ಸ್ಯಾಂಡಲ್ ವುಡ್ ನತ್ತ ಶ್ರೀಶಾಂತ್ ಚಿತ್ತ

ಮಾಜಿ ಕ್ರಿಕೆಟಿಗನ ಸಿನಿಯಾನ

Team Udayavani, Aug 2, 2019, 5:00 AM IST

k-33

ಒಂದು ಕಾಲದಲ್ಲಿ ಕ್ರಿಕೆಟ್‌ ಮೈದಾನದಲ್ಲಿ ತನ್ನ ಅಮೋಘ ಆಟದ ಮೂಲಕ ಕ್ರಿಕೆಟ್‌ ಪ್ರೇಮಿಗಳ ಗಮನ ಸೆಳೆದಿದ್ದ ಮಾಜಿ ಕ್ರಿಕೆಟಿಗ ಶ್ರೀಶಾಂತ್‌ ನಂತರ ಕ್ರಿಕೆಟ್‌ ಬದುಕಿಗೆ ವಿದಾಯ ಹೇಳಿದ ಮೇಲೆ ಬೆಳ್ಳಿತೆರೆಯತ್ತ ಮುಖ ಮಾಡಿದ್ದು ಗೊತ್ತೇ ಇದೆ. ಹಿಂದಿ ಮತ್ತು ಮಲಯಾಳಂ ಚಿತ್ರರಂಗದ ಮೂಲಕ ಬಣ್ಣದ ಬದುಕಿಗೆ ಕಾಲಿಟ್ಟ ಶ್ರೀಶಾಂತ್‌, ಬಳಿಕ ನಿಧಾನವಾಗಿ ಕನ್ನಡ ಚಿತ್ರರಂಗದತ್ತಲೂ ಚಿತ್ತ ಹರಿಸುತ್ತಿದ್ದಾರೆ. ಹೌದು, ಸದ್ಯ ಶ್ರೀಶಾಂತ್‌ “ಕೆಂಪೇಗೌಡ-2′ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಟನಾಗಿ ಪರಿಚಯವಾಗುತ್ತಿದ್ದಾರೆ. ಇದರ ಬೆನ್ನಲ್ಲೇ ಶ್ರೀಶಾಂತ್‌ ಅಭಿನಯಿಸುತ್ತಿರುವ “ಧೂಮ್‌ ಅಗೇನ್‌’ ಎನ್ನುವ ಮತ್ತೂಂದು ಚಿತ್ರ ಕೂಡ ಅನೌನ್ಸ್‌ ಆಗಿದೆ.

“ಕೆಂಪೇಗೌಡ-2′ ಚಿತ್ರದ ಬಳಿಕ ಶ್ರೀಶಾಂತ್‌ “ಧೂಮ್‌ ಅಗೇನ್‌’ ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಚಿತ್ರದಲ್ಲಿ ಶ್ರೀಶಾಂತ್‌ ಸ್ಪೆಷಲ್‌ ಪೊಲೀಸ್‌ ಆಫೀಸರ್‌ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಈ ಚಿತ್ರದ ಫ‌ಸ್ಟ್‌ಲುಕ್‌ ಮತ್ತು ಟೀಸರ್‌ ಅದ್ಧೂರಿಯಾಗಿ ಹೊರಬಂದಿದ್ದು, ಚಿತ್ರದಲ್ಲಿ ಶ್ರೀಶಾಂತ್‌ ಗೆಟಪ್‌ ಗಮನ ಸೆಳೆಯುತ್ತಿದ್ದು, ಶ್ರೀಶಾಂತ್‌ ಕೂಡ ಮುಂಬರುವ ತಮ್ಮ ಚಿತ್ರಗಳ ಬಗ್ಗೆ ಸಾಕಷ್ಟು ಭರವಸೆಯ ಮಾತುಗಳನ್ನಾಡುತ್ತಿದ್ದಾರೆ.

“ಸದ್ಯ ನನ್ನ ಗಮನ ಚಿತ್ರರಂಗದತ್ತ ಕಡೆಗೆ ಇರುವುದರಿಂದ, ಇಲ್ಲಿಯೇ ಹೊಸ ಹೊಸ ಅವಕಾಶಗಳನ್ನು ಹುಡುಕುತ್ತೇನೆ. ಈಗ ಕಲಾವಿದನಾಗಿರುವುದರಿಂದ ಹೊಸ ಥರದ ಪಾತ್ರಗಳಿಗೆ, ಪ್ರಯೋಗಗಳಿಗೆ ನನ್ನನ್ನು ತೆರೆದುಕೊಳ್ಳಲು ಬಯಸುತ್ತೇನೆ. ಈ ಬಗ್ಗೆ ನನಗೆ ಖುಷಿ ಇದೆ. ಮೊದಲು “ಕೆಂಪೇಗೌಡ-2′ ಚಿತ್ರದಲ್ಲೂ ಒಳ್ಳೆಯ ಪಾತ್ರ ಸಿಕ್ಕಿತ್ತು. ಈಗ “ಧೂಮ್‌ ಅಗೇನ್‌’ ಚಿತ್ರದಲ್ಲೂ ಅಂಥದ್ದೇ ಮತ್ತೂಂದು ಒಳ್ಳೆಯ ಪಾತ್ರ ಸಿಕ್ಕಿದೆ’ ಎನ್ನುತ್ತಾರೆ.

ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗುತ್ತಿರುವುದರ ಬಗ್ಗೆ ಮಾತನಾಡುವ ಶ್ರೀಶಾಂತ್‌, “ಕನ್ನಡ ಚಿತ್ರರಂಗ ಸಾಕಷ್ಟು ಬೆಳೆದಿದೆ. ಪ್ರತಿವರ್ಷ ಇಲ್ಲಿ ದೊಡ್ಡ ಸಂಖ್ಯೆಯಲ್ಲಿ ಹೊಸಬರು ಚಿತ್ರರಂಗಕ್ಕೆ ಬರುತ್ತಿದ್ದಾರೆ. ಹೊಸಥರದ ಚಿತ್ರಗಳು ಬರುತ್ತಿವೆ. ಅದರಲ್ಲೂ ಹೊಸಬರ ಚಿತ್ರಗಳನ್ನು ಇಲ್ಲಿನ ಆಡಿಯನ್ಸ್‌ ಹೆಚ್ಚು ಪ್ರೋತ್ಸಾಹಿಸುತ್ತಿದ್ದಾರೆ. ಹಾಗಾಗಿಯೇ ನನ್ನ ಥರದ ಹೊಸಬರು ಕೂಡ ಇಲ್ಲಿಗೆ ಬರೋದಕ್ಕೆ ಸಾಧ್ಯವಾಗುತ್ತಿದೆ. ನನ್ನ ಮಟ್ಟಿಗೆ ಹೇಳುವುದಾದರೆ, ಕನ್ನಡ ಚಿತ್ರರಂಗಕ್ಕೆ ಬರುವ ನಿರ್ಧಾರ ಮಾಡಿದಾಗ ಇಲ್ಲಿನ ಚಿತ್ರರಂಗದಲ್ಲಿ ಎಲ್ಲರೂ ತುಂಬಾ ಸಪೋರ್ಟ್‌ ನೀಡಿದ್ರು. ಹಾಗಾಗಿಯೇ ತುಂಬಾ ಸುಲಭವಾಗಿ “ಕೆಂಪೇಗೌಡ-2′ ಚಿತ್ರ ಮಾಡೋದಕ್ಕೆ ಸಾಧ್ಯವಾಯ್ತು. ಈಗ ಕನ್ನಡದಲ್ಲಿ ಮತ್ತೂಂದು ಚಿತ್ರ ಮಾಡುವ ಅವಕಾಶ ಬಂದಿದೆ. ಅವಕಾಶ ಸಿಕ್ಕರೆ ಮುಂದೆಯೂ ಇಲ್ಲಿ ಚಿತ್ರಗಳನ್ನು ಖಂಡಿತಾ ಮಾಡುತ್ತೇನೆ. ಒಳ್ಳೆಯ ಚಿತ್ರಗಳನ್ನು ಮಾಡಿದ್ರೆ ಆಡಿಯನ್ಸ್‌ ಖಂಡಿತಾ ಕೈ ಹಿಡಿಯುತ್ತಾರೆ ಎಂಬ ನಂಬಿಕೆ ಇದೆ’ ಎನ್ನುತ್ತಾರೆ.

ಮತ್ತೂಂದೆಡೆ, ಈಗಾಗಲೇ “ಕೆಂಪೇಗೌಡ-2′ ಚಿತ್ರ ಟೀಸರ್‌, ಟ್ರೇಲರ್‌ ಬಿಡುಗಡೆಯಾಗಿದ್ದು, “ಕೆಂಪೇಗೌಡ-2′ ನಲ್ಲಿ ಶ್ರೀಶಾಂತ್‌ ಖದರ್‌ ಜೋರಾಗಿಯೇ ಕಾಣುತ್ತಿದೆ. ಇನ್ನು ಶ್ರೀಶಾಂತ್‌ ಅವರಿಗೂ “ಕೆಂಪೇಗೌಡ-2′ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಯಿದ್ದು, ಕೋಮಲ್‌ ಮತ್ತು ಶ್ರೀಶಾಂತ್‌ ಜುಗಲ್‌ಬಂದಿ ಎಷ್ಟರ ಮಟ್ಟಿಗೆ ವರ್ಕೌಟ್‌ ಆಗಲಿದೆ ಅನ್ನೋದು ಇದೇ ಆಗಸ್ಟ್‌ 9ರಂದು ಗೊತ್ತಾಗಲಿದೆ.

ಟಾಪ್ ನ್ಯೂಸ್

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.