ಎಲ್ಲ ರೋಗಕ್ಕೂ ಈ ಹೈಟೆಕ್‌ ಆಸ್ಪತ್ರೆಯಲ್ಲಿದೆ ಸೂಕ್ತ ಚಿಕಿತ್ಸೆ

ಎಸ್‌ಎಸ್‌ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ದಾವಣಗೆರೆ

Team Udayavani, Jul 2, 2019, 3:50 PM IST

ss

ಮಧ್ಯ ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆ ಹೊರವಲಯದ ರಾಷ್ಟ್ರೀಯ ಹೆದ್ದಾರಿ-4ರ ಪಕ್ಕದಲ್ಲಿರುವ ಎಸ್‌.ಎಸ್‌. ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರ ಮೆಡಿಕಲ್‌ ಹಬ್‌ನ ಮುಕುಟಮಣಿ!. ಸಾಮಾನ್ಯ ಸಮಸ್ಯೆಯಿಂದ ಹಿಡಿದು ಅತೀ ಕ್ಲಿಷ್ಟಕರ, ಸಾಧ್ಯವೇ ಇಲ್ಲ ಎನ್ನುವ ಸಮಸ್ಯೆಗೂ ಇಲ್ಲಿ ಅಗತ್ಯ ಚಿಕಿತ್ಸಾ ಸೌಲಭ್ಯ ಇದೆ.

ವೈದ್ಯಕೀಯ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮನ್ನಣೆ, ಖ್ಯಾತಿ ಹೊಂದಿರುವ, ಹಾಗೂ ಉನ್ನತ ವ್ಯಾಸಂಗಕ್ಕೂ ಈ ಆಸ್ಪತ್ರೆ ಹೆಸರುವಾಸಿಯಾಗಿದೆ. ಇಲ್ಲಿ ಹೆಚ್ಚಿನ ಅನುಭವ ಹೊಂದಿದ ನುರಿತ 180ಕ್ಕೂ ಅಧಿಕ ವೈದ್ಯರು, 1,200ಕ್ಕೂ ಹೆಚ್ಚು ವೈದ್ಯಕೀಯೇತರ ಸಿಬ್ಬಂದಿ ದಿನದ 24 ಗಂಟೆಯೂ ಸೇವೆಗೆ ಲಭ್ಯ.

ಎಸ್‌.ಎಸ್‌. ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರ 1 ಸಾವಿರ ಹಾಸಿಗೆಗಳ ಸಾಮರ್ಥ್ಯ ಹೊಂದಿದೆ. 23ಕ್ಕೂ ಹೆಚ್ಚು ವಿಭಾಗಗಳಿವೆ. ದೇಶದ ಕೆಲವೇ ಕೆಲ ಆಸ್ಪತ್ರೆಗಳಲ್ಲಿ ಇರುವಂತಹ 100 ಹಾಸಿಗೆ ಸಾಮರ್ಥ್ಯದ ತೀವ್ರ ನಿಗಾ ಘಟಕ, ಅಂತಾರಾಷ್ಟ್ರೀಯ ಮಟ್ಟದ ಎಲ್ಲಾ ಆಧುನಿಕ ಯಂತ್ರೋಪಕರಣಗಳ ಅತ್ಯಾಧುನಿಕ ಪ್ರಯೋಗಾಲಯ, 24×7 ಮಾದರಿ ಕಾರ್ಯ ನಿರತ ರಕ್ತನಿಧಿ ಭಂಡಾರ ಇಲ್ಲಿದೆ. ನೆಫೂಲಜಿ (ಮೂತ್ರಪಿಂಡ), ನ್ಯುರೋಲಜಿ (ನರವ್ಯೂಹ), ಕಾರ್ಡಿಯೋಲಜಿ (ಹೃದ್ರೋಗ), ಪಲ್ಮನರಿ, (ಶ್ವಾಸಕೋಶ ಸಂಬಂಧಿತ ಚಿಕಿತ್ಸೆ), ಪ್ಲಾಸ್ಟಿಕ್‌ ಸರ್ಜರಿ, ಮೆಡಿಸಿನ್‌, ಯೂರಾಲಜಿ ಒಳಗೊಂಡಂತೆ 9 ಸೂಪರ್‌ ಸ್ಪೆಷಾಲಿಟಿ ವಿಭಾಗದಲ್ಲಿ ವೈದ್ಯರ ತಂಡ ಮತ್ತು ವೈದ್ಯಕೀಯೇತರ ಸಿಬ್ಬಂದಿ 9 ವಿಭಾಗಗಳಲ್ಲಿ ಸೂಪರ್‌ ಸ್ಪೆಷಲಿಸ್ಟ್‌ ಸೇವೆ ಲಭ್ಯವಿದೆ. ಎಸ್‌.ಎಸ್‌. ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಹೊರ ರೋಗಿಗಳ ವಿಭಾಗದಲ್ಲಿ ಉಚಿತ ತಪಾಸಣೆ ಮತ್ತು ಚಿಕಿತ್ಸಾ ಸೌಲಭ್ಯ ಇದೆ.

