ನೀರಿಲ್ಲದೇ ನಲುಗಿದೆ ಭಾರತ

Team Udayavani, Jul 3, 2019, 6:00 AM IST

ಭಾರತ ನೀರಿಲ್ಲದೇ ನರಳುತ್ತಿದೆ. ಈ ಬಾರಿ ಶೇ.96ರಷ್ಟು, ಅಂದರೆ ಸಾಮಾನ್ಯ ಮುಂಗಾರು ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಇದರ ಹೊರತಾಗಿಯೂ ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಆಗಿಲ್ಲ. ಇದರ ಜತೆಗೆ ಮಿತಿ ಮೀರಿದ ಅಂತರ್ಜಲ ಬಳಕೆಯಿಂದಾಗಿ 2020ರ ವೇಳೆ ಬೆಂಗಳೂರು ಸೇರಿದಂತೆ ದೇಶದ 21 ನಗರಗಳಲ್ಲಿ ನೀರು ಮುಗಿದೇ ಹೋಗಬಹುದು ಎಂಬ ಆತಂಕವೂ ಇದೆ. ದೇಶದ ಜಲಾಭಾವದತ್ತ ಇಲ್ಲಿದೆ ಪಕ್ಷಿನೋಟ…

ನೀತಿ ಆಯೋಗದ ವರದಿ
ನೀತಿ ಆಯೋಗದ ವರದಿ ಪ್ರಕಾರ 2020ರ ವೇಳೆಗೆ ಬೆಂಗಳೂರು ಸೇರಿದಂತೆ ದೇಶದ 21 ನಗರಗಳಲ್ಲಿ ಅಂತರ್ಜಲ ಬರಿದಾಗಲಿದೆ. ಚೀನಾದ ಬಳಿಕ ಎರಡನೇ ಅತ್ಯಂತ ಹೆಚ್ಚು ಜನಸಂಖ್ಯೆ ಇರುವ ದೇಶ ನಮ್ಮದು. ಹೀಗಾಗಿ, ಕೃಷಿ ಮತ್ತು ಇತರ ಅವಶ್ಯಕತೆಗಳಿಗೆ ಅಂತರ್ಜಲವನ್ನು ಅಗತ್ಯಕ್ಕಿಂತ ಹೆಚ್ಚಾಗಿ ಬಳಕೆ ಮಾಡಲಾಗುತ್ತಿದೆ. ವರದಿಯ ಪ್ರಕಾರ…

ದೇಶದ ಶೇ.75ರಷ್ಟು ಮನೆಗಳಿಗೆ ಸಮೀಪದಲ್ಲಿ ನೀರಿನ ವ್ಯವಸ್ಥೆ ಇಲ್ಲ.

ಗ್ರಾಮೀಣ ಭಾಗದ ಶೇ.84ರಷ್ಟು ಮನೆಗಳಿಗೆ ಪೈಪ್‌ಗ್ಳ ಮೂಲಕ ನೀರಿನ ಸರಬರಾಜು ಇಲ್ಲ.

ನವದೆಹಲಿ, ಮುಂಬೈ ನಗರಗಳಲ್ಲಿನ ನಗರಪಾಲಿಕೆಗಳು ತಮಗೆ ಬೇಕಾದ ಸ್ಥಳಗಳಿಗೆ ಹೆಚ್ಚು ನೀರು ಪೂರೈಸುತ್ತವೆ! ಒಂದು ಪ್ರದೇಶದಲ್ಲಿ ಪ್ರತಿಯೊಬ್ಬರಿಗೆ 150 ಲೀಟರ್‌ (ಎಲ್‌ಪಿಸಿಡಿ) ನೀರು ಸಿಗುತ್ತಿದ್ದರೆ, ಇನ್ನೊಂದು ಸ್ಥಳದಲ್ಲಿ 40-50 ಲೀಟರ್‌ ನೀರು ಸಿಗುತ್ತದಷ್ಟೆ!

