ಬೆಳ್ತಂಗಡಿಯ ವಾರದ ಸಂತೆಗೂ ತಟ್ಟಿದೆ ಬಿಸಿ!

Team Udayavani, Aug 20, 2019, 5:00 AM IST

w-38

ಬೆಳ್ತಂಗಡಿ: ಒಂದೆಡೆ ನೆರೆ ಹಾವಳಿಯಿಂದಾಗಿ ಬೆಳ್ತಂಗಡಿ ತಾಲೂಕಿನ ಬಹುತೇಕ ಕೃಷಿ ಪ್ರದೇಶ ಗಳು ಸರ್ವನಾಶವಾಗಿದ್ದರೆ, ಮತ್ತೂಂ ದೆಡೆ ಮಲೆನಾಡು ಜಿಲ್ಲೆಗಳಿಂದ ನಮ್ಮ ಜಿಲ್ಲೆಯನ್ನು ಸಂಪರ್ಕಿಸುವ ಚಾರ್ಮಾಡಿ ಘಾಟ್ ರಸ್ತೆ ಕುಸಿದು ಸಂಪರ್ಕ ಕಡಿತ ಗೊಂಡಿದೆ. ಈ ಎರಡೂ ಘಟನೆಗಳು ಜನಜೀವನದ ಮೇಲೆ ಹೊಡೆತ ನೀಡುವ ಜತೆಗೆ ಬೆಳ್ತಂಗಡಿಯ ಸೋಮವಾರದ ಸಂತೆಗೂ ಹೊಡೆತ ನೀಡಿದೆ.

ಪ್ರಮುಖವಾಗಿ ನೋಡುವುದಾದರೆ ಸಂತೆಗೆ ಆಗಮಿಸುವ ಊರಿನ ತರಕಾರಿ ಗಳು ತಾಲೂಕಿನ ಗ್ರಾಮೀಣ ಭಾಗದಿಂದ ಆಗಮಿಸಿದರೆ, ಘಟ್ಟ ಪ್ರದೇಶದ ತರಕಾರಿಗಳು ಚಾರ್ಮಾಡಿ ಘಾಟ್ ರಸ್ತೆಯ ಮೂಲಕ ಆಗಮಿಸುತ್ತಿದ್ದವು. ಹೀಗಾಗಿ ಸಂತೆಯಲ್ಲಿರುವ ತರಕಾರಿಗಳು ದುಬಾರಿಯಾದರೆ, ನೆರೆ ಹಾವಳಿಯಿಂದ ಆ ಭಾಗದ ಮಂದಿ ಸಂತೆಯತ್ತ ಮುಖ ಮಾಡದಂತೆ ಮಾಡಿದೆ.

ಪ್ರತಿ ಬಾರಿ ಅಗ್ಗ; ಈಗ ದುಬಾರಿ
ಸಂತೆಯ ವರ್ತಕರು ಅಭಿಪ್ರಾಯಿ ಸುವಂತೆ ಪ್ರತಿವರ್ಷ ಈ ಸಮಯ ತರಕಾರಿ ಕೊಂಚ ಅಗ್ಗದಲ್ಲಿ ಲಭ್ಯ ವಾಗುತ್ತದೆ. ಆದರೆ ಈ ಬಾರಿ ಧಾರಣೆ ದುಬಾರಿಯಾಗಿದ್ದು, ದುಪ್ಪಟ್ಟಾದ ಉದಾಹರಣೆಯೂ ಇದೆ. ಬಹುತೇಕ ಎಲ್ಲ ತರಕಾರಿ ಗಳ ಧಾರಣೆಯೂ 40 ರೂ. ದಾಟಿದೆ. ಅಂದರೆ ಹೆಚ್ಚಿನ ತರಕಾರಿ ಚಿಕ್ಕಮಗಳೂರು ಭಾಗದಿಂದ ಬರು ತ್ತಿದ್ದು, ಪ್ರಸ್ತುತ ಚಾರ್ಮಾಡಿ ಘಾಟ್ ರಸ್ತೆ ಬಂದ್‌ ಆಗಿದೆ. ಹೀಗಾಗಿ ವರ್ತಕರು ಶಿರಾಡಿ ಘಾಟ್ ರಸ್ತೆಯ ಮೂಲಕ ಆಗಮಿಸಬೇಕಾದ ಅನಿವಾರ್ಯತೆ ಎದುರಾಗಿರುವುದರಿಂದ ಸುಮಾರು 80 ಕಿ.ಮೀ.ಗಳಷ್ಟು ಸುತ್ತು ಬಳಸಿ ಬರಬೇಕಿದೆ.

