ಕೆಜಿಎಫ್-2ಗೆ ಸಂಜಯ್ ದತ್ ಪಕ್ಕಾ
ಅಧೀರ ಪೋಸ್ಟರ್ ಮೂಲಕ ವೆಲ್ಕಮ್ ಹೇಳಿದ ಚಿತ್ರತಂಡ
Team Udayavani, Jul 30, 2019, 3:06 AM IST
“ಕೆಜಿಎಫ್-2’ನಲ್ಲಿ ಸಂಜಯ್ ದತ್ ನಟಿಸಲಿದ್ದಾರೆಂಬ ಸುದ್ದಿಯನ್ನು ಈ ಹಿಂದೆ ಮೊದಲ ಬಾರಿಗೆ ನೀವು ಇದೇ ಬಾಲ್ಕನಿಯಲ್ಲಿ ಓದಿರುತ್ತೀರಿ. ಕಳೆದ ನವೆಂಬರ್ನಲ್ಲೇ ಆ ಸುದ್ದಿ ಹೊರಬಿದ್ದಿತ್ತು. ಆ ನಂತರ ಸಂಜಯ್ ದತ್ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆಂಬ ಚರ್ಚೆಗಳು ನಡೆಯುತ್ತಿದ್ದವು. ಆದರೆ, ಚಿತ್ರತಂಡ ಮಾತ್ರ ಅಧಿಕೃತವಾಗಿ ಯಾವ ಮಾಹಿತಿಯನ್ನು ನೀಡಿರಲಿಲ್ಲ.
ಈಗ ಚಿತ್ರದ ಪೋಸ್ಟರ್ವೊಂದನ್ನು ಬಿಡುಗಡೆ ಮಾಡುವ ಮೂಲಕ ಚಿತ್ರದಲ್ಲಿ ಸಂಜಯ್ ದತ್ ನಟಿಸುವುದನ್ನು ಅಧಿಕೃತವಾಗಿ ಒಪ್ಪಿಕೊಂಡಿದೆ. ಚಿತ್ರದಲ್ಲಿ ಸಂಜಯ್ ದತ್ ಅಧೀರ ಎಂಬ ಪಾತ್ರ ಮಾಡುತ್ತಿದ್ದು, ಸಂಜಯ್ ದತ್ ಹುಟ್ಟುಹಬ್ಬ (ಜು.29) ಪ್ರಯುಕ್ತ ಚಿತ್ರದ ಪೋಸ್ಟರ್ ರಿಲೀಸ್ ಮಾಡಿ, ಶುಭಕೋರಿದೆ ಚಿತ್ರತಂಡ. ಪೋಸ್ಟರ್ ನೋಡಿದಾಗ ಸಖತ್ ರಗಡ್ ಲುಕ್ನಲ್ಲಿ ಸಂಜಯ್ ದತ್ ಕಾಣಿಸಿಕೊಳ್ಳುತ್ತಿರುವುದು ಸ್ಪಷ್ಟವಾಗುತ್ತದೆ.
ಹೊಂಬಾಳೆ ಫಿಲಂಸ್, ಫರ್ಹಾನ್ ಅಖ್ತರ್ ಸೇರಿದಂತೆ “ಕೆಜಿಎಫ್-2′ ಚಿತ್ರತಂಡ ಸದಸ್ಯರು ಟ್ವೀಟರ್ ಮೂಲಕ ಸಂಜಯ್ ದತ್ ಅವರಿಗೆ ಸಿನಿಮಾಕ್ಕೆ ಸ್ವಾಗತ ಕೋರಿದ್ದಾರೆ. ಸಂಜಯ್ ದತ್ ಕೂಡಾ “ಕೆಜಿಎಫ್-2′ ತಂಡ ಸೇರಿರುವ ಬಗ್ಗೆ ಟ್ವೀಟ್ ಮಾಡಿದ್ದು, “ಕೆಜಿಎಫ್-2ನಲ್ಲಿ ನಟಿಸುತ್ತಿರುವ ಬಗ್ಗೆ ಖುಷಿ ಇದೆ. ಜೊತೆಗೆ ಎಕ್ಸೆ„ಟ್ ಆಗಿದ್ದೇನೆ’ ಎಂದಿದ್ದಾರೆ. ಸಂಜಯ್ ದತ್ ಎಂಟ್ರಿಯೊಂದಿಗೆ “ಕೆಜಿಎಫ್-2′ ತಂಡ ಮತ್ತಷ್ಟು ದೊಡ್ಡದಾಗಿದೆ.
ಇನ್ನು, ರವೀನಾ ಟಂಡನ್ ಕೂಡಾ ಚಿತ್ರದಲ್ಲೊಂದು ಪ್ರಮುಖ ಪಾತ್ರ ಮಾಡುತ್ತಿದ್ದಾರೆಂಬ ಸುದ್ದಿ ಇದ್ದು, ಮುಂದಿನ ದಿನಗಳಲ್ಲಿ ಅವರ ಪೋಸ್ಟರ್ ರಿಲೀಸ್ ಆಗುವ ಸಾಧ್ಯತೆ ಇದೆ. ಅಂದಹಾಗೆ, ಈ ಹಿಂದೆ ಹಲವು ಕನ್ನಡ ಸಿನಿಮಾಗಳಲ್ಲಿ ಸಂಜಯ್ ದತ್ ಅವರ ಹೆಸರು ಕೇಳಿಬಂದಿತ್ತು. ಆದರೆ, ಯಾವ ಸಿನಿಮಾದಲ್ಲೂ ಅವರು ನಟಿಸಿರಲಿಲ್ಲ. ಈಗ ಇದೇ ಮೊದಲ ಬಾರಿಗೆ “ಕೆಜಿಎಫ್-2′ ಮೂಲಕ ಕನ್ನಡಕ್ಕೆ ಕಾಲಿಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ‘777 ಚಾರ್ಲಿʼ?
Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು
Rakshit Shetty: ʼರಿಚರ್ಡ್ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?
Sandalwood; ಟ್ರೆಂಡ್ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ
Kannada Cinema; ಬ್ಯಾಡ್ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…