ನೂತನ ಆವಿಷ್ಕಾರದ ಮೂಲಕ ಇ-ಆರೋಗ್ಯ ಯೋಜನೆ


Team Udayavani, Jun 19, 2019, 6:10 AM IST

e-avishkara

ಕುಂಬಳೆ: ಕುಟುಂಬ ಆರೋಗ್ಯ ಕೇಂದ್ರಗಳಲ್ಲಿ ಜಾರಿಗೊಳ್ಳುತ್ತಿರುವ ಇ-ಆರೋಗ್ಯ ಯೋಜನೆ ನೂತನ ಆವಿಷ್ಕಾರದ ಮೂಲಕ ಜನಾಕರ್ಷಣೆ ಪಡೆಯಲಿದೆ.

ಈ ನೂತನ ಸೌಲಭ್ಯ ಮೂಲಕ ಚಿಕಿತ್ಸೆ ಆನ್‌ಲೆ„ನ್‌ ಮುಖಾಂತರ ಲಭ್ಯವಾಗಲಿದ್ದು, ಉಳಿದ ವಿಚಾರಗಳನ್ನು ಹೆಲ್ತ್‌ ಕಾರ್ಡ್‌ ಮೂಲಕ ಪಡೆಯಬಹುದಾಗಿದೆ.

ಆರೋಗ್ಯ ಕೇಂದ್ರಗಳಿಗೆ ಆಗಮಿಸುವ ರೋಗಿಗಳು ಆಧಾರ್‌ ನಂಬ್ರವನ್ನು ಸ್ವಾಗತ ಕೊಠಡಿ (ರಿಸೆಪ್ಶನ್‌ ಕೌಂಟರ್‌) ಯಲ್ಲಿ ನೀಡಿದರೆ ಅಲ್ಲಿಂದ ಐಡಿ ಕಾರ್ಡ್‌ ಲಭಿಸುವುದು. ಇದರೊಂದಿಗೆ ಆಧಾರ್‌ ಲಿಂಕ್‌ ನಡೆಸುವ ವ್ಯಕ್ತಿಯ ಆರೋಗ್ಯ ಸಂಬಂಧಿ‌ ವಿಚಾರಗಳು ದಾಖಲಾಗುವುದು.

ಎಲ್ಲ ವಿಚಾರ ದಾಖಲು
ಧೂಮಪಾನ, ಕುಡಿತ ಇತ್ಯಾದಿ ದುಶ್ಚಟಗಳು, ಬದುಕಿನ ರೀತಿ, ವಾಸಿಸುತ್ತಿರುವ ಪ್ರದೇಶದ ಪರಿಸ್ಥಿತಿ ಇತ್ಯಾದಿ ಸಮಗ್ರ ವಿಚಾರಗಳೂ ಇದರಲ್ಲಿ ನಮೂದನೆಗೊಳ್ಳುವುವು. ಚಿಕಿತ್ಸೆಗೆ ಸಂಬಂಧಿಸಿದ ತಪಾಸಣೆಯ ವರದಿಗಳೆಲ್ಲವೂ ಕಾರ್ಡಿಗೆ ಆನ್‌ ಲೆ„ನ್‌ ಮೂಲಕ ಅಪ್‌ ಲೋಡ್‌ ಆಗುವುದು.

ಈ ಕಾರ್ಡ್‌ ಬಳಸಿ ವೈದ್ಯರು ರೋಗಿಯ ಎಲ್ಲ ವಿಚಾರಗಳನ್ನೂ ತಿಳಿದುಕೊಳ್ಳಲು ಸಾಧ್ಯವಾಗುವುದು. ಮನೆಯಲ್ಲಿದ್ದುಕೊಂಡೇ ರೋಗಿಗಳು ವೈದ್ಯರನ್ನು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಯಿರುವುದು ಇದರ ಇನ್ನೊಂದು ವಿಶೇಷವಾಗಿದೆ. ಜತೆಗೆ ಪ್ರಯೋಗಾಲಯ, ಔಷಧಿ ಅಂಗಡಿ ಇತ್ಯಾದಿಗಳ ಟೋಕನ್‌ ಪಡೆಯಲೂ ಸಾಧ್ಯವಾಗಲಿದೆ. ಯಾವುದೇ ಸರಕಾರಿ ಮೆಡಿಕಲ್‌ ಕಾಲೇಜಿನ ವೈದ್ಯರ ಟೋಕನ್‌ ಬೇಕಿದ್ದರೂ ಈ ಕಾರ್ಡ್‌ನ ಸಹಾಯದಿಂದ ಪಡೆದುಕೊಳ್ಳಬಹುದು.ರೆಫರ್‌ ನಡೆಸುವ ರೋಗಿಗಳು ಎಲ್ಲ ದಾಖಲೆ ಪತ್ರಗಳನ್ನೂ ಒಯ್ಯಬೇಕಿಲ್ಲ. ಒಂದು ಕುಟುಂಬದ ಎಲ್ಲ ಸದಸ್ಯರ ಆರೋಗ್ಯ ವಿಚಾರಗಳೂ ಆಧಾರ್‌ ಮೂಲಕ ಲಭಿಸುವ ಹಿನ್ನೆಲೆಯಲ್ಲಿ ಹರಡುವ ರೋಗಗಳು ಇತ್ಯಾದಿಗಳನ್ನು ಶೀಘ್ರದಲ್ಲೇ ಪತ್ತೆಹಚ್ಚಿ ಅಗತ್ಯದ ಪ್ರತಿರೋಧ ಚಟುವಟಿಕೆಗಳನ್ನು ನಡೆಸಲು ಇ-ಹೆಲ್ತ್‌ ಯೋಜನೆ ಮೂಲಕ ಸುಲಭವಾಗಲಿದೆ. ಜತೆಗೆ ಕೇಂದ್ರ-ರಾಜ್ಯ ಸರಕಾರಗಳ ಆರೋಗ್ಯ ವಿಮೆ ಜಾರಿಗೊಳಿಸಲು ಹೆಲ್ತ್‌ ಕಾರ್ಡ್‌ ಸೌಲಭ್ಯ ಪೂರಕವಾಗಲಿದೆ.