ಬಹುತೇಕ ತರಕಾರಿ ಗಳು ಮಿನಿ ಗೂಡ್ಸ್‌ ವಾಹನಗಳ ಮೂಲಕ ಬರುವುದರಿಂದ ಅವರಿಗೆ ಹೆಚ್ಚಿನ ನಷ್ಟ ಉಂಟಾಗುತ್ತಿದ್ದು, ಹೀಗಾಗಿ ಈ ಭಾಗಕ್ಕೆ ಆಗಮಿಸಲು ಹಿಂದೇಟು ಹಾಕುತ್ತಿದ್ದಾರೆ. ಒಂದು ವೇಳೆ ಆಗಮಿಸಿದರೂ ದುಬಾರಿ ಬೆಲೆಗೆ ಮಾರಾಟ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಹೀಗಾಗಿ ಸಂತೆಯಲ್ಲಿ ವ್ಯಾಪಾರದ ಅಬ್ಬರಕ್ಕೆ ಹೊಡೆತ ನೀಡಿದೆ.

ಸಂತೆಯಲ್ಲಿ ಜನವೂ ವಿರಳ
ದುಬಾರಿ ಧಾರಣೆ ಜತೆಗೆ ಸಂತೆಯಲ್ಲಿ ಜನರೂ ವಿರಳವಾಗಿದ್ದಾರೆ.
ತಾಲೂಕಿನ ಬಹುತೇಕ ಗ್ರಾಮೀಣ ಭಾಗವು ಈ ಬಾರಿ ನೆರೆ ಹಾವಳಿಗೆ ತುತ್ತಾಗಿ ಹೆಚ್ಚಿನ ಪ್ರಮಾಣದಲ್ಲಿ ತರಕಾರಿ ಬೆಳೆಯುವ ಪ್ರದೇಶಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಚಾರ್ಮಾಡಿಯ ಬೊಳ್ಳೂರುಬೈಲು ಪ್ರದೇಶದಲ್ಲಿ ಎಲ್ಲ ರೀತಿಯ ತರಕಾರಿಗಳನ್ನು ಬೆಳೆಯಲಾಗುತ್ತಿದ್ದು, ಮುಖ್ಯವಾಗಿ ಸೌತೆಕಾಯಿ ಹಾಗೂ ಬದನೆ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಈ ಪ್ರದೇಶ ಮಾತ್ರವಲ್ಲದೆ ತಾಲೂಕಿನ ನೆರೆ ಹಾವಳಿಗೆ ತುತ್ತಾದ ಬಹುತೇಕ ಪ್ರದೇಶಗಳು ಕೂಡ ತರಕಾರಿ ಬೆಳೆಯುವ ಪ್ರದೇಶಗಳಾಗಿದ್ದು, ಮುಂದಿನ ಒಂದು ತಿಂಗಳ ಬಳಿಕ ಈ ಭಾಗದಿಂದ ಹೆಚ್ಚಿನ ಪ್ರಮಾಣದ ತರಕಾರಿ ಸಂತೆಗೆ ಆಗಮಿಸುವ ಸಮಯವಾಗಿತ್ತು. ಆದರೆ ಈ ಬಾರಿ ಅಲ್ಲಿಂದ ಊರಿನ ತರಕಾರಿಗಳು ಆಗಮಿಸುವುದು ದೂರದ ಮಾತು ಎಂದು ವರ್ತಕರು ವಿವರಿಸುತ್ತಾರೆ.