2015-16ನೇ ಸಾಲಿನಿಂದಲೇ ಈಶಾನ್ಯ ರಾಜ್ಯಗಳ ಮೂರು, ಹಿಮಾಲಯ ಪರ್ವತ ಪ್ರದೇಶ ವ್ಯಾಪ್ತಿಯ ನಾಲ್ಕು ಮತ್ತು ಇತರ ಆರು ರಾಜ್ಯಗಳಲ್ಲಿ ಪರಿಸ್ಥಿತಿ ಬಿಗಡಾಯಿಸಲು ಶುರುವಾಗಿತ್ತು.

ನೀತಿ ಆಯೋಗ ಸೂಚನೆ ನೀಡಿದ ಹೊರತಾಗಿಯೂ ಅನೇಕ ರಾಜ್ಯಗಳಲ್ಲಿನ ಜಲ ಸಂರಕ್ಷಣೆ ಕ್ರಮಗಳಲ್ಲಿ ಬದಲಾವಣೆಯಾಗಿಲ್ಲ.

ಶೇ.70: ನೀರಿನ ಪ್ರಮಾಣ ಕಲುಷಿತ

120ನೇ ಸ್ಥಾನ: ನೀರಿನ ಗುಣಮಟ್ಟದಲ್ಲಿ ವಿಶ್ವದಲ್ಲಿ ದೇಶದ ಸ್ಥಾನ.

07 ರಾಜ್ಯಗಳು: ಮಧ್ಯಮ ಪ್ರಮಾಣದಲ್ಲಿ ನೀರಿನ ಮೂಲ ಸಂರಕ್ಷಣೆ ಮಾಡಿದ ರಾಜ್ಯಗಳು. (ಕರ್ನಾಟಕ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರ, ತ್ರಿಪುರಾ, ಪಂಜಾಬ್‌, ಹಿಮಾಚಲ ಪ್ರದೇಶ)

14 ರಾಜ್ಯಗಳು: ಜಲಮೂಲ ಸಂರಕ್ಷಣೆಯಲ್ಲಿ ಕೆಳ ಹಂತದ ಸಾಧನೆ (ಛತ್ತೀಸ್‌ಗಢ, ಸಿಕ್ಕಿಂ, ರಾಜಸ್ಥಾನ, ಗೋವಾ, ಕೇರಳ, ಒಡಿಶಾ, ಬಿಹಾರ, ಉತ್ತರ ಪ್ರದೇಶ, ಹರ್ಯಾಣ, ಜಾರ್ಖಂಡ್‌, ಅಸ್ಸಾಂ, ನಾಗಾಲ್ಯಾಂಡ್‌, ಉತ್ತರಾಖಂಡ, ಮೇಘಾಲಯ) ಎರಡನೇ ಬಾರಿಗೆ ಕಮ್ಮಿಬರೋಬ್ಬರಿ 65 ವರ್ಷಗಳ ನಂತರ ದೇಶ ಇಂಥ ವಿಷಮ ಸ್ಥಿತಿ ಎದುರಿಸುತ್ತಿದೆ. ಈ ವರ್ಷ ಮುಂಗಾರಿನ ಜತೆಗೆ ಮುಂಗಾರು ಪೂರ್ವ ಮಳೆಯೂ ಕಡಿಮೆಯೇ. 1956ರಲ್ಲಿ ಮೊದಲ ಬಾರಿಗೆ ಇಂಥ ಪರಿಸ್ಥಿತಿ ಬಂದಿತ್ತು. (ಪ್ರತಿ ವರ್ಷದ ಮಾರ್ಚ್‌ 1ರಿಂದ ಮೇ 31ರವರೆಗೆ ದೇಶದ ವಿವಿಧ ಭಾಗಗಳಲ್ಲಿ ಮುಂಗಾರು ಪೂರ್ವ ಮಳೆ ಸುರಿಯುತ್ತದೆ.)