ಇದರಂಗವಾಗಿ ಮೊಗ್ರಾಲ್‌ ಪುತ್ತೂರು ಕುಟುಂಬ ಆರೋಗ್ಯ ಕೇಂದ್ರದಲ್ಲಿ ಇ-ಹೆಲ್ತ್‌ ಯೋಜನೆ ಜಾರಿಗೊಂಡಿದೆ. ಮೊಗ್ರಾಲ್‌ ಪುತ್ತೂರು ಗ್ರಾ. ಪಂ.ನಲ್ಲಿ ಶೇ. 70 ಮನೆಗಳು ಈಗ ಇ-ಹೆಲ್ತ್‌ ಯೋಜನೆಯಲ್ಲಿ ಅಳವಡಿಸಲಾಗಿದೆ. ಇದನ್ನು ಶೇ. 100ಕ್ಕೊಯ್ಯುವ ಯತ್ನ ನಡೆಯುತ್ತಿದೆ. ರಾಜ್ಯದಲ್ಲಿ ಐ.ಎಸ್‌.ಒ. ಸರ್ಟಿಫಿಕೆಟ್‌ ಪಡೆದ ಪ್ರಥಮ ಎಫ್‌.ಎಚ್‌.ಸಿ. ಎಂಬ ಹೆಗ್ಗಳಿಕೆಗೆ ಮೊಗ್ರಾಲ್‌ ಪುತ್ತೂರಿನ ಕುಟುಂಬ ಆರೋಗ್ಯ ಕೇಂದ್ರ ಪಾತ್ರವಾಗಿದೆ. ಇ-ಹೆಲ್ತ್‌ ಯೋಜನೆ ಜಾರಿಗೊಳ್ಳುವ ಜಿಲ್ಲೆಯ ಎರಡನೇ ಕೇಂದ್ರವೂ ಇದಾಗಿದೆ. ಕಯ್ಯೂರು-ಚೀಮೇನಿ ಕುಟುಂಬ ಆರೋಗ್ಯ ಕೇಂದ್ರ ಮೊದಲ ಕೇಂದ್ರವಾಗಿದೆ ಮೊಗ್ರಾಲ್‌ ಪುತ್ತೂರು ಕುಟುಂಬ ಆರೋಗ್ಯ ಕೇಂದ್ರದಲ್ಲಿ ಇ-ಹೆಲ್ತ್‌ ಯೋಜನೆಯ ಜಾರಿ ಸಮಾರಂಭ ಜರಗಿತು. ಮೊಗ್ರಾಲ್‌ ಪುತ್ತೂರು ಗ್ರಾಮ ಪಂಚಾಯತ್‌ ಅಧ್ಯಕ್ಷ ಎ.ಎ. ಜಲೀಲ್‌ ಯೋಜನೆಯನ್ನು ಉದ್ಘಾಟಿಸಿದರು. ಗ್ರಾ.ಪಂ.ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷ ಹಮೀದ್‌ ಬೆಳ್ಳೂರು ಅಧ್ಯಕ್ಷತೆ ವಹಿಸಿದ್ದರು.

ವೈದ್ಯಾಧಿಕಾರಿ ಡಾ| ನಾಸ್ಮಿನ್‌ ಜೆ. ನಝೀರ್‌ ವರದಿ ವಾಚಿಸಿದರು. ಆರೋಗ್ಯ ಇನ್ಸ್‌ ಪೆಕ್ಟರ್‌ ಬಿ. ಅಶ್ರಫ್‌, ಪಂಚಾಯತ್‌ ಸದಸ್ಯೆ ಇ.ಪ್ರಮೀಳಾ, ಇ-ಹೆಲ್ತ್‌ ಸಂಚಾಲಕಿ ಸಜಿತಾ, ಆಸ್ಪತ್ರೆ ಅಭಿವೃದ್ಧಿ ಸಮಿತಿ ಸದಸ್ಯ ನಾಂ ಹನೀಫ, ಫಾರ್ಮಾಸಿಸ್ಟ್‌ ರತೀಶ್‌, ಆಸ್ಪತ್ರೆ ಸಿಬಂದಿ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.