ವಾಟರ್‌ ಪ್ರೂಫ್‌ ಮೊಬೈಲ್‌

Team Udayavani, May 3, 2019, 4:39 PM IST

tech-4

ದುಬಾರಿ ಹಣ ಕೊಟ್ಟು ಖರೀದಿಸುವ ಮೊಬೈಲ್‌ ನೀರು, ಧೂಳಿನಿಂದ ಸುರಕ್ಷಿತವಾಗಿರಬೇಕು. ಇನ್ನೇನು ಕೆಲವೇ ದಿನಗಳಲ್ಲಿ ಮಳೆ ಆರಂಭವಾಗುವ ಸಾಧ್ಯತೆ ಇದೆ. ಹೀಗಾಗಿ ಈಗಲೇ ಜನರು ಇದಕ್ಕೆ ಸಿದ್ಧರಾಗುತ್ತಿದ್ದಾರೆ. ಆದ್ದರಿಂದ ಮಾರುಕಟ್ಟೆಯಲ್ಲೀಗ ವಾಟರ್‌ ಪ್ರೂಫ್ ಮೊಬೈಲ್‌ಗೆ ಬೇಡಿಕೆ ಹೆಚ್ಚಾಗುತ್ತಿದೆ.

ಇನ್ನೇನು ಮಳೆಗಾಲ ಸೀಸನ್‌ ಶುರುವಾಗುತ್ತಿದ್ದು, ವಾಟರ್‌ ಪ್ರೂಫ್‌ ವಸ್ತುಗಳತ್ತ ಎಲ್ಲರೂ ಮೊರೆಹೋಗುತ್ತಿದ್ದಾರೆ. ಗ್ರಾಹಕರ ಅಭಿರುಚಿಗೆ ತಕ್ಕಂತೆ ಕೆಲವು ಮೊಬೈಲ್ ಕಂಪೆನಿಗಳು ವಾಟರ್‌ ಪ್ರೂಫ್‌ (ವಾಟರ್‌ ರೆಸಿಸ್ಟೆಂಟ್) ಮೊಬೈಲ್ ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಮಳೆಗಾಲಕ್ಕೆಂದೇ ವಿಶೇಷವಾಗಿ ಸಿದ್ಧಗೊಂಡಿರುವ ಮೊಬೈಲ್ನಂತೆ ಇದ್ದು, ಮಳೆಗೆ ಸ್ಮಾರ್ಟ್‌ಫೋನ್‌ ಹಾಳಾಗುವ ಚಿಂತೆಯನ್ನು ಇನ್ನು ಬಿಡಬಹುದು.

ಈ ಹಿಂದೆ ಕೀಪೈಡ್‌ ಮೊಬೈಲ್ ಇದ್ದ ಜಾಗಕ್ಕೆ ಸ್ಮಾರ್ಟ್‌ ಫೋನ್‌ ಬಂದಿತ್ತು. 3 ಜಿ ಮೊಬೈಲ್ ಬಳಿಕ ಈಗ 5 ಐ ಮೊಬೈಲ್ ಬಂದಿದೆ. ಸ್ಮಾರ್ಟ್‌ ಫೋನ್‌ ಕ್ಷೇತ್ರ ದಿನದಿಂದ ದಿನಕ್ಕೆ ಮತ್ತಷ್ಟು ಸ್ಮಾರ್ಟ್‌ ಆಗುತ್ತಿದೆ. ಈಗ ವಾಟರ್‌ ಪ್ರೂಫ್‌ ಮೊಬೈಲ್ ಫೋನ್‌ ಮಾರುಕಟ್ಟೆಗೆ ಬಂದಿದೆ. ಇದರಿಂದಾಗಿ ಮೊಬೈಲ್ ನೀರಿನಲ್ಲಿ ಬಿತ್ತು, ಹಾಳಾಯಿತು ಎಂಬ ಚಿಂತೆ ತಪ್ಪಲಿದೆ.