ಸಾಮಾನ್ಯವಾಗಿ ಸೋಮವಾರದ ದಿನ ತಾಲೂಕಿನ ಗ್ರಾಮೀಣ ಭಾಗದ ಜನತೆ ಸಂತೆಗೆ ಆಗಮಿಸಿ ಒಂದು ವಾರಕ್ಕೆ ಬೇಕಾದ ತರಕಾರಿಗಳ ಜತೆಗೆ ದಿನಸಿ ಸಾಮಗ್ರಿಗಳನ್ನು ಖರೀದಿಸುತ್ತಿದ್ದರು.

ಆದರೆ ಪ್ರಸ್ತುತ ಪ್ರವಾಹ ಪೀಡಿತ ಪ್ರದೇಶಗಳಿಂದ ಜನರ ಜೀವನವೇ ಅತಂತ್ರವಾಗಿದ್ದು, ಅವರು ಎಲ್ಲಿಗೂ ಹೋಗುವ ಸ್ಥಿತಿಯಲ್ಲಿಲ್ಲ.

ಈ ಬಾರಿ ದುಬಾರಿ

ಪ್ರತಿವರ್ಷ ಈ ಸಮಯ ಧಾರಣೆ ಕೊಂಚ ಅಗ್ಗ ಇರುತ್ತಿತ್ತು. ಆದರೆ ಈ ಬಾರಿ ಈಗಲೇ ದುಬಾರಿ ಇದ್ದು, ಮುಂದೆ ಹಬ್ಬದ ಸಮಯ ಇನ್ನಷ್ಟು ದುಬಾರಿಯಾಗುವ ಸಾಧ್ಯತೆ ಇದೆ.
-ನಾರಾಯಣ ಜೈನ್‌ಪೇಟೆ, ವರ್ತಕರು.

ಊರಿನ ತರಕಾರಿ ಬರುವುದು ಕಷ್ಟ

ಪ್ರಮುಖವಾಗಿ ಮುಂದಿನ ಒಂದು ತಿಂಗಳ ಬಳಿಕ ತಾಲೂಕಿನ ಪ್ರವಾಹ ಪೀಡಿತ ಪ್ರದೇಶಗಳಿಂದ ಎಲ್ಲ ಬಗೆಯ ಊರಿನ ತರಕಾರಿಗಳು ಸಂತೆಗೆ ಆಗಮಿಸುತ್ತಿದ್ದು, ಈ ಬಾರಿ ಅದು ಇಲ್ಲ. ಜತೆಗೆ ಘಾಟ್ ರಸ್ತೆಯೂ ಬಂದ್‌ ಆಗಿರುವುದರಿಂದ ತರಕಾರಿ ವಾಹನಗಳೂ ಆಗಮಿಸುತ್ತಿಲ್ಲ. ಸಂತೆಯಲ್ಲಿ ಜನರೂ ಕಡಿಮೆ ಇದ್ದಾರೆ.
-ಉದಯಕುಮಾರ್‌ ಸವಣಾಲು ವರ್ತಕರು.

