ಉದ್ಯಾನದಂಚಿನ ಮಾವಿನ ತೋಟ ಭಸ್ಮ

Team Udayavani, Feb 22, 2019, 7:26 AM IST

m4-udyana.jpg

ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನದಂಚಿನ ಎಸ್ಟೇಟ್‌ಗೆ ಕಿಡಿಗೇಡಿಗಳು ಹಾಕಿದ್ದ ಬೆಂಕಿಯಿಂದ 18-20 ಎಕರೆ ಮಾವಿನ ತೋಟ ಭಸ್ಮವಾಗಿದ್ದು, ಅರಣ್ಯಾಧಿಕಾರಿಗಳ ಮುನ್ನೆಚ್ಚರಿಕೆ ಕ್ರಮದಿಂದ ಭಾರೀ ಅನಾಹುತ ತಪ್ಪಿದೆ. 

ತಾಲೂಕಿನ ಹನಗೋಡು ಬಳಿಯ ಕೆ.ಜಿ ಹಬ್ಬನಕುಪ್ಪೆಯ ತರಗನ್‌ ಎಸ್ಟೇಟ್‌ನಲ್ಲಿ ಈ ಅನಾಹುತ ಸಂಭವಿಸಿದ್ದು, 500ಕ್ಕೂ ಹೆಚ್ಚು ಫಲ ಬಿಡುತ್ತಿದ್ದ ಮಾವಿನ ಮರಗಳು ಸುಟ್ಟು ಕರಕಲಾಗಿವೆ. ಅರಣ್ಯ ಸಿಬ್ಬಂದಿ ಕ್ಷಿಪ್ರ ಕಾರ್ಯಾಚರಣೆಯಿಂದ ನಾಗರಹೊಳೆ ಅರಣ್ಯಕ್ಕೆ ಬೆಂಕಿ ಹರಡುವುದನ್ನು ತಪ್ಪಿಸಿದ್ದಾರೆ. 

ಘಟನೆ ವಿವರ: ಗುರುವಾರ ಮಧ್ಯಹ್ನ ಬಿಲ್ಲೇನಹೊಸಳ್ಳಿ ರಸ್ತೆ ಬದಿಯ ಎಸ್ಟೇಟ್‌ನ ಬೇಲಿಕಡೆಯಿಂದ ಕಿಡಿಗೇಡಿಗಳು ಹಾಕಿದ್ದ ಬೆಂಕಿಗೆ ದಟ್ಟ ಹೊಗೆ ಆವರಿಸಿಕೊಂಡು ಏಕಾಏಕಿ ಬೆಂಕಿ ಜ್ವಾಲೆ ಕಾಣಿಸಿಕೊಂಡಿತು. ಗಾಳಿಯ ವೇಗ ಹೆಚ್ಚಾಗುತ್ತಿದ್ದಂತೆ ಬೆಂಕಿ ಎಸ್ಟೇಟ್‌ನ ಸುತ್ತ ಆವರಿಸತೊಡಗಿತು. ನೋಡುತ್ತಿದ್ದಂತೆ ಹತ್ತಾರು ಎಕರೆ ಪ್ರದೇಶವನ್ನು ಆವರಿಸಿಕೊಂಡಿತು.

ಪಕ್ಕದ ನಾಗರಹೊಳೆ ಉದ್ಯಾನದ ಹುಣಸೂರು ವಲಯದ ಟವರ್‌ನಲ್ಲಿದ್ದ ಫೈರ್‌ವಾಚರ್‌ ಮಾಹಿತಿ ನೀಡುತ್ತಿದ್ದಂತೆ ಹುಣಸೂರು ಕಚೇರಿಯಲ್ಲಿದ್ದ ನಾಗರಹೊಳೆ ಹುಲಿಯೋಜನೆ ನಿರ್ದೇಶಕ ನಾರಾಯಣಸ್ವಾಮಿ, ಎಸಿಎಫ್‌ ಪ್ರಸನ್ನಕುಮಾರ್‌, ಆರ್‌ಎಫ್‌ಒ ಸುರೇಂದ್ರ ಸ್ಥಳಕ್ಕೆ ಧಾವಿಸಿ, 100ಕ್ಕೂ ಹೆಚ್ಚು ಅರಣ್ಯ ಹಾಗೂ ಅಗ್ನಿಶಾಮಕ ಸಿಬ್ಬಂದಿ, ಆರ್‌ಆರ್‌ಟಿ ವಾಹನ, ಬೆಂಕಿ ನಂದಿಸುವ ಪರಿಕರಗಳೊಂದಿಗೆ ಸತತ 3 ಗಂಟೆ ಕಾರ್ಯಾಚರಣೆ  ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. 

ಸ್ವಲ್ಪ ಮೈಮರೆತಿದ್ದರೂ ನಾಗರಹೊಳೆಗೆ ಬೆಂಕಿ ಆವರಿಸಿಕೊಳ್ಳುತ್ತಿತ್ತು. ಇದನ್ನರಿತು ತಕ್ಷಣವೇ ನಮ್ಮ ಅರಣ್ಯ ಸಿಬ್ಬಂದಿಯನ್ನು ಪರಿಕರಗಳೊಂದಿಗೆ ಕರೆಸಿ ಬೆಂಕಿ ನಂದಿಸಲಾಯಿತೆಂದು ನಾಗರಹೊಳೆ ಸಿಎಫ್‌ ನಾರಾಯಣಸ್ವಾಮಿ ತಿಳಿಸಿದರು.