ಮೊಬೈಲ್ ತಯಾರಿಕಾ ಕ್ಷೇತ್ರದ ಎಲ್ಜಿ ಕಂಪೆನಿಯ ವಿ 30 ಪ್ಲಸ್‌ ವಾಟರ್‌ ಪ್ರೂಫ್‌ ಮೊಬೈಲ್ ಆಗಿದ್ದು, 6 ಇಂಚ್ ಒಎಲ್ಇಡಿ ಡಿಸ್‌ಪ್ಲೇ, ಕ್ವಾಲಕಂ ಸ್ನಾಪ್‌ಡ್ರ್ಯಾಗನ್‌ 835 ಪ್ರೊಸೆಸರ್‌, 12 ಎಂಪಿ ಮತ್ತು 16 ಎಂಪಿ ಡ್ಯುಯಲ್ ಕೆಮರಾ ಹಾಗೂ 5 ಎಂಪಿ ಮುಂಬದಿ ಕೆಮರಾ ವೈಶಿಷ್ಟ ್ಯತೆ ಹೊಂದಿದೆ. 3300 ಎಂಎಎಚ್ ಬ್ಯಾಟರಿ ಸಾಮರ್ಥ್ಯ ಇದರಲ್ಲಿದ್ದು, ವಾಟರ್‌ ಪ್ರೂಫ್‌ ವೈಶಿಷ್ಟ್ಯವನ್ನು ಹೊಂದಿದೆ.

ಆ್ಯಪಲ್ ಸಂಸ್ಥೆಯು ಬಿಡುಗಡೆ ಮಾಡಿದ ಐಫೋನ್‌ 67 ಧೂಳು ಮತ್ತು ನೀರಿನಿಂದ ರಕ್ಷಣೆಯನ್ನು ಕೊಡುತ್ತದೆ. ಇದೇ ಸಂಸ್ಥೆಯ ಐಫೋನ್‌ 10 ಕೂಡ ವಾಟರ್‌ ಪ್ರೂಫ್‌ ಸೌಲಭ್ಯ ಹೊಂದಿದೆ. ಇನ್ನು, ಸೋನಿ ಸಂಸ್ಥೆಯ ಎಕ್ಸ್‌ ಪೀರಿಯಾ ಎಕ್ಸ್‌ ಝಡ್‌ ಮೊಬೈಲ್ 5.2 ಇಂಚ್ ಡಿಸ್‌ಪ್ಲೇ ಹೊಂದಿದ್ದು, 23 ಮೆಗಾ ಫಿಕ್ಸೆಲ್ ಹಿಂಬದಿ ಮತ್ತು 13 ಮೆಗಾ ಫಿಕ್ಸೆಲ್ ಮುಂಬದಿ ಕೆಮರಾ ಹೊಂದಿದೆ. 3 ಜಿ.ಬಿ. ರ್ಯಾಮ್‌ ಇದ್ದು, ವಾಟರ್‌ ಪ್ರೂಫ್‌ ಸೌಲಭ್ಯವನ್ನು ಒಳಗೊಂಡಿದೆ.

ಮೊಬೈಲ್ ಉತ್ಪಾದನಾ ಕ್ಷೇತ್ರದಲ್ಲಿ ಬ್ರ್ಯಾಂಡ್‌ ಸೃಷ್ಟಿಸಿದ ಸ್ಯಾಮ್‌ಸಂಗ್‌ ಕೂಡ ವಾಟರ್‌ ಪ್ರೂಫ್‌ ಸೌಲಭ್ಯವನ್ನು ಹೊಂದಿದೆ. 45,990 ರೂ. ಹೊಂದಿದ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ನೋಟ್- 5 ಮೊಬೈಲ್ 5.7 ಇಂಚ್ ಡಿಸ್‌ಪ್ಲೇ, ಧೂಳು ಮತ್ತು ವಾಟರ್‌ ಪ್ರೂಫ್‌ ಹೊಂದಿದೆ. ಇದೇ ಕಂಪೆನಿಯ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್‌7, ಎಸ್‌7 ಎಡ್ಜ್ ಕೂಡ ವಾಟರ್‌ ಪ್ರೂಫ್ ಮೊಬೈಲ್ ಆಗಿದೆ.

ಇದರೊಂದಿಗೆ ಕಡಿಮೆ ಬೆಲೆಯ ವಾಟರ್‌ ಪ್ರೂಫ್‌ ಮೊಬೈಲ್ ಕೂಡ ಮಾರುಕಟ್ಟೆಯಲ್ಲಿದೆ. ಕಾರ್ಬನ್‌ ಕಂಪೆನಿಯ ಆರ್‌-1 4ಜಿ ಎಲ್ಟಿಇ ಸ್ಮಾರ್ಟ್‌ ಫೋನ್‌ ಸ್ಲಿಮ್‌ ವಿನ್ಯಾಸದೊಂದಿಗೆ 13 ಮೆಗಾ ಫಿಕ್ಸೆಲ್ ಫೋಕಸ್‌ ಕೆಮರಾವನ್ನು ಒಳಗೊಂಡಿದೆ. ಇದು ಕೂಡ ವಾಟರ್‌ ಫ್ರೂಪ್‌ ಆಗಿದೆ. ಸುಮಾರು 7 ಸಾವಿರ ರೂ. ಇದರ ಮಾರುಕಟ್ಟೆ ದರ.

