ಸೇವಾಜೆ ಸರಕಾರಿ ಶಾಲೆ: ದಿನ ಬಳಕೆಗೆ ನೀರಿಲ್ಲ !


Team Udayavani, Mar 17, 2019, 6:23 AM IST

17-marc1h-7.jpg

ಸುಳ್ಯ : ದೇವಚಳ್ಳ ಗ್ರಾಮದ ಸೇವಾಜೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೀರಾ ಬಿಗಡಾಯಿಸಿದೆ. ಶಾಲೆಗೆ ಕುಡಿಯುವ ನೀರಿನ ಏಕೈಕ ಮೂಲವಾಗಿದ್ದ ಶಾಲಾ ಬಾವಿಯಲ್ಲಿ ನೀರು ಬತ್ತಿದ್ದು, ದಿನ ಬಳಕೆಯ ನೀರಿಗೆ ಪರದಾಡುವ ಸ್ಥಿತಿ ಉಂಟಾಗಿದೆ. ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಇದಾಗಿದ್ದು, 1ರಿಂದ 5 ನೇ ತರಗತಿ ತನಕ 32 ಮಕ್ಕಳು, ಶಾಲೆಗೆ ಒಳಪಟ್ಟ ಅಂಗನವಾಡಿ ಕೇಂದ್ರದಲ್ಲಿ 30 ಮಕ್ಕಳಿದ್ದಾರೆ. ಅಡುಗೆ ತಯಾರಿ, ಕುಡಿಯಲು, ಶೌಚಾಲಯ ಸಹಿತ ಅಗತ್ಯ ವ್ಯವಸ್ಥೆಗಳಿಗೆ ನೀರಿಲ್ಲದ ಸ್ಥಿತಿ ನಿರ್ಮಾಣವಾಗಿದೆ.

ಕೊಳವೆಬಾವಿ ನೀರು ಸಿಗಲಿಲ್ಲ
ನೀರಿನ ಕೊರತೆ ಸಮಸ್ಯೆಯನ್ನು ಜಿ.ಪಂ. ಗಮನಕ್ಕೆ ತಂದ ಕಾರಣ, ಕೊಳವೆಬಾವಿ ಕೊರೆಯಲು ಅನುಮತಿ ಸಿಕ್ಕಿತ್ತು. ಜಿ.ಪಂ. ವತಿಯಿಂದ ಕೆಲ ದಿನಗಳ ಹಿಂದೆ ಕೊಳವೆ ಬಾವಿ ಕೊರೆಯಲಾಗಿದ್ದು, 640 ಫೀಟ್‌ ಆಳಕ್ಕಿಳಿದರೂ ತೊಟ್ಟು ನೀರು ಸಿಗಲಿಲ್ಲ. ಹೀಗಾಗಿ ಕೊಳವೆ ಬಾವಿಯಲ್ಲಿ ನೀರು ಸಿಗುವ ನಿರೀಕ್ಷೆ ಕೈ ಕೊಟ್ಟಿದೆ. ಈ ಶಾಲೆ ಆಸುಪಾಸಿನಲ್ಲಿ ಜನವಸತಿ ಪ್ರದೇಶಗಳು ಇಲ್ಲದ ಕಾರಣ ಖಾಸಗಿ ವ್ಯವಸ್ಥೆ ಮೂಲಕ ನೀರು ಬಳಸುವ ಸ್ಥಿತಿಯೂ ಇಲ್ಲಿಲ್ಲ. ಹೀಗಾಗಿ ಇನ್ನೆರಡು ತಿಂಗಳು ನೀರಿಗೇನು ಮಾಡುವುದು ಎನ್ನುವ ಚಿಂತೆ ಶಾಲೆಯನ್ನು ಕಾಡಿದೆ.