ಸೌತೆ-ಬದನೆಗೆ ಫೇಮಸ್ಸು

ತಾಲೂಕಿನ ಬಹುತೇಕ ಗ್ರಾಮೀಣ ಭಾಗವು ಈ ಬಾರಿ ನೆರೆ ಹಾವಳಿಗೆ ತುತ್ತಾಗಿ ಹೆಚ್ಚಿನ ಪ್ರಮಾಣದಲ್ಲಿ ತರಕಾರಿ ಬೆಳೆಯುವ ಪ್ರದೇಶಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಚಾರ್ಮಾಡಿಯ ಬೊಳ್ಳೂರುಬೈಲು ಪ್ರದೇಶದಲ್ಲಿ ಎಲ್ಲ ರೀತಿಯ ತರಕಾರಿಗಳನ್ನು ಬೆಳೆಯಲಾಗುತ್ತಿದ್ದು, ಮುಖ್ಯವಾಗಿ ಸೌತೆಕಾಯಿ ಹಾಗೂ ಬದನೆ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಈ ಪ್ರದೇಶ ಮಾತ್ರವಲ್ಲದೆ ತಾಲೂಕಿನ ನೆರೆ ಹಾವಳಿಗೆ ತುತ್ತಾದ ಬಹುತೇಕ ಪ್ರದೇಶಗಳು ಕೂಡ ತರಕಾರಿ ಬೆಳೆಯುವ ಪ್ರದೇಶಗಳಾಗಿದ್ದು, ಮುಂದಿನ ಒಂದು ತಿಂಗಳ ಬಳಿಕ ಈ ಭಾಗದಿಂದ ಹೆಚ್ಚಿನ ಪ್ರಮಾಣದ ತರಕಾರಿ ಸಂತೆಗೆ ಆಗಮಿಸುವ ಸಮಯವಾಗಿತ್ತು. ಆದರೆ ಈ ಬಾರಿ ಅಲ್ಲಿಂದ ಊರಿನ ತರಕಾರಿಗಳು ಆಗಮಿಸುವುದು ದೂರದ ಮಾತು ಎಂದು ವರ್ತಕರು ವಿವರಿಸುತ್ತಾರೆ.

ಟಾಪ್ ನ್ಯೂಸ್

Tragedy: ಮೊಬೈಲ್ ಬೆಳಕಿನಲ್ಲಿ ಸಿಸೇರಿಯನ್ ಹೆರಿಗೆಗೆ ಮುಂದಾದ ವೈದ್ಯರು.. ತಾಯಿ, ಮಗು ಮೃತ್ಯು

Tragedy: ಮೊಬೈಲ್ ಬೆಳಕಿನಲ್ಲಿ ಸಿಸೇರಿಯನ್ ಹೆರಿಗೆಗೆ ಮುಂದಾದ ವೈದ್ಯರು.. ತಾಯಿ, ಮಗು ಮೃತ್ಯು

Harassment: ಪಶ್ಚಿಮ ಬಂಗಾಳದ ರಾಜ್ಯಪಾಲರಿಂದ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ

Harassment: ಪಶ್ಚಿಮ ಬಂಗಾಳದ ರಾಜ್ಯಪಾಲರಿಂದ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ

4-sampaje

Aranthodu: ಚಾಲಕನ ನಿಯಂತ್ರಣ ತಪ್ಪಿ ಹೋಟೆಲ್ ಗೆ ಢಿಕ್ಕಿ ಹೊಡೆದ ಕಾರು

3-vijayapura

Vijayapura: ಸೀಟಿಗಾಗಿ ಮಹಿಳೆಯರ ಕಿತ್ತಾಟ: ರಸ್ತೆಯಲ್ಲೇ ನಿಂತ ಬಸ್

Lok Sabha Election: ರಾಯ್​ಬರೇಲಿಯಿಂದ ರಾಹುಲ್,​ ಅಮೇಥಿಯಿಂದ ಕೆ.ಎಲ್​. ಶರ್ಮ ಕಣಕ್ಕೆ

Lok Sabha Election: ರಾಯ್​ಬರೇಲಿಯಿಂದ ರಾಹುಲ್,​ ಅಮೇಥಿಯಿಂದ ಕೆ.ಎಲ್​. ಶರ್ಮ ಕಣಕ್ಕೆ

2-blr-crime

Bengaluru: ರಸ್ತೆಯಲ್ಲೇ 10 ಬಾರಿ ಇರಿದು ಪತ್ನಿಯ ಕೊಂದ ಪತಿ!

Mumbai: 45 ದಿನದಲ್ಲಿ 300 ಐಸ್‌ಕ್ರೀಂ ಆರ್ಡರ್‌ ಮಾಡಿದ!

