ಬಿಳಿನೆಲೆ ಹೊಸ ಸೇತುವೆ ಸಂಚಾರಕ್ಕೆ ಶೀಘ್ರ ಮುಕ್ತ

Team Udayavani, Feb 13, 2019, 4:37 AM IST

13-february-2.jpg

ಕಡಬ: ಧರ್ಮಸ್ಥಳ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಬಿಳಿನೆಲೆ-ನೆಟ್ಟಣ ನಡುವೆ ಹಳೆಯ ಮುಳುಗು ಸೇತು ವೆಯ ಪಕ್ಕದಲ್ಲಿ ನೂತನ ಸೇತುವೆ ನಿರ್ಮಾಣ ಕಾರ್ಯ ಮುಗಿದು ಸಂಪರ್ಕ ರಸ್ತೆ ನಿರ್ಮಾಣ ಕಾಮಗಾರಿ ಭರದಿಂದ ಸಾಗು ತ್ತಿದೆ. ನಿರೀಕ್ಷೆಯಂತೆ ನಡೆದರೆ ಇದೇ ತಿಂಗಳ ಕೊನೆಯೊಳಗೆ ನೂತನ ಸೇತುವೆಯಲ್ಲಿ ವಾಹನಗಳು ಸಂಚರಿಸಲಿವೆ.

ಬಿಳಿನೆಲೆ-ನೆಟ್ಟಣದ ನಡುವೆ ಇರುವ ಬಿಳಿನೆಲೆ ಸೇತುವೆಯ ಕಾಮಗಾರಿ ಆರಂಭಗೊಂಡು 2 ವರ್ಷಗಳು ಪೂರ್ತಿ ಯಾಗಿವೆ. 3 ಕೋಟಿ ರೂ. ವೆಚ್ಚದಲ್ಲಿ ಸೇತುವೆ, ಸಂಪರ್ಕ ರಸ್ತೆ ನಿರ್ಮಾಣ ವಾಗುತ್ತಿದೆ. ಆ ಪೈಕಿ 2.75 ಕೋಟಿ ರೂ. ವೆಚ್ಚದಲ್ಲಿ ಸೇತುವೆಯ ಕಾಮಗಾರಿ ನಡೆದಿದ್ದು, ಸಂಪರ್ಕ ರಸ್ತೆಯ ಕಾಮಗಾರಿಗೆ 25 ಲಕ್ಷ ರೂ. ವ್ಯಯ ವಾಗಲಿದೆ.

ಕೈಕಂಬ ಸೇತುವೆ ಬಾಕಿ
ಮುಳುಗು ಸೇತುವೆಗಳಿದ್ದ ಸುಬ್ರಹ್ಮಣ್ಯದ ಕುಮಾರಧಾರಾ, ನೆಟ್ಟಣ, ಮರ್ದಾಳ ಬಳಿಯ ಬಜಕೆರೆ, ಕುಂತೂರು ಸೇತುವೆ, ಕೆಮ್ಮಾರ ಸೇತುವೆಗಳ ಪಕ್ಕ ದಲ್ಲಿಯೇ ಹೊಸ ಸರ್ವಋತು ಸೇತುವೆ ಗಳು ನಿರ್ಮಾಣವಾಗಿ ವಾಹನಗಳು ಸಂಚರಿಸುತ್ತಿವೆ. ಇದೀಗ ಕಡಬ ಬಳಿಯ ಹೊಸಮಠ ಸೇತುವೆ ಹಾಗೂ ಬಿಳಿನೆಲೆ ಸೇತುವೆ ಫೆಬ್ರವರಿ ಮಾಸಾಂತ್ಯದಲ್ಲಿ ವಾಹನ ಸಂಚಾರಕ್ಕೆ ತೆರೆದುಕೊಳ್ಳಲಿದೆ. ಇನ್ನು ಬಾಕಿ ಉಳಿದಿರುವ ಬಿಳಿನೆಲೆ-ಕೈಕಂಬದ ನಡುವಿನ ಸೇತುವೆ ಮಾತ್ರ. ಅಲ್ಲಿಯೂ ನೂತನ ಸೇತುವೆ ನಿರ್ಮಿಸಲು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ (ಕೆಆರ್‌ಡಿಸಿಎಲ್‌) ಮೂಲಕ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಶೀಘ್ರ ಅನುದಾನ ಬಿಡುಗಡೆಯಾಗಲಿದೆ ಎನ್ನುವ ಮಾಹಿತಿ ಇದೆ.

