ಹಾಡಿನಲ್ಲಿ ಮೋಡಿ ಮಾಡುವ ಕಟ್ಟಪ್ಪ !

Team Udayavani, Mar 21, 2019, 7:53 AM IST

ರಾಜೇಶ್‌ ಬ್ರಹ್ಮಾವರ ನಿರ್ಮಾಣ ಹಾಗೂ ಭರವಸೆಯ ನಟ ಜೆ.ಪಿ. ತುಮಿನಾಡ್‌ ನಿರ್ದೇಶನದ ಬಹುನಿರೀಕ್ಷೆಯ ‘ಕಟಪಾಡಿ ಕಟ್ಟಪ್ಪ’ ಸಿನೆಮಾ ಇದೇ ತಿಂಗಳಾಂತ್ಯಕ್ಕೆ ದೇಶದ ಮೂಲೆ ಮೂಲೆಯಲ್ಲಿ ರಿಲೀಸ್‌ ಆಗಲಿದೆ. ಈ ಮೂಲಕ ಕುಡ್ಲದ ಸಿನೆಮಾವೊಂದು ಜಗದಗಲ ರಿಲೀಸ್‌ ಭಾಗ್ಯ ಕಾಣಲಿದೆ.  ಪ್ರಕಾಶ್‌ ಸಂಗೀತ ನೀಡಿರುವ ಈ ಸಿನೆಮಾ ಹಲವಾರು ವಿಶೇಷತೆಗಳೊಂದಿಗೆ ಸದ್ದು ಮಾಡುತ್ತಿದೆ.

ತುಳುನಾಡಿನ ಸ್ಟಾರ್‌ ನಟರೇ ಇದರಲ್ಲಿ ಅಭಿನಯಿಸಿದ ಹಿನ್ನೆಲೆಯಲ್ಲಿ ಸಿನೆಮಾಕ್ಕೆ ಬಹಳಷ್ಟು ಗಟ್ಟಿತನ ದೊರಕಿದೆ. ಜತೆಗೆ ಸುದೀಪ್‌ ಕೆಲವು ತಿಂಗಳ ಹಿಂದೆ ಈ ಸಿನೆಮಾದ ಆಡಿಯೋ ರಿಲೀಸ್‌ ಮಾಡುವ ಮೂಲಕ ಸ್ಯಾಂಡಲ್‌ವುಡ್‌ನ‌ಲ್ಲಿಯೂ ಕಟ್ಟಪ್ಪನ ಹವಾ ಸೃಷ್ಟಿಯಾಗಿತ್ತು. ಈಗ ಸಿನೆಮಾದ ಒಂದೊಂದೇ ಹಾಡುಗಳನ್ನು ಸಾಮಾಜಿಕ ಜಾಲತಾಣದ ಮೂಲಕ ರಿಲೀಸ್‌ ಮಾಡುತ್ತಿರುವ ಚಿತ್ರತಂಡ ಕಟ್ಟಪ್ಪನ ಬಗ್ಗೆ ಹೆಚ್ಚು ನಿರೀಕ್ಷೆ ಮೂಡಿಸಿದೆ. ಕಾಮಿಡಿ ಹಾಗೂ ಕುತೂಹಲದ ನೆಲೆಯ ಕಥೆಯಲ್ಲಿ ಈ ಸಿನೆಮಾ ಮೂಡಿಬಂದಿದ್ದು, ಕೋಸ್ಟಲ್‌ವುಡ್‌ನ‌ಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ. 

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