ಒಳರೋಗಿಗಳಾಗಿ ದಾಖಲಾದವರ ಅನುಕೂಲ ಮತ್ತು ಅನಾರೋಗ್ಯ ಸಂದರ್ಭದಲ್ಲಿ ಉತ್ತಮ ಪೌಷ್ಟಿಕ, ಗುಣಮಟ್ಟದ ಆಹಾರ ಸೇವನೆ ಮಾಡುವಂತಾಗಬೇಕು ಎಂಬ ಕಾಳಜಿಯಿಂದ ಉಚಿತ ಊಟದ ವ್ಯವಸ್ಥೆ ಸಹ ಇದೆ. ಎಸ್‌.ಎಸ್‌. ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಒಂದೇ ಸೂರಿನಡಿ ಕ್ಷ-ಕಿರಣ, ಮ್ಯಾಮೋಗ್ರಫಿ, ವಿಭಾಗ, ಸಿಟಿ ಸ್ಕ್ಯಾನ್, ಅಲ್ಟ್ರಾ ಸೌಂಡ್‌, ಎಂಆರ್‌ಐ, ರೋಗವಿಧಾನ ಪ್ರಯೋಗಾಲಯ, ರಕ್ತ ಭಂಡಾರ, ಔಷಧ ಅಂಗಡಿ ಮತ್ತು ಅತ್ಯಗತ್ಯ ಸೇವೆ ದೊರೆಯುತ್ತದೆ.

ಇಲ್ಲಿ ಹೆಚ್ಚು ಮುಂದುವರಿದ ವಿಭಾಗಗಳಾದ ಲಿಥೋಟ್ರೆಪಿಸಿ (ಕಿಡ್ನಿಯಲ್ಲಿನ ಕಲ್ಲುಗಳ ಒಡೆಯುವ), ಉಸಿರಾಟದ ತೊಂದರೆಯಿಂದ ಬಳಲುತ್ತಿರುವವರಿಗೆ ಪರಿಣಾಮಕಾರಿ ಚಿಕಿತ್ಸಾ ಸೌಲಭ್ಯ ಬಾಡಿಪ್ಲೆಥಿಸ್ಮೋಗ್ರಫಿ, ನಿದ್ರಾ ಸಮಸ್ಯೆಯಿಂದ ಬಳಲುತ್ತಿರುವವರ ಸಮಸ್ಯೆ ಪತ್ತೆ ಹಚ್ಚಿ ಅತ್ಯಂತ ನಿಖರ ಚಿಕಿತ್ಸೆ ಒದಗಿಸುವ ಸೀಪ್‌ ಲ್ಯಾಬ್‌… ಸೌಲಭ್ಯ ಇದೆ. ಅತಿ ತುರ್ತಾಗಿ ಶಸ್ತ್ರಚಿಕಿತ್ಸೆ ನೆರವೇರಿಸುವುದಕ್ಕಾಗಿ ಇಲ್ಲಿ 100 ಸುಸಜ್ಜಿತ, ಅತ್ಯಾಧುನಿಕ ಸೌಲಭ್ಯದ ಹಾಸಿಗೆಗಳನ್ನು ಹೊಂದಿರುವ ಶಸ್ತ್ರಚಿಕಿತ್ಸಾ ವಿಭಾಗಗಳಿವೆ. ಆರೋಗ್ಯ ಸಮಸ್ಯೆ ಕಂಡು ಬಂದಾಗ ಒಂದು ಕ್ಷಣವೂ ಅತ್ಯಮೂಲ್ಯ. ತೊಂದರೆಗೆ ಒಳಗಾದವರಿಗೆ ಒಂದು ನಿಮಿಷ ಸಹ ಅಮೂಲ್ಯ. ಕ್ಷಣಾರ್ಧದಲ್ಲಿ ದೊರೆಯುವಂತಹ ಚಿಕಿತ್ಸೆ ಜೀವ ಮತ್ತು ಜೀವನವನ್ನೇ ನಿರ್ಧರಿಸುತ್ತದೆ ಎಂಬುದನ್ನು ಗಮನದಲ್ಲಿಟ್ಟು ಕೊಂಡೇ ಅತಿ ತುರ್ತು ಸಂದರ್ಭದಲ್ಲಿ ಯಾವುದೇ ರೀತಿಯ ತೊಂದರೆ ಆಗಬಾರದು ಎಂಬ ಮುನ್ನೆಚ್ಚರಿಕಾ ಕ್ರಮವಾಗಿ ಎಲ್ಲಾ ಶಸ್ತ್ರಚಿಕಿತ್ಸಾ ವಿಭಾಗಗಳು 24 ಗಂಟೆಯೂ ತೆರೆದಿರುತ್ತವೆ.

