊಡೆದುಕೊಳ್ಳುತ್ತಾನೆ. ಹೊಡೆತದಿಂದ ತಲೆಯ ಒಂದು ಭಾಗವೇ ಚಪ್ಪಟೆಯಾಗಿದೆ. ತನ್ನ ದೇಹಕ್ಕೆ ತಾನೇ ಹೊಡೆದುಕೊಳ್ಳುವ ಕಾರಣಕ್ಕೆ ತಲೆಯಲ್ಲಿ, ಮೂಗಿನಲ್ಲಿ ಆಗಾಗ ರಕ್ತ ಚಿಮ್ಮುತ್ತದೆ. ಆದರೆ ತಾಯಿ ಇದೆಲ್ಲವನ್ನೂ ನೋಡಿಕೊಂಡು ಮೌನವಾಗಿ ಕಣ್ಣೀರು ಹಾಕುತ್ತಿದ್ದಾರೆ. ಆತನ ಬೊಬ್ಬೆ, ಕಿರುಚಾಟವನ್ನು ಸಹಿಸಿಕೊಳ್ಳುವುದು ಅನಿವಾರ್ಯವಾಗಿದೆ. ಆತನ ಆರೈಕೆ ಮಾಡುವುದರಲ್ಲೇ ತಾಯಿಯ ದಿನ ಕಳೆದು ಹೋಗುತ್ತಿದೆ.

ಪಂಚಾಯತ್‌ನಿಂದ ಸಹಕಾರ
ಅಂಗವಿಕಲನ ಕುಟುಂಬಕ್ಕೆ ಸರಕಾರದಿಂದ ನೀಡುವ ಎಲ್ಲ ಸೌಲಭ್ಯಗಳನ್ನು ಸಕಾಲಕ್ಕೆ ದೊರಕಿಸಿ ಕೊಡಲಾಗುತ್ತದೆ. ಗ್ರಾಮ ಪಂಚಾಯತ್‌ ವತಿಯಿಂದ ಗೋದ್ರೆಜ್‌ ಕಪಾಟನ್ನು ನೀಡಲಾಗಿದೆ.
– ಸವಿತಾ ಎಸ್‌.,
ಅರಿಯಡ್ಕ ಗ್ರಾ.ಪಂ. ಅಧ್ಯಕ್ಷ

 ದಿನೇಶ್‌ ಬಡಗನ್ನೂರು

ಟಾಪ್ ನ್ಯೂಸ್

ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI

Davanagere: ಕರ್ತವ್ಯ ನಿರ್ಲಕ್ಷ್ಯ… ಇಂಜಿನಿಯರ್, ಬಿಲ್ ಕಲೆಕ್ಟರ್ ಅಮಾನತು

ಬಿಜೆಪಿಗೆ ಆಶೀರ್ವಾದ ಮಾಡಲು ವಚನಾನಂದ ಶ್ರೀ ಕಾತರ: ಯತ್ನಾಳ್‌

Road Mishap: ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

WhatsApp ಚಾಟ್‌ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ

LPG Cylinder: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ 19 ರೂ. ಇಳಿಕೆ; ಬೆಂಗಳೂರಿನಲ್ಲಿ 1825 ರೂ.

Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI

ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI

Davanagere: ಕರ್ತವ್ಯ ನಿರ್ಲಕ್ಷ್ಯ… ಇಂಜಿನಿಯರ್, ಬಿಲ್ ಕಲೆಕ್ಟರ್ ಅಮಾನತು

Davanagere: ಕರ್ತವ್ಯ ನಿರ್ಲಕ್ಷ್ಯ… ಇಂಜಿನಿಯರ್, ಬಿಲ್ ಕಲೆಕ್ಟರ್ ಅಮಾನತು

ಬಿಜೆಪಿಗೆ ಆಶೀರ್ವಾದ ಮಾಡಲು ವಚನಾನಂದ ಶ್ರೀ ಕಾತರ: ಯತ್ನಾಳ್‌

ಬಿಜೆಪಿಗೆ ಆಶೀರ್ವಾದ ಮಾಡಲು ವಚನಾನಂದ ಶ್ರೀ ಕಾತರ: ಯತ್ನಾಳ್‌

Road Mishap: ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

Road Mishap: ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

WhatsApp ಚಾಟ್‌ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ

WhatsApp ಚಾಟ್‌ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.