ವಿರುಪಾದಲ್ಲಿ ಸಂಸ್ಕೃತಿ ಅನಾವರಣ : ಹಳ್ಳಿ ಹುಡುಗನ ಪ್ಯಾಟೆ ಲೈಫ್

ಈ ವಾರ ತೆರೆಗೆ

Team Udayavani, Apr 12, 2019, 6:30 AM IST

Suchi-Virupa

ಮಾತು ಬರದ, ಕಿವಿ ಕೇಳದ, ಕಣ್ಣೇ ಕಾಣದ ಇಬ್ಬರು ಹುಡುಗರನ್ನಿಟ್ಟುಕೊಂಡು ‘ವಿರುಪಾ’ ಎಂಬ ಚಿತ್ರ ಮೂಡಿಬರುತ್ತಿದೆ ಎಂಬ ಸುದ್ದಿ ಗೊತ್ತೇ ಇದೆ. ಆ ಚಿತ್ರ ಇಂದು ಬಿಡುಗಡೆಯಾಗುತ್ತಿದೆ. ಆ ಇಬ್ಬರು ಪ್ರತಿಭಾವಂತ ಹುಡುಗರನ್ನು ಗುರುತಿಸಿ, ಚಿತ್ರದಲ್ಲಿ ಪ್ರಮುಖ ಪಾತ್ರ ನೀಡಿರುವ ನಿರ್ದೇಶಕ ಪುನೀಕ್‌ ಶೆಟ್ಟಿ, “ವಿರುಪಾ’ ಮೇಲೆ ಸಾಕಷ್ಟು ಭರವಸೆ ಇಟ್ಟುಕೊಂಡಿದ್ದಾರೆ. ರಿಯಲ್‌ ಬದುಕಲ್ಲಿ ಮಾತು ಬಾರದ, ಕಣ್ಣು ಕಾಣದ ಇಬ್ಬರು ಹುಡುಗರು ರೀಲ್‌ ನಲ್ಲೂ ಹಾಗೇ ಕಾಣಿಸಿಕೊಂಡು ನಟಿಸಿದ್ದಾರೆ ಎಂಬುದೇ ವಿಶೇಷ. ಈ ಚಿತ್ರ ಬಹುತೇಕ ಹಂಪಿಯಲ್ಲೇ ಚಿತ್ರೀಕರಣಗೊಂಡಿದೆ. ನಿರ್ದೇಶಕರು ಹಂಪಿ ಸುತ್ತಮುತ್ತಲಿನ ಮಕ್ಕಳನ್ನೇ ಆಯ್ಕೆ ಮಾಡಿಕೊಂಡು ಚಿತ್ರ ಮಾಡಿದ್ದಾರೆ.

“ವಿರುಪಾ’ದಲ್ಲಿ ಮೂವರು ಮಕ್ಕಳ ಕಥೆ ಇದೆ. ಹಾಗಾಗಿ ಇದು ಮಕ್ಕಳ ಚಿತ್ರ. ಚಿತ್ರಕ್ಕೆ ಡ್ಯಾಫ್ನಿ ನೀತು ಡಿಸೋಜ ನಿರ್ಮಾಪಕರು. ಅವರ ಸಹೋದರ ಡಿಕ್ಸನ್‌ ಜಾಕಿ ಡಿಸೋಜ ಕಾರ್ಯಕಾರಿ ನಿರ್ಮಾಪಕರು. ಇವರಿಗೆ ಇದು ಮೊದಲ ಚಿತ್ರ.

‘ವಿರುಪಾ’ ಎಂಬುದು ಮೂವರು ಮಕ್ಕಳ ಕಥೆ. ಒಬ್ಬನ ಹೆಸರು ವಿನ್ಸೆಂಟ್‌, ಇನ್ನೊಬ್ಬನ ಹೆಸರು ರುಸ್ತುಂ ಮತ್ತೂಬ್ಬ ಪಾಕ್ಷ. ಈ ಮೂವರ ಮೊದಲ ಅಕ್ಷರ ತೆಗೆದುಕೊಂಡು “ವಿರುಪಾ’ ಎಂಬ ಹೆಸರಿಡಲಾಗಿದೆ. ಸಿಟಿ ಮತ್ತು ಹಳ್ಳಿ ಬದುಕಿನ ನಡುವಿನ ವ್ಯತ್ಯಾಸ ಇಲ್ಲಿ ಹೇಳಲಾಗಿದೆ. ಮಕ್ಕಳ ಮನಸ್ಥಿತಿ ಕುರಿತ ವಿಷಯ ಇಲ್ಲಿದೆ. ಹಳ್ಳಿಯಲ್ಲಿರುವ ಹುಡುಗನೊಬ್ಬ ಸಿಟಿಗೆ ಹೋಗಿ, ಅಲ್ಲಿ ಇರಲಾರದೆ ಪುನಃ ಹಳ್ಳಿಗೆ ಬರುವ ಕಥೆ ಇಲ್ಲಿದೆ. ಹಳ್ಳಿ ಮತ್ತು ನಗರ ಸಂಸ್ಕೃತಿ ಅನಾವರಣಗೊಳ್ಳಲಿದೆ. ಮನಮಿಡಿಯುವ ಕಥೆಯೂ ಜೊತೆಗಿದೆಯಂತೆ.