12 ವರ್ಷಗಳಲ್ಲಿಯೇ ಕಡಿಮೆ
ಅಚ್ಚರಿಯ ವಿಚಾರವೇನೆಂದರೆ 2019ನೇ ಸಾಲಿನ ಮುಂಗಾರು ಹನ್ನೆರಡು ವರ್ಷಗಳಿಗೆ ಹೋಲಿಕೆ ಮಾಡಿದರೆ ಅತ್ಯಂತ ನಿಧಾನಗತಿಯ ಪ್ರಗತಿಯದ್ದು. ಜೂ.19ರಂದು ದೇಶದ ವಿವಿಧ ಭಾಗಗಳಲ್ಲಿ ಸುರಿದ ಮಳೆ ಮತ್ತು ಇತರ ಅಂಶಗಳನ್ನು ಅಧ್ಯಯನ ಮಾಡಿದಾಗ ದೇಶದ ಕೇವಲ ಶೇ.10-15 ಭಾಗಕ್ಕೆ ಮಾತ್ರ ಮಳೆ ಪ್ರಭಾವ ಕಂಡುಬಂದಿತ್ತು. 2007ನೇ ವರ್ಷದ ಮುಂಗಾರು ದಾಖಲೆಗಳನ್ನು ಮತ್ತು ಈ ವರ್ಷದ ಮುಂಗಾರು ಸಾಂಖೀಕ ಮಾಹಿತಿ (ಜೂ.18-19ರ ವರೆಗೆ) ಗಮನಿಸಿದಾಗ ಈ ಬಾರಿ ಮಳೆ ಅತ್ಯಂತ ನಿಧಾನಗತಿಯಲ್ಲಿ ಪ್ರಗತಿಯಾಗಿದೆ. 2013ರಲ್ಲಿ ಕೇದಾರನಾಥದಲ್ಲಿ ಪ್ರಳಯ ಸದೃಶ ಅನಾಹುತ ಉಂಟಾಗಿದ್ದ ವರ್ಷದಲ್ಲಿ ಜೂ.16ರ ಒಳಗಾಗಿ ದೇಶಾದ್ಯಂತ ಮುಂಗಾರು ಆವರಿಸಿಕೊಂಡಿತ್ತು.

ವಾಯು ತಂದ ಆತಂಕ
ಅರಬ್ಬೀ ಸಮುದ್ರದಲ್ಲಿ ಉಂಟಾಗಿದ್ದ ವಾಯು ಚಂಡಮಾರುತ ಹಾಲಿ ಸಾಲಿನ ಮಳೆಗೆ ಕೊಕ್ಕೆ ಹಾಕಲಿದೆ ಎಂದು ಹವಾಮಾನ ಕ್ಷೇತ್ರದ ಪಂಡಿತರು ಎಚ್ಚರಿಕೆ ನೀಡುತ್ತಲೇ ಇದ್ದರು. ದೇಶದ ಕೇಂದ್ರ ಭಾಗಕ್ಕೆ ಕಳೆದ ತಿಂಗಳು ಶೇ.57ರಷ್ಟು ಮುಂಗಾರು ಕೊರತೆ ಉಂಟಾಗಿತ್ತು. ಭಾರತೀಯ ಹವಾಮಾನ ಇಲಾಖೆಯ ಡಿ.ಶಿವಾನಂದ ಪೈ “ದ ಟೈಮ್ಸ್‌ ಆಫ್ ಇಂಡಿಯಾ’ ಪತ್ರಿಕೆಗೆ- “ಈ ಸಾಲಿನಲ್ಲಿ ಕೇರಳಕ್ಕೆ ಮುಂಗಾರು ಒಂದು ವಾರ ಕಾಲ ವಿಳಂಬವಾಗಿ ಪ್ರವೇಶವಾಗಿತ್ತು. ಅದೇ ಸಂದರ್ಭದಲ್ಲಿ ಅರಬ್ಬೀ ಸಮುದ್ರದಲ್ಲಿ ಉಂಟಾದ ವಾಯು ಚಂಡಮಾರುತ ವಾತಾವರಣದಿಂದ ತೇವಾಂಶ ಹೀರಿಕೊಂಡಿತು. ಆದರೆ ವಾಯು ಚಂಡಮಾರುತ ಗುಜರಾತ್‌ಗೆ ಬೇಕಾದ ಮಳೆ ತಂದುಕೊಟ್ಟಿತು’ ಎಂದಿದ್ದಾರೆ.