ಮುಳುಗು ಸೇತುವೆಗಳಿಗೆ ಮುಕ್ತಿ
ದಕ್ಷಿಣ ಭಾರತದ ಅತೀ ದೊಡ್ಡ ಯಾತ್ರಾಸ್ಥಳ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನವನ್ನು ಉಪ್ಪಿನಂಗಡಿ – ಕಡಬ ಮೂಲಕ ಸಂಪರ್ಕಿಸುವ ರಾಜ್ಯ ಹೆದ್ದಾರಿ ಯಲ್ಲಿ ಹಳೆಯ ಮುಳುಗು ಸೇತುವೆಗಳೇ ಇದ್ದುದರಿಂದ ಮಳೆಗಾಲದಲ್ಲಿ ನೆರೆ ನೀರು ಉಕ್ಕಿ ಸೇತುವೆಗಳ ಮೇಲೆ ಹರಿದು ವಾಹನ ಸಂಚಾರಕ್ಕೆ ಅಡ್ಡಿಯುಂಟಾ ಗುತ್ತಿದ್ದುದರಿಂದಾಗಿ ಯಾತ್ರಾರ್ಥಿಗಳು ಹಾಗೂ ಸಾರ್ವಜನಿಕರು ತೀವ್ರ ಸಮಸ್ಯೆ ಎದುರಿಸುವಂತಾಗಿತ್ತು. ಇದೀಗ ಹೆಚ್ಚಿನ ಸೇತುವೆಗಳು ಸರ್ವಋತು ಸೇತುವೆಗಳಾಗಿ ನಿರ್ಮಾಣಗೊಂಡಿವೆ.

ಪ್ರಸ್ತಾವನೆ ಸಲ್ಲಿಸಲಾಗಿದೆ
ಸುಳ್ಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬೃಹತ್‌ ಸೇತುವೆಗಳಾದ ಸುಬ್ರಹ್ಮಣದ ಕುಮಾರಧಾರಾ ಹಾಗೂ ಶಾಂತಿಮೊಗರು ಸೇತುವೆ ನಿರ್ಮಾಣ ಮುಗಿದು ಸಂಚಾರಕ್ಕೆ ಮುಕ್ತವಾಗಿವೆ. ಕಡಬದ ಹೊಸಮಠ ಸೇತುವೆ ಹಾಗೂ ಬಿಳಿನೆಲೆ ಸೇತುವೆಯ ಕಾಮಗಾರಿ ಬಹುತೇಕ ಮುಗಿದಿದೆ. ಫೆಬ್ರವರಿ ಅಂತ್ಯದೊಳಗೆ ಸೇತುವೆಯ ಎಲ್ಲ ಕೆಲಸ ಮುಗಿದು ವಾಹನ ಸಂಚಾರಕ್ಕೆ ಮುಕ್ತಗೊಳ್ಳಲಿದೆ. ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿನ ಮುಳುಗು ಸೇತುವೆಗಳ ಪೈಕಿ ಕೈಕಂಬ ಸೇತುವೆ ಮಾತ್ರ ಬಾಕಿ ಇದ್ದು, ಅಲ್ಲಿ ನೂತನ ಸೇತುವೆ ನಿರ್ಮಿಸಲು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ (ಕೆಆರ್‌ಡಿಸಿಎಲ್‌) ಮೂಲಕ ಪ್ರಸ್ತಾವನೆ ಸಲ್ಲಿಸಲಾಗಿದೆ.
– ಎಸ್‌. ಅಂಗಾರ,
 ಸುಳ್ಯ ಶಾಸಕರು

ನಾಗರಾಜ್‌ ಎನ್‌.ಕೆ.

