ಕುಡ್ಲದಲ್ಲಿ ಜಬರ್ದಸ್ತ್  ಫೈಟ್‌!


Team Udayavani, Mar 21, 2019, 7:35 AM IST

21-march-11.jpg

ಸಾಮಾನ್ಯವಾಗಿ ತುಳು ಸಿನೆಮಾ ಅಂದಾಗ ಅಲ್ಲಿ ಕಾಮಿಡಿಯೇ ಮುಖ್ಯವಾಗಿರುತ್ತದೆ. ಅದರಲ್ಲಿಯೂ ದೇವದಾಸ್‌ ಕಾಪಿಕಾಡ್‌ ಅವರ ಸಿನೆಮಾ ಅಂದಾಗ ಕಾಮಿಡಿ ಅಗ್ರಪಂಕ್ತಿಯಲ್ಲಿರುತ್ತದೆ. ಜತೆಗೆ ಜನರಿಗೆ ಒಪ್ಪುವಂತಹ ಕತೆ ಕೂಡ ಕಾಮಿಡಿಯಲ್ಲಿ ಮಿಕ್ಸ್‌ ಆಗಿರುತ್ತದೆ. ವಿಶೇಷವೆಂದರೆ ಕಾಪಿಕಾಡ್‌ ಅವರ ಈ ಬಾರಿಯ ಸಿನೆಮಾ ಮಾತ್ರ ಇದಕ್ಕಿಂತ ಸ್ವಲ್ಪ ಭಿನ್ನ. ಇಲ್ಲಿ ಕಾಮಿಡಿ- ಕಥೆಯ ಜತೆಗೆ ಫೈಟ್‌ ವೆರೈಟಿಯಾಗಿ ಇದೆ ಎಂಬುದು ಸದ್ಯದ ಮಾಹಿತಿ.

‘ಜಬರ್ದಸ್ತ್ ಶಂಕರ’ ಸಿನೆಮಾ ಅಷ್ಟರಮಟ್ಟಿಗೆ ಮಾಸ್‌ ಸಿನೆಮಾವಾಗಿ ಮೂಡಿಬಂದಿದೆ ಎಂಬುದು ಅಭಿಪ್ರಾಯ. ಯಾಕೆಂದರೆ 28 ದಿನಗಳ ಜಬರ್ದಸ್ತ್ ಶೂಟಿಂಗ್‌ನಲ್ಲಿ ಬರೋಬ್ಬರಿ 11 ದಿನಗಳ ಶೂಟಿಂಗ್‌ ಅನ್ನು ಕೇವಲ ಫೈಟ್‌ ಗಾಗಿಯೇ ಮೀಸಲಿಡಲಾಗಿದೆ. ಚಿತ್ರದಲ್ಲಿ ನಾಲ್ಕು ಫೈಟ್‌ಗಳು ಕೋಸ್ಟಲ್‌ವುಡ್‌ ನಲ್ಲಿಯೇ ಮೊದಲ ಬಾರಿಗೆ ಅತ್ಯಂತ ಅದ್ದೂರಿಯಾಗಿ ಮೂಡಿಬಂದಿದೆ. ಒಂದು ಫೈಟ್‌ಗಾಗಿ ಸಿನೆಮಾದ ಚಿತ್ರೀಕರಣವನ್ನು ಬೆಂಗಳೂರಿನಲ್ಲಿ ಮಾಡಲಾಗಿದೆ.

ಪುಟ್ಟಣ ಕಣಗಾಲ್‌ ಸ್ಟುಡಿಯೋದಲ್ಲಿ ಸಾಹಸ ದೃಶ್ಯಗಳ ಚಿತ್ರೀಕರಣ ನಡೆದಿತ್ತು. ಖ್ಯಾತ ಸಾಹಸ ನಿರ್ದೇಶಕ ಮಾಸ್‌ ಮಾದ ನಿರ್ದೇಶನದಲ್ಲಿ ಸಾಹಸ ದೃಶ್ಯಗಳನ್ನು ಪರಿಚಯಿಸಲಾಗಿದೆ. ಅದರಲ್ಲಿಯೂ ಕ್ಲೈಮ್ಯಾಕ್ಸ್‌ನಲ್ಲಿ ಬರುವ ಒಂದು ಫೈಟ್‌ಗಾಗಿ ಐದೂವರೆ ದಿನ ಶೂಟಿಂಗ್‌ ಮಾಡಲಾಗಿದೆ. ಇನ್ನೊಂದು ವಿಶೇಷವೆಂದರೆ ಶೂಟಿಂಗ್‌ ಸಮಯದಲ್ಲಿ ಮೂರು ಕೆಮರಾಗಳನ್ನು ಬಳಸಲಾಗಿದೆ. ಅಂದಹಾಗೆ ಸಿನೆಮಾದ 1 ಡ್ನೂಯೆಟ್‌ ಸಾಂಗ್‌ ಶೂಟಿಂಗ್‌ ಬಾಕಿ ಇದ್ದು, ಅದನ್ನು ಅದ್ದೂರಿಯಾಗಿ ಮಾಡಬೇಕು ಎಂಬುದು ಚಿತ್ರತಂಡದ ಅಭಿಪ್ರಾಯ.

