ಭಕ್ತಜನಸಾಗರದಲ್ಲಿ ಮಿಂದೆದ್ದ ಪುಳಿನಾಪುರ 


Team Udayavani, Mar 14, 2019, 5:18 AM IST

14-march-3.jpg

ಪೊಳಲಿ : ಜಗನ್ಮಾತೆ ಪೊಳಲಿ ಶ್ರೀ ರಾಜರಾಜೇಶ್ವರಿಯ ಸನ್ನಿಧಿಯು ಬುಧವಾರ ಜನಸಾಗರದಿಂದ ತುಂಬಿ ತುಳುಕಿತ್ತು. ಎತ್ತ ನೋಡಿದರೂ ಬರೀ ಭಕ್ತರ ದಂಡೇ ಕಂಡುಬರುತ್ತಿತ್ತು. ನೆರೆದ ಭಕ್ತರನ್ನು ನಿಯಂತ್ರಣ ಮಾಡುವುದಕ್ಕಾಗಿ ಸ್ವಯಂ ಸೇವಕರು ಹರಸಾಹಸವನ್ನೇ ಪಡುತ್ತಿದ್ದರು. ಆದರೆ ಯಾರಿಗೂ ತೊಂದರೆಯಾಗದ ರೀತಿಯಲ್ಲಿ ಸಕಲ ವ್ಯವಸ್ಥೆಗಳನ್ನು ಮಾಡಲಾಗಿದ್ದು, ದೇವರ ದರ್ಶನ ಸಹಿತ ಶಾಂತಚಿತ್ತರಾಗಿ ತಮ್ಮ ಆರಾಧ್ಯಮೂರ್ತಿಯ ಐತಿಹಾಸಿಕ ಬ್ರಹ್ಮಕಲಶಾಭಿಷೇಕವನ್ನು ಕಣ್ತುಂಬಿಕೊಂಡರು.

ಬೆಳಕು ಹರಿಯುವ ಮುನ್ನವೇ ತಾಯಿಯ ಪುಣ್ಯ ಕಾರ್ಯ ಆರಂಭಗೊಂಡಿದ್ದು, ಆ ಹೊತ್ತಿಗಾಗಲೇ ಸಾವಿರಾರು ಸಂಖ್ಯೆಯ ಭಕ್ತರು ಸೇರಿದ್ದರು. ಮಧ್ಯಾಹ್ನ ಆಗುತ್ತಲೇ ಭಕ್ತರ ಸಂಖ್ಯೆ ಲಕ್ಷ ದಾಟಿತ್ತು. ಆಗಮಿಸಿದ ಭಕ್ತರ ಹಸಿವನ್ನು ನೀಗಿಸುವ ದೃಷ್ಟಿಯಿಂದ ಪ್ರಸಾದ ರೂಪವಾಗಿ ಬೆಳಗ್ಗೆ-ಸಂಜೆ ಉಪಾಹಾರ, ಮಧ್ಯಾಹ್ನ- ರಾತ್ರಿ ಅನ್ನಪ್ರಸಾದ ನೀಡಲಾಯಿತು. ಜತೆಗೆ ನಿರಂತರ ವಾಗಿ ಕೆಎಂಎಫ್ನವರ ಮಜ್ಜಿಗೆ, ಬಿರಿಂಡಾ ಜ್ಯೂಸ್‌ ವಿತರಿಸಲಾಯಿತು.