ಜಲಶಕ್ತಿ ಅಭಿಯಾನ
ಪ್ರಧಾನಿ ನರೇಂದ್ರ ಮೋದಿ ಎರಡನೇ ಆವೃತ್ತಿಯ ಮನ್‌ ಕಿ ಬಾತ್‌ನಲ್ಲಿ ನೀರು ಮತ್ತು ನೀರಿನ ಮೂಲಗಳನ್ನು ಉಳಿಸಿಕೊಳ್ಳುವ ಬಗ್ಗೆ ಪ್ರಧಾನವಾಗಿ ಪ್ರಸ್ತಾಪ ಮಾಡಿದ್ದರು. ಇದರ ಜತೆಗೆ ಚುನಾವಣೆ ಪ್ರಚಾರದ ವೇಳೆ ಕೂಡ ಜಲಶಕ್ತಿ ಸಚಿವಾಲಯ ರಚನೆ ಮಾಡುವ ಬಗ್ಗೆ ವಾಗ್ಧಾನ ಮಾಡಿದ್ದರು. ಅದಕ್ಕೆ ಪೂರಕವಾಗಿ ಕೇಂದ್ರ ಜಲ ಶಕ್ತಿ ಸಚಿವ, ಗಜೇಂದ್ರ ಸಿಂಗ್‌ ಶೇಖಾವತ್‌ ಸೋಮವಾರದಿಂದ ದೇಶದ 256 ಜಿಲ್ಲೆಗಳಲ್ಲಿರುವ ನೀರಿನ ಕೊರತೆಯಿಂದ ಬಳಲುತ್ತಿರುವ 1592 ಬ್ಲಾಕ್‌ಗಳಿಗೆ ಹೆಚ್ಚಿನ ಆದ್ಯತೆ, ನೀರನ್ನು ಪೂರೈಕೆ ಮಾಡುವುದರ ಬಗ್ಗೆ ಹಾಗೂ ಜಲ ಮೂಲಗಳ ರಕ್ಷಣೆ ಮಾಡುವುದರ ಬಗ್ಗೆ ಜಾಗೃತಿ ಮೂಡಿಸುವುದರ ನಿಟ್ಟಿನಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.

ಅಪಾಯದಲ್ಲಿ 21 ನಗರಗಳು
ಇನ್ನೊಂದು ವರ್ಷದಲ್ಲಿ ಬೆಂಗಳೂರು, ಪಟಿಯಾಲ, ಜಲಂಧರ್‌, ಅಮೃತಸರ, ಲುಧಿಯಾನ, ಗುರುಗ್ರಾಮ, ಬಿಕಾನೇರ್‌, ಜೋಧ್‌ಪುರ್‌, ಆಜೆ¾àರ್‌, ಗಾಂಧಿನಗರ, ಇಂದೋರ್‌, ರತ್ಲಾಂ, ಜೈಪುರ, ಆಗ್ರಾ, ನವದೆಹಲಿ, ಘಾಜಿಯಾಬಾದ್‌, ಯಮುನಾ ನಗರ, ಮೊಹಾಲಿ, ಹೈದರಾಬಾದ್‌, ವೆಲ್ಲೂರು ಮತ್ತು ಚೆನ್ನೈನಲ್ಲಿ ತೀವ್ರ ಜಲಾಭಾವ ಎದುರಾಗುವ ಎಚ್ಚರಿಕೆ ನೀಡಲಾಗಿದೆ.

