ತ್ರಿಭಾಷಾ ಖನನ : ಪಾಪ, ಶಾಪ ಮತ್ತು ಪ್ರತಿಫ‌ಲ


Team Udayavani, Apr 5, 2019, 6:10 AM IST

Suchi-Khanana

ಕನ್ನಡದಲ್ಲೀಗ ಹೊಸಬರು ಒಂದು ಚಿತ್ರ ಮಾಡಿ ಬಿಡುಗಡೆ ಮಾಡುವುದೇ ದೊಡ್ಡ ಕಷ್ಟ ಆಗಿರುವಾಗ, ಕನ್ನಡ ಸೇರಿದಂತೆ ಮೂರು ಭಾಷೆಯಲ್ಲೂ ಚಿತ್ರೀಕರಣ ನಡೆಸಿ ಬಿಡುಗಡೆ ಮಾಡುವುದು ದೊಡ್ಡ ಸಾಹಸವೇ ಸರಿ. ಹೌದು, ಅಂಥದ್ದೊಂದು ಕೆಲಸಕ್ಕೆ ಕಾರಣವಾಗಿರುವುದು “ಖನನ’ ಎಂಬ ಹೊಸಬರ ಚಿತ್ರ. ಇದು ಕನ್ನಡ, ತೆಲುಗು ಮತ್ತು ತಮಿಳು ಭಾಷೆಯಲ್ಲಿ ತಯಾರಾಗಿದೆ. ಹಾಗಾಗಿ ಇತ್ತೀಚೆಗೆ ಮೂರು ಭಾಷೆಯಲ್ಲೂ ಆಡಿಯೋ ಸಿಡಿ ಹೊರಬಂದಿದ್ದು ವಿಶೇಷ. ಫಿಲಂ ಚೇಂಬರ್‌ನ ಭಾ.ಮ.ಹರೀಶ್‌ ಕನ್ನಡ ಭಾಷೆಯ ಹಾಡು ಬಿಡುಗಡೆ ಮಾಡಿದರೆ, ಲಹರಿ ವೇಲು ಅವರು ತೆಲುಗು ಹಾಗು ತಮಿಳು ಭಾಷೆಯ ಆಡಿಯೋ ಬಿಡುಗಡೆ ಮಾಡಿ “ಮೂರು ಭಾಷೆಯಲ್ಲೂ ಚಿತ್ರ ಯಶಸ್ಸು ಗಳಿಸಲಿ’ ಎಂದು ಚಿತ್ರತಂಡಕ್ಕೆ ಶುಭಹಾರೈಸಿದರು.

ನಿರ್ದೇಶಕ ರಾಧಾ ಅವರಿಗೆ ಇದು ಮೊದಲ ಚಿತ್ರ. ಚಿತ್ರಕಥೆ, ಸಂಭಾಷಣೆಯೊಂದಿಗೆ ನಿರ್ದೇಶನ ಮಾಡಿರುವ ಅವರು, ಚಿತ್ರ ರೆಡಿಯಾಗಲು ಸಹಕರಿಸಿದ ನಿರ್ಮಾಪಕ ಶ್ರೀನಿವಾಸ್‌ ಅವರಿಗೆ ಕೃತಜ್ಞತೆ ಸಲ್ಲಿಸಿದರು. “ಖನನ’ ಸಂಸ್ಕೃತ ಪದ. ಹೂತಾಕು ಅಥವಾ ಮುಚ್ಚಾಕು ಎಂಬ ಅರ್ಥವಿದೆ. ಸಸ್ಪೆನ್ಸ್‌ ಥ್ರಿಲ್ಲರ್‌ ಕಥೆಯಾಗಿದ್ದು, ನಿತ್ಯ ಬದುಕಿನಲ್ಲಿ ನಡೆಯುವ ಒಂದು ಸನ್ನಿವೇಶದ ಎಳೆ ಈ ಚಿತ್ರದಲ್ಲಿದೆ. ನಾವು ಮಾಡಿದ ಪಾಪ ಶಾಪವಾಗಿ ಹಿಂಬಾಲಿಸುತ್ತದೆ. ಕೊನೆಯಲ್ಲೊಂದು ಪ್ರತಿಫ‌ಲವೂ ಸಿಗುತ್ತದೆ. ಅದು ಘೋರವಾಗಿರುತ್ತೋ ಅಥವಾ ನೆಮ್ಮದಿ ಕೊಡುವಂತಿರುತ್ತದೆಯೋ ಎಂಬುದು ಸಾರಾಂಶ’ ಎಂದರು.

