ಉಸ್ಸಪ್ಪಾ ಸಾಕಾಯ್ತು ಝಳವೋ ಝಳ!

ಗಿಡಗಳ ನೆರಳೇ ಪ್ರಾಣಿ-ಪಕ್ಷಿಗಳಿಗೆ ಆಶ್ರಯ•ಕೊಡೆಗಳ ನೆರವು ಪಡೆದ ಮಹಿಳೆಯರು

Team Udayavani, Apr 26, 2019, 10:07 AM IST

26-April-3

ಜೇವರ್ಗಿ: ಕಲ್ಲಂಗಡಿ ಹಣ್ಣು ಸೇವಿಸುತ್ತಿರುವ ಸಾರ್ವಜನಿಕರು.

ಜೇವರ್ಗಿ: ಒಂದೆಡೆ ಲೋಕಸಭೆ ಚುನಾವಣೆ ಕಾವು ಮುಗಿಯುತ್ತಿದ್ದರೂ ಬಿಸಿಲಿನ ಝಳ ಹೆಚ್ಚುವುದು ಮಾತ್ರ ಕಮ್ಮಿಯಾಗುತ್ತಿಲ್ಲ.

ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಕಳೆದ 15 ದಿನದಿಂದ ತಾಪಮಾನ ದಿನೇ ದಿನೇ ಏರುತ್ತಿದ್ದು, ಗರಿಷ್ಠ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ ದಾಟುತ್ತಿದೆ. ಬಿಸಿಲಿನ ಝಳ ಹೆಚ್ಚುತ್ತಿದ್ದು, ಸಾರ್ವಜನಿಕರು, ಮಹಿಳೆಯರು ಮಕ್ಕಳು ತತ್ತರಿಸಿದ್ದಾರೆ.

ಬಿಸಿಲಿನ ತಾಪದಿಂದ ತಪ್ಪಿಸಿಕೊಳ್ಳಲು ಮಹಿಳೆಯರು, ಮಕ್ಕಳು ಕೊಡೆಗಳ ಮೊರೆ ಹೋಗಿದ್ದು, ಪ್ರಾಣಿ-ಪಕ್ಷಿಗಳು ಬೀದಿಬದಿಯ ಮರದ ಆಶ್ರಯ ಬಯಸುವಂತಾಗಿದೆ.

ಜನರು ಬಿಸಿಲಿನ ಧಗೆಯಿಂದ ತಣಿಸಿಕೊಳ್ಳಲು ಯಂತ್ರಗಳ ಖರೀದಿಯಲ್ಲಿ ತೊಡಗಿದ್ದಾರೆ. ಫ್ಯಾನ್‌, ಏರ್‌ ಕೂಲರ್‌, ಎಸಿ ಸೇರಿದಂತೆ ಇತರ ಯಂತ್ರಗಳನ್ನು ಖರೀದಿಸುತ್ತಿದ್ದಾರೆ. ಫ್ಯಾನಿನ ದರ 2000ರೂ. ದಿಂದ 3000ರೂ. ಗಡಿ ದಾಟಿದೆ. ಏರ್‌ ಕೂಲರ್‌ ದರ 10,000 ರೂ.ದಿಂದ 15 ಸಾವಿರ ರೂ. ಗಡಿ ದಾಟಿದೆ. ಸಾರ್ವಜನಿಕರು ಯಂತ್ರಗಳ ಬೆಲೆ ಕೇಳಿ ಧಗೆಯಲ್ಲಿ ಬೆಂದಂತಾಗಿದೆ.

ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ತಾಪಮಾನ 35ರಿಂದ 40 ಡಿಗ್ರಿ ಸೆಲ್ಸಿಯಸ್‌ ತಲುಪುತ್ತಿದ್ದು, ಸಾರ್ವಜನಿಕರು ಮನೆ ಬಿಟ್ಟು ಹೊರಬಾರದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಜನರು ತಂಪೊತ್ತಿನಲ್ಲಿಯೇ ತಮ್ಮ ಕೆಲಸ ಕಾರ್ಯ ಮುಗಿಸಿಕೊಂಡು ಮಧ್ಯಾಹ್ನದ ವೇಳೆ ಮನೆ ಸೇರುತ್ತಿದ್ದಾರೆ. ಹೆಚ್ಚಾದ ಝಳದಿಂದ ಜನರು ತಮ್ಮ ದೇಹ ತಂಪುಗೊಳಿಸಿಕೊಳ್ಳಲು ತಂಪು ಪಾನಿಯಗಳ ಮೊರೆ ಹೋಗುತ್ತಿದ್ದು, ಎಳನೀರು, ಲಿಂಬು ಶರಬತ್‌, ಜೀರಾ, ಕಬ್ಬಿನ ಹಾಲು ಸೇರಿದಂತೆ ಇತರ ತಂಪು ಪಾನೀಯಗಳಿಗೆ ಬೇಡಿಕೆ ಹೆಚ್ಚಾಗಿದೆ. ಐಸ್‌ಕ್ರೀಮ್‌ ವ್ಯಾಪಾರವೂ ಭರ್ಜರಿಯಾಗಿ ಸಾಗಿದೆ. ಜನರು ಕಲ್ಲಂಗಡಿ, ಕರಬೂಜ್‌, ಪಪ್ಪಾಯಿ, ಸೇಬಿನ ಹಣ್ಣುಗಳ ಸೇವಿಸುವುದು ಸರ್ವೇ ಸಾಮಾನ್ಯ. ಆದರೆ ಹಣ್ಣುಗಳ ಬೆಲೆ ಗಗನ ಮುಟ್ಟಿದ್ದು, ಒಂದು ಕೆಜಿ ಕಲ್ಲಂಗಡಿಗೆ 30ರೂ.ದಿಂದ 40ರೂ., ಕರಬೂಜ್‌ 60ರೂ. ದಿಂದ 70ರೂ. ಆಗಿದ್ದು, ಅನಿವಾರ್ಯವಾಗಿ ಹಣ್ಣನ್ನು ಸೇವಿಸುವಂತಾಗಿದೆ. ಪಟ್ಟಣದ ಬಸವೇಶ್ವರ ಸರ್ಕಲ್, ಅಖಂಡೇಶ್ವರ ವೃತ್ತ, ಹೊಸ ಬಸ್‌ ನಿಲ್ದಾಣದ ಎದುರು ಹಣ್ಣಿನ, ತಂಪುಪಾನೀಯಗಳ ಅಂಗಡಿಗಳು ಸಾರ್ವಜನಿಕರ ದಾಹ ತೀರಿಸುವ ತಾಣವಾಗಿವೆ.

ಹೆಚ್ಚುತ್ತಿರುವ ತಾಪಮಾನ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದ್ದು, ದೇಹವನ್ನು ತಂಪುಗೊಳಿಸುವ ಆಹಾರ, ನೀರು, ಪಾನೀಯ, ಹಣ್ಣುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬೇಕು. ಇಲ್ಲವಾದರೆ ಅತಿಯಾದ ತಾಪಮಾನದಿಂದ ಅನಾರೋಗ್ಯ ಉಂಟಾಗಬಹುದು.
• ಡಾ| ಸಿದ್ಧು ಪಾಟೀಲ,
ತಾಲೂಕು ಆರೋಗ್ಯಾಧಿಕಾರಿ, ಜೇವರ್ಗಿ

ಬಿಸಿಲಿನ ತಾಪ ತಡೆಯಲಾಗುತ್ತಿಲ್ಲ, ಮನೆಯಲ್ಲೂ ಕೂರಲಾಗುತ್ತಿಲ್ಲ. ಗೆಳೆಯರ ಜತೆ ಕೂಡಿ ಹಣ್ಣನ್ನು ತಿನ್ನಲು ಬಂದಿದ್ದೇನೆ. ಬೇಸಿಗೆ ಕಳೆಯುವುದು ಸವಾಲಿನ ಕೆಲಸವಾಗಿದ್ದು, ಬಿಡುವಿನ ಸಮಯದಲ್ಲಿ ಬಾವಿ, ಕೆರೆಗಳಿಗೆ ಹೋಗಿ ಈಜಾಡುವ ಮೂಲಕ ಬಿಸಿಲಿನ ತಾಪ ಕಡಿಮೆ ಮಾಡಿಕೊಳ್ಳುತ್ತೇವೆ.
•ದೇವಿಂದ್ರ ಬನ್ನೆಟ್ಟಿ ,
ಸಾರ್ವಜನಿಕರು