ಎಸ್‌.ಎಸ್‌. ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರ ಸರ್ಕಾರದ ಎಲ್ಲ ರೀತಿಯ ಆರೋಗ್ಯ ಸಂಬಂಧಿತ ಯೋಜನೆಗಳಿಗೆ ಒಳಪಟ್ಟಿದೆ. ಕರ್ನಾಟಕ ಆಯುಷ್ಮಾನ್‌ ಭಾರತ, ಆರೋಗ್ಯ ವಿಮೆ (ಇಎಸ್‌ಐ), ಖಾಸಗಿ ವಿಮಾ ಸಂಸ್ಥೆಗಳಿಗೆ ಮಾನ್ಯತೆ ಇದೆ. ಅಪಘಾತ, ತುರ್ತು ಆರೋಗ್ಯ ಸಮಸ್ಯೆಗೆ ತುತ್ತಾದವರನ್ನು ಆಸ್ಪತ್ರೆಗೆ ಕರೆ ತರುವುದಕ್ಕೆ ಇನ್ನೂ ಹೆಚ್ಚಿನ ಚಿಕಿತ್ಸೆಯ ಅಗತ್ಯ ಇದ್ದಲ್ಲಿ ಮತ್ತೂಂದು ಆಸ್ಪತ್ರೆಗೆ ಸಾಗಿಸುವ ಐಸಿಯು ಆನ್‌ ವೀಲ್ಸ್‌… ಸುಸಜ್ಜಿತ ಆ್ಯಂಬುಲೆನ್ಸ್‌ ಸೌಲಭ್ಯ ಇದೆ.