ಟಾಪ್ ನ್ಯೂಸ್

May 9: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಮೊದಲ ತಂಡದಿಂದ ಹಜ್‌ ಯಾತ್ರೆ

May 9: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಮೊದಲ ತಂಡದಿಂದ ಹಜ್‌ ಯಾತ್ರೆ

1-wqeewqewqe

ಅಧಿಕಾರಕ್ಕೆ ಬಂದರೆ ರಾಮ ಮಂದಿರ ತೀರ್ಪು ಬದಲಿಸಲು ರಾಹುಲ್‌ ಚಿಂತನೆ: ಕೈ ಮಾಜಿ ನಾಯಕ ಆಚಾರ್ಯ

1-qweqeqeqw

Uttarakhand; ಕಾಳ್ಗಿಚ್ಚು ತಡೆಗೆ ಮೋಡ ಬಿತ್ತನೆಗೆ ಮೊರೆ?: ಮೂವರ ಸೆರೆ

1-wqewqewq

Tamilnadu ಗಿರಿಧಾಮ ಪ್ರವೇಶಕ್ಕೆ ಇಂದಿನಿಂದ ಇ-ಪಾಸ್‌ ಕಡ್ಡಾಯ

ಹಂತ-2: ಇಂದು ಮತದಾನ; ಕಣದಲ್ಲಿ ಇಬ್ಬರು ಮಾಜಿ ಸಿಎಂ ಸೇರಿ 227 ಅಭ್ಯರ್ಥಿಗಳು

ಹಂತ-2: ಇಂದು ಮತದಾನ; ಕಣದಲ್ಲಿ ಇಬ್ಬರು ಮಾಜಿ ಸಿಎಂ ಸೇರಿ 227 ಅಭ್ಯರ್ಥಿಗಳು

CSK (2)

CSK; ಬಸ್‌ ಕಂಡಕ್ಟರ್‌ಗಳಿಗೆ ಚೆನ್ನೈ ಕಿಂಗ್ಸ್‌ನಿಂದ 8 ಸಾವಿರ ಅಗತ್ಯ ಗಿಫ್ಟ್ !

1-sss

Central government ಒಪ್ಪಿದರೆ ಪಾಕ್‌ಗೆ ಭಾರತ ಕ್ರಿಕೆಟ್‌ ತಂಡ: ರಾಜೀವ್‌ ಶುಕ್ಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqeeqw

Hunsur: ಹಣ್ಣಿನ ತೋಟ ಸೇರಿಕೊಂಡಿದ್ದ ಹೆಣ್ಣುಹುಲಿ ಸೆರೆ

1-ewqqwe

Revanna Case; ಸಾಲ ತೀರಿಸೋಕೆ ಕೂಲಿಗೆ ಬಂದಿದ್ದೀನಿ ಅಂತ ಮಹಿಳೆ ಹೇಳಿದ್ಲು

ಅಪಹೃತ ಮಹಿಳೆಯನ್ನು ಪತ್ತೆಹಚ್ಚಿದ ಎಸ್‌ಐಟಿ

ಅಪಹೃತ ಮಹಿಳೆಯನ್ನು ಪತ್ತೆಹಚ್ಚಿದ ಎಸ್‌ಐಟಿ

Vegetable price: ಬಿಸಿಲ ತಾಪದಂತೆ ಏರಿದ ತರಕಾರಿ ಬೆಲೆ

Vegetable price: ಬಿಸಿಲ ತಾಪದಂತೆ ಏರಿದ ತರಕಾರಿ ಬೆಲೆ

Heavy Rain: ಹುಣಸೂರು ತಾಲೂಕಿನಾದ್ಯಂತ ಬಿರುಗಾಳಿ ಸಹಿತ ಆಲಿಕಲ್ಲು ಮಳೆ…

Heavy Rain: ಹುಣಸೂರು ತಾಲೂಕಿನಾದ್ಯಂತ ಬಿರುಗಾಳಿ ಸಹಿತ ಆಲಿಕಲ್ಲು ಮಳೆ…

MUST WATCH

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

ಹೊಸ ಸೇರ್ಪಡೆ

May 9: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಮೊದಲ ತಂಡದಿಂದ ಹಜ್‌ ಯಾತ್ರೆ

May 9: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಮೊದಲ ತಂಡದಿಂದ ಹಜ್‌ ಯಾತ್ರೆ

1-wqeewqewqe

ಅಧಿಕಾರಕ್ಕೆ ಬಂದರೆ ರಾಮ ಮಂದಿರ ತೀರ್ಪು ಬದಲಿಸಲು ರಾಹುಲ್‌ ಚಿಂತನೆ: ಕೈ ಮಾಜಿ ನಾಯಕ ಆಚಾರ್ಯ

1-qweqeqeqw

Uttarakhand; ಕಾಳ್ಗಿಚ್ಚು ತಡೆಗೆ ಮೋಡ ಬಿತ್ತನೆಗೆ ಮೊರೆ?: ಮೂವರ ಸೆರೆ

1-wqewqewq

Tamilnadu ಗಿರಿಧಾಮ ಪ್ರವೇಶಕ್ಕೆ ಇಂದಿನಿಂದ ಇ-ಪಾಸ್‌ ಕಡ್ಡಾಯ

ಹಂತ-2: ಇಂದು ಮತದಾನ; ಕಣದಲ್ಲಿ ಇಬ್ಬರು ಮಾಜಿ ಸಿಎಂ ಸೇರಿ 227 ಅಭ್ಯರ್ಥಿಗಳು

ಹಂತ-2: ಇಂದು ಮತದಾನ; ಕಣದಲ್ಲಿ ಇಬ್ಬರು ಮಾಜಿ ಸಿಎಂ ಸೇರಿ 227 ಅಭ್ಯರ್ಥಿಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.