ಪ್ರವಾಸಿಗರಿಂದ ತುಂಬಿ ತುಳುಕುತ್ತಿದೆ ಮಲ್ಪೆ ಬೀಚ್‌

ವಾರಾಂತ್ಯದಲ್ಲಿ 16 ಸಾವಿರಕ್ಕೂ ಅಧಿಕ ಪ್ರವಾಸಿಗರ ಭೇಟಿ

Team Udayavani, May 20, 2019, 6:00 AM IST

1505MLP1

ಮಲ್ಪೆ: ಬಿಸಿಲ ಬೇಗೆಗೆ ಬಸವಳಿದು ಹೋಗಿರುವ ಪ್ರವಾಸಿಗರು ಸೇರಿದಂತೆ ಸ್ಥಳೀಯರು ಒಂದಷ್ಟು ಮೈಮನ ತಂಪಾಗಿಸಲು ಕಡಲ ಕಿನಾರೆಯತ್ತ ಮುಖ ಮಾಡಿದ್ದಾರೆ. ಕಳೆದ ಮೂರ್‍ನಾಲ್ಕು ವಾರಗಳ ಅವಧಿಯಲ್ಲಿ ಮಲ್ಪೆ ಬೀಚ್‌ಗೆ ಜನಸಾಗರವೇ ಹರಿದು ಬರುತ್ತಿದೆ. ವೀಕೆಂಡ್‌ನ‌ಲ್ಲಂತೂ ಸಂಜೆ ವೇಳೆ ಮಲ್ಪೆ ಬೀಚ್‌ ಜನಜಂಗುಳಿ ಯಾಗಿದೆ.

ವೀಕೆಂಡ್‌ನ‌ಲ್ಲಿ 16000ಕ್ಕೂ ಅಧಿಕ
ಕಳೆದ ಮೂರ್‍ನಾಲು ವಾರಗಳಿಂದ ಹೆಚ್ಚಿನ ಪ್ರವಾಸಿಗರು ಮಲ್ಪೆ ಬೀಚ್‌ಗೆ ಆಗಮಿಸುತ್ತಿದ್ದಾರೆ. ಪರೀಕ್ಷಾ ಸಮಯ ದಲ್ಲೂ ಸಾಕಷ್ಟು ಸಂಖ್ಯೆಯಲ್ಲಿತ್ತು. ಇದೀಗ ಪ್ರತಿನಿತ್ಯ ಸ್ಥಳೀಯರು ಸೇರಿದಂತೆ ಇಲ್ಲಿಗಾಗಮಿಸುವ ಪ್ರವಾಸಿಗರ ಸಂಖ್ಯೆ 10ರಿಂದ 12 ಸಾವಿರ, ಶನಿವಾರ ಮತ್ತು ರವಿವಾರ 16ರಿಂದ 18 ಸಾವಿರ ಗಡಿ ದಾಟುತ್ತಿದೆ ಧರ್ಮಸ್ಥಳ, ಕೊಲ್ಲೂರು, ಶ್ರೀಕೃಷ್ಣ ಮಠಕ್ಕೆ ಬಂದ ಯಾತ್ರಾರ್ಥಿಗಳು ಮಲ್ಪೆ ಬೀಚ್‌ಗೆ ಲಗ್ಗೆ ಇಡುತ್ತಿದ್ದಾರೆ.

ಇರಲಿ ಎಚ್ಚರ
ಹೊರರಾಜ್ಯ, ಹೊರಜಿಲ್ಲೆಯ ಪ್ರವಾಸಿಗರು ಸಮುದ್ರ ಕಂಡೊಡನೆ ಓಡಿ ಬಂದು ನೀರಿಗಿಳಿದು ಮೈಮರೆತು ಅಪಾಯ ತಂದುಕೊಳ್ಳುತ್ತಾರೆ. ಈ ವೇಳೆ ಇಲ್ಲಿ ಜೀವರಕ್ಷಕ ತಂಡ ದವರು ಎಷ್ಟೆ ಎಚ್ಚರಿಕೆ ನೀಡಿದರೂ ಧಿಕ್ಕರಿಸಿ ಹೋಗಿ ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುವ ಪ್ರಮೇಯ ಜಾಸ್ತಿಯಾಗಿದೆ. ಮೋಜಿ ನಾಟದ ಉತ್ಸಾಹ ದಲ್ಲಿರುವ ಪ್ರವಾಸಿಗರು ಎಚ್ಚರಿಕೆಯನ್ನು ವಹಿಸುವುದು ಅಗತ್ಯ.

