ಪ್ಯಾರೀಸ್; ಚೂರಿಯಿಂದ ಇರಿದು ನಾಲ್ವರು ಪೊಲೀಸ್ ಅಧಿಕಾರಿಗಳ ಹತ್ಯೆ, ಹಂತಕ ಗುಂಡಿಗೆ ಬಲಿ
Team Udayavani, Oct 3, 2019, 7:06 PM IST
ಪ್ಯಾರೀಸ್(ಫ್ರಾನ್ಸ್): ಪೊಲೀಸ್ ಕೇಂದ್ರ ಕಚೇರಿಗೆ ನುಗ್ಗಿ ನಾಲ್ವರು ಪೊಲೀಸ್ ಅಧಿಕಾರಿಗಳನ್ನು ಚೂರಿಯಿಂದ ಇರಿದು ಕೊಂದಿರುವ ಘಟನೆ ಪ್ಯಾರೀಸ್ ನಗರದಲ್ಲಿ ನಡೆದಿದ್ದು,ಬಳಿಕ ಪೊಲೀಸ್ ಎನ್ ಕೌಂಟರ್ ಗೆ ಹಂತಕ ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ.
ಸೆಂಟ್ರಲ್ ಪ್ಯಾರೀಸ್ ನ ಪೊಲೀಸ್ ಕೇಂದ್ರ ಕಚೇರಿಗೆ ನುಗ್ಗಿ ಪೊಲೀಸ್ ಅಧಿಕಾರಿಗಳನ್ನು ಹತ್ಯೆಗೈದಿದ್ದಾನೆ. ಆತ ಯಾವ ಕಾರಣಕ್ಕೆ ಈ ಕೃತ್ಯ ಎಸಗಿದ್ದಾನೆ ಎಂಬುದು ಅಧಿಕಾರಿಗಳು ಬಹಿರಂಗಪಡಿಸಿಲ್ಲ. ಕೂಡಲೇ ನೋಟ್ರೆ-ಡಾಮೆ ಕ್ಯಾಥೆಡ್ರಲ್ ಹಾಗೂ ಇನ್ನಿತರ ಪ್ರಮುಖ ಪ್ರವಾಸಿ ತಾಣಗಳನ್ನು ಬಂದ್ ಮಾಡಿ ಕಾರ್ಯಾಚರಣೆ ನಡೆಸಿರುವುದಾಗಿ ಎಎಫ್ ಪಿ ವರದಿ ಮಾಡಿದೆ.
ಕೋರ್ಟ್ ಯಾರ್ಡ್ ಬಿಲ್ಡಿಂಗ್ ಸಮೀಪ ಹಂತಕನನ್ನು ಗುಂಡಿಕ್ಕಿ ಹತ್ಯೆಗೈಯಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ವಿವರಿಸಿದ್ದಾರೆ. ಘಟನೆಯಿಂದ ಕಂಗಾಲಾದ ಜನರು ಭೀತಿಗೊಳಗಾಗಿ ಕೂಗಾಡುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಎಎಫ್ ಪಿಗೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ
Tragedy: ತನ್ನ ಅಪಾರ್ಟ್ಮೆಂಟ್ನಲ್ಲೇ ನೇಣಿಗೆ ಶರಣಾದ ಭೋಜ್ಪುರಿ ನಟಿ… ಕಾರಣ ನಿಗೂಢ
B.Y. Raghavendra: ಕಾಂಗ್ರೆಸ್ನವರ ಬಳಿ ಗ್ಯಾರಂಟಿ ಅಡ್ವಾನ್ಸ್ ಹಣ ಕೇಳಿ: ಬಿವೈಆರ್
Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ
Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