ಮಂಗಳೂರಿನ ಮಂಕುಭಾಯ್, ಫಾಕ್ಸಿ ರಾಣಿ !
Team Udayavani, Mar 21, 2019, 7:43 AM IST
ವಿಭಿನ್ನ ಟೈಟಲ್ನ ಸಿನೆಮಾದಲ್ಲಿ ಈಗ ಮಂಗಳೂರಿನ ಹುಡುಗ ರೂಪೇಶ್ ಶೆಟ್ಟಿ ಕಾಣಿಸಿಕೊಳ್ಳುತ್ತಿದ್ದಾರೆ. ಗೀತೇಶ್ ಮಾಡೂರ್ ಆ್ಯಕ್ಷನ್ ಕಟ್ ಹೇಳಿರುವ ಈ ಸಿನೆಮಾದ ಹೆಸರು ‘ಮಂಕು ಭಾಯ್ ಫಾಕ್ಸಿ ರಾಣಿ’. ಸದ್ಯ ವಿಟ್ಲ, ಪುತ್ತೂರು ಭಾಗದಲ್ಲಿ ಕೊನೆಯ ಹಂತದ ಶೂಟಿಂಗ್ ಕಾಣುತ್ತಿರುವ ಈ ಸಿನೆಮಾ ಸ್ಯಾಂಡಲ್ವುಡ್ನಲ್ಲಿ ಹೊಸ ನಿರೀಕ್ಷೆ ಮೂಡಿಸುವ ಭರವಸೆಯಲ್ಲಿದೆ.
ಖ್ಯಾತ ಕಲಾವಿದ ಪ್ರಕಾಶ್ ತೂಮಿನಾಡ್ ಸಿನೆಮಾದಲ್ಲಿ ಹೊಸ ಗೆಟಪ್ನಲ್ಲಿದ್ದಾರೆ. ‘ಬ್ರಹ್ಮ ಟು’ ಎಂಬ ಧಾರವಾಹಿಯ ಕಲಾವಿದೆ ಮೂಲತಃ ಕರಾವಳಿಯ ಗೀತಾ ಭಾರತೀ ಭಟ್ ಈ ಸಿನೆಮಾದಲ್ಲಿ ರೂಪೇಶ್ ಅವರ ಜತೆಗಿರಲಿದ್ದಾರೆ. ಪಂಚಮಿ ರಾವ್, ಅರ್ಜುನ್ ಕಜೆ, ಕೀರ್ತನ್ ಭಂಡಾರಿ, ಯೋಗೀಶ್ ಎಸ್, ಸಂದೇಶ್ ನೀರುಮಾರ್ಗ, ಗುರುಕಿರಣ್ ರೈ, ಅಕ್ಷತ್ ವಿಟ್ಲ, ಗೋಕುಲ್ ಕೃಷ್ಣ ಆಚಾರ್ಯ, ಸವ್ಯರಾಜ್ ಕಲ್ಲಡ್ಕ, ಮೋಕ್ಷಿತ್ ಶೆಟ್ಟಿ, ಉತ್ಸವ್ ಗುರುಪುರ, ಸೂರಜ್ ಶೆಟ್ಟಿ, ನಿಧಿ ರೈ, ವಿನಯ್ ಶೆಟ್ಟಿಗಾರ್ ಇದ್ದಾರೆ.
ಎಂ.ಕೆ.ಶಾಜನ್ ಛಾಯಾಗ್ರಹಣ, ವಿನ್ಯಾಸ್ ಅವರ ಸಂಗೀತ ಹಾಗೂ ಸುಶಾಂತ್ ಶೆಟ್ಟಿ ಸಂಕಲನವಿದೆ. ದಪ್ಪದ ಹುಡುಗಿಯ ಮದುವೆ ಹಾಗೂ ಅದರಿಂದ ಎದುರಾಗುವ ಸಂಗತಿಗಳೇ ‘ಮಂಕು ಭಾಯ್ ಫಾಕ್ಸಿ ರಾಣಿ’ಯ ಹೈಲೈಟ್ಸ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್
Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ
Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ
BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ
Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!