ಏರ್‌ ಶೋದಲ್ಲಿ ದುರ್ಘ‌ಟನೆ ಈ ಬೇಜವಾಬ್ದಾರಿ ಸಲ್ಲ 


Team Udayavani, Feb 25, 2019, 12:30 AM IST

aero-india-2019fire.jpg

ಬೆಂಗಳೂರಿನಲ್ಲಿ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ನಡೆಯುತ್ತಿದ್ದ ಸ್ಥಳದಲ್ಲಿ ಶನಿವಾರ ಸುಮಾರು 300 ಕಾರುಗಳು ಭಸ್ಮವಾಗಿರುವ ಬೆಂಕಿ ಅನಾಹುತ ಭೀಕರ ಘಟನೆಯೇ ಸರಿ. ಈ ಸಲದ ಏರೋ ಇಂಡಿಯಾ ಶೋಕ್ಕೆ ಆರಂಭ ದಿಂದಲೂ ಕಂಟಕಗಳೇ ಎದುರಾಗುತ್ತಿವೆ. ಫೆ.1ರಂದು ವೈಮಾನಿಕ ಪ್ರದರ್ಶನಕ್ಕೆ ಸಜ್ಜಾಗುತ್ತಿದ್ದ ಮಿರಾಜ್‌-2000 ಯುದ್ಧ ವಿಮಾನ ಸ್ಫೋಟಗೊಂಡು ಇಬ್ಬರು ಪೈಲಟ್‌ಗಳು ಮೃತಪಟ್ಟಿದ್ದರು. ಅನಂತರ ವೈಮಾನಿಕ ಪ್ರದರ್ಶನ ಶುರುವಾಗುವ ಮುನ್ನಾದಿನ ತಾಲೀಮು ನಡೆಸುತ್ತಿದ್ದ ಸೂರ್ಯಕಿರಣ ವಿಮಾನಗಳೆರಡು ಗಗನದಲ್ಲಿ ಢಿಕ್ಕಿ ಹೊಡೆದು ಓರ್ವ ಪೈಲಟ್‌ ದುರ್ಮರಣಕ್ಕೀಡಾದರು. ಇದೀಗ ಪಾರ್ಕಿಂಗ್‌ ಸ್ಥಳದಲ್ಲಿ ಬೆಂಕಿ ದುರಂತ ಸಂಭವಿಸಿ ಕಾರುಗಳು ಸುಟ್ಟುಹೋಗಿ ಕೋಟಿಗಟ್ಟಲೆ ನಷ್ಟ ಸಂಭ ವಿಸಿದೆ. ಇಂದು ಕಾರ್ಯಕ್ರಮದ ಅನತಿ ದೂರದಲ್ಲಿ ನೀಲಗಿರಿ ತೋಪು ಬೆಂಕಿ ಹತ್ತಿಕೊಂಡು ಉರಿದು ಹೋಗಿದೆ. ಈ ಘಟನೆಗಳಲ್ಲಿ ಪ್ರಾಣ ಹಾನಿಯಾಗಿಲ್ಲ ಎನ್ನುವುದು ಸಮಾಧಾನ ಕೊಡುವ ಅಂಶವಾಗಿದ್ದರೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿರುವ ಒಂದು ಕಾರ್ಯಕ್ರಮದಲ್ಲಿ ಬೆನ್ನುಬೆನ್ನಿಗೆ ಅವಘಡ ಸಂಭವಿಸಿರುವುದು ಕಪ್ಪುಚುಕ್ಕೆ. ಇದು ಈ ಮಾದರಿಯ ಕಾರ್ಯಕ್ರಮಗಳನ್ನು ಆಯೋಜಿಸುವ ನಮ್ಮ ಸಾಮರ್ಥ್ಯದ ಮೇಲೊಂದು ಪ್ರಶ್ನಾರ್ಥಕ ಚಿಹ್ನೆಯನ್ನಿಡುತ್ತಿದೆ ಎನ್ನುವುದನ್ನು ಆಯೋಜಕರು ನೆನಪಿಟ್ಟುಕೊಳ್ಳಬೇಕು. 