ವಿಜಯಕುಮಾರ ಎಸ್‌.ಕಲ್ಲಾ

ಟಾಪ್ ನ್ಯೂಸ್

1-wewqewq

RCB vs CSK ರೋಚಕ ಪಂದ್ಯಕ್ಕೆ ಮಳೆ ಅಡ್ಡಿ: ಬೌಲಿಂಗ್ ಆಯ್ಕೆ ಮಾಡಿಕೊಂಡ ಚೆನ್ನೈ

1-ew-eqw-e

BJP ಕಚೇರಿಗೆ ಬರುತ್ತಿದ್ದೇವೆ.. ಎಲ್ಲರನ್ನೂ ಬಂಧಿಸಿ: ಪ್ರಧಾನಿಗೆ ಕೇಜ್ರಿವಾಲ್ ಸವಾಲು

yogi-2

Congress ಪಕ್ಷದಲ್ಲಿ ಔರಂಗಜೇಬನ ಆತ್ಮ ಸೇರಿಕೊಂಡಿದೆ: ಸಿಎಂ ಯೋಗಿ ವಾಗ್ದಾಳಿ

1-qewwqeqqw

RSS ಕೂಡ ನಕಲಿ ಎಂದು ನಾಳೆ ಮೋದಿ ಹೇಳಬಹುದು : ಉದ್ಧವ್ ಠಾಕ್ರೆ ಕಿಡಿ

Gangavathi ಸಾಣಾಪೂರ ಕೆರೆಯಲ್ಲಿ ಮುಳುಗಿ ಯುವಕ ಮೃತ್ಯು

Gangavathi ಸಾಣಾಪೂರ ಕೆರೆಯಲ್ಲಿ ಮುಳುಗಿ ಯುವಕ ಮೃತ್ಯು

drowned

Vedganga ನದಿಯಲ್ಲಿ ಮುಳುಗಿ ನಾಲ್ವರು ಮೃತ್ಯು:ಇಬ್ಬರು ಬೆಳಗಾವಿಯವರು

Priyanka Gandhi

Election; ಪ್ರಧಾನಿ ಮೋದಿ ಯಾಕೆ ಮಂಗಳಸೂತ್ರ,ಧರ್ಮದ ಮೇಲೆ ಮತ ಕೇಳುತ್ತಾರೆ: ಪ್ರಿಯಾಂಕಾ ಗಾಂಧಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kalaburagi; Suresh Sajjan submits nomination as BJP rebel candidate

Kalaburagi; ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸುರೇಶ ಸಜ್ಜನ್ ನಾಮಪತ್ರ ಸಲ್ಲಿಕೆ

Kalaburagi: ಮರ್ಮಾಂಗಕ್ಕೆ ಕರೆಂಟ್ ಶಾಕ್ ನೀಡಿದ ಪ್ರಕರಣ: ಶೀಘ್ರ ಇನ್ನುಳಿದ ಆರೋಪಿಗಳ ಬಂಧನ

Kalaburagi: ಮರ್ಮಾಂಗಕ್ಕೆ ಕರೆಂಟ್ ಶಾಕ್ ನೀಡಿದ ಪ್ರಕರಣ: ಶೀಘ್ರ ಇನ್ನುಳಿದ ಆರೋಪಿಗಳ ಬಂಧನ

ಕಲಬುರಗಿ: ಎಂಎಲ್ಸಿ ಚುನಾವಣೆಯಲ್ಲಿ ಕೈತಪ್ಪಿದ ಟಿಕೆಟ್: ಬಿಜೆಪಿಯಲ್ಲಿ ಬಂಡಾಯ ಬಿಸಿ

ಎಂಎಲ್ಸಿ ಚುನಾವಣೆ: ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಮುಂದಾದ ಬಿಜೆಪಿ ನಾಯಕ…

2-kalburgi

Kalburgi: ಕರೆಂಟ್ ಶಾಕ್ ಪ್ರಕರಣ;ಖಂಡಿಸಿ ಹಿಂದೂ ಜಾಗೃತಿ ಸೇನೆಯಿಂದ ಸರಕಾರದ ಪ್ರತಿಕೃತಿ ದಹನ

1-wqew-ewqe

Kalaburagi: ಹಣಕ್ಕಾಗಿ ಮೂವರ ವಿವಸ್ತ್ರಗೊಳಿಸಿ ಗುಪ್ತಾಂಗಕ್ಕೆ ಶಾಕ್‌!: 7 ಮಂದಿ ಸೆರೆ

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

1-wewqewq

RCB vs CSK ರೋಚಕ ಪಂದ್ಯಕ್ಕೆ ಮಳೆ ಅಡ್ಡಿ: ಬೌಲಿಂಗ್ ಆಯ್ಕೆ ಮಾಡಿಕೊಂಡ ಚೆನ್ನೈ

1-ew-eqw-e

BJP ಕಚೇರಿಗೆ ಬರುತ್ತಿದ್ದೇವೆ.. ಎಲ್ಲರನ್ನೂ ಬಂಧಿಸಿ: ಪ್ರಧಾನಿಗೆ ಕೇಜ್ರಿವಾಲ್ ಸವಾಲು

yogi-2

Congress ಪಕ್ಷದಲ್ಲಿ ಔರಂಗಜೇಬನ ಆತ್ಮ ಸೇರಿಕೊಂಡಿದೆ: ಸಿಎಂ ಯೋಗಿ ವಾಗ್ದಾಳಿ

1-qewwqeqqw

RSS ಕೂಡ ನಕಲಿ ಎಂದು ನಾಳೆ ಮೋದಿ ಹೇಳಬಹುದು : ಉದ್ಧವ್ ಠಾಕ್ರೆ ಕಿಡಿ

Gangavathi ಸಾಣಾಪೂರ ಕೆರೆಯಲ್ಲಿ ಮುಳುಗಿ ಯುವಕ ಮೃತ್ಯು

Gangavathi ಸಾಣಾಪೂರ ಕೆರೆಯಲ್ಲಿ ಮುಳುಗಿ ಯುವಕ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.