ಟಾಪ್ ನ್ಯೂಸ್

Heavy Rain ಕಾಫಿನಾಡಿನಲ್ಲಿ ವರುಣಾರ್ಭಟಕ್ಕೆ ಮೂರು ಬಲಿ; ಮೂವರಿಗೆ ಗಂಭೀರ ಗಾಯ

Heavy Rain ಕಾಫಿನಾಡಿನಲ್ಲಿ ವರುಣಾರ್ಭಟಕ್ಕೆ 3ನೇ ಬಲಿ; ಮೂವರಿಗೆ ಗಂಭೀರ ಗಾಯ

Sagara ಅಡಿಕೆ ಕಳ್ಳತನ; ಹಳ್ಳಿಗಳಲ್ಲಿ ಗಸ್ತು ಹೆಚ್ಚಿಸಲು ಮನವಿ

Sagara ಅಡಿಕೆ ಕಳ್ಳತನ; ಹಳ್ಳಿಗಳಲ್ಲಿ ಗಸ್ತು ಹೆಚ್ಚಿಸಲು ಮನವಿ

18

Delhi: ದಿಲ್ಲಿಯ 2 ಆಸ್ಪತ್ರೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್: ಮುಂದುವರೆದ ಶೋಧ

17

Baratang‌ Island: ಬಾರಾತಂಗ್‌ ಎಂಬ ಬೆರಗು

Chikmagalur: ಒಂಟಿ ಸಲಗ ಸಾವು; ವಿದ್ಯುತ್ ಹರಿಸಿ ಕೊಂದ ಆರೋಪ

Chikmagalur: ಒಂಟಿ ಸಲಗ ಸಾವು; ವಿದ್ಯುತ್ ಹರಿಸಿ ಕೊಂದ ಆರೋಪ

15

Crime: ರಾಡ್‌ನಿಂದ ಹಲ್ಲೆ ಮಾಡಿ ಪತ್ನಿಯ ಬರ್ಬರ ಹತ್ಯೆ; ಆರೋಪಿ ಪತಿ ಪರಾರಿ

8-gangavathi

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

ಹೊಸ ಸೇರ್ಪಡೆ

Heavy Rain ಕಾಫಿನಾಡಿನಲ್ಲಿ ವರುಣಾರ್ಭಟಕ್ಕೆ ಮೂರು ಬಲಿ; ಮೂವರಿಗೆ ಗಂಭೀರ ಗಾಯ

Heavy Rain ಕಾಫಿನಾಡಿನಲ್ಲಿ ವರುಣಾರ್ಭಟಕ್ಕೆ 3ನೇ ಬಲಿ; ಮೂವರಿಗೆ ಗಂಭೀರ ಗಾಯ

Sagara ಅಡಿಕೆ ಕಳ್ಳತನ; ಹಳ್ಳಿಗಳಲ್ಲಿ ಗಸ್ತು ಹೆಚ್ಚಿಸಲು ಮನವಿ

Sagara ಅಡಿಕೆ ಕಳ್ಳತನ; ಹಳ್ಳಿಗಳಲ್ಲಿ ಗಸ್ತು ಹೆಚ್ಚಿಸಲು ಮನವಿ

18

Delhi: ದಿಲ್ಲಿಯ 2 ಆಸ್ಪತ್ರೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್: ಮುಂದುವರೆದ ಶೋಧ

17

Baratang‌ Island: ಬಾರಾತಂಗ್‌ ಎಂಬ ಬೆರಗು

Chikmagalur: ಒಂಟಿ ಸಲಗ ಸಾವು; ವಿದ್ಯುತ್ ಹರಿಸಿ ಕೊಂದ ಆರೋಪ

Chikmagalur: ಒಂಟಿ ಸಲಗ ಸಾವು; ವಿದ್ಯುತ್ ಹರಿಸಿ ಕೊಂದ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.