ಎಸ್‌.ಎಸ್‌. ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಅನಾಟಮಿ, ಫಿಜಿಯಾಲಜಿ, ಬಯೋಕೆಮಿಸ್ಟ್ರಿ, ಫೋರೆನ್ಸಿಕ್‌, ಮೈಕ್ರೋ ಬಯಾಲಜಿ, ಫಾರ್ಮಾಲಜಿ, ಪೆಥಾಲಜಿ, ಕಮ್ಯುನಿಟಿ ಮೆಡಿಸಿನ್‌, ಕ್ಯಾನ್ಸರ್‌ ಸರ್ಜರಿ, ಮೆಡಿಸಿನ್‌, ನೋವು ನಿವಾರಣ, ಕ್ಷಯರೋಗ, ಕಾರ್ಡಿಯಾಲಾಜಿ, ಮೂತ್ರ ರೋಗ, ಮನಃಶಾಸ್ತ್ರ, ನರರೋಗ ಶಾಸ್ತ್ರ, ಕೀಳು, ಮೂಳೆ ರೋಗ ವಿಭಾಗ, ಕ್ಷ- ಕಿರಣ ಶಾಸ್ತ್ರ, ಸರ್ಜರಿ, ಅರವಳಿಕೆ ಶಾಸ್ತÅ, ಸುರೂಪಿಕಾ ಚಿಕಿತ್ಸೆ, (ಪ್ಲಾಸ್ಟಿಕ್‌ ಸರ್ಜರಿ) ಪ್ರಸೂತಿ ಶಾಸ್ತ್ರ, ಚರ್ಮರೋಗ ವಿಭಾಗಗಳ ಜತೆಗೆ ವೈದ್ಯರಿಗೆ ಸಹಕಾರಿ, ಪೂರಕವಾದ ನರ್ಸಿಂಗ್‌, ಪ್ಯಾರಾ ಕ್ಲಿನಿಕಲ್‌ ವಿಭಾಗಗಳನ್ನು ಹೊಂದಿದೆ. ಇಲ್ಲಿ ವ್ಯಾಸಂಗ ಮಾಡಿದಂತಹ ಅನೇಕಾನೇಕ ವಿದ್ಯಾರ್ಥಿಗಳು ಇಂಗ್ಲೆಂಡ್‌, ಅಮೆರಿಕ, ಆಸ್ಟ್ರೇಲಿಯಾ , ಜರ್ಮನಿ ಮುಂತಾದ ದೇಶಗಳ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ ಅಲ್ಲಿ ಕೆಲಸ ಮಾಡಿರುವ ಸಾಕಷ್ಟು ವೈದ್ಯರು ಇಲ್ಲಿ ಕೆಲಸ ಮಾಡುತ್ತಿದ್ದಾರೆ.
ಎಸ್‌.ಎಸ್‌. ವೈದ್ಯಕೀಯ ಮಹಾವಿದ್ಯಾಲಯ ಚಿಕಿತ್ಸಾ ಕೇಂದ್ರ ಮಾತ್ರವಲ್ಲ ಅತ್ಯುತ್ತಮ ಸಂಶೋಧನಾ ಕೇಂದ್ರವೂ ಹೌದು.

ದೇಶ, ವಿದೇಶಗಳ ಹಲವಾರು ಸಂಶೋಧನಾ ಕಾರ್ಯಕ್ಕೆ ಎಸ್‌.ಎಸ್‌. ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರ ಆಯ್ಕೆಯಾಗಿದೆ. ಆರೋಗ್ಯ ಕ್ಷೇತ್ರದಲ್ಲಿನ ಅನೇಕ ಸಮಸ್ಯೆಗಳಿಗೆ ಕಾರಣ, ಪರಿಹಾರ, ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮಗಳ ಸಂಶೋಧನೆಗಳು ನಿರಂತರವಾಗಿ ಇಲ್ಲಿ ನಡೆಯುತ್ತವೆ. ಆರೋಗ್ಯವಂತ ಸಮಾಜ ನಿರ್ಮಾಣದ ಹೆಬ್ಬಯಕೆಯೊಂದಿಗೆ ಅನೇಕ ಸಂಶೋಧನೆಯಲ್ಲಿ ತೊಡಗಿರುವ ಇಲ್ಲಿನ ಬಹುತೇಕ ವೈದ್ಯರು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ಜರ್ನಲ್‌ಗ‌ಳಲ್ಲಿ ಲೇಖನ ಬರೆಯುತ್ತಾರೆ. ಕೆಲವರು ಹಲವಾರು ಜರ್ನಲ್‌ಗ‌ಳ ಸಂಪಾದಕರಾಗಿಯೂ ಕೆಲಸ ಮಾಡುತ್ತಿದ್ದಾರೆ. ರೋಗಿಗಳಿಗೆ ಚಿಕಿತ್ಸೆ ನೀಡುವ ಜೊತೆಗೆ ಆರೋಗ್ಯ ಸಮಸ್ಯೆಗಳ ನಿವಾರಣೆಗೆ ಶ್ರಮಿಸುತ್ತಿದ್ದಾರೆ.

ಎಸ್‌.ಎಸ್‌. ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರ ರಾಜೀವಗಾಂಧಿ ಆರೋಗ್ಯ ವಿಶ್ವವಿದ್ಯಾಲಯದಿಂದ 60 ಲಕ್ಷ ಅನುದಾನದ ಡೆಂಗೆ ಜ್ವರ ಪತ್ತೆ ಹಚ್ಚುವ ಸೆಂಟರ್‌ ಆಫ್‌ ಎಕ್ಸ್‌ಲೆನ್ಸ್‌ ಎಂಬ ಮನ್ನಣೆಯೊಂದಿಗೆ ಕಾರ್ಯ ನಿರ್ವಹಿಸುತ್ತಿದೆ.

