ಸೈರಾ ಟೀಸರ್ ಧ್ವನಿ ಯಾರದ್ದು?
ಯಶ್ ಬದಲು ಅಪರಿಚಿತ ವಾಯ್ಸ್
Team Udayavani, Aug 22, 2019, 3:02 AM IST
ಮೆಗಾಸ್ಟಾರ್ ಚಿರಂಜೀವಿ ಮುಖ್ಯಭೂಮಿಕೆಯಲ್ಲಿರುವ “ಸೈರಾ ನರಸಿಂಹ ರೆಡ್ಡಿ’ ಚಿತ್ರ ಈಗಾಗಲೇ ಹವಾ ಸೃಷ್ಟಿಸಿದೆ. ಚಿರಂಜೀವಿ, ಅಮಿತಾಭ್ ಬಚ್ಚನ್, ಸುದೀಪ್ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರದ ಟೀಸರ್ ಈಗಾಗಲೇ ಬಿಡುಗಡೆಯಾಗಿದೆ. ಕನ್ನಡದಲ್ಲೂ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಆರಂಭದಲ್ಲಿ ಚಿತ್ರದ ಟೀಸರ್ಗೆ ಯಶ್ ಧ್ವನಿ ನೀಡಿದ್ದಾರೆನ್ನಲಾಗಿತ್ತು. ಹಾಗಾಗಿ, ಯಶ್ ಅಭಿಮಾನಿಗಳು ಕೂಡಾ ಟೀಸರ್ನಲ್ಲಿ ಯಶ್ ಧ್ವನಿ ಕೇಳಲು ಕಾತುರರಾಗಿದ್ದರು.
ಆದರೆ, ಟೀಸರ್ ಬಿಡುಗಡೆಯಾದ ಮೇಲೆ ಅಲ್ಲಿ ಯಶ್ ಧ್ವನಿ ಇಲ್ಲ.ಅಲ್ಲಿ ಬೇರೊಬ್ಬರು ಚಿತ್ರದ ಟೀಸರ್ಗೆ ಹಿನ್ನೆಲೆ ಧ್ವನಿ ನೀಡಿದ್ದಾರೆ. ಚಿತ್ರದ ಟೀಸರ್ ನೋಡಿ ಮೆಚ್ಚಿಕೊಂಡ ಅಭಿಮಾನಿಗಳು ಯಶ್ ಧ್ವನಿಯನ್ನು ಮಿಸ್ ಮಾಡಿಕೊಂಡಿದ್ದು ಸುಳ್ಳಲ್ಲ. ಇದರ ಜೊತೆಗೆ ಟೀಸರ್ಗೆ ಧ್ವನಿ ನೀಡಿದ ಆ ಅಪರಿಚಿತ ವ್ಯಕ್ತಿ ಯಾರೆಂಬ ಬಗ್ಗೆಯೂ ಸಿನಿಪ್ರಿಯರು ತಲೆಕೆಡಿಸಿಕೊಂಡಿದ್ದಾರೆ.
ಈ ಚಿತ್ರದಲ್ಲಿ ನಟ ಸುದೀಪ್ ಕೂಡಾ ಪ್ರಮುಖ ಪಾತ್ರ ಮಾಡಿದ್ದಾರೆ. ಈ ಮೂಲಕ ಸುದೀಪ್ ಮತ್ತೂಮ್ಮೆ ತೆಲುಗು ಸೇರಿದಂತೆ ಬೇರೆ ಬೇರೆ ಭಾಷೆಗಳಲ್ಲಿ ಮಿಂಚಲಿದ್ದಾರೆ. ಈ ನಡುವೆಯೇ ಅವರ “ದಬಾಂಗ್-2′ ಚಿತ್ರ ಕೂಡಾ ಕನ್ನಡ ಸೇರಿದಂತೆ ಎಲ್ಲಾ ಭಾಷೆಗಳಿಗೂ ಡಬ್ ಆಗಲಿದೆ. ಇದಲ್ಲದೇ “ಪೈಲ್ವಾನ್’ ಕೂಡಾ ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಈ ಮೂಲಕ ಸುದೀಪ್ ಎಲ್ಲಾ ಭಾಷೆಗಳಲ್ಲೂ ಮಿಂಚಲಿದ್ದಾರೆ.