ತತ್ತರಿಸಿದ ಚೆನ್ನೈ ನಗರಿ
2015ರಲ್ಲಿ ಭೀಕರ ನೆರೆಯಿಂದ ತತ್ತರಿಸಿದ್ದ ಚೆನ್ನೈ ನಗರಿಯಲ್ಲಿ ಈ ಬಾರಿ ಹನಿ ನೀರಿಗೂ ಪರದಾಡುವಂಥ ಸ್ಥಿತಿ ನಿರ್ಮಾಣವಾಗಿದೆ. ಇಡೀ ನಗರವೇ ನೀರಿಲ್ಲದೇ ನಲುಗುತ್ತಿದೆ. ತಮಿಳುನಾಡಿನ ರಾಜಧಾನಿಯ ಬಾಯಾರಿಕೆ ಇಂಗಿಸುತ್ತಿದ್ದ ನಾಲ್ಕು ಪ್ರಮುಖ ಕೆರೆಗಳು ಬತ್ತಿಹೋಗಿವೆ. ಕಳೆದ ವರ್ಷದ ಸಂಗ್ರಹಣಾ ಪ್ರಮಾಣಕ್ಕೆ ಹೋಲಿಸಿದರೆ ಈಗ ಅವುಗಳಲ್ಲಿರುವುದು ಕೇವಲ 1 ಪ್ರತಿಶತ ನೀರು ಮಾತ್ರ. ನಿವಾಸಿಗಳಿಗೆ ಸ್ನಾನ, ಶೌಚ, ಬಟ್ಟೆ ಒಗೆಯಲಷ್ಟೇ ಅಲ್ಲ ಕುಡಿಯುವುದಕ್ಕೂ ನೀರಿಲ್ಲ. ಕಚೇರಿಗಳು ಬಾಗಿಲು ಹಾಕುತ್ತಿದ್ದು, ಜನ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಹೋಟೆಲ್‌ಗ‌ಳು ಮತ್ತು ಮಾಲ್‌ಗ‌ಳಲ್ಲಿನ ಬಾತ್‌ರೂಮ್‌ಗಳಿಗೆ ಬೀಗ ಹಾಕಲಾಗಿದೆ.

ಬೆಂಗಳೂರಿನ ಕತೆಯೇನು?
ನೀತಿ ಆಯೋಗದ ವರದಿ ಪ್ರಕಾರ 2020ರ ವೇಳೆಗೆ ಬೆಂಗಳೂರಿನಲ್ಲಿ ಜಲ ಬರಿದಾಗುತ್ತದೆ. ಹೀಗಾಗಿಯೇ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಐದು ವರ್ಷಗಳ ಕಾಲ ಅಪಾರ್ಟ್‌ಮೆಂಟ್‌ ನಿರ್ಮಾಣಕ್ಕೆ ತಡೆ ಹೇರುವ ಮಾತುಗಳನ್ನಾಡಿದ್ದಾರೆ. ಈ ಬಗ್ಗೆ ಪರ ವಿರೋಧದ ಚರ್ಚೆಗಳು ನಡೆದಿವೆ. ಉದ್ಯಾನ ನಗರಿಗೆ ಶೇ.80ರಷ್ಟು ನೀರಿನ ಪೂರೈಕೆ ಮಂಡ್ಯದಲ್ಲಿರುವ ಕೃಷ್ಣರಾಜ ಸಾಗರ ಅಣೆಕಟ್ಟೆಯಿಂದ ಆಗುತ್ತದೆ.

ಕರ್ನಾಟಕಕ್ಕೆ ಮುಂಗಾರು ಹೇಗಿರಲಿದೆ?
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ನಿರ್ದೇಶಕ ಡಾ.ಜಿ.ಎಸ್‌.ಶ್ರೀನಿವಾಸ್‌ ಹೇಳುವಂತೆ..

ವಾಡಿಕೆಯಂತೆ ಜೂನ್‌ನಲ್ಲಿ ಕೆಆರ್‌ಎಸ್‌ಗೆ 31.57 ಟಿಎಂಸಿ ನೀರು ಬರಬೇಕಾಗಿತ್ತು. ಆದರೆೆ ಕೇವಲ 2.85 ಟಿಎಂಸಿ ನೀರು ಮಾತ್ರ ಬಂದಿದೆ. ಕಳೆದ ವರ್ಷ ಈ ಅವಧಿಯಲ್ಲಿ 76 ಟಿಎಂಸಿ ಒಳಹರಿವು ಇತ್ತು.

ಕೆಆರ್‌ಎಸ್‌ಗೆ ಈ ತಿಂಗಳು 92 ಟಿಎಂಸಿ, ಆಗಸ್ಟ್‌ನಲ್ಲಿ 90 ಟಿಎಂಸಿ ನೀರು ಬರಬೇಕು. ಮುಂದಿನ ತಿಂಗಳು ಮತ್ತೆ ಕೊಂಚ ಮಳೆ ಕೊರತೆ ನಿರೀಕ್ಷೆ ಇದೆ.