ನಾಯಕ ಆರ್ಯವರ್ಧನ್‌ಗೆ ಇದು ಮೊದಲ ಚಿತ್ರ. ಐಟಿ ಕ್ಷೇತ್ರದಲ್ಲಿದ್ದ ಅವರಿಗೆ ನಟನೆ ಆಸಕ್ತಿ ಇತ್ತು. ಕಾಲೇಜು ದಿನಗಳಿಂದಲೂ ಸಿನಿಮಾ ಹುಚ್ಚು ಹೆಚ್ಚಿಸಿಕೊಂಡಿದ್ದ ಅವರಿಗೆ ನಿರ್ದೇಶಕರು ಈ ಕಥೆ ಹೇಳಿದಾಗ, ಏನೂ ಅರ್ಥ ಆಗಲಿಲ್ಲವಂತೆ. ಕೊನೆಗೆ ಎಲ್ಲವನ್ನೂ ಅರ್ಥಮಾಡಿಕೊಂಡ ಬಳಿಕ “ಖನನ’ ಚಿತ್ರ ಮಾಡಿದೆ. ಇಲ್ಲಿ ನಾಯಿ ಒಂದು ಪ್ರಮುಖ ಪಾತ್ರ ಮಾಡಿದೆ. ನಿರ್ದೇಶಕರ ಕಲ್ಪನೆಗೆ ತಕ್ಕಂತೆ ಚಿತ್ರ ಮೂಡಿಬಂದಿದೆ. ಮೊದಲ ಚಿತ್ರವಾದ್ದರಿಂದ ನಿಮ್ಮೆಲ್ಲರ ಸಹಕಾರ ಇರಲಿ’ ಎಂದರು ಆರ್ಯವರ್ಧನ್‌.

ನಿರ್ಮಾಪಕ ಶ್ರೀನಿವಾಸ್‌ ಅವರಿಗೆ ಚಿತ್ರರಂಗ ಹೊಸದಲ್ಲ. ಎರಡು ದಶಕಗಳಿಂದಲೂ ಕ್ಯಾಮೆರಾ ಬಾಡಿಗೆ ಕೊಡುವ ಕಾಯಕ ಮಾಡುತ್ತಿರುವ ಶ್ರೀನಿವಾಸ್‌, ತಮ್ಮ ಪುತ್ರ ಆರ್ಯವರ್ಧನ್‌ಗಾಗಿ ಮಾಡಿದ ಚಿತ್ರವಿದು. ನನಗೂ ಚಿಕ್ಕಂದಿನಿಂದ ಸಿನಿಮಾ ಆಸಕ್ತಿ ಇತ್ತು. ಆ ಆಸೆ ಮಗನ ಮೂಲಕ ಈಡೇರಿದೆ. ಮಗ ಎಲ್ಲವನ್ನೂ ಕರಗತ ಮಾಡಿಕೊಂಡೇ ಕ್ಯಾಮೆರಾ ಮುಂದೆ ನಿಂತಿದ್ದಾನೆ. ಚಿತ್ರ ಚೆನ್ನಾಗಿ ಬಂದಿದೆ. ತಡವಾಗಲು ಕಾರಣ ಸೆನ್ಸಾರ್‌ ಮಂಡಳಿ ಬೇಗ ಚಿತ್ರಕ್ಕೆ ಅಸ್ತು ಅನ್ನಲಿಲ್ಲ. ಮೊದಲು “ಎ’ಪ್ರಮಾಣ ಪತ್ರ ಕೊಟ್ಟರು. ಆ ಬಳಿಕೆ ನಾವು ರಿವೈಸಿಂಗ್‌ ಕಮಿಟಿಗೆ ಹೋಗಿ ‘ಯು/ಎ’ ಪ್ರಮಾಣ ಪತ್ರ ಪಡೆದುಕೊಂಡೆವು’ ಎಂದು ವಿವರ ಕೊಟ್ಟರು ಅವರು.

ಚಿತ್ರಕ್ಕೆ ಕುನ್ನಿ ಗುಡಿಪಾಟಿ ಸಂಗೀತ ನೀಡಿದ್ದು, ಕಥೆಗೆ ಪೂರಕ ಹಾಡುಗಳಿವೆ. ಚಿತ್ರದಲ್ಲಿ ಯೋಗೇಶ್‌, ಮಹೇಶ್‌ ಸಿದ್ದು, ಅವಿನಾಶ್‌, ಓಂ ಪ್ರಕಾಶ್‌ರಾವ್‌, ವಿನಯ ಪ್ರಸಾದ್‌ ಇತರರು ನಟಿಸಿದ್ದಾರೆ. ಚಿತ್ರಕ್ಕೆ ರಮೇಶ್‌ ತಿರುಪತಿ ಛಾಯಾಗ್ರಹಣವಿದೆ.

ಟಾಪ್ ನ್ಯೂಸ್

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.