Mumbai: 45 ದಿನದಲ್ಲಿ 300 ಐಸ್‌ಕ್ರೀಂ ಆರ್ಡರ್‌ ಮಾಡಿದ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-sampaje

Aranthodu: ಚಾಲಕನ ನಿಯಂತ್ರಣ ತಪ್ಪಿ ಹೋಟೆಲ್ ಗೆ ಢಿಕ್ಕಿ ಹೊಡೆದ ಕಾರು

Uppinangady: ತೀವ್ರ ಜ್ವರ; ಅರ್ಚಕ ಸಾವು

Uppinangady: ತೀವ್ರ ಜ್ವರ; ಅರ್ಚಕ ಸಾವು

Bantwala: ಫರಂಗಿಪೇಟೆ; ಬೈಕ್‌ ಢಿಕ್ಕಿಯಾಗಿ ಗಾಯ

Bantwala: ಫರಂಗಿಪೇಟೆ; ಬೈಕ್‌ ಢಿಕ್ಕಿಯಾಗಿ ಗಾಯ

B.C.Road ನೇತ್ರಾವತಿ ಸೇತುವೆಯಲ್ಲಿ ಟಿಪ್ಪರ್- ಸ್ಕೂಟರ್ ಢಿಕ್ಕಿ; ಸವಾರ ಮೃತ್ಯು

B.C.Road ನೇತ್ರಾವತಿ ಸೇತುವೆಯಲ್ಲಿ ಟಿಪ್ಪರ್- ಸ್ಕೂಟರ್ ಢಿಕ್ಕಿ; ಸವಾರ ಮೃತ್ಯು

16-uv-fusion

Aranthodu: ವಾಹನಗಳ ಮಧ್ಯೆ ಸರಣಿ ಅಪಘಾತ; ಬೈಕ್ ಸವಾರ ಗಂಭೀರ ಗಾಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Tragedy: ಮೊಬೈಲ್ ಬೆಳಕಿನಲ್ಲಿ ಸಿಸೇರಿಯನ್ ಹೆರಿಗೆಗೆ ಮುಂದಾದ ವೈದ್ಯರು.. ತಾಯಿ, ಮಗು ಮೃತ್ಯು

Tragedy: ಮೊಬೈಲ್ ಬೆಳಕಿನಲ್ಲಿ ಸಿಸೇರಿಯನ್ ಹೆರಿಗೆಗೆ ಮುಂದಾದ ವೈದ್ಯರು.. ತಾಯಿ, ಮಗು ಮೃತ್ಯು

Harassment: ಪಶ್ಚಿಮ ಬಂಗಾಳದ ರಾಜ್ಯಪಾಲರಿಂದ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ

Harassment: ಪಶ್ಚಿಮ ಬಂಗಾಳದ ರಾಜ್ಯಪಾಲರಿಂದ ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ

4-sampaje

Aranthodu: ಚಾಲಕನ ನಿಯಂತ್ರಣ ತಪ್ಪಿ ಹೋಟೆಲ್ ಗೆ ಢಿಕ್ಕಿ ಹೊಡೆದ ಕಾರು

3-vijayapura

Vijayapura: ಸೀಟಿಗಾಗಿ ಮಹಿಳೆಯರ ಕಿತ್ತಾಟ: ರಸ್ತೆಯಲ್ಲೇ ನಿಂತ ಬಸ್

Lok Sabha Election: ರಾಯ್​ಬರೇಲಿಯಿಂದ ರಾಹುಲ್,​ ಅಮೇಥಿಯಿಂದ ಕೆ.ಎಲ್​. ಶರ್ಮ ಕಣಕ್ಕೆ

Lok Sabha Election: ರಾಯ್​ಬರೇಲಿಯಿಂದ ರಾಹುಲ್,​ ಅಮೇಥಿಯಿಂದ ಕೆ.ಎಲ್​. ಶರ್ಮ ಕಣಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.