ಮಧ್ಯಾಹ್ನ 12ಕ್ಕೆ ತಂತ್ರಿ ವೇ| ಮೂ| ಪೊಳಲಿ ಸುಬ್ರಹ್ಮಣ್ಯ ತಂತ್ರಿಗಳ ನೇತೃತ್ವದಲ್ಲಿ ವೇ| ಮೂ| ಕೋಡಿಮಜಲು ಅನಂತ ಪದ್ಮನಾಭ ಉಪಾಧ್ಯಾಯ ಅವರ ಮಾರ್ಗದರ್ಶನದಲ್ಲಿ ಪಲ್ಲಪೂಜೆ ನಡೆದ ಬಳಿಕ ಅನ್ನಪ್ರಸಾದ ವಿತರಣೆ ಆರಂಭಗೊಂಡಿತು. ಬಳಿಕ ಸಂಜೆವರೆಗೂ ನಿರಂತರವಾಗಿ ಅನ್ನಪ್ರಸಾದ ವಿತರಣೆಯಾಯಿತು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶ್ರೀ ದುರ್ಗಾಪರಮೇಶ್ವರೀ ವೇದಿಕೆಯಲ್ಲಿ ಬೆಳಗ್ಗೆ ಮಂಗಳವಾದ್ಯ, ಭಜನೆ ನಡೆಯಿತು. ಶ್ರೀ ರಾಜರಾಜೇಶ್ವರೀ ವೇದಿಕೆಯಲ್ಲಿ ಸಂಗೀತ, ನೃತ್ಯ, ಹಾಸ್ಯ, ಪಟ್ಲ ಸತೀಶ್‌ ಶೆಟ್ಟಿ, ಗಿರೀಶ್‌ ರೈ ಕಕ್ಕೆಪದವು ಹಾಗೂ ಸತ್ಯ ನಾರಾಯಣ ಪುಣಿಂಚಿ ತ್ತಾ ಯ ಅವರಿಂದ ಯಕ್ಷ-ಗಾನ-ವೈಭವ, ಶರತ್‌ ಶೆಟ್ಟಿ ಪಡುಪಳ್ಳಿ ಅವರಿಂದ ಹರಿಕಥೆ, ತಾಳಮದ್ದಳೆ, ಜಾನಪದ ಕಾರ್ಯಕ್ರಮಗಳು ಪ್ರದರ್ಶನಗೊಂಡವು.

ಬ್ರಹ್ಮಕಲಶಾಭಿಷೇಕದಲ್ಲಿ ವಿವಿಧ ಕ್ಷೇತ್ರದ ಗಣ್ಯರು ಪಾಲ್ಗೊಂಡಿದ್ದು, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಜಿ.ಪಂ. ಸದಸ್ಯ ಚಂದ್ರಪ್ರಕಾಶ್‌ ಶೆಟ್ಟಿ, ಪ್ರಮುಖರಾದ ಹರಿಕೃಷ್ಣ ಬಂಟ್ವಾಳ, ವಿಜಯನಾಥ್‌ ವಿಟ್ಠಲ ಶೆಟ್ಟಿ, ಐಕಳ ಹರೀಶ್‌ ಶೆಟ್ಟಿ, ಮಾಜಿ ಮೇಯರ್‌ ಶಶಿಧರ ಹೆಗ್ಡೆ, ಅಶೋಕ್‌ ಡಿ.ಕೆ., ಸುಧೀರ್‌ ಶೆಟ್ಟಿ ಕಣ್ಣೂರು, ವಿಜಯಕುಮಾರ್‌ ಶೆಟ್ಟಿ, ದೀಪಕ್‌ ಪೂಜಾರಿ, ಸತ್ಯಜಿತ್‌ ಸುರತ್ಕಲ್‌, ಕ್ಯಾ| ಬೃಜೇಶ್‌ ಚೌಟ, ಡಾ| ಆಶಾಜ್ಯೋತಿ ರೈ, ಮುಂಬಯಿನ ನಿವೃತ್ತ ಪೊಲೀಸ್‌ ಅಧಿಕಾರಿ ಪ್ರಕಾಶ್‌ ಶೆಟ್ಟಿ ಮೊದಲಾದ ಗಣ್ಯರು ಪಾಲ್ಗೊಂಡಿದ್ದರು.

