ಉಡುಂಬಾನ ಎದುರಲ್ಲಿ ಅಬ್ಬರಿಸಿದರು ಶರತ್ ಲೋಹಿತಾಶ್ವ!

Team Udayavani, Aug 22, 2019, 3:18 PM IST

ಕರಾವಳಿ ತೀರದಲ್ಲಿ ಜರುಗುವ ಕಥೆ ಹಾಗೂ ಅದು ಈ ವರೆಗೆ ಎಲ್ಲಿಯೂ ಕಾಣಿಸದಂಥಾ ಹೊಸತನದ ಕುರುಹುಗಳೊಂದಿಗೆ ಉಡುಂಬಾ ಚಿತ್ರ ಥೇಟರಿನತ್ತ ಪಯಣ ಹೊರಟಿದೆ. ಯಶಸ್ವಿ ಸಿನಿಮಾವೊಂದು ಬಿಡುಗಡೆ ಪೂರ್ವದಲ್ಲಿ ಯಾವ ಥರದಲ್ಲಿ ಸುದ್ದಿಯಾಗಬೇಕೋ ಅದರಂತೆಯೇ ಟಾಕ್ ಕ್ರಿಯೇಟ್ ಮಾಡುತ್ತಿರೋ ಉಡುಂಬಾ ಈ ವಾರ ಅಂದರೆ 23ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಬಹುತೇಕ ಎಲ್ಲ ವರ್ಗಗಳ ಪ್ರೇಕ್ಷಕರೂ ಈ ಸಿನಿಮಾ ನೋಡಲು ಕಾತರರಾಗಿರೋದೇ ಈ ಚಿತ್ರದ ಪ್ಲಸ್ ಪಾಯಿಂಟ್.

ಶಿವರಾಜ್ ನಿರ್ದೇಶನದ ಈ ಚಿತ್ರ ಮೇಲು ನೋಟಕ್ಕೆ ಆಕ್ಷನ್ ಮೂವಿ ಮಾತ್ರವಾಗಿ ಕಂಡರೂ ಅಷ್ಟು ಸಲೀಸಾಗಿ ಅಂದಾಜಿಸಲಾಗದಂಥಾ ಕಥೆಯನ್ನೊಳಗೊಂಡಿದೆ. ಇದೀಗ ಟ್ರೇಲರ್‍ನಲ್ಲಿ ಅಬ್ಬರಿಸಿರೋ ನಾಯಕ ಪವನ್ ಶೌರ್ಯಾರ ಪಾತ್ರವೇನು ಅನ್ನೋದರ ಸುತ್ತಾ ಒಂದಷ್ಟು ಕ್ಯೂರಿಯಾಸಿಟಿ ಇದೆ. ಇದೇ ಟ್ರೇಲರ್‍ನಲ್ಲಿಯೇ ಮತ್ತೊಂದಷ್ಟು ಪಾತ್ರಗಳನ್ನೂ ಕೂಡಾ ಕಾಣಿಸಲಾಗಿದೆ. ಅದರಲ್ಲಿ ನೋಡುಗರನ್ನೆಲ್ಲ ಬಹುವಾಗಿ ಕಾಡಿರೋದು ಶರತ್ ಲೋಹಿತಾಶ್ವರ ಪಾತ್ರ.