ವಾಟರ್‌ ಪ್ರೂಫ್‌ ಮೊಬೈಲ್ ಕವರ್‌
ನೀರಿನಿಂದ ಸ್ಮಾರ್ಟ್‌ಫೋನ್‌ ರಕ್ಷಿಸುವ ಸಲುವಾಗಿ ಮಾರುಕಟ್ಟೆಯಲ್ಲಿ ವಾಟರ್‌ ಪ್ರೂಫ್‌ ಕವರ್‌ ಕೂಡ ಬಂದಿದೆ. ಇದು ಬ್ಯಾಗ್‌ನ ರೀತಿಯಲ್ಲಿ ಇರುತ್ತದೆ. ಸಾಮಾನ್ಯವಾಗಿ ಹೊರಗಡೆ ತೆರಳುವ ಸಮಯದಲ್ಲಿ ಮುಂಜಾಗ್ರತಾ ಕ್ರಮವಾಗಿ ಈ ವಾಟರ್‌ ಪ್ರೂಫ್‌ ಬ್ಯಾಗ್‌ನ ಒಳಗೆ ಮೊಬೈಲ್ ಹಾಕಬಹುದಾಗಿದೆ. ಈ ಕವರ್‌ ಸ್ವಲ್ಪ ದೊಡ್ಡದಿರುವುದರಿಂದ ಮೊಬೈಲ್ ಸೇರಿದಂತೆ ಇನ್ನಿತರ ಚಿಕ್ಕಪುಟ್ಟ ವಸ್ತುಗಳನ್ನು ಇದರಲ್ಲಿಡಲು ಸಾಧ್ಯವಾಗುತ್ತದೆ. ಹೆಚ್ಚಾಗಿ ಸ್ವಿಮ್ಮಿಂಗ್‌, ನೀರಿನ ಆಟ ಆಡುವ ವೇಳೆಯಲ್ಲಿ ವಾಟರ್‌ ಪ್ರೂಫ್‌ ಬ್ಯಾಗ್‌ ಅನ್ನು ಬಳಕೆ ಮಾಡುತ್ತಾರೆ. ಏಕೆಂದರೆ, ನೀರಿರುವ ಕೈಯಿಂದ ಮೊಬೈಲ್ ಮುಟ್ಟಿದರೆ ಮೊಬೈಲ್ ಹಾಳಾಗುವ ಪ್ರಮೇಯ ಹೆಚ್ಚಿರುತ್ತದೆ. ಈ ವೇಳೆ ಸಾಮಾನ್ಯ ಮೊಬೈಲ್ನ ಸುರಕ್ಷೆಗೆ ವಾಟರ್‌ ಪ್ರೂಫ್‌ ಬ್ಯಾಗ್‌ ಅನ್ನು ಕೆಲವು ಮಂದಿ ಉಪಯೋಗ ಮಾಡುತ್ತಾರೆ.

ವಾಟರ್‌ ಪ್ರೂಫ್‌ ಮೊಬೈಲ್ಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದೆ. ಇನ್ನೇನು ಕೆಲವೇ ಸಮಯದಲ್ಲಿ ಮಳೆಗಾಲ ಆರಂಭವಾಗಲಿದ್ದು, ಗ್ರಾಹಕರು ಈಗಲೇ ವಾಟರ್‌ ಪ್ರೂಫ್‌ ಬ್ರ್ಯಾಂಡ್‌ನ‌ ಮೊಬೈಲ್ಗಳನ್ನೇ ಆಯ್ಕೆ ಮಾಡುತ್ತಿದ್ದಾರೆ.
– ಮೋಹನ್‌ ಕುಮಾರ್‌, ಮೊಬೈಲ್ ಟೆಕ್ನೀಶಿಯನ್‌

••••ನವೀನ್‌ ಭಟ್ ಇಳಂತಿಲ

ಟಾಪ್ ನ್ಯೂಸ್

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

Lok Sabha polls: ಒಡಿಶಾದಲ್ಲಿ ನವೀನ್‌ ಜನಪ್ರಿಯತೆ Vs ಬಿಜೆಪಿ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

1-wqeqeqwewq

HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ

9-upi

Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.