10 ನುರಿತ ಡ್ಯಾನ್ಸರ್‌ನವರನ್ನು ಇದಕ್ಕಾಗಿ ಬಳಸಲಾಗುತ್ತದೆ. ಎರಡೂವರೆ ದಿನ ಶೂಟಿಂಗ್‌ನ ಯೋಚನೆಯಿದೆ. ‘ಶಿವನಾಮದ ಮೈಮೆನೇ’ ಎಂಬ ಹಾಡಿನ ಚಿತ್ರೀಕರಣಕ್ಕೆ ಮೂರು ದಿನ ತೆಗೆದುಕೊಳ್ಳಲಾಗಿದೆ. ಹೆಚ್ಚಾ ಕಡಿಮೆ 250 ಜನ ಈ ಹಾಡಿನಲ್ಲಿ ಇದ್ದರು. ಜಲನಿಧಿ ಪ್ರೊಡಕ್ಷನ್‌ ಲಾಂಛನದಲ್ಲಿ ತಯಾರಾಗುತ್ತಿರುವ ಈ ಸಿನೆಮಾವನ್ನು ಅನಿಲ್‌ ಕುಮಾರ್‌, ಲೋಕೇಶ್‌ ಕೋಟ್ಯಾನ್‌, ರಾಜೇಶ್‌ ಕುಡ್ಲ ನಿರ್ಮಿಸುತ್ತಿದ್ದು, ದೇವದಾಸ್‌ ಕಾಪಿಕಾಡ್‌ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಸದ್ಯ ಚಿತ್ರದ ಡಬ್ಬಿಂಗ್‌ ಕೆಲಸ ನಡೆಯುತ್ತಿದೆ. ತುಳುನಾಡಿನ ಸಂಸ್ಕೃತಿ, ಆಚಾರ- ವಿಚಾರ, ಸಂಪ್ರದಾಯ ಎಲ್ಲವೂ ಇಲ್ಲಿದೆ. ಸಿನೆಮಾವನ್ನು ಉತ್ತಮ ಗುಣಮಟ್ಟದಲ್ಲಿ ನಿರ್ಮಿಸಿ ಹಿಂದಿ, ತಮಿಳು, ತೆಲುಗಿಗೆ ಡಬ್ಬಿಂಗ್‌ ಹಕ್ಕು ಮಾರಾಟ ಮಾಡುವ ಕುರಿತು ಮಾತುಕತೆ ನಡೆದಿದೆ ಎಂದು ರಾಜೇಶ್‌ ಕುಡ್ಲ ತಿಳಿಸಿದ್ದಾರೆ.

ಟಾಪ್ ನ್ಯೂಸ್

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Kharge (2)

Letter; ನ್ಯಾಯಪತ್ರ ಬಗ್ಗೆ ವಿವರಿಸಲು ಪಿಎಂ ಮೋದಿ ಸಮಯ ಕೇಳಿದ ಖರ್ಗೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

16-adu-jeevitham

Movie Review: ಆಡು ಜೀವಿದಂ

14-fusion

Rural Life: ಗ್ರಾಮೀಣ ಬದುಕಿನ ಮೆಲುಕು

13-uv-fusion

MOTHER: ತಾಯಿಗಿಂತ ಮಿಗಿಲಾದ ದೇವರಿಲ್ಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Supreme Court

Supreme Court; ಖಾಸಗಿ ಆಸ್ತಿಯನ್ನು ಸ್ವಾಧೀನ ಮಾಡಬಹುದೇ? 

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ

Ra

Congress; ಇಂದು ರಾಜ್ಯಕ್ಕೆ ರಾಹುಲ್‌ ಗಾಂಧಿ

Kharge (2)

Letter; ನ್ಯಾಯಪತ್ರ ಬಗ್ಗೆ ವಿವರಿಸಲು ಪಿಎಂ ಮೋದಿ ಸಮಯ ಕೇಳಿದ ಖರ್ಗೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.