ಬಯಲೇ ಗತಿ!
ಶೌಚಾಲಯ ಬಳಕೆಗೆ ನೀರಿಲ್ಲದ ಕಾರಣ ಮಕ್ಕಳಿಗೆ ಬಯಲು ಶೌಚಾಲಯವೇ ಗತಿ ಎನ್ನುವಂತಾಗಿದೆ. ಕೆಲ ವರ್ಷಗಳಿಂದ ನೀರಿನ ಅಭಾವ ಉಂಟಾಗುತ್ತಿದ್ದು, ಸ್ಥಳೀಯಾಡಳಿತ, ಎಲ್ಲ ಸ್ತರದ ಜನಪ್ರತಿನಿಧಿಗಳ ಗಮನಕ್ಕೂ ತರಲಾಗಿದೆ. ಆದರೆ ಸಮಸ್ಯೆ ಪರಿಹಾರ ಕಂಡಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಭವಿಷ್ಯವೂ ತೂಗುಯ್ನಾಲೆಯಲ್ಲಿದೆ. 

ಬಿಸಿಯೂಟಕ್ಕೂ ಕಾಡಿದೆ ಸಮಸ್ಯೆ
ದಿನಂಪ್ರತಿ 32 ವಿದ್ಯಾರ್ಥಿಗಳಿಗೆ ಬಿಸಿಯೂಟದ ಸೌಲಭ್ಯವಿದೆ. ಅಂಗನವಾಡಿ ಮಕ್ಕಳಿಗೂ ಊಟ ತಯಾರಿ ಆಗಬೇಕು. ಆದರೆ ನೀರಿಲ್ಲದ ಕಾರಣ ಅಡುಗೆ ಮಾಡುವುದು ಹೇಗೆ ಎನ್ನುವ ಸಮಸ್ಯೆ ಉಂಟಾಗಿದೆ. ಶಾಲಾ ಮಕ್ಕಳು ಮನೆಯಿಂದ ಬಾಟಲ್‌ ಬಳಸಿ ನೀರು ತರುತ್ತಾರೆ. ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೂ ಪರ್ಯಾಯ ವ್ಯವಸ್ಥೆ ಇಲ್ಲದೆ ದಿನ ಕಳೆಯುವುದು ಹೇಗೆ ಎನ್ನುವಂತಾಗಿದೆ.

ತಹಶೀಲ್ದಾರ್‌ಗೆ ಮನವಿ
ಜನವರಿಯಿಂದಲೇ ನೀರಿನ ಸಮಸ್ಯೆ ಕಾಡಿದೆ. ಈಗಂತೂ ಬಾವಿ ಬತ್ತಿದೆ. ಕೊಳವೆಬಾವಿ ಕೈ ಕೊಟ್ಟಿದೆ. ವಿದ್ಯಾರ್ಥಿಗಳಿಗೆ ನೀರೊದಗಿಸುವು ಹೇಗೆ ಎನ್ನುವುದೇ ಚಿಂತೆಯಾಗಿದೆ. ಈ ಬಗ್ಗೆ ತಾಲೂಕು ಎಸ್‌ಡಿಎಂಸಿ ಮೂಲಕ ತಹಶೀಲ್ದಾರ್‌ ಅವರಿಗೆ ಶನಿವಾರ ಮನವಿ ಮಾಡಿದ್ದೇವೆ. 
– ರಾಜೇಂದ್ರ ಜೈನ್‌
ಎಸ್‌ಡಿಎಂಸಿ ಸದಸ್ಯ

ಸ್ಪಂದನೆಯ ಭರವಸೆ
ಸೇವಾಜೆ ಶಾಲೆಯ ಸಮಸ್ಯೆ ಬಗ್ಗೆ ಸ್ಥಳೀಯ ಎಸ್‌ಡಿಎಂಸಿ ಅವರ ವತಿಯಿಂದ ತಾಲೂಕು ಎಸ್‌ಡಿಎಂಸಿ ಒಕ್ಕೂಟದ ಮೂಲಕ ತಹಶೀಲ್ದಾರ್‌ ಗೆ ಮನವಿ ಮಾಡಿದ್ದೇವೆ. ಅವರು ಸ್ಪಂದಿಸುವ ಭರವಸೆ ನೀಡಿದ್ದಾರೆ.
– ಹಸೈನಾರ್‌ ಜಯನಗರ ಕಾರ್ಯದರ್ಶಿ,
ಎಸ್‌ಡಿಎಂಸಿ ತಾಲೂಕು ಒಕ್ಕೂಟ

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.