ಎಲ್‌ಇಡಿ ಮೂಲಕ ವೀಕ್ಷಣೆ 
ತಾಯಿಯ ಬ್ರಹ್ಮಕಲಶಾಭಿಷೇಕವನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಸಂಖ್ಯೆಯ ಭಕ್ತರು ಸೇರಿದ್ದ ಹಿನ್ನೆಲೆಯಲ್ಲಿ ಎಲ್ಲರಿಗೂ ನೇರವಾಗಿ ದೇವರನ್ನು ಕಾಣುವ ಅವಕಾಶವಿರಲಿಲ್ಲ. ಹೀಗಾಗಿ ಕ್ಷೇತ್ರದ ಅಲ್ಲಲ್ಲಿ ಎಲ್‌ಇಡಿ ಪರದೆ ಅಳವಡಿಸಲಾಗಿದ್ದು, ಭಕ್ತರು ಅದರ ಮೂಲಕ ಕಂಡು ಪುನೀತರಾದರು. ಕ್ಷೇತ್ರದ ರಾಜಬೀದಿ, ಉಗ್ರಾಣ, ಅನ್ನಛತ್ರ ಹೀಗೆ ಎಲ್ಲ ಭಾಗಗಳಲ್ಲೂ ಸೇರಿದ್ದ ಭಕ್ತರು ಬ್ರಹ್ಮಕಲಶಾಭಿಷೇಕ ಹಾಗೂ ಮಹಾಪೂಜೆಯ ವೈಭವವನ್ನು ವೀಕ್ಷಿಸಿದರು. 

ಸಾವಿರಾರು ಸಂಖ್ಯೆಯ ಸ್ವಯಂಸೇವಕರು
ಬುಧವಾರವೂ 5 ಸಾವಿರಕ್ಕೂ ಅಧಿಕ ಸ್ವಯಂಸೇವಕರನ್ನು ಇಲ್ಲಿ ನಿಯೋಜಿಸಲಾಗಿತ್ತು. ಇನ್ನೂ ಕೆಲವರು ಸೇರಿಕೊಂಡು ಅದು ದುಪ್ಪಟ್ಟಾಯಿತು. ಪಾಕಶಾಲೆಯಲ್ಲಿ 500 ಮಂದಿ, ಪಾರ್ಕಿಂಗ್‌ನಲ್ಲಿ 300 ಮಂದಿ, ಸ್ವಚ್ಛತೆಯಲ್ಲಿ 1,000 ಮಂದಿ, ರಕ್ಷಣೆಯಲ್ಲಿ 300 ಮಂದಿ, ಉಗ್ರಾಣದಲ್ಲಿ 150 ಮಂದಿ, ಅತಿಥಿ ಸತ್ಕಾರದಲ್ಲಿ 100 ಮಂದಿ, ಸ್ವಾಗತದಲ್ಲಿ 100 ಮಂದಿ, ಸೇವಾ ಕೌಂಟರ್‌ನಲ್ಲಿ 100 ಮಂದಿ ಹೀಗೆ ಸಾವಿರಾರು ಸಂಖ್ಯೆ ಸ್ವಯಂಸೇವಕರು ಶ್ರಮಿಸಿದರು. 

ಅಚ್ಚುಕಟ್ಟಿನ ವಾಹನ ಪಾರ್ಕಿಂಗ್‌ ವ್ಯವಸ್ಥೆ 
ಕ್ಷೇತ್ರಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸಿದ ಭಕ್ತರ ವಾಹನಗಳನ್ನು ನಿಲ್ಲಿಸುವುದಕ್ಕೆ ಕ್ಷೇತ್ರ ಪರಿಸರದ ಗದ್ದೆಯ ಸುಮಾರು 22 ಎಕ್ರೆ ವಿಸ್ತೀರ್ಣದಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಆಗಮನ ಹಾಗೂ ನಿರ್ಗಮನಕ್ಕೆ ಪ್ರತ್ಯೇಕ ವ್ಯವಸ್ಥೆಗಳಿದ್ದವು. ಜತೆಗೆ ವಿವಿಧ ವಿಭಾಗಗಳಲ್ಲಿ ವಾಹನಗಳು ನಿಲ್ಲಿಸಿದ ಪರಿಣಾಮ ಭಕ್ತರು ಯಾವುದೇ ತೊಂದರೆಯಿಲ್ಲದೆ ತಮ್ಮ ವಾಹನಗಳನ್ನು ಪತ್ತೆಹಚ್ಚಲು ನೆರವಾಯಿತು. ಸುಮಾರು 300ಕ್ಕೂ ಅಧಿಕ ಸ್ವಯಂಸೇವಕರು ಭಕ್ತರಿಗೆ ನಿರ್ದೇಶನ ನೀಡಿದರು. 

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.