ಬೆಂಗಳೂರು ಮಾತ್ರವಲ್ಲ ದೇಶದ ಹಲವೆಡೆ ಇತ್ತೀಚೆಗಿನ ದಿನಗಳಲ್ಲಿ ಭೀಕರ ಅಗ್ನಿ ದುರಂತಗಳು ಸಂಭವಿಸಿವೆ. ಇತ್ತೀಚೆಗೆ ದಿಲ್ಲಿಯ ಕರೋಲ್‌ಬಾಗ್‌ನ ಹೊಟೇಲೊಂದರಲ್ಲಿ ಸಂಭವಿಸಿದ ಅವಘಡದಲ್ಲಿ 17 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 2017ರಲ್ಲಿ ಮುಂಬಯಿಯ ಹೊಟೇಲೊಂದರ ರೂಫ್ಟಾಪ್‌ಗೆ ಬೆಂಕಿ ಹತ್ತಿಕೊಂಡು 14 ಮಂದಿ ಬಲಿಯಾಗಿದ್ದರು. ಈ ಮಾದರಿಯ ದುರಂತ ಗಳು ಪ್ರತಿ ವರ್ಷ ದೇಶದ ಎಲ್ಲಾದರೊಂದು ಕಡೆ ನಡೆಯುತ್ತಲೇ ಇರುತ್ತವೆ. ಕೇರಳದ ದೇವಸ್ಥಾನವೊಂದರಲ್ಲಿ ಸುಡುಮದ್ದಿಗೆ ಬೆಂಕಿ ಹತ್ತಿ ಕೊಂಡು ಸಂಭವಿಸಿದ ಭೀಕರ ಅನಾಹುತ ಇನ್ನೂ ಜನಮಾನಸದಿಂದ ಮಾಸಿಲ್ಲ. ಈ ಎಲ್ಲ ಅವಘಡಗಳು ಮಾನವ ನಿರ್ಮಿತ ಎನ್ನುವುದು ಮಾತ್ರ ದುರಂತ. ಬೆಂಕಿ ಶಮನ ಮುನ್ನೆಚ್ಚರಿಕೆಯತ್ತ ನಮಗಿರುವ ದಿವ್ಯ ನಿರ್ಲಕ್ಷ್ಯವೇ ಇಂಥ ಘಟನೆಗಳು ಸಂಭವಿಸಲು ಕಾರಣ. ನಮ್ಮ ವ್ಯವಸ್ಥೆ ದುರಂತ ನಡೆದಾಗಲೊಮ್ಮೆ ಎಚ್ಚೆತ್ತುಕೊಂಡು ಕಾನೂನು, ನಿಯಮ ಎಂದು ಕೂಗಾಡುತ್ತದೆ. ಯಾರೋ ನಾಲ್ಕು ಮಂದಿಯನ್ನು ಹಿಡಿದು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತದೆ. ಅವರ ವಿಚಾರಣೆ ಮುಗಿದು ಶಿಕ್ಷೆಯಾಗುವುದು ಇನ್ಯಾವುದೋ ಕಾಲದಲ್ಲಿ. ಕ್ರಮೇಣ ಘಟನೆ ಜನರ ನೆನಪಿನಿಂದ ಮರೆಯಾಗುತ್ತದೆ. ಮತ್ತೆ ಪರಿಸ್ಥಿತಿ ಯಥಾಸ್ಥಿತಿಗೆ ಮರಳುತ್ತದೆ. ಇದನ್ನು ಲಾಗಾ ಯ್ತಿನಿಂದ ನೋಡುತ್ತಾ ಬಂದಿದ್ದರೂ ವ್ಯವಸ್ಥೆಯನ್ನು ಬದಲಾಯಿಸುವ ಗಂಭೀರ ಪ್ರಯತ್ನ ಆಗಿಲ್ಲ. ಪ್ರತಿ ಸಲ ಅಗ್ನಿ ದುರಂತ ಸಂಭವಿಸಿದಾಗ ಕಟ್ಟಡ ನಿರ್ಮಾಣ ಸಂದರ್ಭದಲ್ಲಿ ಪಾಲಿಸಬೇಕಾದ ನಿಯಮಗಳ ಕುರಿತು ಚರ್ಚೆಯಾಗುತ್ತದೆ. ಹೊಸದಾಗಿ ಒಂದಷ್ಟು ನಿಯಮಗಳನ್ನು ರಚಿಸಲಾಗುತ್ತದೆ. ಆದರೆ ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಸಂಕಲ್ಪ ಮಾತ್ರ ಇರುವುದಿಲ್ಲ. ಬೆಂಗಳೂರು, ದಿಲ್ಲಿ, ಮುಂಬಯಿಯಂಥ ಇಕ್ಕಟ್ಟಾದ ನಗರಗಳಲ್ಲಿ ನಿಯಮಗಳನ್ನು ಸಾರಾಸಗಟು ನಿರ್ಲಕ್ಷಿಸುವುದರಿಂದ ಎಂಥ ಘೋರ ಪರಿಣಾಮವಾಗುತ್ತದೆ ಎನ್ನುವುದಕ್ಕೆ ಹಲವಾರು ಉದಾಹರಣೆಗಳಿವೆ.