ಪಾರ್ಕಿಂಗ್‌ ಸಮಸ್ಯೆ
ಮಲ್ಪೆ ಬೀಚ್‌ನಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾದಂತೆ ವಾಹನ ಪಾರ್ಕಿಂಗ್‌ ಸಮಸ್ಯೆ ಉದ್ಭºವಿಸಿದೆ. ವಾಹನವನ್ನು ಪಾರ್ಕ್‌ ಮಾಡುವುದೇ ದೊಡ್ಡ ಸಮಸ್ಯೆಯಾಗಿದೆ. ಶನಿವಾರ ಮತ್ತು ರವಿವಾರ ಕಿ.ಮೀ.ಗಳಷ್ಟು ದೂರ ವಾಹನಗಳ ಸಾಲು ಇರುತ್ತದೆ. ಈಗಿರುವ ಪಾರ್ಕಿಂಗ್‌ ವ್ಯವಸ್ಥೆಗೆ ಜಾಗ ಸಾಕಾಗುತ್ತಿಲ್ಲ. ಬಹುತೇಕ ವಾಹನಗಳು ಬೀಚ್‌ನ ಮುಖ್ಯ ಭಾಗಕ್ಕೆ ಬರಲು ಸಾಧ್ಯವಾಗದೇ ಅರ್ಧದಲ್ಲೇ ನಿಂತು ಹಿಂದಿರುಗುತ್ತವೆ. ಪಾರ್ಕ್‌ ಮಾಡಿದ ವಾಹನ ತೆರವು ಕೂಡ ಕಷ್ಟವಾಗಿದೆ.

ಶೌಚಾಲಯ ಸಾಲದು
ಪ್ರಸ್ತುತ ಮಲ್ಪೆ ಬೀಚ್‌ನಲ್ಲಿ ಒಟ್ಟು ಎರಡು ಸುಸಜ್ಜಿತವಾದ ಶೌಚಾಲಯಗಳು ಮತ್ತು ಸ್ನಾನಗೃಹಗಳು ಇದ್ದರೂ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆಗೆ ಪೂರಕವಾಗಿ ಈಗಿರುವ ಶೌಚಾಲಯ ಸಾಲದಾಗಿದೆ. ಇದ ರಿಂದಾಗಿ ಪ್ರವಾಸಿಗರು ಗಂಟೆಗಟ್ಟಲೆ ಶೌಚಾಲಯದ ಮುಂದೆ ಕಾಯುವ ಪರಿಸ್ಥಿತಿ ಇದೆ. ಹೆಚ್ಚುವರಿ ಶೌಚಾಲಯ ಅಗತ್ಯ ಆಗಬೇಕಿದೆ.

ಬ್ಯಾಕ್ಟೀರಿಯ ರಹಿತ ಬೀಚ್‌
ಪ್ರತಿನಿತ್ಯ 8 ಮಂದಿ ಸಿಬಂದಿಗಳಿಂದ ಸ್ವತ್ಛತೆಯ ಕಾರ್ಯ ನಡೆಸಲಾಗುತ್ತಿದೆ. ವಾರಕ್ಕೊಂದು ಬಾರಿ ಬೀಚ್‌ ಕ್ಲೀನಿಂಗ್‌ ಮೆಷಿನ್‌ ಉಪಯೋಗಿಸಲಾಗುತ್ತದೆ. ಇದರಿಂದ ಸುಮಾರು ಅರ್ಧ ಅಡಿಗಳಷ್ಟು ಮರಳು ಸ್ವತ್ಛವಾಗಿರುತ್ತದೆ. ಮರಳಿನಲ್ಲಿ ಮಲಗಬಹುದು, ಮಕ್ಕಳು ಹೊರಳಾಡಬಹುದು ಯಾವುದೇ ಬ್ಯಾಕ್ಟೀರಿಯ, ಸೋಂಕು ಉಂಟಾಗುವುದಿಲ್ಲ.
– ಸುದೇಶ್‌ ಶೆಟ್ಟಿ,,ಬೀಚ್‌ ನಿರ್ವಾಹಕರು