ಜೂನ್‌ನಲ್ಲಿ ಶೇ.27ರಷ್ಟು ಮಳೆ ಕೊರತೆ ಆಗಿದೆ. ಜುಲೈನಲ್ಲಿ ವಾಡಿಕೆ ಮಳೆಯಾದರೂ, ಎಂದಿನಂತೆ ಒಳಹರಿವು ಅನುಮಾನ.

ಮುಂಗಾರಿನ ಮೊದಲ ತಿಂಗಳು ರಾಜ್ಯದಲ್ಲಿ ಶೇ.27ರಷ್ಟು ಮಳೆ ಕೊರತೆ ಆಗಿದೆ. 11 ಜಿಲ್ಲೆಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. 30 ಜಿಲ್ಲೆಗಳ ಪೈಕಿ 5 ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ.

(ಬಾಣಸವಾಡಿ, ಬೆಳ್ಳಂದೂರು, ವರ್ತೂರು, ಮಹದೇವಪುರ, ವೈಟ್‌ಫೀಲ್ಡ್‌, ಹೆಣ್ಣೂರು ಮತ್ತು ಇತರ ಪ್ರದೇಶಗಳಲ್ಲಿನ ಅನೇಕ ಅಪಾರ್ಟ್‌ಮೆಂಟ್‌ಗಳಿಗೆ ಕಾವೇರಿ ನೀರು ಪೂರೈಕೆ ಇಲ್ಲ)
– ಉತ್ತರ ಭಾಗದಲ್ಲಿರುವ ಹೆಬ್ಟಾಳ ಸುತ್ತಮುತ್ತಲ ಪ್ರದೇಶ- ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ದಾರಿಗಳಲ್ಲಿ ಮೂರು ವರ್ಷಗಳ ಅವಧಿಯಲ್ಲಿ ಹಲವಾರು ಅಪಾರ್ಟ್‌ಮೆಂಟ್‌ಗಳು ತಲೆಯೆತ್ತಿವೆ. ಅವುಗಳಿಗೆ ಮುಂದಿನ ದಿನಗಳಲ್ಲಿ ಭೀಕರ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇದೆ.

ಬೆಂಗಳೂರಲ್ಲಿ ಅಂತರ್ಜಲ ಮಟ್ಟ
918 ಅಡಿ- ಜಿಗಣಿ
902 ಅಡಿ- ಚಂದಾಪುರ
780 ಅಡಿ- ಕೆ.ಆರ್‌.ಪುರ
1,197 ಅಡಿ- ಸರ್ಜಾಪುರ
1,000 ಅಡಿ- ತಲಘಟ್ಟಪುರ
70% ಬೆಂಗಳೂರಲ್ಲಿರುವ ಅಪಾರ್ಟ್‌ಮೆಂಟ್‌ಗೆ ಕಾವೇರಿ ನೀರಿಲ್ಲ
22, 000 ಅಪಾರ್ಟ್‌ಮೆಂಟ್‌ಗಳು (ಸರಿ ಸುಮಾರು)
22, 645 ಕಾವೇರಿ ನೀರು ಸಂಪರ್ಕ ಇರುವ ಅಪಾರ್ಟ್‌ಮೆಂಟ್‌ಗಳು
709 ಚಕಿಮೀ- ಬಿಬಿಎಂಪಿ ವ್ಯಾಪ್ತಿ
575 ಚ.ಕಿಮೀ- ಕಾವೇರಿ ನೀರು ಪೂರೈಕೆ ಆಗುತ್ತಿರುವ ವ್ಯಾಪ್ತಿ
1,380 ದಶಲಕ್ಷ ಲೀಟರ್‌- ಪ್ರತಿ ದಿನ ಜಲಮಂಡಳಿ ಪೂರೈಸುತ್ತಿದ್ದ ನೀರಿನ ಪ್ರಮಾಣ.
1,453 ದಶಲಕ್ಷ ಲೀಟರ್‌ ಪರಿಷ್ಕರಣೆ ಮಾಡಿರುವ ಪೂರೈಕೆ ಪ್ರಮಾಣ.
110 ಗ್ರಾಮಗಳು- ಬೆಂಗಳೂರು ನಗರ ವ್ಯಾಪ್ತಿಗೆ ಸೇರಿವೆ.ಅವುಗಳಿಗೆ ಕಾವೇರಿ ನೀರು ಪೂರೈಕೆ ಇಲ್ಲ.