ಶರತ್ ಲೋಹಿತಾಶ್ವ ಅವರ ಕಂಠ, ಅದಕ್ಕೆ ತಕ್ಕುದಾದ ನಟನೆ ಮತ್ತು ಕಣ್ಣುಗಳಲ್ಲಿಯೇ ಕೆಂಡ ಉಗುಳೋ ಪರಿಗೆ ಫಿದಾ ಆಗದ ಪ್ರೇಕ್ಷಕರೇ ಸಿಗಲಿಕ್ಕಿಲ್ಲ. ಸುಮ್ಮನೆ ಕ್ಯಾಮೆರಾದೆದುರು ನಿಂತು ಒಂದೆರಡು ಎಕ್ಸ್‍ಪ್ರೆಷನ್ನುಗಳ ಮೂಲಕವೇ ಸಂಚಲನ ಮೂಡಿಸೋ ತಾಖತ್ತಿರುವ ಶರತರ್ ಲೋಹಿತಾಶ್ವಾ ಇಲ್ಲಿ ಮೀನುಗಾರರ ಸಮುದಾಯದ ಮುಖಡನ ಪಾತ್ರಕ್ಕೆ ಜೀವ ತುಂಬಿದ್ದಾರಾ, ಅವರು ಗ್ಯಾಂಗ್‍ಸ್ಟರ್ ಆಗಿ ನಟಿಸಿದ್ದಾರಾ ಎಂಬೆಲ್ಲ ಕುತೂಹಲಗಳು ಇದ್ದೇ ಇವೆ. ಒಟ್ಟಾರೆಯಾಗಿ ಅವರು ರಗಡ್ ಉಡುಂಬಾಗೆ ಎದುರಾಗಿ ಅವನಂತೆಯೇ ಅಬ್ಬರಿಸಿ ಪ್ರತಿರೋಧ ತೋರೋ ಪಾತ್ರದಲ್ಲಿ ನಟಿಸಿರೋದಂತೂ ನಿಜ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಮಾಜಿ ಮುಖ್ಯಮಂತ್ರಿ ಹೆಚ್‌.ಡಿ ಕುಮಾರಸ್ವಾಮಿ ಪುತ್ರ ನಟ ಕಂ ರಾಜಕಾರಣಿ ನಿಖಿಲ್‌ ಕುಮಾರ್‌ ಇಂದು (ಜ. 22) ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಮೂವತ್ತನೇ ವರ್ಷಕ್ಕೆ...

  • "ಆ ದಿನಗಳು' ಖ್ಯಾತಿಯ ಚೇತನ್‌ ಮದುವೆ ಆಗುತ್ತಿದ್ದಾರೆ ಎಂಬ ಸುದ್ದಿ ಚಿತ್ರರಂಗದ ಬಹುತೇಕರಿಗೆ ಗೊತ್ತಿದೆ. ಆದರೆ, ಯಾವಾಗ ಎಂಬುದು ಗೊತ್ತಿರಲಿಲ್ಲ. ಅವರ ಮದುವೆ...

  • ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಪ್ರಜ್ವಲ್‌ ದೇವರಾಜ್‌ ಅಭಿನಯದ "ಜಂಟಲ್‌ಮನ್‌' ಚಿತ್ರ ಜನವರಿ 31 ರಂದು ತೆರೆಕಾಣಬೇಕಿತ್ತು. ಆದರೆ, ಈಗ ಕಾರಣಾಂತರಗಳಿಂದ ಚಿತ್ರದ...

  • ಮೈಸೂರಿನ ಹೂಟಗಳ್ಳಿ ಹೊರವಲಯದ "ಒಡನಾಡಿ ಕೇಂದ್ರ'ದಲ್ಲಿ ಇತ್ತೀಚೆಗೆ ರಘು ಎಸ್‌.ಪಿ. ನಿರ್ದೇಶನವಿರುವ "ಗಿಫ್ಟ್ಬಾಕ್ಸ್‌' ಚಿತ್ರದ ಲಿರಿಕಲ್‌ ವೀಡಿಯೋ ಹಾಡನ್ನು ಅಲ್ಲಿನ...

  • ನಟ ಕಿಚ್ಚ ಸುದೀಪ್‌ ಅಭಿನಯಕ್ಕೆ ಈಗ ಮತ್ತೊಂದು ಪ್ರತಿಷ್ಠಿತ ಅಂತರಾಷ್ಟ್ರೀಯ ಪ್ರಶಸ್ತಿ ಒಲಿದು ಬಂದಿದೆ. 2020ನೇ ಸಾಲಿನ "ದಾದಾ ಸಾಹೇಬ್‌ ಫಾಲ್ಕೆ ಇಂಟರ್‌ ನ್ಯಾಷನಲ್‌...

ಹೊಸ ಸೇರ್ಪಡೆ