– ನಟರಾಜ್‌ ಮಲ್ಪೆ

ಟಾಪ್ ನ್ಯೂಸ್

Gangavathi ಸಾಣಾಪೂರ ಕೆರೆಯಲ್ಲಿ ಮುಳುಗಿ ಯುವಕ ಮೃತ್ಯು

Gangavathi ಸಾಣಾಪೂರ ಕೆರೆಯಲ್ಲಿ ಮುಳುಗಿ ಯುವಕ ಮೃತ್ಯು

drowned

Vedganga ನದಿಯಲ್ಲಿ ಮುಳುಗಿ ನಾಲ್ವರು ಮೃತ್ಯು:ಇಬ್ಬರು ಬೆಳಗಾವಿಯವರು

Priyanka Gandhi

Election; ಪ್ರಧಾನಿ ಮೋದಿ ಯಾಕೆ ಮಂಗಳಸೂತ್ರ,ಧರ್ಮದ ಮೇಲೆ ಮತ ಕೇಳುತ್ತಾರೆ: ಪ್ರಿಯಾಂಕಾ ಗಾಂಧಿ

raghu bhat

Congress ಗಾಡ್ ಫಾದರ್ ಸಂಸ್ಕೃತಿ ಬಿಜೆಪಿಗೆ ಬಂದಿದೆ: ರಘುಪತಿ ಭಟ್

1-asasa

Cat ರಕ್ಷಣೆಗೆ ಭಾರೀ ಕಾರ್ಯಾಚರಣೆ ; ಕೊನೆಗೆ ಆಗಿದ್ದೆ ಬೇರೆ!: ವೈರಲ್ ವಿಡಿಯೋ ನೋಡಿ

priyanka-gandhi

Priyanka Gandhi ಯಾಕೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ; ಇಲ್ಲಿದೆ ಅವರೇ ಕೊಟ್ಟ ಉತ್ತರ

Swati Maliwal Assault Case: ಕೇಜ್ರಿವಾಲ್ ಸಹಾಯಕ ಬಿಭವ್ ಕುಮಾರ್ ಬಂಧನ

Swati Maliwal Assault Case: ಕೇಜ್ರಿವಾಲ್ ಸಹಾಯಕ ಬಿಭವ್ ಕುಮಾರ್ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

KARಸಾಗರದಾಚೆಯಿಂದ ತವರಿಗೆ ಕರೆ ತಂದ ಕೃಷಿ ಪ್ರೀತಿ

Karkala ಸಾಗರದಾಚೆಯಿಂದ ತವರಿಗೆ ಕರೆ ತಂದ ಕೃಷಿ ಪ್ರೀತಿ

Udupi ಕುಡಿಯುವ ನೀರು ಕೊರತೆ ನೀಗಿಸಲು ಜಿಲ್ಲಾಧಿಕಾರಿ ಸೂಚನೆ

Udupi ಕುಡಿಯುವ ನೀರು ಕೊರತೆ ನೀಗಿಸಲು ಜಿಲ್ಲಾಧಿಕಾರಿ ಸೂಚನೆ

Malpe ಸೈಂಟ್‌ ಮೇರೀಸ್‌ ಪ್ರವಾಸಿ ಬೋಟ್‌ ಯಾನ, ಜಲಕ್ರೀಡೆ ತಾತ್ಕಾಲಿಕ ಸ್ಥಗಿತ

Malpe ಸೈಂಟ್‌ ಮೇರೀಸ್‌ ಪ್ರವಾಸಿ ಬೋಟ್‌ ಯಾನ, ಜಲಕ್ರೀಡೆ ತಾತ್ಕಾಲಿಕ ಸ್ಥಗಿತ

Udupi ಪೊಲೀಸರ ಕರ್ತವ್ಯಕ್ಕೆ ಅಡ್ಡಿ: ಕಾನೂನು ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲು

Udupi ಪೊಲೀಸರ ಕರ್ತವ್ಯಕ್ಕೆ ಅಡ್ಡಿ: ಕಾನೂನು ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲು

Udupi: ಕಾಲೇಜಿಗೆಂದು ಹೋದ ಯುವತಿ ನಾಪತ್ತೆ

Udupi: ಕಾಲೇಜಿಗೆಂದು ಹೋದ ಯುವತಿ ನಾಪತ್ತೆ

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

Gangavathi ಸಾಣಾಪೂರ ಕೆರೆಯಲ್ಲಿ ಮುಳುಗಿ ಯುವಕ ಮೃತ್ಯು

Gangavathi ಸಾಣಾಪೂರ ಕೆರೆಯಲ್ಲಿ ಮುಳುಗಿ ಯುವಕ ಮೃತ್ಯು

1-wqewqewe

Ramanagara; ಅಪ್ರಾಪ್ತ ಮಕ್ಕಳ ಮೈಯನ್ನು ಕಾದ ಕಬ್ಬಿಣದಿಂದ ಸುಟ್ಟ ಮದ್ಯವ್ಯಸನಿ ತಂದೆ

drowned

Vedganga ನದಿಯಲ್ಲಿ ಮುಳುಗಿ ನಾಲ್ವರು ಮೃತ್ಯು:ಇಬ್ಬರು ಬೆಳಗಾವಿಯವರು

Priyanka Gandhi

Election; ಪ್ರಧಾನಿ ಮೋದಿ ಯಾಕೆ ಮಂಗಳಸೂತ್ರ,ಧರ್ಮದ ಮೇಲೆ ಮತ ಕೇಳುತ್ತಾರೆ: ಪ್ರಿಯಾಂಕಾ ಗಾಂಧಿ

raghu bhat

Congress ಗಾಡ್ ಫಾದರ್ ಸಂಸ್ಕೃತಿ ಬಿಜೆಪಿಗೆ ಬಂದಿದೆ: ರಘುಪತಿ ಭಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.