ಹತ್ತು ವರ್ಷಗಳಲ್ಲಿ ಹೇಗಿತ್ತು ಮುಂಗಾರು?
2009 ದೇಶದ 23 ಉಪ ವಿಭಾಗಗಳಲ್ಲಿ ಕಡಿಮೆ ಮಳೆಯಾಗುವ ಮೂಲಕ ಭಾರಿ ಕೊರತೆ ಉಂಟಾಗಿತ್ತು.
2010 14 ಉಪ ವಿಭಾಗಗಳಲ್ಲಿ ತೃಪ್ತಿದಾಯಕ ಎನ್ನುವಂಥ ಮಳೆ. 2009ಕ್ಕೆ ಹೋಲಿಕೆ ಮಾಡಿದಾಗ ಉತ್ತಮವಾಗಿತ್ತು.
2011 ಈಶಾನ್ಯ ರಾಜ್ಯಗಳಲ್ಲಿ ಮಳೆ ಕೊರತೆ ಉಂಟಾಗಿದ್ದರೂ, ದೇಶದ ಇತರ ಭಾಗಗಳಲ್ಲಿ ಧಾರಾಕಾರ ಮಳೆಯಾಗಿತ್ತು.
2012 13 ಉಪ ವಿಭಾಗಗಳಲ್ಲಿ ಮಳೆ ಕೊರತೆಯಾಗಿತ್ತು. ಅಂಡಮಾನ್‌ ಮತ್ತು ನಿಕೋಬಾರ್‌ಗಳಲ್ಲಿ ಮಾತ್ರ ಹೆಚ್ಚುವರಿ.
2013 14 ಉಪ ವಿಭಾಗಗಳಲ್ಲಿ ನಿರೀಕ್ಷೆಗಿಂತ ಹೆಚ್ಚು ಮಳೆಯಾಗಿತ್ತು.
2014 ಹಲವು ವರ್ಷಗಳ ಬಳಿಕ ಈಶಾನ್ಯ ರಾಜ್ಯಗಳಲ್ಲಿ ಉತ್ತಮ ಮಳೆಯಾಗಿತ್ತು. ಆದರೆ 11 ಉಪ ವಿಭಾಗಗಳಲ್ಲಿ ಕೊರತೆಯಾಗಿತ್ತು.
2015 17 ಉಪ ವಿಭಾಗಗಳಲ್ಲಿ ಮಳೆ ಕೊರತೆ. ರಾಜಸ್ಥಾನದಲ್ಲಿ ಹೆಚ್ಚುವರಿ ವರುಣ ಧಾರೆ. ಪಶ್ಚಿಮ ಕರಾವಳಿಯಲ್ಲಿ ಭಾರಿ ಕೊರತೆ.
2016 ಹೆಚ್ಚಿನ ಪ್ರದೇಶಗಳಲ್ಲಿ ಸಾಮಾನ್ಯ ಮಳೆಯಾಗಿತ್ತು. ನಾಲ್ಕು ಪ್ರದೇಶಗಳಲ್ಲಿ ಹೆಚ್ಚಿನ ಮಳೆಯಾಗಿತ್ತು.
2017 ನಾಲ್ಕು ಉಪ ವಿಭಾಗಗಳಲ್ಲಿ ಹೆಚ್ಚುವರಿ ಮತ್ತು ಆರರಲ್ಲಿ ಕೊರತೆ. ದೇಶದ ಕೇಂದ್ರ ಭಾಗದಲ್ಲಿ ಭಾರಿ ತೊಂದರೆಯಾಗಿತ್ತು.
2018 12 ಉಪ- ವಿಭಾಗಗಳಲ್ಲಿ ಕೊರತೆ ಉಂಟಾಗಿತ್ತು.