ನಿರ್ಮಾಪಕಿ ಡ್ಯಾಫ್ನಿ ನೀತು ಡಿಸೋಜ ಅವರಿಗೆ ಒಂದೊಳ್ಳೆಯ ಸಿನಿಮಾ ಮಾಡುವ ಆಸೆ ಈ ಚಿತ್ರದ ಮೂಲಕ ಈಡೇರಿದೆಯಂತೆ. ಕಥೆ ಚೆನ್ನಾಗಿದ್ದ ಕಾರಣ, ಪ್ರತಿಭಾವಂತ ಮಕ್ಕಳು ಸಿಕ್ಕ ಹಿನ್ನೆಲೆಯಲ್ಲಿ ಈ ಚಿತ್ರ ನಿರ್ಮಾಣ ಮಾಡಿದ್ದಾರೆ ನೀತು ಡಿಸೋಜ. ಇನ್ನು, ಕನ್ನಡದಲ್ಲಿ ಹೊಸಬಗೆಯ ಚಿತ್ರ ಮಾಡಿರುವ ಸಂತಸ ಅವರದು.

ಮೂಲತಃ ಭಟ್ಕಳದವರಾದ ಶಯಾಲ್‌ ಗೋಮ್ಸ್‌ ಒಬ್ಬ ಅಂಧ. ಚಿತ್ರದಲ್ಲೂ ಅಂಧನಾಗಿಯೇ ನಟಿಸಿದ್ದು, ನಟನೆ ಬಗ್ಗೆ ಎಲ್ಲವನ್ನೂ ಹೇಳಿಕೊಟ್ಟು ಕೆಲಸ ತೆಗೆಸಿರುವ ನಿರ್ದೇಶಕರು ಮತ್ತು ಚಿತ್ರತಂಡಕ್ಕೆ ಧನ್ಯವಾದ ಹೇಳಿದರು ಶಯಾಲ್‌. ಉಳಿದಂತೆ ಹೊಸಪೇಟೆಯ ವಿಷ್ಣು, ಇಲ್ಲಿ ಶಯಾಲ್‌ ಗೆಳೆಯನಾಗಿ ನಟಿಸಿದ್ದಾರೆ. ಚರಣ್‌ ನಾಯಕ್‌ ಅವರಿಗೂ ಇಲ್ಲಿ ಗಮನ ಸೆಳೆಯುವ ಪಾತ್ರವಿದೆ. ಚಿತ್ರದಲ್ಲಿ ಮಂಜುನಾಥ್‌ ಉಪನ್ಯಾಸಕ ಪಾತ್ರ ನಿರ್ವಹಿಸಿದ್ದಾರೆ. ಚಿತ್ರಕ್ಕೆ ಪ್ರದೀಪ್‌ ಮಳ್ಳೂರು ಎರಡು ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಅನಂತ್‌ರಾಜ್‌ ಅರಸ್‌ ಛಾಯಾಗ್ರಹಣವಿದೆ. ಚಿತ್ರದಲ್ಲಿ ಬೇಬಿ ಪ್ರಾಪ್ತಿ, ಡ್ಯಾನಿಯಲ್‌ ಲೆಸ್ಸಾಸರ್ಡ್, ಫೆಲ್ಸಿ ರಿತೀಶ್‌ ಸೇರಿದಂತೆ ಇನ್ನೂ ಅನೇಕರು ನಟಿಸಿದ್ದಾರೆ.

ಟಾಪ್ ನ್ಯೂಸ್

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

1-RR

Modi ಹಾವಿನ ರೀತಿಯಲ್ಲಿ ರೈತರ ವಿರುದ್ಧ ಸೇಡಿಗೆ ಕಾಯ್ತಿದ್ದಾರೆ: ರೇವಂತ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.