ನವಜಾತ ಶಿಶುಗಳಲ್ಲಿ ಕಂಡು ಬರುವ ನಂಜಿನ ಸಮಸ್ಯೆಯನ್ನು ಅತೀ ಶೀಘ್ರವೇ ಪತ್ತೆ ಹಚ್ಚುವ ವಿಜಿಎಸ್‌ಟಿ ಯೋಜನೆಗೆ ರಾಜೀವಗಾಂಧಿ ವಿಶ್ವ ವಿದ್ಯಾಲಯದಿಂದ ಆಯ್ಕೆಯಾಗಿದೆ. ವೈದ್ಯಕೀಯ ಸೇವಾ ಕ್ಷೇತ್ರದ ಪ್ರತಿಷ್ಠಿತ ಅಬಾಟ್‌ ಕಂಪನಿಯ 2 ಕ್ಲಿನಿಕಲ್‌ ಟ್ರಯಲ್ಸ್‌ ಇಲ್ಲಿ ನಡೆಯುತ್ತಿವೆ. ಕೆಲವೇ ಕೆಲ ಆಸ್ಪತ್ರೆಯಲ್ಲಿ ಇರುವ ಸೂಪರ್‌ ಸ್ಪೆಷಾಲಿಟಿ ವಿಭಾಗ ಇಲ್ಲಿದ್ದು ಭಾರತೀಯ ಆರೋಗ್ಯ ಸಂಸ್ಥೆಯ ಮನ್ನಣೆ ಸಹ ಪಡೆದಿದೆ.

ಹುಟ್ಟಿದಾಗ ಕೇವಲ 600 ಗ್ರಾಂ ತೂಕದ ನವಜಾತ ಶಿಶು ಈಗ ಬಹಳ ಆರೋಗ್ಯದ ಜೀವನ ನಡೆಸುವಂತಾಗುವಲ್ಲಿ ಇಲ್ಲಿನ ವೈದ್ಯರ ಪರಿಶ್ರಮ ಅಪಾರ. ಅಂತಹ ಅನೇಕ ಯಶೋಗಾಥೆಗೆ ಎಸ್‌.ಎಸ್‌. ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರ ಪಾತ್ರವಾಗಿದೆ ಎನ್ನುತ್ತಾರೆ ಪ್ರಾಶುಂಪಾಲರಾದ ಡಾ| ಬಿ.ಎಸ್‌. ಪ್ರಸಾದ್‌.

ಶಾಮನೂರು ಶಿವಶಂಕರಪ್ಪ, ಎಸ್‌.ಎಸ್‌. ಮಲ್ಲಿಕಾರ್ಜುನ್‌ ಆಸ್ಪತ್ರೆ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದಾರೆ. ಮಧ್ಯ ಕರ್ನಾಟಕ, ಉತ್ತರ ಕರ್ನಾಟಕದ ಜನರಿಗೆ ಅತ್ಯಂತ ಕಡಿಮೆ ಖರ್ಚಿನಲ್ಲಿ ಅತ್ಯುತ್ತಮ ಗುಣಮಟ್ಟದ ಚಿಕಿತ್ಸೆ ಒಂದೇ ಕಡೆ ದೊರೆಯುವಂತಾಗಬೇಕು ಎಂದು ಇಬ್ಬರು ಸಾಕಷ್ಟು ಶ್ರಮಿಸುತ್ತಿದ್ದಾರೆ. ಮುಂದಾಲೋಚನೆ, ದೂರದರ್ಶಿತ್ವ, ಪ್ರಗತಿಪರ, ಜನಪರ ಚಿಂತನೆಯ ಫಲ ಇಲ್ಲಿ ಸಾಕಾರಗೊಂಡಿದೆ. ಇಲ್ಲಿ ಚಿಕಿತ್ಸೆ ಪಡೆದು ಗುಣವಾಗುವ ರೋಗಿಯ ತುಟಿಯಲ್ಲಿ ಮಿಂಚುವ ಸಂತಸ ಈ ಉಭಯ ನಾಯಕರ ಸಾರ್ಥಕ್ಯ ಭಾವವನ್ನು ಬಲಗೊಳಿಸುತ್ತದೆ.