3,000 (ಬಿಲಿಯನ್‌ ಕ್ಯೂಬಿಕ್‌ ಮೀಟರ್‌)
ದೇಶಕ್ಕೆ ಬೇಕಾಗುವ ನೀರಿನ ಪ್ರಮಾಣ
4,000 (ಬಿಲಿಯನ್‌ ಕ್ಯೂಬಿರ್‌ ಮೀಟರ್‌) ಮಳೆಯಿಂದ ಸಿಗುವ ನೀರಿನ ಪ್ರಮಾಣ
8% ವಾರ್ಷಿಕ ದೇಶದಲ್ಲಿನ ಮಳೆ ಪ್ರಮಾಣ. ಇದು ವಿಶ್ವದಲ್ಲಿಯೇ ಕಡಿಮೆ ಪ್ರಮಾಣದಲ್ಲೊಂದು.
03 ರಾಜ್ಯಗಳು ಮಾತ್ರ ನೀರಿನ ಮಹತ್ವ ಅರಿತವುಗಳು. ಗುಜರಾತ್‌, ಆಂಧ್ರಪ್ರದೇಶ, ಮಧ್ಯಪ್ರದೇಶ
600 (ಮಿಲಿಯನ್‌) ನೀರಿನ ಕೊರತೆ ಎದುರಿಸುತ್ತಿರುವವರು.

ಮಾಹಿತಿ: ಸದಾಶಿವ ಕೆ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇನ್ನು ಮುಂದೆ ರಸ್ತೆ ಶುಲ್ಕ ಕಟ್ಟಲು ವಾಹನಗಳು ಸಾಲುಗಟ್ಟಿ ನಿಲ್ಲಬೇಕಿಲ್ಲ. ಡಿ. 1ರಿಂದ ಬಹುತೇಕ ಎಲ್ಲ ಟೋಲ್‌ಗ‌ಳಲ್ಲಿ"ಫಾಸ್ಟ್ಯಾಗ್‌'...

  • ಥಿಯೇಟರ್‌ಗಳಲ್ಲಿ ಸಾಮೂಹಿಕ ವೀಕ್ಷಣೆಯ ವಿಷಯವಾಗಿದ್ದ ಮನೋರಂಜನೆಯನ್ನು ಮನೆಯೊಳಗೆ ಸಾಂಸಾರಿಕ ವೀಕ್ಷಣೆಯ ಮಟ್ಟಕ್ಕೆ ಕರೆತಂದದ್ದು ದೂರದರ್ಶನ ಅಥವಾ ಟೆಲಿವಿಷನ್‌....

  • ಕಲ್ಯಾಣ ಕರ್ನಾಟಕಕ್ಕೆ ಸುವರ್ಣ ಕಾಲ. ಬೆಂಗಳೂರು, ಮೈಸೂರು, ಮಂಗಳೂರು, ಬೆಳಗಾವಿ ಹಾಗೂ ಹುಬ್ಬಳ್ಳಿ ಬಳಿಕ ರಾಜ್ಯದ 6ನೇ ನಾಗರಿಕ ವಿಮಾನ ನಿಲ್ದಾಣ ಕಲಬುರಗಿಯಲ್ಲಿ ಉದ್ಘಾಟನೆಗೆ...

  • ಬೆಲೆ ಏರಿಕೆ, ಜೀವನ ಮಟ್ಟ, ಕನಿಷ್ಠ ಸಂಬಳ/ಕೂಲಿ ತಲಾ ಆದಾಯ ಇವೆಲ್ಲಾ ಒಂದನ್ನೊಂದು ಹೊಸೆದು ನಿಂತ ಬಳ್ಳಿಗಳಂತೆ. ಹಲವಾರು ಬಾರಿ ಇವುಗಳ ಪರಸ್ಪರ ಹಾವು ಏಣಿ ಆಟದ ಕರಾಮತ್ತು...

  • ಅಧಿವೇಶನಗಳು ನಡೆದು ಬಂದ ಹಾದಿ ಸೋಮವಾರದಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾಗಿದೆ. ಈ ಅಧಿವೇಶನದ ಮೂಲಕ 67 ವರ್ಷಗಳ ಇತಿಹಾಸವುಳ್ಳ ರಾಜ್ಯಸಭೆ ತನ್ನ 250ನೇ...

ಹೊಸ ಸೇರ್ಪಡೆ