ಬೀಡಿ, ಸಿಗರೇಟು ಸೇದಿದ ಬಳಿಕ ಉಳಿದ ತುಂಡನ್ನು ನಂದಿಸಿ ಬಿಸಾಕ ಬೇಕೆಂಬ ಸಾಮಾನ್ಯ ಪ್ರಜ್ಞೆಯೂ ಹೆಚ್ಚಿನವರಲ್ಲಿ ಇಲ್ಲ. ಬೆಂಗಳೂರಿನಲ್ಲಿ ಸಿಗರೇಟು ತುಂಡಿನಿಂದ ಹುಲ್ಲಿಗೆ ಬೆಂಕಿ ಹತ್ತಿಕೊಂಡು ವ್ಯಾಪಿಸಿದೆ ಎನ್ನಲಾಗುತ್ತಿದೆ. ಈಗೀಗ ಬೇಸಿಗೆಯಲ್ಲಿ ಸಾಮಾನ್ಯವಾಗುತ್ತಿರುವ ಕಾಡ್ಗಿಚ್ಚುಗಳಿಗೂ ಈ ಮಾದರಿಯ ಬೇಜವಾಬ್ದಾರಿ ವರ್ತನೆಯೇ ಕಾರಣ ವಾಗುತ್ತಿದೆ. ಬಂಡೀಪುರದಲ್ಲಿ ಇತ್ತೀಚೆಗೆ ಹೆಕ್ಟೇರ್‌ಗಟ್ಟಲೆ ಅರಣ್ಯ ಬೆಂಕಿಗಾಹುತಿಯಾಗಲು ಕೂಡಾ ಸೇದಿ ಎಸೆದ ಸಿಗರೇಟು ತುಂಡು ಕಾರಣ ಎನ್ನುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಈಗ ಬಿರು ಬೇಸಿಗೆ ಕಾಲ. ಬೆಂಕಿ ಹತ್ತಿಕೊಳ್ಳಲು ಚಿಕ್ಕದೊಂದು ಕಿಡಿ ಸಾಕು. ಈ ಮಾದರಿಯ ಕ್ಷುಲ್ಲಕ ಪ್ರಮಾದಗಳನ್ನು ಎಸಗಬಾರದು ಎಂಬ ಪ್ರಜ್ಞೆ ಜನರಲ್ಲಿ ಮೂಡಿಬರಬೇಕು. ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಲ್ಲಿ ನಿರ್ಲಕ್ಷ್ಯ ತೋರಿಸಿದ್ದರೆ ಆರೋಪಿಗಳಿಗೆ ತ್ವರಿತವಾಗಿ ಶಿಕ್ಷೆ ವಿಧಿಸಬೇಕು. ಸಾರ್ವ ಜನಿಕ ಕಾರ್ಯಕ್ರಮಗಳನ್ನು ಆಯೋಜಿಸುವಾಗ ಅಗ್ನಿ ಸುರಕ್ಷಾ ನಿಯಮಗಳನ್ನು ಪಾಲಿಸಲಾಗಿದೆಯೇ ಎಂದು ಪರಿಶೀಲನೆಯಾಗಬೇಕು. ಹೊಟೇಲ್‌, ಮಾಲ್‌, ಥಿಯàಟರ್‌ ಹೀಗೆ ಹೆಚ್ಚು ಜನ ಸೇರುವ ಪ್ರದೇಶಗಳಲ್ಲಿ ಕಾಲಕಾಲಕ್ಕೆ ಫ‌ಯರ್‌ ಆಡಿಟ್‌ ನಡೆಸುದನ್ನು ಕಡ್ಡಾಯಗೊಳಿಸಿದರೆ ದುರಂತಗಳು ಸಂಭವಿಸುವುದನ್ನು ಆದಷ್ಟು ಕಡಿಮೆಗೊಳಿಸಬಹುದು.

ಟಾಪ್ ನ್ಯೂಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

1-wqe-qweq

Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eweweqwe

Voting:ಹಿರಿಯ ನಾಗರಿಕರೇ ಮಾದರಿ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.