ವೈಡ್ ವಿವಾದ: ಪೊಲಾರ್ಡ್ ಗೆ ದಂಡ
Team Udayavani, May 13, 2019, 10:55 AM IST
ಹೈದರಾಬಾದ್: ಐಪಿಎಲ್ 12ನೇ ಆವೃತ್ತಿಯ ಫೈನಲ್ ಪಂದ್ಯ ಮುಗಿದಿದೆ. ಮುಂಬೈ ಇಂಡಿಯನ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಲಾಸ್ಟ್ ಬಾಲ್ ಥ್ರಿಲ್ಲರ್ ನಲ್ಲಿ ಮಣಿಸಿ ಮತ್ತೆ ಚಾಂಪಿಯನ್ ಆಗಿದೆ. ಆದರೆ ಫೈನಲ್ ಪಂದ್ಯದ ವೈಡ್ ವಿವಾದದಿಂದಾಗಿ ಕೈರನ್ ಪೊಲಾರ್ಡ್ ಗೆ ದಂಡ ವಿಧಿಸಿಲಾಗಿದೆ.
ರವಿವಾರ ಇಲ್ಲಿನ ರಾಜೀವ್ ಗಾಂಧಿ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಬ್ಯಾಟಿಂಗ್ ನಡೆಸುತ್ತಿದ್ದ ವೇಳೆ ಈ ವೈಡ್ ವಿವಾದ ನಡೆದಿದೆ. ಅದು ಮುಂಬೈ ಇನ್ನಿಂಗ್ಸ್ ನ 20ನೇ ಓವರ್. ಪೊಲಾರ್ಡ್ ಸ್ಟ್ರೈಕ್ ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. ಚೆನ್ನೈ ನ ಡ್ವೆನ್ ಬ್ರಾವೋ ಬೌಲಿಂಗ್ ಮಾಡುತ್ತಿದ್ದರು. ಓವರ್ ನ ಎರಡನೇ ಎಸೆತ ಎಸೆದ ಬ್ರಾವೋ ವೈಡ್ ಲೈನ್ ಗಿಂತ ಅಗಲವಾಗಿ ಬಾಲ್ ಎಸೆದರೂ ಸ್ಟ್ರೈಕ್ ಅಂಪಾಯರ್ ನಿತಿನ್ ಮೆನನ್ ವೈಡ್ ಕೊಡಲಿಲ್ಲ. ಇದರಿಂದ ಸಿಟ್ಟಿಗೆದ್ದ ಪೊಲಾರ್ಡ್ ಮುಂದಿನ ಎಸೆತವನ್ನು ಎದುರಿಸಲು ವೈಡ್ ಲೈನ್ ಬಳಿಯೇ ಬಂದು ನಿಂತರು !
ಮುಂಬೈ ಬ್ಯಾಟ್ಸಮನ್ ಕೈರನ್ ಪೊಲಾರ್ಡ್ ಈ ವರ್ತನೆಯಿಂದಾಗಿ ಆನ್ ಫೀಲ್ಡ್ ಅಂಪಾಯರ್ ಗಳಾದ ನಿತಿನ್ ಮೆನನ್ ಮತ್ತು ಇಯಾನ್ ಗೂಲ್ಡ್ ಪೊಲಾರ್ಡ್ ಬಳಿ ಹೋಗಿ ಕ್ರೀಸ್ ನಿಂದಲೇ ಬ್ಯಾಟ್ ಮಾಡಬೇಕೆಂದು ಮನವೊಲಿಸಿದ ಪ್ರಸಂಗ ನಡೆಯಿತು.
ಪಂದ್ಯ ಶುಲ್ಕದ ಶೇ. 25 ದಂಡ: ಕೈರನ್ ಪೊಲಾರ್ಡ್ ಈ ಅಶಿಸ್ತಿನ ವರ್ತನೆಗೆ ದಂಡ ವಿಧಿಸಿಲಾಗಿದ್ದು, ಪಂದ್ಯ ಶುಲ್ಕದ ಶೇಕಡಾ 25ರಷ್ಟು ಹಣವನ್ನು ಪೊಲಾರ್ಡ್ ದಂಡವಾಗಿ ತೆರಬೇಕಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