ಮುಂದಿನ ದಿನಗಳಲ್ಲಿ ಆರೋಗ್ಯ ಸೇವೆಯನ್ನು ಮತ್ತಷ್ಟು ಪರಿಣಾಮಕಾರಿ ಯಾಗಿ ವಿಸ್ತರಿಸುವ ಉದ್ದೇಶದಿಂದ ಎಸ್‌.ಎಸ್‌. ವೈದ್ಯಕೀಯ ಮಹಾ ವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದಲ್ಲಿ ಹೃದಯ, ಕೈ-ಕಾಲು, ಕಿಡ್ನಿ, ಅಸ್ಥಿಮಜ್ಜೆ …ಮುಂತಾದ ಬಹು ಅಂಗಾಂಗ ಜೋಡಣಾ ವಿಭಾಗ ಕಾರ್ಯಾರಂಭ ಮಾಡಲಿದೆ. ಬಾಡ ಕ್ರಾಸ್‌ ಸಮೀಪದ ವಿಶ್ವಾರಾಧ್ಯ ಕ್ಯಾನ್ಸರ್‌ ಸಂಶೋಧನಾ ಕೇಂದ್ರದಲ್ಲಿ ಕ್ಯಾನ್ಸರ್‌ಗೆ ಸಂಬಂಧಿತ ಎಲ್ಲಾ ರೀತಿಯ ಚಿಕಿತ್ಸೆ ಪ್ರಾರಂಭಿಸಲಾಗುವುದು. ಕ್ಯಾನ್ಸರ್‌ ಪೀಡಿತರಿಗೆ ಒಂದೇ ಒಂದು ಮಿಲಿ ಮೀಟರ್‌ ಹೆಚ್ಚು ಕಡಿಮೆ ಆಗದಂತೆ ಚಿಕಿತ್ಸೆ ನೀಡುವ 25 ಕೋಟಿ ಮೌಲ್ಯದ ಯಂತ್ರೋಪಕರಣ ಅಳವಡಿಸಲಾಗುತ್ತಿದೆ. ಅಂಕಾಲಜಿ, ಅಂಕೋ ಸರ್ಜರಿ, ರೇಡಿಯೋಲಜಿ ವಿಭಾಗ ಬಲಪಡಿಸಲಾಗುವುದು. ಸರ್ವ ರೀತಿಯ ಚಿಕಿತ್ಸೆ, ಸೌಲಭ್ಯ ಒದಗಿಸಲು ಎಸ್‌.ಎಸ್‌. ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರ ಸದಾ ಸನ್ನದ್ಧ ಎನ್ನುತ್ತಾರೆ ಕೇಂದ್ರದ ವೈದ್ಯಕೀಯ ನಿರ್ದೇಶಕ ಡಾ| ಎನ್‌.ಕೆ. ಕಾಳಪ್ಪನವರ್‌ ಮತ್ತವರ ತಂಡ.

ಟಾಪ್ ನ್ಯೂಸ್

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

1-twin

Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

1-wqeewqe

Mumbai Indians ವಿರುದ್ಧ ತವರಿನ ಅಂಗಳ: ರಾಹುಲ್‌ಗೆ ಮಹತ್ವದ ಪಂದ್ಯ

PCB

Champions Trophy ತಾಣ ಅಂತಿಮ ಲಾಹೋರ್‌, ಕರಾಚಿಯಲ್ಲಿ: ಭಾರತದ ಪಂದ್ಯಗಳೆಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-Fibromyalgia

Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

Rama Navami 2024: ಬೇಸಗೆಯಲ್ಲಿ ಆರೋಗ್ಯ ಆಚಾರ; ಆಹಾರ-ವಿಹಾರ ನಿಯಮಗಳೇನು?

Rama Navami 2024: ಬೇಸಗೆಯಲ್ಲಿ ಆರೋಗ್ಯ ಆಚಾರ; ಆಹಾರ-ವಿಹಾರ ನಿಯಮಗಳೇನು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

1-twin

Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.